ETV Bharat / business

ಹೂಡಿಕೆಯಲ್ಲಿ ವೈವಿಧ್ಯತೆಗಾಗಿ ಬೆಸ್ಟ್​ ಚಿನ್ನ ಮತ್ತು ಬೆಳ್ಳಿ ಇಟಿಎಫ್​​ - ಆದಿತ್ಯ ಬಿರ್ಲಾ ಸಿಲ್ವರ್ ಇಟಿಎಫ್

ಚಿನ್ನ ಮತ್ತು ಬೆಳ್ಳಿಯಲ್ಲಿ ಹಣ ಹೂಡಬಯಸುವ ಹೂಡಿಕೆದಾರರಿಗೆ, ಮೋತಿಲಾಲ್ ಓಸ್ವಾಲ್ ಮ್ಯೂಚುಯಲ್ ಫಂಡ್ ಇತ್ತೀಚೆಗೆ ಮೋತಿಲಾಲ್ ಓಸ್ವಾಲ್ ಗೋಲ್ಡ್ ಮತ್ತು ಸಿಲ್ವರ್ ಎಕ್ಸಚೇಂಜ್ ಟ್ರೇಡೆಡ್ ಫಂಡ್​ಗಳನ್ನು (ಇಟಿಎಫ್) ಬಿಡುಗಡೆ ಮಾಡಿದೆ. ಈ ಯೋಜನೆಯ NFO ನವೆಂಬರ್ 7 ರಂದು ಕೊನೆಗೊಳ್ಳಲಿದೆ.

ಹೂಡಿಕೆಯಲ್ಲಿ ವೈವಿಧ್ಯತೆಗಾಗಿ ಬೆಸ್ಟ್​ ಚಿನ್ನ ಮತ್ತು ಬೆಳ್ಳಿ ಇಟಿಎಫ್​​
Gold and silver ETFs a best bet for diversified investments
author img

By

Published : Oct 18, 2022, 2:05 PM IST

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ಜನರು ಚಿನ್ನದ ಮೇಲೆ ಡಿಜಿಟಲ್ ಹೂಡಿಕೆ ಮಾಡಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಹೂಡಿಕೆಯನ್ನು ಈಕ್ವಿಟಿಗಳಿಗೆ ಸೀಮಿತಗೊಳಿಸದೆ ಜನ ತಮ್ಮ ಹೂಡಿಕೆಯ ಆಯ್ಕೆಗಳನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ ಅನೇಕರು ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡಲು ಸ್ವಲ್ಪ ಮೊತ್ತವನ್ನು ಮೀಸಲಿಡುತ್ತಿದ್ದಾರೆ.

ಹೀಗೆ ಚಿನ್ನ ಮತ್ತು ಬೆಳ್ಳಿಯಲ್ಲಿ ಹಣ ಹೂಡಬಯಸುವ ಹೂಡಿಕೆದಾರರಿಗೆ, ಮೋತಿಲಾಲ್ ಓಸ್ವಾಲ್ ಮ್ಯೂಚುಯಲ್ ಫಂಡ್ ಇತ್ತೀಚೆಗೆ ಮೋತಿಲಾಲ್ ಓಸ್ವಾಲ್ ಗೋಲ್ಡ್ ಮತ್ತು ಸಿಲ್ವರ್ ಎಕ್ಸಚೇಂಜ್ ಟ್ರೇಡೆಡ್ ಫಂಡ್​ಗಳನ್ನು (ಇಟಿಎಫ್) ಬಿಡುಗಡೆ ಮಾಡಿದೆ. ಈ ಯೋಜನೆಯ NFO ನವೆಂಬರ್ 7 ರಂದು ಕೊನೆಗೊಳ್ಳಲಿದೆ. ಅಭಿರುಪ್ ಮುಖರ್ಜಿ ನಿಧಿ ವ್ಯವಸ್ಥಾಪಕರಾಗಿದ್ದು, ಈ NFO ನಲ್ಲಿ ಕನಿಷ್ಠ ಹೂಡಿಕೆಯನ್ನು ರೂ. 500 ಎಂದು ನಿಗದಿಪಡಿಸಲಾಗಿದೆ. ಈ ಯೋಜನೆಯಡಿಯಲ್ಲಿ, ಇತರ ಮ್ಯೂಚುವಲ್ ಫಂಡ್‌ಗಳ ಚಿನ್ನ ಮತ್ತು ಬೆಳ್ಳಿ ಇಟಿಎಫ್‌ಗಳನ್ನು ಸಹ ಇಲ್ಲಿ ಖರೀದಿಸಬಹುದು.

ಚಿನ್ನದ ಹೂಡಿಕೆಯ ಆಯ್ಕೆಗಳಲ್ಲಿ ಐಸಿಐಸಿಐ ಪ್ರುಡೆನ್ಶಿಯಲ್ ಗೋಲ್ಡ್ ಇಟಿಎಫ್, ನಿಪ್ಪಾನ್ ಇಂಡಿಯಾ ಇಟಿಎಫ್ ಗೋಲ್ಡ್ ಬೀಸ್, ಎಸ್‌ಬಿಐ-ಇಟಿಎಫ್ ಗೋಲ್ಡ್, ಕೋಟಕ್ ಗೋಲ್ಡ್ ಇಟಿಎಫ್ ಮತ್ತು ಎಚ್‌ಡಿಎಫ್‌ಸಿ ಗೋಲ್ಡ್ ಇಟಿಎಫ್ ಸೇರಿವೆ. ಬೆಳ್ಳಿಯ ಮೇಲೆ ಹೂಡಿಕೆಗಾಗಿ ಐಸಿಐಸಿಐ ಪ್ರುಡೆನ್ಶಿಯಲ್ ಸಿಲ್ವರ್ ಇಟಿಎಫ್, ನಿಪ್ಪಾನ್ ಇಂಡಿಯಾ ಸಿಲ್ವರ್ ಇಟಿಎಫ್ ಮತ್ತು ಆದಿತ್ಯ ಬಿರ್ಲಾ ಸಿಲ್ವರ್ ಇಟಿಎಫ್ ಮುಂತಾದುವುಗಳನ್ನು ಪರಿಗಣಿಸಬಹುದು.

ಒಟ್ಟು ಹೂಡಿಕೆಯ ಮೊತ್ತದಲ್ಲಿ 70 ಪ್ರತಿಶತವನ್ನು ಚಿನ್ನದ ಇಟಿಎಫ್‌ಗಳಿಗೆ ಮೀಸಲಿಡಬಹುದು ಮತ್ತು ಉಳಿದ ಮೊತ್ತವನ್ನು ಬೆಳ್ಳಿ ಇಟಿಎಫ್ ಯೋಜನೆಗಳಿಗೆ ವಿನಿಯೋಗಿಸಬಹುದು. ತಮ್ಮ ಹೂಡಿಕೆಗಳನ್ನು ವೈವಿಧ್ಯಮಯವಾಗಿಸಲು ಬಯಸುವ ಹೂಡಿಕೆದಾರರಿಗೆ ಈ ಯೋಜನೆಗಳು ಸೂಕ್ತವಾಗಿವೆ. ಆದಿತ್ಯ ಬಿರ್ಲಾ ಸನ್ ಲೈಫ್ ಮ್ಯೂಚುಯಲ್ ಫಂಡ್ ಒಂದೇ ಮ್ಯೂಚುವಲ್ ಫಂಡ್ ಯೋಜನೆಯ ಮೂಲಕ ಹೂಡಿಕೆಗಳನ್ನು ವೈವಿಧ್ಯಗೊಳಿಸುವ ಯೋಜನೆಯೊಂದಿಗೆ ಹೊಸ ನಿಧಿಯನ್ನು ಅನಾವರಣಗೊಳಿಸಿದೆ.

ಸಂದರ್ಭಗಳಿಗೆ ಅನುಗುಣವಾಗಿ ಯಾವುದರ ಮೇಲೆ ಹೂಡಿಕೆ ಮಾಡಬೇಕು ಮತ್ತು ಎಷ್ಟು ಹೂಡಿಕೆ ಮಾಡಬೇಕು ಎಂಬುದರ ಕುರಿತು ಫಂಡ್ ಮ್ಯಾನೇಜರ್ ನಿರ್ಧರಿಸುತ್ತಾರೆ. ಈ ನಿಧಿಯು ಹೂಡಿಕೆದಾರರಿಗೆ ತಮ್ಮದೇ ಆದ ವಿಭಿನ್ನ ಯೋಜನೆಗಳನ್ನು ಆಯ್ಕೆ ಮಾಡದೆಯೇ ಬಹು-ಸೂಚ್ಯಂಕ ನಿಧಿಯ ಮೂಲಕ ತಮ್ಮ ಹಣವನ್ನು ವಿವಿಧ ಸಾಧನಗಳಲ್ಲಿ ಇರಿಸಲು ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಬಹುದು.

ಇದನ್ನೂ ಓದಿ: ಹಣಕಾಸು ವಿಚಾರ: ಹಣದುಬ್ಬರದ ಪ್ರಭಾವ ತಡೆಗೆ ಹೂಡಿಕೆಯಲ್ಲಿರಲಿ ವೈವಿಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.