ETV Bharat / business

ಅನಿಶ್ಚಿತ ಆರ್ಥಿಕತೆಯಲ್ಲಿ ಚಿನ್ನದ ಮೇಲೆ ಇನ್ವೆಸ್ಟ್ ಮಾಡುವುದೇ ಬೆಸ್ಟ್

ಗೋಲ್ಡ್​ ಎಕ್ಸಚೇಂಜ್ ಟ್ರೇಡೆಡ್ ಫಂಡ್​ (ಇಟಿಎಫ್​) ಗಳು ನೇರವಾಗಿ ಚಿನ್ನ ಖರೀದಿಸುವ ಸೌಲಭ್ಯವನ್ನು ನಿಮಗೆ ನೀಡುತ್ತವೆ. ಇವು ದೇಶಿಯ ಚಿನ್ನದ ಮಾರುಕಟ್ಟೆಯೊಂದಿಗೆ ಲಿಂಕ್ ಆಗಿರುತ್ತವೆ. ಹಾಗಾಗಿ ಇಟಿಎಫ್​ ಗಳಲ್ಲಿ ಇನ್ವೆಸ್ಟ್ ಮಾಡಿದಾಗ ಅದು ಚಿನ್ನದ ಮೇಲೆ ಇನ್ವೆಸ್ಟ್ ಮಾಡಿದಂತೆ.

Gold a good option during market uncertainties

author img

By

Published : Jun 25, 2022, 11:48 AM IST

ಹೈದರಾಬಾದ್: ಕಳೆದೆರಡು ವರ್ಷಗಳಿಂದ ಅನಿಶ್ಚಿತ ಆರ್ಥಿಕ ಪರಿಸ್ಥಿತಿ ಎಲ್ಲೆಡೆ ಕಂಡು ಬಂದಿತ್ತು. ಕೊರೊನಾ ಬಿಕ್ಕಟ್ಟು ಹಾಗೂ ಪ್ರಸ್ತುತ ನಡೆದಿರುವ ಅಂತಾರಾಷ್ಟ್ರೀಯ ಬಿಕ್ಕಟ್ಟುಗಳು ಸೇರಿದಂತೆ ಇನ್ನೂ ಕೆಲವಾರು ಕಾರಣಗಳಿಂದ ಆರ್ಥಿಕತೆ ಡೋಲಾಯಮಾನವಾಗಿತ್ತು. ಈ ಅನಿಶ್ಚಿತತೆಯು ಬಂಡವಾಳ ಹೂಡಿಕೆದಾರರಿಗೆ ಆತಂಕ ಉಂಟು ಮಾಡಿರುವುದು ಸಹಜ. ಇದರ ಮಧ್ಯೆ ಸ್ಟಾಕ್ ಮಾರುಕಟ್ಟೆಗಳು ಸಿಕ್ಕಾಪಟ್ಟೆ ಏರಿಳಿತ ಕಾಣುತ್ತಿವೆ. ಹೀಗಾಗಿ ಸುಭದ್ರ ಹೂಡಿಕೆ ಮಾಡಲು ಬಯಸುವವರಿಗಾಗಿ ಚಿನ್ನ ಅತ್ಯಾಪ್ತ ಹೂಡಿಕೆ ಮಾರ್ಗವಾಗುತ್ತಿದೆ.

ಇತರ ಹೂಡಿಕೆಗಳಿಗೆ ಹೋಲಿಸಿದರೆ ಚಿನ್ನವು ಭಾರಿ ದೊಡ್ಡ ಪ್ರಮಾಣದ ಆದಾಯ ತಂದುಕೊಡಲಿಕ್ಕಿಲ್ಲ. ಆದರೆ, ಅನಿಶ್ಚಿತ ಆರ್ಥಿಕತೆಯಲ್ಲಿ ಇತರ ಹೂಡಿಕೆಗಳಿಗೆ ಹೋಲಿಸಿದರೆ ಚಿನ್ನದ ಮೇಲೆ ಹೂಡಿಕೆ ಮಾಡುವುದು ಬೆಸ್ಟ್​. ದೇಶಗಳ ಕರೆನ್ಸಿ ಮೇಲೆ ಎಷ್ಟೇ ಇದ್ದರು ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುತ್ತಲೇ ಸಾಗುತ್ತಿದೆ.

ಯಾವಾಗ ವಿಶ್ವದಲ್ಲಿ ನಕಾರಾತ್ಮಕ ಪರಿಸ್ಥಿತಿ ಉಂಟಾಗುತ್ತದೆಯೋ ಆವಾಗಲೆಲ್ಲ ಚಿನ್ನದ ಬೆಲೆ ಹೆಚ್ಚಾಗುತ್ತದೆ ಎಂಬುದು ನೆನಪಿರಲಿ. ಈಗ ರಷ್ಯಾ - ಉಕ್ರೇನ್ ಯುದ್ಧ ಆರಂಭವಾದಾಗಿನಿಂದ ಚಿನ್ನದ ಬೆಲೆ ಹೆಚ್ಚಾಗುತ್ತಲೇ ಸಾಗಿದೆ. ನಗದು ಹೂಡಿಕೆ ಮಾಡುವಾಗ ನಿಮ್ಮ ಹೂಡಿಕೆಗಳು ವಿಭಿನ್ನ ಸಂಪತ್ತುಗಳ ಮೇಲೆ ಹೂಡಿಕೆಯಾಗುವಂತೆ ನೋಡಿಕೊಳ್ಳಬೇಕು. ಚಿನ್ನದ ಮೇಲಿನ ಹೂಡಿಕೆಯು ನಿಮ್ಮ ಒಟ್ಟಾರೆ ಹೂಡಿಕೆಯ ಶೇ 5 ರಿಂದ 10 ರಷ್ಟನ್ನು ಮೀರದಿರಲಿ. ಬೇಕಾದಾಗ ಆಭರಣಗಳ ರೂಪದಲ್ಲಿ ಚಿನ್ನ ಖರೀದಿ ಮಾಡಬಹುದು.

ಭವಿಷ್ಯದ ದೃಷ್ಟಿಯಿಂದ ಚಿನ್ನ ಖರೀದಿಸುವಿರಾದರೆ ಇಟಿಎಫ್​​​​ಗಳು ಹಾಗೂ ಗೋಲ್ಡ್​ ಫಂಡ್​ಗಳತ್ತ ನೋಡಬಹುದು. ಸಾವರೀನ್ ಗೋಲ್ಡ್​ ಬಾಂಡ್​ಗಳಲ್ಲಿ ಹೂಡಿಕೆ ಮಾಡಿದಲ್ಲಿ ಆರು ತಿಂಗಳುಗಳವರೆಗೆ ಬಡ್ಡಿ ಆದಾಯ ಪಡೆಯಬಹುದು. ಇನ್ನು ನಿಮ್ಮ ಹೂಡಿಕೆಯು ಬೆಳವಣಿಗೆಯಾಗುವ ಅವಕಾಶವೂ ಇದರಲ್ಲಿರುತ್ತದೆ.

ಗೋಲ್ಡ್​ ಎಕ್ಸಚೇಂಜ್ ಟ್ರೇಡೆಡ್ ಫಂಡ್​ (ಇಟಿಎಫ್​) ಗಳು ನೇರವಾಗಿ ಚಿನ್ನ ಖರೀದಿಸುವ ಸೌಲಭ್ಯವನ್ನು ನಿಮಗೆ ನೀಡುತ್ತವೆ. ಇವು ದೇಶಿಯ ಚಿನ್ನದ ಮಾರುಕಟ್ಟೆಯೊಂದಿಗೆ ಲಿಂಕ್ ಆಗಿರುತ್ತವೆ. ಹಾಗಾಗಿ ಇಟಿಎಫ್​ ಗಳಲ್ಲಿ ಇನ್ವೆಸ್ಟ್ ಮಾಡಿದಾಗ ಅದು ಚಿನ್ನದ ಮೇಲೆ ಇನ್ವೆಸ್ಟ್ ಮಾಡಿದಂತೆ. ಇವನ್ನು ಡಿಮ್ಯಾಟ್ ಅಕೌಂಟ್ ಮೂಲಕ ಖರೀದಿಸಬೇಕಾಗುತ್ತದೆ. ಹೀಗಾಗಿ ಸುರಕ್ಷತೆಯ ಬಗ್ಗೆ ಯಾವುದೇ ಮಾಡಬೇಕಿಲ್ಲ. ಒಂದು ಯುನಿಟ್​ ದರವು ಒಂದು ಗ್ರಾಂ ಚಿನ್ನದ ದರಕ್ಕೆ ಸಮನಾಗಿರುತ್ತದೆ. ಹೀಗಾಗಿ ನೀವು ಒಂಚೂರು ಹೆಚ್ಚು ಮೊತ್ತವನ್ನು ಇದರಲ್ಲಿ ಇನ್ವೆಸ್ಟ್​ ಮಾಡಬೇಕಾಗುತ್ತದೆ.

ಪರ್ಯಾಯವಾಗಿ ನೀವು ಗೋಲ್ಡ್​ ಫಂಡ್​ ಗಳಲ್ಲೂ ಇನ್ವೆಸ್ಟ್ ಮಾಡಬಹುದು. ಇವು ಸಾಮಾನ್ಯ ಮ್ಯೂಚುವಲ್ ಫಂಡ್ ಗಳಂತೆಯೇ ಕೆಲಸ ಮಾಡುತ್ತವೆ. ಇವುಗಳಲ್ಲಿ ಕನಿಷ್ಠ 100 ರೂಪಾಯಿಗಳಿಂದ ನೀವು ಹೂಡಿಕೆ ಆರಂಭಿಸಬಹುದು.

ಇದನ್ನು ಓದಿ:ಕ್ರ್ಯಾಶ್ ಟೆಸ್ಟ್​ ಆಧರಿಸಿ ಕಾರುಗಳಿಗೆ 'ಸ್ಟಾರ್ ರೇಟಿಂಗ್' : ನಿಮ್ಮ ಕಾರು ಎಷ್ಟು ಸುರಕ್ಷಿತ?

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.