ಭಾರತೀಯ ಚಿನಿವಾರ ಮಾರುಕಟ್ಟೆಯು ಗುರುವಾರದ ಆಭರಣದ ಬೆಲೆಗಳನ್ನು ಬಿಡುಗಡೆ ಮಾಡಿದೆ. ಇಂದಿನ ದರಗಳನ್ನು ಗಮನಿಸಿದರೆ, ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ದು, ಬೆಳ್ಳಿ ಬೆಲೆ ಏರಿಕೆಯಾಗಿದೆ. 24k ಶುದ್ಧತೆಯ ಹತ್ತು ಗ್ರಾಂ ಚಿನ್ನ 50,730 ರೂ.ಗೆ ಮಾರಾಟವಾಗುತ್ತಿದ್ದು, ಒಂದು ಕೆಜಿ ಬೆಳ್ಳಿ 52,000 ರೂ. ಇದೆ.
ಮುಂಬೈ, ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ಸೇರಿದಂತೆ ಬಹುತೇಕ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,500 ರೂಪಾಯಿ ಮತ್ತು 24 ಕ್ಯಾರೆಟ್ 50,730 ಇದೆ. ಚೆನ್ನೈನಲ್ಲಿ 22k ಕ್ಯಾರೆಟ್ ಚಿನ್ನ 47,100 ರೂ. ಹಾಗೂ 24k ಕ್ಯಾರೆಟ್ ಚಿನ್ನ 51,380 ರೂ.ಗೆ ಮಾರಾಟವಾಗುತ್ತಿದೆ. ಆದರೆ ದೆಹಲಿ, ಜೈಪುರ ಸೇರಿದಂತೆ ಇತರ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,700 ರೂಪಾಯಿ ಮತ್ತು 24 ಕ್ಯಾರೆಟ್ 50,950 ಇದೆ.
ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ಸೇರಿದಂತೆ ಹೆಚ್ಚಿನ ಪ್ರಮುಖ ನಗರಗಳಲ್ಲಿ ಕೆಜಿ ಬೆಳ್ಳಿ 52,000 ರೂಪಾಯಿಗೆ ಮಾರಾಟವಾಗುತ್ತಿದೆ. ಆದರೆ ಚೆನ್ನೈ, ಕೇರಳ ಮತ್ತು ಹೈದರಾಬಾದ್ ಸೇರಿದಂತೆ ಬಹುತೇಕ ನಗರಗಳಲ್ಲಿ ಒಂದು ಕೆಜಿ ಬೆಳ್ಳಿ 58,000 ರೂಪಾಯಿ ಇದೆ.
ಕರ್ನಾಟಕದ ವಿವಿಧೆಡೆ ಚಿನ್ನ ಮತ್ತು ಬೆಳ್ಳಿ ದರ ಹೇಗಿದೆ?
ನಗರ | ಚಿನ್ನ22K (1 ಗ್ರಾಂ) | ಚಿನ್ನ24K (1 ಗ್ರಾಂ) | ಬೆಳ್ಳಿ (1 ಗ್ರಾಂ) |
ಬೆಂಗಳೂರು | 4,650 | 5,055 | 52.30 |
ಹುಬ್ಬಳ್ಳಿ | 4,850 | 5,061 | 60.00 |
ಮೈಸೂರು | 4,650 | 5,204 | 53.50 |
ಶಿವಮೊಗ್ಗ | 4,630 | 5,042 | 53.00 |
ಮಂಗಳೂರು | 4,655 | 5,078 | 60.90 |
ದಾವಣಗೆರೆ | 4,820 | 5,061 | 60.18 |