ETV Bharat / business

ಬಜೆಟ್‌ನಲ್ಲಿ ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಳ: ಆಭರಣ ಪ್ರಿಯರಿಗೆ ಶಾಕ್‌! ಹೀಗಿದೆ ಹೊಸ ದರ.. - ದೇಶದ ಪ್ರಮುಖ ನಗರ

ಬಜೆಟ್​ ನಂತರದಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಇಂದಿನ ಚಿನಿವಾರ ಮಾರುಕಟ್ಟೆ ದರದ ಮಾಹಿತಿ ಇಲ್ಲಿದೆ.

Gold Rate
ಇಂದಿನ ಚಿನ್ನದ ದರ
author img

By

Published : Feb 2, 2023, 4:34 PM IST

ನವದೆಹಲಿ: ನಿನ್ನೆಯಷ್ಟೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಬಜೆಟ್​ ಮಂಡಿಸಿದ್ದು, ಚಿನ್ನದ ಆಮದಿನ ಮೇಲಿನ ಸುಂಕ ಹೆಚ್ಚಿಸುವ ಪ್ರಸ್ತಾವನೆ ಮುಂದಿಟ್ಟಿದ್ದರು. ಈ ಪ್ರಸ್ತಾವನೆ ಘೋಷಣೆಯಾದ ನಂತರ ಇದೀಗ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ನಿನ್ನೆ ಬಜೆಟ್ ಸಂದರ್ಭದಲ್ಲಿ​ ಬೆಲೆಯಲ್ಲಿ ಇಳಿಕೆ ಕಂಡಿದ್ದು ಆಭರಣ ಪ್ರಿಯರಲ್ಲಿ ಆನಂದ ಮೂಡಿಸಿತ್ತು. ಆದರೆ ಯಾವಾಗ ಬಜೆಟ್​ನಲ್ಲಿ ಆಮದು ಸುಂಕ ಹೆಚ್ಚಿಸುವ ಸೂಚನೆ ಬಂತೋ ಚಿನ್ನ ಗಗನಮುಖಿಯಾಗ ತೊಡಗಿತು.

ನಿನ್ನೆ 22 ಕ್ಯಾರೆಟ್​ ಗುಣಮಟ್ಟದ ಚಿನ್ನಕ್ಕೆ ಪ್ರತಿ ಗ್ರಾಂಗೆ 5,300 ರೂ. ಇತ್ತು. ಆದರೆ ಇಂದು ಪ್ರತಿ ಗ್ರಾಂ ಬೆಲೆ 5,360 ರೂ ಇದೆ. ನಿನ್ನೆಯಿಂದ ಇಂದು 60 ರೂ ಏರಿಕೆಯಾಗಿದೆ. 24 ಕ್ಯಾರೆಟ್​ ಚಿನ್ನ ಒಂದು ಗ್ರಾಂನ ಬೆಲೆ ನಿನ್ನೆ ರೂ. 5,782 ಆಗಿತ್ತು. ಇಂದು 5,847ಗೆ ಏರಿಕೆಯಾಗಿದೆ. ಇಲ್ಲಿ 65 ರೂ. ಏರಿಕೆಯಾಗಿರುವುದನ್ನು ಗಮನಿಸಬಹುದು.

ದೆಹಲಿಯಲ್ಲಿಂದು 22 ಕ್ಯಾರೆಟ್ ಚಿನ್ನದ ದರ 53,750 ರೂ. ಆಗಿದೆ. ಮುಂಬೈನಲ್ಲಿ 53,600 ರೂ. ಮತ್ತು ಬೆಂಗಳೂರಿನಲ್ಲಿ 53,650 ರೂಪಾಯಿ ಇದೆ. ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ತಲಾ ಹತ್ತು ಗ್ರಾಂಗಳ ಬೆಲೆ ರೂ 58,610, ರೂ 58,470 ಮತ್ತು ರೂ. 58,510 ಆಗಿದೆ.

ಚೆನ್ನೈಯಲ್ಲಿ 24 ಕ್ಯಾರೆಟ್ ಚಿನ್ನದ ದರ 59,730 ರೂ., ಕೋಲ್ಕತಾದಲ್ಲಿ 58,470 ರೂ. ಹೈದರಾಬಾದ್​ನಲ್ಲಿ 24 ಕ್ಯಾರೆಟ್ ಚಿನ್ನ 58,470 ರೂ.ಗೆ ಮಾರಾಟವಾಗುತ್ತಿದ್ದು, ಚೆನ್ನೈ, ಕಲ್ಕತ್ತಾ ಮತ್ತು ಹೈದರಾಬಾದ್​ನಲ್ಲಿ 22 ಕ್ಯಾರೆಟ್ ಕ್ರಮವಾಗಿ ಹತ್ತು ಗ್ರಾಂಗೆ 54,750 ರೂ., 53,600ರೂ ಮತ್ತು 53,600 ರೂ. ಗೆ ಮಾರಾಟವಾಗುತ್ತಿದೆ. ನೋಯ್ಡಾದಲ್ಲಿ 22 ಕ್ಯಾರೆಟ್​ ಬಂಗಾರ ಪ್ರತಿ ಹತ್ತು ಗ್ರಾಂಗೆ 53,750 ರೂ ಹಾಗೂ 24 ಕ್ಯಾರೆಟ್​ ಚಿನ್ನಕ್ಕೆ 58,610 ರೂ. ಆಗಿದೆ.

ಬೆಳ್ಳಿ ಬೆಲೆ ನೋಡೋಣ: ದೇಶದ ಪ್ರಮುಖ ನಗರಗಳಲ್ಲಿ​ ಬೆಳ್ಳಿಯ ಬೆಲೆ ನೋಡುವುದಾದರೆ, ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ಸೇರಿದಂತೆ ಹೆಚ್ಚಿನ ಪ್ರಮುಖ ನಗರಗಳಲ್ಲಿ ಕೆಜಿ ಬೆಳ್ಳಿ 74,400 ರೂಪಾಯಿಗೆ ಮಾರಾಟವಾಗುತ್ತಿದೆ.

ರಾಜ್ಯದ ಕೆಲವು ನಗರಗಳಲ್ಲಿ ಚಿನ್ನದ ಬೆಲೆ ಗಮನಿಸುವುದಾರೆ, ಮಂಗಳೂರು, ದಾವಣಗೆರೆ, ಮೈಸೂರು ಹಾಗೂ ಬಳ್ಳಾರಿಯಲ್ಲಿ 24 ಕ್ಯಾರೆಟ್​ ಚಿನ್ನದ ಬೆಲೆ 10 ಗ್ರಾಂಗೆ 58,510 ರೂ, 22 ಕ್ಯಾರೆಟ್​ ಚಿನ್ನದ ಬೆಲೆ 53,650 ರೂ. ಆಗಿದೆ. ಮೈಸೂರಿನಲ್ಲಿ 22 ಕ್ಯಾರೆಟ್​ ಚಿನ್ನ ಪ್ರತಿ ಗ್ರಾಂಗೆ 5,360 ರೂ.ಗೆ ಮಾರಾಟವಾಗುತ್ತಿದ್ದು, 85 ರೂ ಹೆಚ್ಚಳ್ಳವಾಗಿದೆ. 24 ಕ್ಯಾರೆಟ್​ ಚಿನ್ನ ಪ್ರತಿ ಗ್ರಾಂಗೆ 6,036 ರೂ. ಆಗಿದ್ದು, 125 ರೂ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್​ ಚಿನ್ನಕ್ಕೆ 5,392 ರೂ. ಹಾಗೂ 24 ಕ್ಯಾರೆಟ್​ ಚಿನ್ನಕ್ಕೆ 5,861 ರೂ. ಇದೆ. ಶಿವಮೊಗ್ಗದಲ್ಲಿ 5,360 ರೂ. ಹಾಗೂ 5,862 ರೂ. ಇದೆ. ಮಂಗಳೂರಿನಲ್ಲಿ 22 ಕ್ಯಾರೆಟ್​ ಚಿನ್ನ ಗ್ರಾಂಗೆ 5,365 ರೂ. ಹಾಗೂ 24 ಕ್ಯಾರೆಟ್​ ಚಿನ್ನ ಪ್ರತಿ ಗ್ರಾಂ ಗೆ ಗ್ರಾಂಗೆ 5,851 ರೂ ಆಗಿದ್ದು, 65 ರೂ ಹೆಚ್ಚಳವಾಗಿದೆ. ಬೆಳ್ಳಿ ಗ್ರಾಂಗೆ 77.30 ರೂ. ಇದ್ದು, 1ರೂ 30 ಪೈಸೆ ಹೆಚ್ಚಳವಾಗಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಹೀಗಿದೆ.

ನಗರಚಿನ್ನ 22 ಕ್ಯಾರೆಟ್​(1 ಗ್ರಾಂ)ಚಿನ್ನ 24 ಕ್ಯಾರೆಟ್​(1 ಗ್ರಾಂ)ಬೆಳ್ಳಿ(1 ಗ್ರಾಂ)
ಮಂಗಳೂರು5,365 ರೂ.5,851 ರೂ77.30 ರೂ.
ಹುಬ್ಬಳ್ಳಿ5,368 ರೂ.5,856 ರೂ.71.58 ರೂ.
ಮೈಸೂರು5,360 ರೂ.6,036 ರೂ.73.20 ರೂ
ಬೆಂಗಳೂರು5,392 ರೂ.5,861 ರೂ.71.70 ರೂ.
ಶಿವಮೊಗ್ಗ5,360 ರೂ.5,862 ರೂ.72.70 ರೂ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.