ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಬಡ್ಡಿದರ ಏರಿಕೆ ಕಾಣುತ್ತಲೇ ಇದ್ದು, ಇದರ ಪರಿಣಾಮ ಗೃಹ ಸಾಲ ಎಲ್ಲರಿಗೂ ಹೊರೆಯಾಗಿದೆ. ತ್ರೈಮಾಸಿಕದಲ್ಲಿ ಮತ್ತೊಮ್ಮೆ ರೆಪೋ ದರ ಏರಿಕೆ ಕಂಡಿದೆ. ಈ ಹಿನ್ನೆಲೆ ಸಾಲದ ಅವಧಿ ಅಥವಾ ಮಾಸಿಕ ಕಂತು ಭರಿಸುವುದು ಸಾಲ ಪಡೆದ ಗ್ರಾಹಕರಿಗೆ ಕಷ್ಟವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಈ ಸಾಲವನ್ನು ಬೇಗ ತೀರಿಸುವ ಮಾರ್ಗ ಹೇಗೆ? ಈ ಸಾಲಗಳು ಹೊರೆಯಾಗದಂತೆ ನೋಡಿಕೊಳ್ಳುವುದು ಹೇಗೆ ಎಂಬ ಸಲಹೆಗಳು ಇಲ್ಲಿವೆ.
ರೆಪೋ ಪರಿಣಾಮ: ಇತ್ತೀಚೆಗೆ ಮತ್ತೆ ರೆಪೋ ದರವನ್ನು ಹೆಚ್ಚಳ ಮಾಡಿರುವುದರಿದ ರೆಪೋ ದರ ಶೇ 6. 50 ರಷ್ಟಾಗಿದೆ. ಇದೇ ರೆಪೋ ದರ ಕಳೆದ ಮೇ ನಲ್ಲಿ 4.0ರಷ್ಟಿತ್ತು. ಇದೀಗ ಶೇ 2.5ರಷ್ಟು ಹೆಚ್ಚಳವಾಗಿದೆ. ಹಾಗಾಗಿ ಕಳೆದ ವರ್ಷ ರೆಪೋ ದರದ ಆಧಾರದ ಮೇಲೆ ಶೇ 6.5ರಷ್ಟಿದ್ದ ಗೃಹ ಸಾಲ ಈ ಬಾರಿ ಶೇ. 9.0ರಷ್ಟಾಗಿದೆ. ನಾವು ಈ ದರವನ್ನು ಲೆಕ್ಕ ಹಾಕಿದಾಗ, 20 ವರ್ಷದ ಅವಧಿಗೆ ತೆಗೆದುಕೊಂಡ ಗೃಹ ಸಾಲದ ಅವಧಿ ಇದೀಗ 30 ವರ್ಷದವರೆಗೆ ಆಗಬಹುದು. ಇದರ ಜೊತೆಗೆ ಇಎಂಐ ಕೂಡ ಹೆಚ್ಚಲಿದೆ. ಆದ ಕಾರಣ., ಇಂತಹ ಸಾಲದ ಹೊರೆಗಳಿಂದ ತಪ್ಪಿಸಿಕೊಳ್ಳಲು ಮುಂಗಡ ಪಾವತಿಯನ್ನು ಮಾಡಬಹುದಾಗಿದೆ.
ಇಎಂಐ ಹೆಚ್ಚಿಸಿ: ನಿಮ್ಮ ವಾರ್ಷಿಕ ಆದಾಯ ಹೆಚ್ಚಿದ್ದಂತೆ ನಿಮ್ಮ ಗೃಹ ಸಾಲಗಳ ಪಾವತಿ ಕಂತನ್ನು ಕೂಡ ಶೇ 5-10ರಷ್ಟು ಪ್ರತಿ ವರ್ಷ ಹೆಚ್ಚಿಸಿಕೊಳ್ಳಿ., ಇದು ಸಾಲದ ಅವಧಿಯನ್ನು ಕೆಲವು ವರ್ಷಗಳಿಗೆ ಕಡಿತ ಮಾಡುತ್ತದೆ. ಇಎಂಐ ಹೆಚ್ಚಳ ಮಾಡುವುದರಿಂದ ಹೆಚ್ಚುತ್ತಿರುವ ಬಡ್ಡಿದರವನ್ನು ಕಡಿಮೆ ಮಾಡಬಹುದು. ಸಾಮಾನ್ಯವಾಗಿ ಸಾಲದ ಪ್ರಿನ್ಸಿಪಲ್ ಭಾಗದಲ್ಲಿ ಒಂದು ಇಎಂಐ ಅನ್ನು ಕಡಿತ ಮಾಡಬಹುದು. ಉದಾಹರಣಗೆ ನಿಮ್ಮ ಇಎಂಐ 50 ಸಾವಿರ ರೂ ಎಂದರೆ, ಕನಿಷ್ಟ ಪಾವತಿಯೂ ಅದೇ ಮೊತ್ತವಾಗಿರುತ್ತದೆ.
ಕೆಲವು ಸಾಲದಾತರು ಇಎಂಐನ ದುಪ್ಪಟ್ಟು ಮೊತ್ತವನ್ನು ಕೇಳಬಹುದು. ಅಂದರೆ ಅದರ ಭಾಗಶಃ ಪಾವತಿ 1 ಲಕ್ಷ ಆಗಿರುತ್ತದೆ. ಈ ಪಾವತಿ ಯಾವಾಗಲೂ ಸಾಧ್ಯವಾಗುವುದಿಲ್ಲ. ಹಾಗಾಗಿ ಇಎಂಐ ಹೆಚ್ಚಳ ಮಾಡಿ. ಪ್ರತಿ ತಿಂಗಳು ಮುಂಖಡ ಪಾವತಿಯನ್ನು ಶುರುಮಾಡಿ. ಉದಾಹರಣೆಗೆ ನಿಮ್ಮ ಇಎಂಐ 25,000 ಆದರೆ, ನೀವು 30 ಸಾವಿರ ಪಾವತಿ ಮಾಡುವುದರಿಂದ ಸಾಲವನ್ನು ಬೇಗ ತೀರಿಸಬಹುದು. ಇದರ ಪರಿಣಾಮವಾಗಿ ಬಡ್ಡಿದರ ಕೂಡ ಗಣನೀಯವಾಗಿ ಕಡಿಮೆಯಾಗುತ್ತದೆ.
ಪ್ರಿನ್ಸಿಪಲ್ ಮೊತ್ತ : ಕಂತನ್ನು ಪಾವತಿಸುವುದು ಕಷ್ಟ ಎನ್ನುವವರು ಪ್ರತಿ ವರ್ಷ ಪ್ರಿನ್ಸಿಪಲ್(ಮೂಲ) ಮೊತ್ತವನ್ನು ತೀರಿಸಬಹುದು. ಈ ರೀತಿ ಮಾಡುವುದರಿಂದ 20 ವರ್ಷದ ಅವಧಿಯ ನಿಮ್ಮ ಸಾಲವನ್ನು 12ವರ್ಷದಲ್ಲೇ ಮುಗಿಸಬಹುದು. ನಿಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ನೀವು ಈ ಪ್ರಿನ್ಸಿಪಲ್ ಮೊತ್ತವನ್ನು ಪಾವತಿ ಮಾಡಬಹುದು. ಇದರಿಂದ ಶೇ 66ರಷ್ಟು ಸಾಲದ ಮೊತ್ತವನ್ನು ಇಎಂಐ ಮೂಲಕ ಪಾವತಿಸಿದರೆ, ಉಳಿದವನ್ನು ಅವಧಿಮುಂಚೆ ಪಾವತಿಸಬಹುದು. ಶೇ 5ರಷ್ಟಕ್ಕೆ ಸಾಲವನ್ನು ತೆಗೆದುಕೊಂಡ ಬದಲಿಗೆ ಶೇ 5ರಷ್ಟು ಉಳಿದ ಪ್ರಿನ್ಸಿಪಲ್ ಮೊತ್ತದ ಹೊರೆಯನ್ನು ಭವಿಷ್ಯದಲ್ಲಿ ಕಡಿಮೆ ಮಾಡಬಹುದು. ಈ ರೀತಿ ಮಾಡುವುದರಿಂದ ಭವಿಷ್ಯದ ಆರ್ಥಿಕ ಗುರಿಗಳಿಗೆ ಹಣವನ್ನು ಉಳಿತಾಯ ಮಾಡಿದಂತೆ ಆಗುತ್ತದೆ.
ಪೂರ್ವ ಪಾವತಿ: ಬೇರೆ ಸಾಲಗಳಿಗೆ ಹೋಲಿಕೆ ಮಾಡಿದರೆ, ಗೃಹ ಸಾಲದ ಬಡ್ಡಿದರ ಕಡಿಮೆ ಇದೆ. ಹಾಗಾಗಿ ಇದರ ನಿವಾರಣೆಗೆ ಆತುರ ಬೇಡ. ಪ್ರತಿಯೊಂದನ್ನು ವ್ಯವಸ್ಥಿತವಾಗಿ ಮಾಡಬೇಕು. ಖಾತೆಯನ್ನು ತೆರಿಗೆ ಕಡಿತವನ್ನು ತೆಗೆದುಕೊಂಡರೆ, ನಿವ್ವಳ ಬಡ್ಡಿ ಶೇ 7ರಷ್ಟಿದೆ. ಮಾರುಕಟ್ಟೆಯಲ್ಲಿ ದೀರ್ಘಾವಧಿಯ ಹೂಡಿಕೆ ಶೇ 10ರಷ್ಟುಯನ್ನು ರಿಟರ್ನ್ ಹೊಂದಿರಬಹುದು. ಪೂರ್ವ ಪಾವತಿಗಳು ರೆಪೋ ದರ ಹೆಚ್ಚಳವಾದಾಗ ನಿಮ್ಮ ಸಾಲದ ಆರಂಭಿಕ ಬಡ್ಡಿದರವನ್ನು ಕಡಿಮೆ ಮಾಡುತ್ತದೆ. ಅವಧಿ ಮುಂದುವರೆದಂತೆ ಪೂರ್ವಪಾವತಿಯ ಅಗತ್ಯವು ಕಡಿಮೆಯಾಗುತ್ತದೆ. ಬಳಿಕ ಹೆಚ್ಚಿನ ಆದಾಯವನ್ನು ನೀಡುವ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಈ ಮೂಲಕ ಸಾಲವನ್ನು ಬೇಗ ತೀರಿಸಬಹುದಾಗಿದೆ.
ಅವಧಿ ಕಡಿತ: ತೆಗೆದುಕೊಂಡ ಸಾಲವನ್ನು ಎಷ್ಟು ವರ್ಷಗಳ ಒಳಗೆ ಪಾವತಿ ಮಾಡಬೇಕು ಎಂಬುದನ್ನು ನೀವು ಗಮನದಲ್ಲಿರಿಸಿಕೊಳ್ಳುವುದು ಅವಶ್ಯ. ಉದಾಹರಣೆಗೆ, 20 ವರ್ಷದ ಅವಧಿಗೆ ನೀವು ಸಾಲವನ್ನು ತೆಗೆದುಕೊಂಡರೆ, ಅದನ್ನು 10 ವರ್ಷದಲ್ಲಿ ಮರು ಪಾವತಿಸಬಹುದು. ಆದರೆ ದರ ಏರಿಕೆಯಿಂದಾಗಿ ಈ ಅವಧಿ 25 ವರ್ಷಗಳಿಗೆ ಹೋಗುತ್ತದೆ ಎಂದಾಗ ಸಂದರ್ಭದಲ್ಲಿ ಕನಿಷ್ಠ 10 ವರ್ಷಗಳಿಗೆ ನಿಮ್ಮ ಇಎಂಐ ಅನ್ನು ಹೆಚ್ಚಳ ಮಾಡಿಕೊಳ್ಳುವುದು ಅಗತ್ಯವಿದೆ. ಪೂರ್ವ ಪಾವತಿಯಿಂದ, ನಿಮ್ಮ ಅವಧಿ ಹೆಚ್ಚಳವಾಗಿಲ್ಲ ಎಂಬುದು ಖಾತ್ರಿಯಾಗುತ್ತದೆ. ಇದು ನಿಮ್ಮ ಸಾಲದ ಹೊರೆಯನ್ನು ಕಡಿಮೆ ಮಾಡುತ್ತದೆ.
ನಿಮ್ಮ ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆಗಳಿಂದ ಗೃಹ ಸಾಲದ ಮಾಹಿತಿ ಪಡೆಯಿರಿ. ಇದರಲ್ಲಿ ಬಡ್ಡಿದರ ಎಷ್ಟು, ಎಷ್ಟು ಇಎಂಐ ಪಾವತಿ ಮಾಡಲಾಗಿದೆ. ಎಷ್ಟು ವರ್ಷ ಇನ್ನು ಉಳಿದಿದೆ ಎಂಬುದನ್ನು ಪರಿಶೀಲಿಸಿದರೆ ನಿಮಗೆ ಮುಂದೆ ಏನು ಮಾಡಬೇಕು ಎಂಬ ಒಂದು ಸ್ಪಷ್ಟನೆ ಸಿಗುತ್ತದೆ.
ಇದನ್ನೂ ಓದಿ: Explained: ಏನಿದು ಹೊಸ ಹಾಗೂ ಹಳೆಯ ಪಿಂಚಣಿ ಯೋಜನೆ ವಿವಾದ..?