ETV Bharat / business

ಹೈದರಾಬಾದ್​ನ ಗೋಲ್ಡ್​ ಎಟಿಎಂ ಬಗ್ಗೆ ನಿಮಗೆಷ್ಟು ಗೊತ್ತು: ಹೀಗಿದೆ ಇದರ ವಿಶೇಷತೆ... - ಎಟಿಎಂನಲ್ಲಿ ಬಂಗಾರ ಕೂಡ ಬರುತ್ತಿದ್ದು

ದುಬೈ, ಲಂಡನ್​ಗಳ ಮಾದರಿಯಲ್ಲಿ ಹೈದರಾಬಾದ್​ ಯುವಕನೊಬ್ಬ ಭಾರತದಲ್ಲಿ ಗೋಲ್ಡ್​ ಎಟಿಎಂ ನಿರ್ಮಾಣ ಮಾಡಿ ಅಚ್ಚರಿ ಮೂಡಿಸಿದ್ದಾನೆ

ಹೈದ್ರಾಬಾದ್​ನ ಗೋಲ್ಡ್​ ಎಟಿಎಂ ಬಗ್ಗೆ ನಿಮಗೆಷ್ಟು ಗೊತ್ತು; ಇದರ ವಿಶೇಷತೆ ಹೀಗಿದೆ...
how-much-do-you-know-about-gold-atm-in-hyderabad
author img

By

Published : Jan 21, 2023, 11:04 AM IST

ಹೈದರಾಬಾದ್​: ಎಟಿಎಂಗಳಲ್ಲಿ ಹಣ ಬರುವುದುನ್ನು ಎಲ್ಲರಿಗೂ ತಿಳಿದಿರುವ ವಿಷಯ. ಇನ್ನು ನೀರು ಬರುವ ವ್ಯವಸ್ಥೆ ಹೊಂದಿರುವ ಎಟಿಎಂ ಬಗ್ಗೆ ಕೂಡ ಕೇಳಿರುತ್ತೇವೆ. ಆದರೆ, ಇದೀಗ ಎಟಿಎಂನಲ್ಲಿ ಬಂಗಾರ ಕೂಡ ಬರುತ್ತಿದ್ದು, ಈ ಸಂಗತಿ ಜನರ ಅಚ್ಚರಿಗೆ ಕಾರಣವಾಗಿದೆ. ವಿದೇಶಗಳಲ್ಲಿ ಇದ್ದ ಇಂತಹ ಬಂಗಾರದ ಎಟಿಎಂ ಸೇವೆ ಇದೀಗ ಹೈದರಾಬಾದ್​ನಲ್ಲೂ ಆರಂಭವಾಗಿದೆ. ತೆಲುಗು ಯುವಕನೊಬ್ಬ ಇಂತಹ ಸಾಫ್ಟ್​​ವೇರ್​ ಅಭಿವೃದ್ಧಿಪಡಿಸಿ, ಮಷಿನ್​ ತಯಾರಿಸಿದ್ದಾರೆ. 'ಓಪನ್​ ಕ್ಯೂಬ್'​ ಸಂಸ್ಥಾಪಕರಾದ ಪಿ ವಿನೋದ್​ ಇದರ ನಿರ್ಮಾತೃ.

ಆಂಧ್ರಪ್ರದೇಶದ ಅಂಕಲ್​ಪಲ್ಲಿ ವಿನೋದ್​ ಹುಟ್ಟೂರು. ಇವರ ತಂದೆ ಬೆಂಗಳೂರಿನಲ್ಲಿ ಕೆಲಕಾಲ ಉದ್ಯಮ ನಿರ್ವಹಿಸಿದ್ದರು. ಈ ಹಿನ್ನೆಲೆ ವಿನೋದ್​ ತಮ್ಮ ಬೇಸಿಗೆ ರಜೆ ಸಮಯದಲ್ಲಿ ಕೆಲವು ವೆಬ್​ ಡೆವಲ್ಮೆಂಟ್​ ಕೋರ್ಸ್​ಗಳಿಗೆ ಸೇರಿದ್ದರು. 10ನೇ ತರಗತಿ ಆಗುತ್ತಿದ್ದಂತೆ ಇದರಲ್ಲಿ ಮಾಸ್ಟರ್​ ಆದರು. ಆಗಿನಿಂದ ತಮ್ಮ ಪಾಕೆಟ್​ ಮನಿ ಸಂಪಾದನೆಗೆ ವೆಬ್​ಸೈಟ್​ ಡಿಸೈನ್​ ಮಾಡಲು ಆರಂಭಿಸಿ, ಬಳಿಕ ಅದನ್ನೇ ವೃತ್ತಿಯಾಗಿ ತೆಗೆದುಕೊಂಡರು. ಇಂಜಿನಿಯರಿಂಗ್​​​ಗೆ​ ಬಂದ ಮೇಲೆ ಗೆಳೆಯರಿಗೆ ಈ ಸಂಬಂಧ ಸಲಹೆಯನ್ನು ನೀಡುತ್ತಿದ್ದರು.

ಅಲ್ಲದೇ, ಪ್ರಾಜೆಕ್ಟ್ ಗಳ ಜೊತೆಗೆ ಶಿಕ್ಷಕರಿಗೆ ಶೈಕ್ಷಣಿಕ ಪ್ರಾಜೆಕ್ಟ್ ಹೇಳಿಕೊಡುವ ಮಟ್ಟಕ್ಕೆ ಬೆಳೆದರು. ಎಂಬಿಎ ಮುಗಿಸಿದ ನಂತರ ಟೆಲಿಕಾಂ ಕಂಪನಿ ಸೇರಿದರು. ಬಳಿಕ ವಿಶಾಖಪಟ್ಟಣದ ಜೀವ ವಿಮಾ ಕಂಪನಿಯಲ್ಲಿ ಮೂರೂವರೆ ವರ್ಷ ಕೆಲಸ ನಿರ್ವಹಿಸಿ ಮಾರ್ಕೆಟಿಂಗ್ ಮತ್ತು ಸೇಲ್ಸ್ ಕೌಶಲಗಳನ್ನು ಅನುಭವ ಪಡೆದರು.

ಹಲವು ಆ್ಯಪ್​ ಅಭಿವೃದ್ಧಿ: 2017ರಲ್ಲಿ ಹೈದರಾಬಾದ್​ಗೆ ಬಂದ ವಿನೋದ್​ ಕೆಲಸ ಮಾಡುತ್ತಿದ್ದಂತೆ, ಹೊಸ ಅವಿಷ್ಕಾರ ನಡೆಸುವ ಮೂಲಕ ಎಲ್ಲರ ಗಮನಸೆಳೆದರು. ಕಿವುಡರಿಗೆ ಸುಲಭವಾಗಿ ಮಾಹಿತಿ ತಲುಪಿಸುವ ಸಾಧನವನ್ನು ಮೊದಲ ಬಾರಿಗೆ ಡಿಸೈನ್​ ಮಾಡಿ ಪೆಟೆಂಟ್​ ಅನ್ನು ಪಡೆದರು. ಏಳು ವರ್ಷದ ಹಿಂದೆ 'ಓಪನ್​ ಕ್ಯೂಬ್'​ ಎಂಬ ಕಂಪನಿಯನ್ನು ತೆರೆದರು. ಹೊಸ ಕಂಪನಿಯಲ್ಲಿ ಆರಂಭದಲ್ಲಿ ಪ್ರಾಜೆಕ್ಟ್​ ಪಡೆಯಲು ಅನೇಕ ಸವಾಲುಗಳನ್ನು ಎದುರಿಸಿದರು.

ಆದಾಗ್ಯೂ, ಮೊದಲ ಅವಿಷ್ಕಾರಕ್ಕಿಂತ ವಿಭಿನ್ನವಾದ 'ಎನ್​ಎಚ್​​7' ಎಂಬ ಅಪ್ಲಿಕೇಷನ್​ ಅಭಿವೃದ್ದಿ ಪಡಿಸಿದರು. ಇದು ಫೇಸ್​ಬುಕ್​, ಟ್ವಿಟರ್​​ ಮತ್ತು ಟೆಲಿಗ್ರಾಂ ರೀತಿಯಲ್ಲೇ ಸಾಮಾಜಿಕ ಮಾಧ್ಯಮದ ಆ್ಯಪ್​ ಆಗಿತ್ತು. ಸುಲಭ ಬಳಕೆ ಮತ್ತು ಉತ್ತಮ ವೈಶಿಷ್ಟ್ಯದಿಂದ ಮೊದಲ ಎರಡು ತಿಂಗಳಲ್ಲೇ 18 ಲಕ್ಷ ಜನ ಇದರ ಬಳಕೆಮಾಡಲು ಆರಂಭಿಸಿದರು. ಈ ಸಂಬಂಧ ಕಠಿಣ ಕಾರ್ಯ ನಿರ್ವಹಿಸಿದ ವಿನೋದ್​ 2 ಕೋಟಿಯನ್ನು ಸಂಪಾದಿಸಿದರು. ಈ ಆ್ಯಪ್​ನ ಯಶಸ್ಸಿನಿಂದ ಸಿಂಗಪೂರ್​ನಲ್ಲಿ ಕಚೇರಿಯನ್ನು ತೆರೆದರು.

ಗೋಲ್ಡ್​ ಎಟಿಎಂ: ಎಲ್ಲವೂ ಚೆನ್ನಾಗಿ ನಡೆಯುತ್ತಿದೆ ಎಂದಾಗ ಕೋವಿಡ್​ ಇವರ ಉದ್ಯಮದ ಮೇಲೆ ಭಾರೀ ಪರಿಣಾಮ ಬೀರಿತು. ಕಚೇರಿ ನಿರ್ವಹಣೆ ಮತ್ತು ಆ್ಯಪ್​ ಬಳಕೆಗೆ 20 ಲಕ್ಷ ವೆಚ್ಚ ತಗುಲುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಲಾಭಕ್ಕಾಗಿ ಅವರು ಈ ಆ್ಯಪ್​ ಅನ್ನು ಮಾರಾಟ ಮಾಡಿದರು. ಇದಾದ ಬಳಿಕ ಆರ್​ಎಸ್​ಎಸ್​ ಸಂಘಟನೆಗೆ 'ಆಜಾದಿ' ಎಂಬ ಆ್ಯಪ್​ ಅನ್ನು ಅಭಿವೃದ್ಧಿಪಡಿಸಿದರು.

ಇದರಿಂದಾಗಿ ಇವರು 'ಗೋಲ್ಡ್​ ಸಿಕ್ಕಾ' ಎಂಬ ಗೋಲ್ಡ್​ ಎಟಿಎಂ ಕಂಪನಿಯನ್ನು ತೆರೆದರು. ದುಬೈ, ಲಂಡನ್​ನಲ್ಲಿರುವಂತೆ ಭಾರತದಲ್ಲೂ ಕೂಡ ಅವರು ಗೋಲ್ಡ್​ ಎಟಿಎಂ ತೆರೆದರು. ಈ ಗೋಲ್ಡ್​ ಎಟಿಎಂಗೆ ತಮ್ಮ ಸಿಬ್ಬಂದಿಗಳ ಜೊತೆ ಸೇರಿದ ಮೂರು ತಿಂಗಳ ಕಾಲ ಕಾರ್ಯ ನಿರ್ವಹಿಸಲಾಯಿತು ಎಂದಿದ್ದಾರೆ ವಿನೋದ್​. ಇದಕ್ಕಾಗಿ ಸಾಫ್ಟ್​ವೇರ್​ ಅನ್ನು ಅಭಿವೃದ್ಧಿಪಡಿಸಲಾಗಿದೆ. ಈ ಎಟಿಎಂ ಮೂಲಕ 0.5 ಗ್ರಾಂನಿಂದ 100 ಗ್ರಾಂವರೆಗೆ ಬಂಗಾರವನ್ನು ಪಡೆಯಬಹುದಾಗಿದೆ.

ವಿದೇಶದಲ್ಲಿ 20 ಗ್ರಾಂಗಿಂತ ಕಡಿಮೆ ಬಂಗಾರವನ್ನು ಡ್ರಾ ಮಾಡಲು ಸಾಧ್ಯವಿಲ್ಲ. ಆದರೆ, ದೇಶದಲ್ಲಿ ಮೊದಲ ಬಾರಿ ನಿರ್ಮಾಣವಾಗಿರುವ ಈ ಗೋಲ್ಡ್​ ಅನ್ನು ಕಡಿಮೆ ಪ್ರಮಾಣದಲ್ಲೂ ಪಡೆಯಬಹುದು. ಹೈದರಾಬಾದ್​ನ ಬಾಗುಂಪೆಟ್​ನಲ್ಲಿ ತೆರೆಯಲಾಗಿರುವ ಈ ಗೋಲ್ಡ್​ ಎಟಿಎಂನಲ್ಲಿ ಚಿನ್ನದ ದರ ಲಂಡನ್​ ಷೇರು ಮಾರುಕಟ್ಟೆ ಅನ್ವಯ ಪ್ರತಿ ನಾಲ್ಕು ಸೆಕೆಂಡ್​​ಗೆ ಬದಲಾಗುತ್ತದೆ. ಈ ಮಷಿನ್​​ ಕೂಡ ಕಡಿಮೆ ವೆಚ್ಚದಲ್ಲಿ ತಯಾರಿಸಲಾಗಿದೆ.

ಈ ಯಶಸ್ಸಿನ ಬೆನ್ನಲ್ಲೇ ವಿನೋದ್​ ಇದೀಗ ಮೆಡಿಸಿನ್​ ಎಟಿಎಂ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಮೊದಲು ಇವರು ಪ್ರೈವೇಟ್​​ ಪೈರಸಿಗೆ ಜಾಮರ್​ ಮಾಡಿದ್ದರು. ಇದನ್ನು ಥಿಯೇಟರ್​ನ ಯಾವುದೇ ಮೂಲೆಯಲ್ಲಾದರೂ ಅಳವಡಿಸಿದರೆ, ಕ್ಯಾಮೆರಾ ಮೂಲಕ ಸಿನಿಮಾ ಪೈರಸಿ ಮಾಡಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ: 12000 ಸಿಬ್ಬಂದಿಗೆ ಗೂಗಲ್ ಕತ್ತರಿ: ಕಂಪನಿ ಸಿಇಒ ಸುಂದರ್ ಪಿಚೈ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.