ETV Bharat / business

ಆರ್ಥಿಕ ಹಿಂಜರಿತದ ಭೀತಿ: ಜಾಗತಿಕ ಷೇರು ಮಾರುಕಟ್ಟೆಗಳಲ್ಲಿ ಕುಸಿತ.. ಆತಂಕದಲ್ಲಿ ಹೂಡಿಕೆದಾರ - ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕ

ಆರ್ಥಿಕ ಹಿಂಜರಿತದ ಭಯದಿಂದ ಜಾಗತಿಕ ಮಾರುಕಟ್ಟೆಗಳು ಕುಸಿತ ಕಾಣುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Global markets slide  Global markets slide on recession fears  ಆರ್ಥಿಕ ಹಿಂಜರಿತದ ಭಯ  ಜಾಗತಿಕ ಮಾರುಕಟ್ಟೆಗಳಲ್ಲಿ ಕುಸಿತ  ಕೇಂದ್ರೀಯ ಬ್ಯಾಂಕ್‌ಗಳ ಹೆಚ್ಚಿನ ಬಡ್ಡಿದರ ಹೆಚ್ಚಳ  ಹಾಂಗ್ ಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕ  ಚೀನಾದ ಮುಖ್ಯ ಭೂಭಾಗದಲ್ಲಿರುವ ಷೇರು ವಿನಿಮಯ ಕೇಂದ್ರ
ಆರ್ಥಿಕ ಹಿಂಜರಿತದ ಭಯದಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಕುಸಿತ
author img

By

Published : Jun 24, 2023, 11:09 AM IST

ಲಂಡನ್: ಕೇಂದ್ರೀಯ ಬ್ಯಾಂಕ್‌ಗಳು ಹೆಚ್ಚಿನ ಬಡ್ಡಿದರ ವಿಧಿಸುತ್ತಿರುವುದರಿಂದ ಪ್ರಮುಖ ಆರ್ಥಿಕತೆಗಳು ದೀರ್ಘಾವಧಿಯ ಹಿಂಜರಿತದತ್ತ ದಾಪುಗಾಲು ಇಡುತ್ತಿವೆ ಎಂಬ ಭಯ ಹೂಡಿಕೆದಾರರನ್ನು ಚಿಂತೆಗೀಡು ಮಾಡಿವೆ. ಹೀಗಾಗಿ ಯುರೋಪ್ ಮತ್ತು ಏಷ್ಯಾದ ಷೇರು ಮಾರುಕಟ್ಟೆಗಳು ಶುಕ್ರವಾರ ಕುಸಿತ ಕಂಡವು ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.

ಹಾಂಕಾಂಗ್‌ನ ಹ್ಯಾಂಗ್ ಸೆಂಗ್ ಸೂಚ್ಯಂಕವು ನಷ್ಟ ಅನುಭವಿಸಿದ್ದು, 1.7 ರಷ್ಟು ಇಳಿಕೆ ಕಂಡು ಮುಕ್ತಾಯಗೊಂಡಿದೆ. ಜಪಾನ್‌ನ ನಿಕ್ಕಿ 225 ದಿನಗಳ ಕುಸಿತ ಕಂಡಿದ್ದು, 1.5 ರಷ್ಟು ಸೂಚ್ಯಂಕ ಇಳಿಕೆ ಕಂಡಿದೆ. ಆಸ್ಟ್ರೇಲಿಯಾದ S&P/ASX 200 ಶೇಕಡಾ 1.3 ರಷ್ಟು ಕುಸಿತ ದಾಖಲಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇನ್ನು ಚೀನಾದ ಮುಖ್ಯ ಭೂಭಾಗದಲ್ಲಿರುವ ಷೇರು ವಿನಿಮಯ ಕೇಂದ್ರಗಳನ್ನು ಸಾರ್ವಜನಿಕ ರಜೆ ಹಿನ್ನೆಲೆ ಮುಚ್ಚಲಾಗಿತ್ತು. ಅಮೆರಿಕ ಸ್ಟಾಕ್ ಫ್ಯೂಚರ್ಸ್ ಸಹ ಇಳಿಕೆ ಹಾದಿಯಲ್ಲಿ ಸಾಗಿದೆ. ಫೆಡರಲ್ ರಿಸರ್ವ್ ಚೇರ್​ಮನ್​ ಜೆರೋಮ್ ಪೊವೆಲ್ ಮಾತನಾಡಿ, ಅಮೆರಿಕ ಹಣದುಬ್ಬರವನ್ನು ಶೇಕಡಾ 2ರಕ್ಕೆ ತರಲು ಬಡ್ಡಿದರಗಳಲ್ಲಿ ಮತ್ತಷ್ಟು ಏರಿಕೆ ಮಾಡುವ ಅಗತ್ಯ ಇದೇ ಎಂದು ಹೇಳಿದ್ದಾರೆ. ಇನ್ನು ಬ್ಯಾಂಕ್ ಆಫ್ ಇಂಗ್ಲೆಂಡ್ ಎರವಲು ವೆಚ್ಚದಲ್ಲಿ ನಿರೀಕ್ಷಿತ ಹೆಚ್ಚಳ ಕಂಡಿದೆ. ಇದು ಈ ವಾರದ ಆರಂಭದಲ್ಲಿ ಆಶ್ಚರ್ಯಕರವಾದ ಹಣದುಬ್ಬರ ಬಹಿರಂಗಪಡಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮತ್ತು ಶುಕ್ರವಾರ ಆಹಾರ ಮತ್ತು ಇಂಧನ ವೆಚ್ಚಗಳನ್ನು ಹೊರತುಪಡಿಸಿ ಜಪಾನಿನ ಹಣದುಬ್ಬರವು 42 ವರ್ಷಗಳ ಹಿಂದಿನ ಗರಿಷ್ಠಕ್ಕೆ ತಲುಪಿದೆ. ದಂತಾಂಶಗಳ ಪ್ರಕಾರ ಶೇಕಡಾ 4.3 ರಷ್ಟು ಕುಸಿತ ಕಂಡಿದ್ದು, ಬ್ಯಾಂಕ್ ಆಫ್ ಜಪಾನ್ ತನ್ನ ಸಡಿಲವಾದ ವಿತ್ತೀಯ ನೀತಿಯನ್ನು ಮರುಪರಿಶೀಲಿಸಬಹುದು ಮತ್ತು ಬಿಗಿಗೊಳಿಸುವುದನ್ನು ಪ್ರಾರಂಭಿಸಬಹುದಾಗಿದೆ. ಜಾಗತಿಕ ವಿತ್ತೀಯ ನೀತಿಯ ಮರು - ವೇಗವರ್ಧನೆಯು ಪ್ರದೇಶಗಳಾದ್ಯಂತ ಮಾರುಕಟ್ಟೆಗಳ ಭಾವನೆಯನ್ನು ತಗ್ಗಿಸಿತು ಎಂದು ಮಿಜುಹೊ ಬ್ಯಾಂಕ್‌ನಲ್ಲಿ ಏಷ್ಯಾದ ಮುಖ್ಯ ವಿದೇಶಿ ವಿನಿಮಯ ತಂತ್ರಗಾರ ಕೆನ್ ಚೆಯುಂಗ್ ಹೇಳಿದರು.

ಯುರೋಪ್‌ನ ಬೆಂಚ್‌ಮಾರ್ಕ್ Stoxx Europe 600 ಸೂಚ್ಯಂಕವು ಹಿಂದಿನ ದಿನದಲ್ಲಿ ಕುಸಿದ ನಂತರ ಸಮಬಲ ಸಾಧಿಸಿತು. ಫ್ರಾನ್ಸ್‌ನಲ್ಲಿ CAC 40 ಶೇಕಡಾ 0.3 ರಷ್ಟು ಮತ್ತು ಜರ್ಮನಿಯ DAX ಶೇಕಡಾ 0.7 ರಷ್ಟು ಕುಸಿತ ಕಂಡವು. ಲಂಡನ್‌ನ ಎಫ್‌ಟಿಎಸ್‌ಇ 100 ಸೂಚ್ಯಂಕವು ಶೇಕಡಾ 0.2 ರಷ್ಟು ಕುಸಿದಿದೆ, ಇದು ವಾರದ ಆರಂಭದಲ್ಲಿ ನಷ್ಟವನ್ನು ಹೆಚ್ಚಿಸಿದೆ.

ಹಣದುಬ್ಬರದ ವಿರುದ್ಧದ ಬ್ಯಾಂಕ್ ಆಫ್ ಇಂಗ್ಲೆಂಡ್‌ ಹೋರಾಟ ಕೈಗೊಂಡಿದೆ. UK ಆರ್ಥಿಕತೆಗೆ ಸಂಭಾವ್ಯವಾಗಿ ಹೆಚ್ಚಿನ ವೆಚ್ಚದಲ್ಲಿ ಬರುತ್ತದೆ. ಇದು ಈಗ ಅಥವಾ ಮುಂದಿನ ವರ್ಷ ಆರ್ಥಿಕ ಹಿಂಜರಿತಕ್ಕೆ ಜಾರಬಹುದು ಎಂದು ಆನ್‌ಲೈನ್ ವ್ಯಾಪಾರ ಪೂರೈಕೆದಾರ IG ಯ ಹಿರಿಯ ಮಾರುಕಟ್ಟೆ ವಿಶ್ಲೇಷಕ ಆಕ್ಸೆಲ್ ರುಡಾಲ್ಫ್ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಓದಿ: ಭಾರತದ ಡಿಜಿಟಲೀಕರಣದಲ್ಲಿ 'Google' 10 ಬಿಲಿಯನ್ ಹೂಡಿಕೆ ಮಾಡಲಿದೆ: ಸಿಇಒ ಸುಂದರ್ ಪಿಚೈ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.