ಬೆಂಗಳೂರು: ಚಿನಿವಾರ ಪೇಟೆಯಲ್ಲಿ ದರ ಏರಿಳಿತ ಸಾಮಾನ್ಯ. ಬಂಗಾರ ಬೆಳ್ಳಿ ದರ ಏರುತ್ತಿದ್ದರೂ ಆಭರಣಪ್ರಿಯರು ಮಾತ್ರ ಖರೀದಿ ಕಡಿಮೆ ಮಾಡಲ್ಲ. ರಾಜ್ಯದಲ್ಲಿ ಇಂದು ಆಭರಣ ಖರೀದಿಗೆ ಹೋಗುವ ಮುನ್ನ ದರ ಹೇಗಿದೆ ಎಂಬುದನ್ನು ತಿಳಿದುಕೊಳ್ಳಿ...
ಚಿನ್ನ, ಬೆಳ್ಳಿ ದರ: ಚಿನ್ನಾಭರಣ ದರದಲ್ಲಿ ಇಂದು ಕೊಂಚ ಇಳಿಕೆಯಾಗಿದೆ. ಬೆಂಗಳೂರಲ್ಲಿ 22 ಕ್ಯಾರೆಟ್ ಚಿನ್ನದಲ್ಲಿ 12 ರೂ ಮತ್ತು 24 ಕ್ಯಾರೆಟ್ ಚಿನ್ನದಲ್ಲಿ 17 ರೂ ಕಡಿಮೆಯಾಗಿದೆ. ಇನ್ನು ಬೆಳ್ಳಿಯಲ್ಲಿ 20 ಪೈಸೆ ತಗ್ಗಿದೆ. ಮಂಗಳೂರಲ್ಲಿ 22k, 24K ಚಿನ್ನದಲ್ಲಿ ಗ್ರಾಂಗೆ 10 ರೂ ಇಳಿಕೆಯಾಗಿದೆ. ಮೈಸೂರಲ್ಲಿ 22k ಚಿನ್ನದಲ್ಲಿ ಗ್ರಾಂಗೆ 10 ರೂ, 24k ಚಿನ್ನದಲ್ಲಿ ಗ್ರಾಂಗೆ 12 ರೂ ತಗ್ಗಿದೆ. ದಾವಣಗೆರೆಯಲ್ಲಿ 22k ಚಿನ್ನದಲ್ಲಿ ಗ್ರಾಂಗೆ 15 ರೂ, 24k ಚಿನ್ನದಲ್ಲಿ ಗ್ರಾಂಗೆ 10 ರೂ ಇಳಿಕೆಯಾಗಿದೆ.
ನಗರ | ಚಿನ್ನ 22K (ಗ್ರಾಂ) | ಚಿನ್ನ 24K | ಬೆಳ್ಳಿ |
ಬೆಂಗಳೂರು | 4,953 ರೂ | 5,383 ರೂ | 67.2 ಸಾವಿರ |
ಮೈಸೂರು | 4,980 | 5,548 | 69 |
ಮಂಗಳೂರು | 4,985 | 5,439 | 73 |
ಶಿವಮೊಗ್ಗ | 4,980 | 5,383 | 68.4 |
ಹುಬ್ಬಳ್ಳಿ | 4,962 | 5,413 | 67.72 |
ದಾವಣಗೆರೆ | 5,045 | 5,454 | 72.88 |
(ಓದಿ: ಮಂದ ಆರ್ಥಿಕ ಮುನ್ಸೂಚನೆಯ ಹೊರತಾಗಿಯೂ 2023ರಲ್ಲಿ ಪ್ರಕಾಶಿಸಲಿದೆ ಬಂಗಾರ)