ETV Bharat / business

ಅಮೆರಿಕದಲ್ಲಿನ ಹಣದುಬ್ಬರದಿಂದ ಭಾರತದ ಮೇಲೆ ಒತ್ತಡ: ಇತರ ರಾಷ್ಟ್ರಗಳಿಗೂ ಸಂಕಷ್ಟ! - ಬಡ್ಡಿದರ ಹೆಚ್ಚಿಸುವ ಅನಿವಾರ್ಯತೆಗೆ

ಅಮೆರಿಕದಲ್ಲಿ ಹಣದುಬ್ಬರ ಮಿತಿ ಮೀರುತ್ತಿರುವ ಕಾರಣದಿಂದ ದೇಶದಲ್ಲಿನ ಬಡ್ಡಿದರ ಹೆಚ್ಚಿಸಲು ಅಮೆರಿಕ ಫೆಡರಲ್ ರಿಸರ್ವ್ ಮುಂದಾಗಿದೆ. ಅಮೆರಿಕದಲ್ಲಿನ ಬಡ್ಡಿದರ ಏರಿಕೆಗಳಿಂದ ವಿಶ್ವದ ಇತರ ಪ್ರಮುಖ ಆರ್ಥಿಕತೆಗಳು ಸಹ ತಮ್ಮ ಬಡ್ಡಿದರ ಹೆಚ್ಚಿಸುವ ಅನಿವಾರ್ಯತೆಗೆ ಸಿಲುಕಿವೆ.

How a hot inflation, high policy rates in US are putting pressure on India

author img

By

Published : Mar 10, 2023, 7:17 PM IST

ನವದೆಹಲಿ : ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿರುವ ಅಮೆರಿಕದಲ್ಲಿ ಉಂಟಾಗಿರುವ ಹಣದುಬ್ಬರ ಹೆಚ್ಚಳದಿಂದ ಅಮೆರಿಕದ ಕೇಂದ್ರ ಬ್ಯಾಂಕ್ ಆಗಿರುವ ಯುಎಸ್ ಫೆಡರಲ್ ರಿಸರ್ವ್ ಒತ್ತಡಕ್ಕೆ ಸಿಲುಕಿದೆ. ದೇಶದ ಬ್ಯಾಂಕ್ ಬಡ್ಡಿದರಗಳನ್ನು ಹೆಚ್ಚಿಸುವುದು ಫೆಡರಲ್​ ರಿಸರ್ವ್​ಗೆ ಈಗ ಅನಿವಾರ್ಯವಾಗಿದೆ. ಇದರ ಪರಿಣಾಮ ಈಗ ಇತರ ದೇಶಗಳ ಮೇಲೂ ಆಗುತ್ತಿದ್ದು, ಭಾರತ, ಯುರೋಪ್, ಕೆನಡಾ ಮತ್ತು ಇತರ ರಾಷ್ಟ್ರಗಳ ಕೇಂದ್ರ ಬ್ಯಾಂಕ್​ಗಳು ಸಹ ತಮ್ಮ ಬಡ್ಡಿದರ ಹೆಚ್ಚಿಸುವ ಅನಿವಾರ್ಯತೆಗೆ ಸಿಲುಕಿವೆ.

ಯುಎಸ್​ ಗ್ರಾಹಕ ಬೆಲೆ ಹಣದುಬ್ಬರ ದತ್ತಾಂಶವು ಮುಂದಿನ ವಾರ ಬಿಡುಗಡೆಯಾಗಲಿದೆ. ಇತ್ತೀಚಿನ ಅಂಕಿ - ಅಂಶಗಳ ಪ್ರಕಾರ, ಯುಎಸ್ ಗ್ರಾಹಕರು ಪಾವತಿಸಿದ ಗ್ರಾಹಕ ಬೆಲೆಗಳು ಈ ವರ್ಷದ ಜನವರಿಯಲ್ಲಿ ಶೇಕಡಾ ಅರ್ಧದಷ್ಟು ಹೆಚ್ಚಳವನ್ನು ದಾಖಲಿಸಿದರೆ, ಕಳೆದ 12 ತಿಂಗಳುಗಳಲ್ಲಿ ಬೆಲೆ ಹೆಚ್ಚಳವು ಶೇಕಡಾ 6.4 ರಷ್ಟಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯು ಶೇಕಡಾ 10 ಕ್ಕಿಂತ ಹೆಚ್ಚಿದ್ದರೆ, ಇಂಧನ ಉತ್ಪನ್ನಗಳ ಬೆಲೆ ಏರಿಕೆಯು ಶೇಕಡಾ 9ರ ಸಮೀಪದಲ್ಲಿದೆ. ಕಳೆದ ಒಂದು ವರ್ಷದ ಹಿಂದೆ ಸೊನ್ನೆಯ ಹತ್ತಿರವಿದ್ದ ಬಡ್ಡಿದರಗಳನ್ನು ಈಗ ಶೇ 5ಕ್ಕೆ ಹೆಚ್ಚಿಸಲು ಇದು ಯುಎಸ್ ಫೆಡರಲ್ ರಿಸರ್ವ್ ಮೇಲೆ ಒತ್ತಡ ಹಾಕಿದೆ.

ಹಣದುಬ್ಬರ, ಫೆಡ್ ದರ ನಿಗದಿಗೆ ಉದ್ಯೋಗ ಡೇಟಾ ಪರಿಗಣನೆ : ದೇಶದಲ್ಲಿ ಹಣದುಬ್ಬರವನ್ನು 2 ಪ್ರತಿಶತಕ್ಕೆ ಇಳಿಸಲು ಯುಎಸ್​ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸಿದೆ. ಯುಎಸ್ ಸೆಂಟ್ರಲ್ ಬ್ಯಾಂಕ್ ಈ ತಿಂಗಳ ಕೊನೆಯಲ್ಲಿ ನಿಗದಿಪಡಿಸಲಾದ ಬ್ಯಾಂಕ್‌ನ ಸಭೆಯಲ್ಲಿ ಬಡ್ಡಿ ದರಗಳಲ್ಲಿ ಮತ್ತೊಂದು 50 ಬೇಸಿಸ್ ಪಾಯಿಂಟ್ ಹೆಚ್ಚಳ ಘೋಷಿಸಬಹುದು ಎನ್ನುತ್ತಾರೆ ಯುಎಸ್ ಫೆಡ್ ಅಧ್ಯಕ್ಷ ಜೆರೋಮ್ ಪೊವೆಲ್.

ಮಾರ್ಚ್ 14 ರಂದು ಹಣದುಬ್ಬರದ ಅಂಕಿ- ಅಂಶಗಳನ್ನು ಮತ್ತು ಫೆಬ್ರವರಿಯ ಉದ್ಯೋಗ ಡೇಟಾವನ್ನು ಇಂದು (ಮಾರ್ಚ್ 10) ನಂತರ ಬಿಡುಗಡೆ ಮಾಡಲಾಗುತ್ತದೆ. ಯುಎಸ್ಎಯಲ್ಲಿ ಈ ಎರಡು ನಿರ್ಣಾಯಕ ಆರ್ಥಿಕ ದತ್ತಾಂಶಗಳ ಬಿಡುಗಡೆಯ ನಂತರ, ರಿಸರ್ವ್ ಬ್ಯಾಂಕ್ ಗವರ್ನರ್ ಅಧ್ಯಕ್ಷತೆಯಲ್ಲಿ ಭಾರತದ ಹಣಕಾಸು ನೀತಿ ಸಮಿತಿ ಸಭೆಯಂತೆಯೇ ಫೆಡರಲ್ ಮುಕ್ತ ಮಾರುಕಟ್ಟೆ ಸಮಿತಿಯು ಮಾರ್ಚ್ 21 ಮತ್ತು 22 ರಂದು ತನ್ನ ಸಭೆಯನ್ನು ನಡೆಸುತ್ತದೆ ಮತ್ತು ಅಮೆರಿಕದಲ್ಲಿನ ಬಡ್ಡಿ ದರಗಳ ಮೇಲೆ ತನ್ನ ನಿರ್ಧಾರ ಪ್ರಕಟಿಸುತ್ತದೆ.

ಆರ್‌ಬಿಐ ನ ಸಂಘಟಿತ ದರ ಏರಿಕೆಯ ಮಾರ್ಗ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇದುವರೆಗೆ ಅಮೆರಿಕದಲ್ಲಿ ಘೋಷಿಸಲಾದ ಬಡ್ಡಿ ದರಗಳ ಹೆಚ್ಚಳದೊಂದಿಗೆ ಅನುಗುಣವಾಗಿ ದರಗಳನ್ನು ಹೆಚ್ಚಿಸಲು ಸಂಘಟಿತ ವಿಧಾನವನ್ನು ಅನುಸರಿಸಿದೆ. ಆದರೂ ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುವ ಭಾರತೀಯ ಅಗತ್ಯತೆಗಳ ಪ್ರಕಾರ ಹೆಚ್ಚಳದ ಪ್ರಮಾಣವು ಬದಲಾಗಿದೆ. 1934 ರ ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆಯ ಸೆಕ್ಷನ್ 45ZA ಅಡಿ ಕೇಂದ್ರ ಸರ್ಕಾರವು ನಿಗದಿಪಡಿಸಿದ ಗುರಿಯಡಿಯಲ್ಲಿ ಚಿಲ್ಲರೆ ಹಣದುಬ್ಬರವನ್ನು ನಿಯಂತ್ರಿಸಲು RBI ಕಾನೂನು ಬಾಧ್ಯತೆಯನ್ನು ಹೊಂದಿದೆ. ಇದನ್ನು ಎರಡೂ ಕಡೆಗಳಲ್ಲಿ 2 ಶೇಕಡಾ ಮಾರ್ಜಿನ್‌ನೊಂದಿಗೆ ಶೇಕಡಾ 4 ಕ್ಕೆ ನಿಗದಿಪಡಿಸಲಾಗಿದೆ.

ಯುಎಸ್ ಫೆಡರಲ್ ರಿಸರ್ವ್ ಒಂದು ವರ್ಷದೊಳಗೆ ಅಮೆರಿಕದಲ್ಲಿನ ಬಡ್ಡಿ ದರಗಳನ್ನು ಶೂನ್ಯದಿಂದ ಶೇ 5 ರ ಹತ್ತಿರಕ್ಕೆ ಏರಿಸಿದಾಗ, ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕುಗಳು ಅಲ್ಪಾವಧಿಯ ಹಣವನ್ನು ಎರವಲು ಪಡೆಯುವ ದರ ಆಗಿರುವ ರೆಪೋ ದರವನ್ನು ಹೆಚ್ಚಿಸಿದೆ. ಇದನ್ನು ಕಳೆದ ವರ್ಷ ಮೇ ತಿಂಗಳಿನಿಂದ 250 ಮೂಲ ಅಂಕಗಳಷ್ಟು ಹೆಚ್ಚಿಸಲಾಗಿದೆ.

ಇದನ್ನೂ ಓದಿ :ಶಿಕ್ಷಣದ ಹಣದುಬ್ಬರ ನಿಮ್ಮ ಮಗುವಿನ ಭವಿಷ್ಯಕ್ಕೆ ಅಡ್ಡಿಯಾಗದಿರಲಿ! ನಿಮ್ಮ ಹೂಡಿಕೆ ಹೀಗಿರಲಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.