ಮುಂಬೈ: ಸಾಕಷ್ಟು ಕಾಯ್ದಿಟ್ಟ ಬಂಡವಾಳ ನಿಧಿ ಮತ್ತು ಆಸ್ತಿಗಳ ಗುಣಮಟ್ಟ ಸುಧಾರಣೆಯ ಹಿನ್ನೆಲೆಯಲ್ಲಿ ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯು ಆರ್ಥಿಕ ಬೆಳವಣಿಗೆಯನ್ನು ಸಾಧಿಸುವ ಅವಕಾಶದ ಘಟ್ಟದಲ್ಲಿದೆ ಎಂದು ಆರ್ಬಿಐ ಜೂನ್‌ನ ತನ್ನ ಹಣಕಾಸು ಸ್ಥಿರತೆಯ ವರದಿಯಲ್ಲಿ ಹೇಳಿದೆ.
ಮಾರ್ಚ್ 2022ರಲ್ಲಿ ಸ್ವತ್ತುಗಳ ನಿವ್ವಳ ಕಾರ್ಯಕ್ಷಮತೆಯ ಅನುಪಾತ ಕಳೆದ 6 ವರ್ಷದ ಕನಿಷ್ಠ ಮಟ್ಟವಾದ ಶೇ 5.9ಕ್ಕೆ ಇಳಿದಿದೆ ಎಂದು ಆರ್ಬಿಐ ವರದಿ ತಿಳಿಸಿದೆ.
ಸುದೀರ್ಘ ಕಾಲಾವಧಿಯ ನಂತರ ಬ್ಯಾಂಕ್ಗಳ ಸಾಲದ ಮೊತ್ತವು ಎರಡಂಕಿಯಲ್ಲಿ ಬೆಳೆದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕೋವಿಡ್-19 ಕಾಲಾವಧಿಯಲ್ಲಿ ದೇಶದ ಹಣಕಾಸು ನಿಯಂತ್ರಕ ಆರ್ಬಿಐ ಕೈಗೊಂಡ ಬೆಂಬಲದ ಕ್ರಮಗಳಿಂದ, ನಿಯಂತ್ರಕ ಪರಿಹಾರಗಳನ್ನು ಹಿಂಪಡೆದ ನಂತರವೂ ಶೆಡ್ಯೂಲ್ಡ್ ಕಮರ್ಶಿಯಲ್ ಬ್ಯಾಂಕ್ಗಳ ಸ್ವತ್ತುಗಳ ನಿವ್ವಳ ಕಾರ್ಯಕ್ಷಮತೆಯ ಅನುಪಾತವನ್ನು (GNPA ratios) ನಿಯಂತ್ರಣದಲ್ಲಿಡಲು ಸಹಾಯಕವಾದವು ಎಂದು ಆರ್ಬಿಐ ವರದಿ ಮಾಹಿತಿ ನೀಡಿದೆ.
ಆರ್ಬಿಐ ನಡೆಸಿದ ಒತ್ತಡ ಪರೀಕ್ಷೆಗಳ ಪ್ರಕಾರ, 2023ರ ವೇಳೆಗೆ ಸ್ವತ್ತುಗಳ ನಿವ್ವಳ ಕಾರ್ಯಕ್ಷಮತೆಯ ಅನುಪಾತವು, ಬ್ಯಾಂಕ್ಗಳ ಸಾಲ ಬೇಡಿಕೆಗಳ ಪ್ರಮಾಣ ಹೆಚ್ಚಳವಾಗುವ ಹಾಗೂ ಇಳಿಕೆಯ ಹಾದಿಯಲ್ಲಿ ಸ್ವತ್ತುಗಳ ನಿವ್ವಳ ಕಾರ್ಯಕ್ಷಮತೆಯ ಅನುಪಾತ ಶೇ 5.3ಕ್ಕೆ ಹೆಚ್ಚಳವಾಗಬಹುದು.