ETV Bharat / business

ಬಜೆಟ್​ನಲ್ಲಿ ಹಸಿರು ಕ್ರಾಂತಿಗೆ ಉತ್ತೇಜನ: ವೈದ್ಯಕೀಯ ಕಾಲೇಜು ಹಾಗೂ ಸಂಶೋಧನೆಗೆ ಒತ್ತು - ಬಜೆಟ್​ನಲ್ಲಿ ಹಸಿರು ಕ್ರಾಂತಿಗೆ ಉತ್ತೇಜನ

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆ ಆದ್ಯತೆ - ಕೃಷಿಕರ ಆದಾಯ ಹೆಚ್ಚಿವಂತಹ ಹಲವು ಯೋಜನೆಗಳಿಗೆ ಆದ್ಯತೆ - ಕೃಷಿ ಆಧಾರಿತ ತಂತ್ರಜ್ಞಾನ ಸಂಸ್ಥೆಗಳಿಗೆ ವಿಶೇಷ ಸಹಾಯಧನ

Budget 2023
ಕೇಂದ್ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
author img

By

Published : Feb 1, 2023, 12:19 PM IST

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಸಕ್ತ ವರ್ಷದಲ್ಲಿ ಐದನೇ ಕೇಂದ್ರ ಬಜೆಟ್ ಮಂಡಿಸಿದರು. ದೇಶ ಸಮಗ್ರ ಅಭಿವೃದ್ಧಿ ಪ್ರಮುಖ ಆದ್ಯತೆ ನೀಡಲಾಗಿದೆ. ಹಸಿರು ಕ್ರಾಂತಿ ಉತ್ತೇಜಿಸಲಾಗಿದೆ. ದೇಶದಲ್ಲಿ ಮೂಲ ಸೌಕರ್ಯಗಳನ್ನು ಹೆಚ್ಚಿನ ಒತ್ತುನೀಡಲಾಗಿದೆ. ಯುವ ಸಬಲೀಕರಣ ಹಾಗೂ ಮಹಿಳಾ ಸಬಲೀಕರಣಕ್ಕೆ ಪಣ ತೊಡಲಾಗಿದೆ. ಕೃಷಿ ಕ್ಷೇತ್ರದಲ್ಲಿ ಸಾರ್ಟ್ ಅಪ್​ಗೆ ಪ್ರಮುಖ ಆದ್ಯತೆ ನೀಡಲಾಗಿದೆ. ದೇಶದ ಸಾಮರ್ಥ್ಯ ಅನಾವರಣಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಗೆ ಮತ್ತೊಮ್ಮೆ ಒತ್ತು ನೀಡಲಾಗಿದೆ. ಕೃಷಿಕರಿಗೆ ಸಾಲ ಯೋಜನೆಯನ್ನು 20 ಲಕ್ಷ ಕೋಟಿಯವರೆಗೆ ವಿಸ್ತರಿಸಲಾಗುವುದು. ಹೈನುಗಾರಿಕೆ, ಪಶು ಸಂಗೋಪನೆ ಹಾಗೂ ಮೀನುಗಾರಿಕೆಗೆ ಹೆಚ್ಚಿನ ಅನುದಾನ ಒದಗಿಸಲಾಗಿದೆ. ಕೃಷಿಕರ ಆದಾಯ ಹೆಚ್ಚಿವಂತಹ ಹಲವು ಯೋಜನೆಗಳಿಗೆ ಮೊದಲ ಆದ್ಯತೆ ದೊರೆತಿದೆ ಎಂದರು.

157 ಹೊಸ ನರ್ಸಿಂಗ್‌ ಕಾಲೇಜು ಆರಂಭಿಸಲು ನಿರ್ಧಾರ: ವೈದ್ಯಕೀಯ ಕಾಲೇಜು ಹಾಗೂ ಸಂಶೋಧನೆಗೆ ವಿಶೇಷ ಗಮನ ಹರಿಸಲಾಗಿದೆ. ವೈದ್ಯಕೀಯ ಸಲಕರಣೆಗಳಿಗೂ ಹೆಚ್ಚಿನ ಅನುದಾನ ನೀಡಿಲಾಗಿದೆ. 157 ಹೊಸ ನರ್ಸಿಂಗ್ ಕಾಲೇಜು ಸ್ಥಾಪಿಸಲು ಚಿಂತಿಸಲಾಗಿದೆ. 2014ರಿಂದ ಸ್ಥಾಪಿತಗೊಂಡ ಹೊಸ ವೈದ್ಯಕೀಯ ಕಾಲೇಜುಗಳಲ್ಲಿ 157 ಹೊಸ ನರ್ಸಿಂಗ್‌ ಕಾಲೇಜು ಆರಂಭಿಸುವ ವಿಚಾರನ್ನು ಸರ್ಕಾರದ ಘೋಷಣೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

400 ಹೊಸ ವಂದೇ ಭಾರತ್ ರೈಲುಗಳ ಪರಿಚಯ: 400 ಹೊಸ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಾಗುವುದು. ಈ ರೈಲುಗಳನ್ನು ಮುಂದಿನ ಮೂರು ವರ್ಷಗಳಲ್ಲಿ ನಿರ್ಮಿಸಲಾಗುವುದು ಎಂದ ಅವರು, 100 ಹೊಸ ಕಾರ್ಗೋ ಟರ್ಮಿನಲ್​ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಹೊಸ ಮೆಟ್ರೋ ರೈಲು ವ್ಯವಸ್ಥೆಗಾಗಿ ಹೊಸ ಹೂಡಿಕೆಯನ್ನು ಪ್ರೋತ್ಸಾಹಿಸಲಾಗುವುದು ಎಂದು ಮಾಹಿತಿ ನೀಡಿದರು.

ಕೃಷಿಗೆ ಡಿಜಿಟಲ್ ಮೂಲ ಸೌಕರ್ಯ ಅಭಿವೃದ್ಧಿ: ಎಲ್ಲ ಸಮುದಾಯದವರನ್ನು ಒಳಗೊಂಡ ಸಮಗ್ರ ಬೆಳವಣಿಗೆ ಪ್ರಮುಖ ಆದ್ಯತೆ ನೀಡಲಾಗಿದೆ. ರೈತರು, ಮಹಿಳೆಯರು, ಎಸ್ಸಿ, ಎಸ್ಟಿ, ವಿಶೇಷಚೇತನರು ಹಾಗೂ ಹಿಂದುಳಿದವರು ಸೇರಿದಂತೆ ಸೌಲಭ್ಯಗಳಿಂದ ವಂಚಿತರಾದವರಿಗೆ ಮೊದಲ ಆದ್ಯತೆ ಒದಗಿಸಿಲು ನಿರ್ಧರಿಸಲಾಗಿದೆ ಎಂದು ಅವರು, ಕೃಷಿಗೆ ಡಿಜಿಟಲ್ ಮೂಲ ಸೌಕರ್ಯ ಅಭಿವೃದ್ಧಿ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ರೈತರ ಬೆಳೆಗಳಿಗೆ ಸೂಕ್ತ ಮಾಹಿತಿ ನೀಡುವ ಯೋಜನೆ ಸಿದ್ಧಪಡಿಸಲಾಗಿದೆ.

ಹಸಿರೀಕರಣಕ್ಕೆ ಅತಿಹೆಚ್ಚಿನ ಆದ್ಯತೆ: ಸಾಲ ಸೌಲಭ್ಯವನ್ನು ಡಿಜಿಟಲೀಕರಣ ಮಾಡಲಾಗುವುದು. ಕೃಷಿ ಆಧಾರಿತ ತಂತ್ರಜ್ಞಾನ ಸಂಸ್ಥೆಗಳಿಗೆ ವಿಶೇಷ ಸಹಾಯಧನ ಒದಗಿಸಲಾಗುವುದು. ಕೃಷಿ ಆಧಾರಿತ ಸಾರ್ಟ್ ಅಪ್​​ಗಳಿಗೆ ಪ್ರತ್ಯೇಕ ಅನುದಾನ ನಿಗದಿಪಡಿಲಾಗುವುದು. ರೈತರ ಸಮಸ್ಯೆಗಳನ್ನು ಪರಿಹರಿಸಲು ಪೂರಕವಾದ ಕಾರ್ಯಗಳು ಹಾಗೂ ಕೃಷಿ ಕ್ಷೇತ್ರದ ಸಾರ್ಟ್ಅಪ್​ಗಳಿಗೆ ನೆರವು ನೀಡಲಾಗುವುದು. ಹಸಿರೀಕರಣ ಅತಿಹೆಚ್ಚಿನ ಆದ್ಯತೆ ಕೊಡಲಾಗಿದೆ. ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗಿದೆ. ಪ್ರವಾಸೋದ್ಯಮದಲ್ಲಿ ಹೆಚ್ಚಿನ ಉದ್ಯೋಗಳನ್ನು ಸೃಷ್ಟಿ ಮಾಡಲಾಗುವುದು. ಪ್ರವಾಸೋದ್ಯಮದ ಪ್ರೋತ್ಸಾಹಕ್ಕೆ ಸರ್ಕಾರದ ಪ್ರಮುಖ ಆದ್ಯತೆ ಕೊಟ್ಟಿದೆ.

ಇದನ್ನು ಓದಿ: ರೈಲ್ವೆ ಇಲಾಖೆಗೆ 2.40 ಲಕ್ಷ ಕೋಟಿ ರೂ. ಮೀಸಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.