ETV Bharat / business

ಆಭರಣ ಪ್ರಿಯರಿಗೆ ಕಹಿ-ಸಿಹಿ ವಿಚಾರ.. ಬಂಗಾರದ ಬೆಲೆ ಏರಿಕೆ, ಬೆಳ್ಳಿ ದರದಲ್ಲಿ ಭಾರಿ ಇಳಿಕೆ

ಚಿನ್ನ ಹಾಗೂ ಬೆಳ್ಳಿ ಪ್ರಿಯರಿಗೆ ಸಿಹಿ ಮತ್ತು ಕಹಿ ಸುದ್ದಿ ಇದೆ. ಬಂಗಾರದ ದರ ಏರಿಕೆಯಾಗಿದ್ದರೆ, ಬೆಳ್ಳಿ ದರದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ.

author img

By

Published : Mar 1, 2023, 4:45 PM IST

gold-jumps-rs-475-silver-plummets-rs-1225
ಬಂಗಾರದ ಬೆಲೆ ಏರಿಕೆ, ಬೆಳ್ಳಿ ದರದಲ್ಲಿ ಭಾರಿ ಇಳಿಕೆ

ನವದೆಹಲಿ: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಳಿತವಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆಯು 475 ರೂ. ಏರಿಕೆ ಕಂಡಿದ್ದು, ಪ್ರತಿ 10 ಗ್ರಾಂ ಬಂಗಾರದ 55,955 ರೂ.ಗೆ ತಲುಪಿದೆ. ಇದೇ ವೇಳೆ ಬೆಳ್ಳಿಯ ದರದಲ್ಲಿ 1,225 ರೂ. ಇಳಿಕೆಯಾಗಿದೆ.

ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ಪ್ರಕಾರ, ಪ್ರಬಲ ಜಾಗತಿಕ ವಿದ್ಯಮಾನಗಳ ನಡುವೆ ಬುಧವಾರ ಚಿನ್ನದ ದರ 10 ಗ್ರಾಂಗೆ 475 ರೂ. ಹೆಚ್ಚಳವಾಗಿದೆ. ಹಿಂದಿನ ವಹಿವಾಟಿನಲ್ಲಿ ಎಂದರೆ ಮಂಗಳವಾರ ಪ್ರತಿ 10 ಗ್ರಾಂ ಚಿನ್ನದ ಬೆಲೆ 55,480 ರೂ.ಗೆ ಕೊನೆಗೊಂಡಿತ್ತು. ಆದರೆ, ಬೆಳ್ಳಿ ದರದಲ್ಲಿ 1,225 ರೂ. ಇಳಿಕೆ ಕಂಡು, ಪ್ರತಿ ಕೆಜಿಗೆ 63,825 ರೂ. ದರ ನಿಗದಿಯಾಗಿದೆ.

ದೆಹಲಿ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಬೆಲೆಗಳು ಪ್ರತಿ 10 ಗ್ರಾಂಗೆ 55,955 ರೂ.ಗೆ ವಹಿವಾಟು ನಡೆಸಿವು. ಪ್ರತಿ 10 ಗ್ರಾಂಗೆ 475 ರೂ. ಏರಿಕೆಯಾಗಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸರಕುಗಳ ಹಿರಿಯ ವಿಶ್ಲೇಷಕ ಸೌಮಿಲ್ ಗಾಂಧಿ ಹೇಳಿದ್ದಾರೆ.

ಮತ್ತೊಂದೆಡೆ, ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನವು ಪ್ರತಿ ಔನ್ಸ್‌ಗೆ 1,833 ಡಾಲರ್​ನಲ್ಲಿ ವಹಿವಾಟು ನಡೆಸುತ್ತಿದೆ. ಬೆಳ್ಳಿ ಪ್ರತಿ ಔನ್ಸ್‌ಗೆ 21.04 ಡಾಲರ್​​ಗೆ ಸ್ವಲ್ಪ ಏರಿಕೆಯಾಗಿದೆ. ಇತ್ತೀಚಿನ ಗರಿಷ್ಠ ಮಟ್ಟದಿಂದ ಡಾಲರ್ ಕಡಿಮೆಯಾದ ಕಾರಣ ಬುಧವಾರ ಏಷ್ಯನ್ ವಹಿವಾಟಿನ ಸಮಯದಲ್ಲಿ ಕಾಮೆಕ್ಸ್ ಚಿನ್ನವು ಪ್ರತಿ ಔನ್ಸ್‌ಗೆ 1,830 ಡಾಲರ್​ಕ್ಕಿಂತ ಹೆಚ್ಚು ಬಲಗೊಂಡಿದೆ ಎಂದು ರಿಲಯನ್ಸ್ ಸೆಕ್ಯುರಿಟೀಸ್‌ನ ಹಿರಿಯ ಸಂಶೋಧನಾ ವಿಶ್ಲೇಷಕ ಶ್ರೀರಾಮ್ ಅಯ್ಯರ್ ತಿಳಿಸಿದ್ದಾರೆ.

ಇದನ್ನೂ ಓದಿ: ಜನತೆಗೆ ಮತ್ತೆ ಬಿಗ್​ ಶಾಕ್​, ಎಲ್​ಪಿಜಿ​ ದರ ಗಗನಕ್ಕೆ: ವಾಣಿಜ್ಯ ಸಿಲಿಂಡರ್​ ₹ 350 ಹೆಚ್ಚಳ, ಗೃಹ ಬಳಕೆ ಸಿಲಿಂಡರ್ ಬೆಲೆಯೂ​ ಏರಿಕೆ

ಸಿಲಿಂಡರ್‌ನ ಬೆಲೆ ಹೆಚ್ಚಳ: ಇದರ ನಡುವೆ ಇಂದು ಬೆಳಗ್ಗೆ ಎಲ್‌ಪಿಜಿ ಸಿಲಿಂಡರ್‌ ಬೆಲೆ ಹಚ್ಚಳವಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) 2023ರ ಹೊಸ ವರ್ಷದ ಮೂರನೇ ತಿಂಗಳು ಕೂಡ ಎಲ್‌ಪಿಜಿ ಸಿಲಿಂಡರ್‌ನ ದರ ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿವೆ. ಗೃಹಬಳಕೆಯ ಸಿಲಿಂಡರ್‌ ದರದಲ್ಲಿ 50 ರೂಪಾಯಿ ಏರಿಕೆ ಮಾಡಲಾಗಿದ್ದು, ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ 350.50 ರೂಪಾಯಿ ಹೆಚ್ಚಿಸಲಾಗಿದೆ.

ಇದರಿಂದ ದೆಹಲಿಯಲ್ಲಿ 19 ಕೆಜಿಯ ಕರ್ಮಷಿಯಲ್​ ಗ್ಯಾಸ್‌ ಸಿಲಿಂಡರ್‌ನ ಬೆಲೆ ಇಂದಿನಿಂದ 2,119.50 ರೂ. ಗೆ ಏರಿಕೆ ಕಂಡಿದೆ. 14 ಕೆಜಿಯ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ 1,103 ರೂ.ಗೆ ತಲುಪಿದೆ. ಗೃಹ ಬಳಕೆ ಸಿಲಿಂಡರ್​ಗಳ ದರವನ್ನು ಕಳೆದ ವರ್ಷ ನಾಲ್ಕು ಬಾರಿ ಏರಿಕೆ ಮಾಡಲಾಗಿತ್ತು. ಮಾರ್ಚ್‌ ತಿಂಗಳಲ್ಲಿ 50 ರೂ., ಮೇ ತಿಂಗಳಲ್ಲಿ 50 ಮತ್ತು 3.50 ರೂ., ಜುಲೈನಲ್ಲಿ 50 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಕಳೆದ ಸೆಪ್ಟೆಂಬರ್​ನಲ್ಲಿ ವಾಣಿಜ್ಯ ಬಳಕೆಯ 19 ಕೆಜಿ ಎಲ್​​ಪಿಜಿ ಸಿಲಿಂಡರ್​ ಬೆಲೆಯಲ್ಲಿ 91.50 ಪೈಸೆ ಇಳಿಕೆಯಾಗಿತ್ತು. ಈಗ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್​, ಡೀಸೆಲ್​ ಬೆಲೆ ಯಥಾಸ್ಥಿತಿ ಮುಂದುವರಿದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.