ಬೆಂಗಳೂರು: ಕಳೆದೆರಡು ವರ್ಷಗಳಿಗೆ ಹೋಲಿಕೆ ಮಾಡಿದರೆ ಇಂದು ವೈದ್ಯಕೀಯ ವೆಚ್ಚಗಳು ಹೆಚ್ಚಾಗಿವೆ. ಸಣ್ಣ ಪುಟ್ಟ ಅನಾರೋಗ್ಯಕ್ಕೂ ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತಿದೆ. ಈ ಕಾರಣದಿಂದ ಆರೋಗ್ಯ ವಿಮೆ ಅಗತ್ಯವಾಗಿದೆ. ಇದೇ ವೇಳೆ ವಿಮೆ ಕೂಡ ಒಮ್ಮೆ ಪ್ರೀಮಿಯಂಗಳನ್ನು ಹೆಚ್ಚು ಮಾಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಾಲಿಸಿಗಳಿಗೆ ಶೇ.15-30ರಷ್ಟು ಪ್ರೀಮಿಯಂ ಹೆಚ್ಚಳವಾಗಿರುವುದು ಸ್ಪಷ್ಟವಾಗಿದೆ.
ಕೋವಿಡ್ ಸಮಯದಲ್ಲಿ ಆರೋಗ್ಯ ವಿಮೆಗಳ ಪಾಲಸಿಯ ಸಂಖ್ಯೆ ಹೆಚ್ಚಾಗಿದೆ. ಇದೀಗ ಇವುಗಳ ನವೀಕರಣದ ಸಮಯ ಬಂದಿದೆ. ಈ ಹಿನ್ನಲೆಯಲ್ಲಿ ಎರಡು ವರ್ಷ ಅಥವಾ ಮೂರು ವರ್ಷಗಳ ಪ್ರೀಮಿಯಂ ಅನ್ನು ಒಂದೇ ಬಾರಿ ಪಾವತಿಸುವುದು ಉತ್ತಮವೇ ಎಂಬ ಅನುಮಾನ ಅನೇಕರಲ್ಲಿದೆ. ನೀವು ವಾರ್ಷಿಕ ಪ್ರೀಮಿಯಂ ಪಾಲಿಸಿ ಅಯ್ದುಕೊಂಡಾಗ ಸಮಯದಿಂದ ಸಮಯಕ್ಕೆ ನೀವು ಹೆಚ್ಚಿನ ಪ್ರೀಮಿಯಂ ಅನ್ನು ಪಾಲಿಸಬೇಕಾಗುತ್ತದೆ. ಎರಡು ಅಥವಾ ಮೂರು ವರ್ಷಗಳ ಕಾಲ ಒಂದೇ ಬಾರಿಗೆ ಪ್ರೀಮಿಯಂ ಪಾವತಿಸುವುದರಿಂದ ಹೊರೆ ಕಡಿಮೆಯಾಗುತ್ತದೆ.
ಹೆಚ್ಚಿನ ಪ್ರೀಮಿಯಂ: ವಾರ್ಷಿಕವಾಗಿ ಪ್ರೀಮಿಯಂ ಅನ್ನು ಪಾವತಿಸುತ್ತಿದ್ದರೆ, ಹೆಚ್ಚಿದ ಪ್ರೀಮಿಯಂ ಅನ್ನು ಕೂಡ ಪಾವತಿಸಬೇಕಾಗುತ್ತದೆ. ವಿಮೆ ಕಂಪನಿಗಳು ಸಾಮಾನ್ಯವಾಗಿ ಪ್ರತಿ ವರ್ಷ ಪ್ರೀಮಿಯಂಗಳನ್ನು ಹೆಚ್ಚು ಮಾಡುತ್ತದೆ. ಈ ಹೊರೆ ನಿಮಗೆ ಬೇಡವಾಗುತ್ತದೆ. ಇದಕ್ಕಾಗಿ ದೀರ್ಘಾವಧಿ ಪಾಲಿಸಿ ಪಡೆಯಬಹುದು. ಪ್ರೀಮಿಯಂ ಹೆಚ್ಚಾದರೂ, ಪಾಲಿಸಿದಾರರು ಆ ಮೊತ್ತವನ್ನು ಪಾವತಿಸಬೇಕಾಗಿಲ್ಲ. ಏಕೆಂದರೆ ಅವರು ಈಗಾಗಲೇ ಮುಂಗಡವಾಗಿ ಪ್ರೀಮಿಯಂ ಪಾವತಿಸಿದ್ದಾರೆ.
ಕಂತುಗಳು: ಹೆಚ್ಚಿನ ಮೊತ್ತದ ಪ್ರೀಮಿಯಂ ಪಾವತಿಸುವ ತೊಂದರೆಯಿಲ್ಲದೆ ವಿಮಾ ಕಂಪನಿಗಳು ಸಹ ಸ್ವಲ್ಪ ಸರಳತೆ ನೀಡುತ್ತವೆ. ಅಗತ್ಯವಿದ್ದರೆ ಈ ಸೌಲಭ್ಯವನ್ನು ಪಡೆಯಬಹುದು. ದೀರ್ಘಾವಧಿಯ ಪಾಲಿಸಿಗಳಿಗೆ ಮಾತ್ರವಲ್ಲ. ವಾರ್ಷಿಕ ಪ್ರೀಮಿಯಂ ಪಾವತಿಸುವ ಸಂದರ್ಭದಲ್ಲಿ ಇಎಂಐ ಅನ್ನು ಸಹ ಬಳಸಬಹುದು.
ತಡೆ-ರಹಿತ: ಕೆಲವು ವಿಶೇಷ ಪರಿಸ್ಥಿತಿಗಳಲ್ಲಿ ಪಾಲಿಸಿಗಳನ್ನು ನವೀಕರಿಸಲು ಸಾಧ್ಯವಿಲ್ಲ. ಆದಾಯ ನಷ್ಟ, ಅನಾರೋಗ್ಯ, ಅಪಘಾತಗಳು ಇತ್ಯಾದಿಗಳ ಸಂದರ್ಭದಲ್ಲಿ ಹಣಕಾಸಿನ ತೊಂದರೆಗಳಿಂದ ಪಾಲಿಸಿಯನ್ನು ನಿಲ್ಲಿಸಬೇಕಾಗಬಹುದು. ಈ ರೀತಿಯ ದೀರ್ಘಾವಧಿಯ ನೀತಿ ಇದ್ದರೆ, ಅದು ವರ್ಷಗಳವರೆಗೆ ಇರುತ್ತದೆ. ನಿಮ್ಮ ಕೈಯಲ್ಲಿ ಹಣವಿರುವಾಗ ನೀವು ದೀರ್ಘಾವಧಿಯ ಪಾಲಿಸಿಯನ್ನು ಆರಿಸಿಕೊಂಡರೆ, ಪ್ರೀಮಿಯಂ ಹೊರೆಯಾಗದಂತೆ ನೋಡಿಕೊಳ್ಳಬಹುದು.
ತೆರಿಗೆ ಪ್ರಯೋಜನ: ವಾರ್ಷಿಕ ಆರೋಗ್ಯ ವಿಮಾ ಪಾಲಿಸಿಗೆ ಪಾವತಿಸಿದ ಪ್ರೀಮಿಯಂಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80D ಅಡಿಯಲ್ಲಿ ವಿನಾಯಿತಿ ಇದೆ. ಈ ಹಿನ್ನೆಲೆ ದೀರ್ಘಾವದಿ ಪಾಲಿಸಿಗೆ ಯಾವುದೇ ತೊಂದರೆ ಇಲ್ಲ. ಉದಾಹರಣೆ, ಮೂರು ವರ್ಷ ಒಆಲಿಗೆ 45 ಸಾವಿರ ಪ್ರೀಮಿಯಂ ಪಾವಿಸುತ್ತಿದ್ದರೆ, 15 ಸಾರಿಗೆ ತೆರಿಗೆ ಕಡಿತವನ್ನು ಆರ್ಥಿಕ ವರ್ಷದಲ್ಲಿ ಪಡೆಯಬಹುದು. ವಿಮಾ ಕಂಪನಿಯು ನಿಮಗೆ ಸೆಕ್ಷನ್ 80D ಪ್ರಮಾಣಪತ್ರವನ್ನು ನೀಡುತ್ತದೆ. ಹೊಸ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡುವವರು ವಿನಾಯಿತಿಗಳನ್ನು ತೋರಿಸಬೇಕಾಗಿಲ್ಲ.
ವೈದ್ಯಕೀಯ ವೆಚ್ಚಗಳು ದುಬಾರಿಯಾಗುತ್ತಿದ್ದು, ಆರೋಗ್ಯ ವಿಮೆಗಳನ್ನು ಆಯ್ಕೆ ಮಾಡುವಾಗ ಸಮಗ್ರ ಅವಲೋಕನ ಮಾಡಬೇಕು. ಇದು ನಿಮ್ಮನ್ನು ಸಂಪೂರ್ಣವಾಗಿ ರಕ್ಷಣೆ ಮಾಡುತ್ತದೆ ಎಂಬುದನ್ನು ಮರೆಯಬೇಡಿ, ಇದೇ ವೇಳೆ ಪಾಲಿಸಿದಾರರು ಉತ್ತಮ ಪಾವತಿ ಇತಿಹಾಸ ಹೊಂದಿರುವ ವಿಮಾ ಕಂಪನಿಯನ್ನು ಆಯ್ಕೆ ಮಾಡಬೇಕು ಎಂಬುದನ್ನು ಮರೆಯಬಾರದು.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಲೋನ್: ಬಡ್ಡಿ ಎಷ್ಟು, ಹೇಗೆ ಸಿಗುತ್ತೆ? ಇಲ್ಲಿದೆ ಮಾಹಿತಿ