ಹೈದರಾಬಾದ್: ಯಾವುದೇ ವಾಹನವನ್ನು ಚಲಾಯಿಸಲು ನೀವು ವಾಹನ ವಿಮೆಯನ್ನು ಹೊಂದಿರಲೇಬೇಕು. ಹಾಗಾಗಿ ಹೊಸ ವಾಹನವನ್ನು ಖರೀದಿಸುವಾಗ ವಿಮಾ ಪಾಲಿಸಿಯನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಅನೇಕರು ವಾಹನವಿಮೆಯನ್ನು ನವೀಕರಿಸಲು ಆಸಕ್ತಿ ತೋರಿಸುವುದಿಲ್ಲ. ಯಾರಾದರೂ ಕೇಳಿದಾಗ ನೋಡೋಣ ಎಂಬ ಧೋರಣೆಯನ್ನು ಹೊಂದಿರುತ್ತಾರೆ. ಇಂತಹ ಧೋರಣೆ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಏಕೆಂದರೆ ವಾಹನದ ವಿಮೆಯ ಅವಧಿ ಮುಗಿದ ಒಂದು ನಿಮಿಷದ ನಂತರ ವಾಹನ ಅಪಘಾತ ಸಂಭವಿಸಿದರೂ ಆ ವಿಮೆ ನಿಮಗೆ ಅನ್ವಯಿಸುವುದಿಲ್ಲ. ಆದ್ದರಿಂದ, ವಿಮೆಯ ಅವಧಿ ಮುಗಿದ ಮೇಲೆ ಉದ್ಭವಿಸುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ನೀವು ವಾಹನ ವಿಮೆಯನ್ನು ಪಾವತಿಸಬೇಕು. ಜೊತೆಗೆ ಅವಧಿ ಮುಗಿಯುವ ಮುನ್ನವೇ ವಿಮೆಯನ್ನು ನವೀಕರಿಸಲು ಮುಂದಾಗಬೇಕು.
ನೀವು ಒಂದು ಅಪಘಾತದಲ್ಲಿ ಸಿಲುಕಿದ್ದೀರಿ ಎಂದುಕೊಳ್ಳಿ. ದುರದೃಷ್ಟವಶಾತ್ ನಿಮ್ಮ ವಾಹನದ ವಿಮೆಯನ್ನು ನವೀಕರಿಸಲು ಮರೆತಿದ್ದೀರಿ. ಇಂತಹ ಸಂದರ್ಭದಲ್ಲಿ ನೀವು ಹೆಚ್ಚುವರಿ ನಷ್ಟವನ್ನು ಭರಿಸಬೇಕಾಗಿ ಬರುತ್ತದೆ. ವಿಮೆ ಇಲ್ಲದೆ ವಾಹನ ಚಾಲನೆ ಮಾಡಿದರೆ ರೂ. 2,000 ವರೆಗೆ ದಂಡ ಮತ್ತು ಜೈಲು ಶಿಕ್ಷೆಯಾಗುತ್ತದೆ. ಆದ್ದರಿಂದ, ವಿಮೆ ಇರದ ವಾಹನವನ್ನು ಚಲಾಯಿಸದಿರುವುದು ಉತ್ತಮ.
ನಿಮಗೆ ಬೇಕಾದಲ್ಲಿ ವಿಮೆ ಖರೀದಿಸಿ: ವಿಮಾದಾರರು ವಾಹನವನ್ನು ನೇರವಾಗಿ ಪರಿಶೀಲಿಸುವ ಮೂಲಕ ವಾಹನಗಳ ವಿಮೆಯನ್ನು ನವೀಕರಿಸುತ್ತಾರೆ. ಇಲ್ಲದಿದ್ದರೆ, ನೀವು ವಿಮಾ ಕಂಪನಿಗಳಿಗೆ ಹೋಗಿ ವಾಹನವನ್ನು ತೋರಿಸಬಹುದು ಅಥವಾ ಸಂಬಂಧಪಟ್ಟ ವಿಮಾ ಕಂಪನಿಯ ಪ್ರತಿನಿಧಿಗಳು ಬಂದು ವಾಹನವನ್ನು ಪರಿಶೀಲಿಸಿ ವಾಹನ ವಿಮೆಯನ್ನು ನವೀಕರಿಸುತ್ತಾರೆ. ನಿಮ್ಮ ವಾಹನದ ವಿಮಾ ಪಾಲಿಸಿಯ ಅವಧಿ ಮುಗಿದಿರುವುದನ್ನು ಗಮನಿಸಿದ ತಕ್ಷಣ ವಿಮಾ ಕಂಪನಿಯನ್ನು ಸಂಪರ್ಕಿಸಿ ಮತ್ತು ಅದನ್ನು ನವೀಕರಿಸಬೇಕು. ನೀವು ವಿಮಾ ಏಜೆಂಟ್ ಮೂಲಕ ಪಾಲಿಸಿಯನ್ನು ತೆಗೆದುಕೊಂಡರೆ ನೀವು ಅವರನ್ನು ಸಂಪರ್ಕಿಸಿ ವಿಮೆಯನ್ನು ಖರೀದಿಸಬಹುದು. ಅಥವಾ ನೀವು ಆನ್‌ಲೈನ್‌ನಲ್ಲಿ ಪಾಲಿಸಿಯನ್ನು ಖರೀದಿಸಿದರೆ, ನೀವು ಸುಲಭವಾಗಿ ವಿಮಾ ಕಂಪನಿಯ ವೆಬ್‌ಸೈಟ್‌ಗೆ ಹೋಗಿ ಪಾಲಿಸಿಯನ್ನು ನವೀಕರಿಸಬಹುದು.
ನೀವು ಹಿಂದೆ ತೆಗೆದುಕೊಂಡ ವಿಮಾ ಕಂಪನಿಯ ಸೇವೆಗಳು ನಿಮಗೆ ಇಷ್ಟವಾಗದಿದ್ದರೆ ನೀವು ಇನ್ನೊಂದು ಕಂಪನಿಗೆ ಬದಲಾಯಿಸಬಹುದು. ಎಲ್ಲಾ ಕಂಪನಿಗಳ ವಿಮಾ ಕಂತುಗಳು ಮತ್ತು ಸೇವೆಗಳನ್ನು ಪರೀಕ್ಷಿಸಿ ಸರಿಯಾದ ನಿರ್ಧಾರವನ್ನು ಕೈಗೊಳ್ಳಿ.
ನೋ ಕ್ಲೈಮ್ ಬೋನಸ್ ಲಾಭ : ವಾಹನ ವಿಮಾ ಪಾಲಿಸಿಗೆ ನೋ ಕ್ಲೈಮ್ ಬೋನಸ್ (NCB) ನಿರ್ಣಾಯಕವಾಗಿದೆ. ಇದು ಪ್ರೀಮಿಯಂ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. NCB ಮೂಲಭೂತವಾಗಿ ನಿಮ್ಮ ವಿಮಾ ಪ್ರೀಮಿಯಂ ಮೇಲಿನ ರಿಯಾಯಿತಿಯಾಗಿದ್ದು, ನಿಮ್ಮ ಪಾಲಿಸಿಯನ್ನು ನೀವು ನವೀಕರಿಸಿದಾಗ ನೀವು ರಿಯಾಯತಿಯನ್ನು ಪಡೆಯಬಹುದು. ಇದು ಶೇ.20 ರಿಂದ 50ರವರೆಗೆ ಹೆಚ್ಚಾಗುತ್ತದೆ. ಪಾಲಿಸಿಯ ಅವಧಿ ಮುಗಿದ ನಂತರ ಇದು ಅನ್ವಯಿಸುವುದಿಲ್ಲ. ಆದಾಗ್ಯೂ, ವಿಮಾದಾರರು 90 ದಿನಗಳಲ್ಲಿ ಪಾಲಿಸಿ ನವೀಕರಣಕ್ಕೆ ಅವಕಾಶ ನೀಡುತ್ತಾರೆ. ಈ ಅವಧಿಯೊಳಗೆ ನಿಮ್ಮ ಪಾಲಿಸಿಯನ್ನು ನವೀಕರಿಸಿದರೆ ನೀವು NCBಯಿಂದ ವಂಚಿತರಾಗುವುದಿಲ್ಲ. ಈ ಪ್ರೀಮಿಯಂ ಮೊತ್ತವನ್ನು ಶೇ.50 ರಷ್ಟು ಕಡಿಮೆ ಮಾಡಬಹುದಾದ್ದರಿಂದ, ಎನ್‌ಸಿಬಿ ಲಾಭದಿಂದ ವಂಚಿತರಾಗದಂತೆ ಪಾಲಿಸಿಯನ್ನು ಮುಂದುವರಿಸಬೇಕು.
![how-to-renew-expired-car-and-bike-insurance-policies](https://etvbharatimages.akamaized.net/etvbharat/prod-images/15659559_insu.jpg)
ಮುಕ್ತಾಯ ದಿನಾಂಕದ ಮೊದಲು ವಿಮೆ ಪಾವತಿಸಿ : ಹೆಚ್ಚಿನ ಜನರು ವಿಮಾ ಪಾಲಿಸಿಗಳಲ್ಲಿ ಆಸಕ್ತಿ ತೋರಿಸುವುದಿಲ್ಲ. ವಿಮಾ ಕಂಪನಿಗಳು ತಮ್ಮ ವಿಮೆಯ ನವೀಕರಣದ ಬಗ್ಗೆ ವಾಹನ ಮಾಲೀಕರಿಗೆ ತಿಳಿಸಿದರೂ, ಅವರು ಅದನ್ನು ನವೀಕರಿಸಲು ವಿಫಲರಾಗುತ್ತಾರೆ. ನಿಗದಿತ ದಿನಾಂಕಕ್ಕಿಂತ ಕನಿಷ್ಠ ಒಂದು ದಿನ ಮುಂಚಿತವಾಗಿ ಪಾಲಿಸಿಯ ಪ್ರೀಮಿಯಂ ಪಾವತಿಸುವುದರಿಂದ ಅನಗತ್ಯ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು. ಆದ್ದರಿಂದ, ನಿದ್ರೆಯಿಂದ ಎದ್ದೇಳಿ ಮತ್ತು ಸಮಯಕ್ಕೆ ಪ್ರೀಮಿಯಂ ಪಾವತಿಸಿ ಎಂದು ಬಜಾಜ್ ಅಲಿಯನ್ಸ್ ಜನರಲ್ ಇನ್ಶೂರೆನ್ಸ್‌ನ ಮುಖ್ಯ ವಿತರಣಾ ಅಧಿಕಾರಿ ಆದಿತ್ಯ ಶರ್ಮಾ ಹೇಳುತ್ತಾರೆ.
ಓದಿ :ನೂತನ ಐಕಿಯಾ ಶಾಪಿಂಗ್ ಮಾಲ್‌ಗೆ ಜನವೋ ಜನ: ನಾಗಸಂದ್ರ ಸುತ್ತಮುತ್ತಲು ಹೆಚ್ಚಿದ ಟ್ರಾಫಿಕ್ ಜಾಮ್