ETV Bharat / business

ವಿಶ್ವದ 15ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ ಗೌತಮ್ ಅದಾನಿ

author img

By ETV Bharat Karnataka Team

Published : Dec 6, 2023, 3:36 PM IST

Gautam Adani 15th richest in the world: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಈಗ ವಿಶ್ವದ 15ನೇ ಅತ್ಯಂತ ಸಿರಿವಂತ ವ್ಯಕ್ತಿ.

Gautam Adani now 15th richest in the world

ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಈಗ ವಿಶ್ವದ 15ನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅದಾನಿ ಗ್ರೂಪ್ ಷೇರುಗಳ ಮೌಲ್ಯ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದರಿಂದ ಅದಾನಿಯವರ ಸಂಪತ್ತಿಗೆ 12 ಬಿಲಿಯನ್ ಡಾಲರ್​ಗಿಂತ ಹೆಚ್ಚು ಮೌಲ್ಯ ಸೇರ್ಪಡೆಯಾಗಿದೆ. ಅದಾನಿ ಗ್ರೂಪ್ ಷೇರುಗಳ ಏರಿಕೆಯ ನಂತರ ನವೆಂಬರ್​ನಲ್ಲಿ ಅದಾನಿ ವಿಶ್ವದ ಅಗ್ರ 20 ಶ್ರೀಮಂತರ ಪಟ್ಟಿಯಲ್ಲಿ ಮರಳಿ ಸ್ಥಾನ ಪಡೆದಿದ್ದಾರೆ.

ಬ್ಲೂಮ್​ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, ಅದಾನಿ 82.5 ಬಿಲಿಯನ್ ಡಾಲರ್ ನಿವ್ವಳ ಮೌಲ್ಯದೊಂದಿಗೆ ವಿಶ್ವದ 15 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಮಂಗಳವಾರದ ವಹಿವಾಟಿನಲ್ಲಿ ಅದಾನಿ ಗ್ರೂಪ್ ಮಾರುಕಟ್ಟೆ ಮಟ್ಟ 11 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದ್ದು, ಎಂ ಕ್ಯಾಪ್​ನಲ್ಲಿ(ಮಿಡ್ ಕ್ಯಾಪ್) ಕಂಪನಿಯ ಷೇರುಗಳ ಮೌಲ್ಯ 13.8 ಲಕ್ಷ ಕೋಟಿ ರೂ. ಆಗಿದೆ.

ಅದಾನಿ ಸಮೂಹವು ಒಂದೇ ದಿನದಲ್ಲಿ 1.92 ಲಕ್ಷ ಕೋಟಿ ರೂ.ಗಳ ಲಾಭ ಗಳಿಸುವ ಮೂಲಕ ತನ್ನ ಅತ್ಯುತ್ತಮ ಏಕ ದಿನದ ಮಾರುಕಟ್ಟೆ ಕಾರ್ಯಕ್ಷಮತೆಯನ್ನು ಸಾಧಿಸಿತು. ಅದಾನಿ ಸಮೂಹದ ವಿರುದ್ಧ ಶಾರ್ಟ್ ಸೆಲ್ಲರ್ ಕಂಪನಿ ಹಿಂಡೆನ್​ಬರ್ಗ್ ಮಾಡಿದ ವಂಚನೆಯ ಆರೋಪಗಳನ್ನು ಯುಎಸ್ ಇಂಟರ್​ ನ್ಯಾಷನಲ್ ಡೆವಲಪ್ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (ಡಿಎಫ್​ಸಿ) ನಿಜವೆಂದು ಪರಿಗಣಿಸಿಲ್ಲ ಎಂಬ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಅದಾನಿ ಷೇರುಗಳು ಭಾರಿ ಲಾಭ ಗಳಿಸಿದವು. ಶ್ರೀಲಂಕಾದಲ್ಲಿ ಬಂದರು ಯೋಜನೆಗಾಗಿ ದೊಡ್ಡ ಪ್ರಮಾಣದ ಸಾಲ ನೀಡುವ ಮೊದಲು, ಡಿಎಫ್ ಸಿ ಅದಾನಿ ಗ್ರೂಪ್ ವಿರುದ್ಧದ ಆರೋಪಗಳನ್ನು ಕೂಲಂಕಷವಾಗಿ ಪರಿಶೀಲಿಸಿದೆ ಎಂದು ವರದಿಯಾಗಿದೆ.

ಅದಾನಿ ಗ್ರೂಪ್​ನ ಎಲ್ಲಾ 10 ಷೇರುಗಳು ಶೇಕಡಾ 7 ರಿಂದ 20ರಷ್ಟು ಲಾಭ ಗಳಿಸಿದರೆ, ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ಎನರ್ಜಿ ಸೊಲ್ಯೂಷನ್ಸ್ ಶೇಕಡಾ 20ರಷ್ಟು ಲಾಭವನ್ನು ಗಳಿಸಿದವು. ಅದಾನಿ ಗ್ರೂಪ್​ನ ಪ್ರಮುಖ ಕಂಪನಿ ಅದಾನಿ ಎಂಟರ್ ರ್ಪ್ರೈಸಸ್ ಲಿಮಿಟೆಡ್ (ಎಇಎಲ್) ಷೇರು ಶೇಕಡಾ 16.91 ರಷ್ಟು ಏರಿಕೆ ಕಂಡಿದ್ದು, ಅದರ ಮಾರುಕಟ್ಟೆ ಮೌಲ್ಯ 48,809 ಕೋಟಿ ರೂ.ಗೆ ಹೆಚ್ಚಾಗಿದೆ. ಅದಾನಿ ಪೋರ್ಟ್ಸ್ ಮತ್ತು ವಿಶೇಷ ಆರ್ಥಿಕ ವಲಯ (ಎಪಿಎಸ್ಇಝಡ್) ಷೇರು ಬೆಲೆಯಲ್ಲಿ ಕೂಡ ಶೇಕಡಾ 15.3ರಷ್ಟು ಹೆಚ್ಚಳವಾಗಿದೆ.

ಅದಾನಿ ಎನರ್ಜಿ ಸೊಲ್ಯೂಷನ್ಸ್ ಮತ್ತು ಅದಾನಿ ಗ್ರೀನ್ ಎನರ್ಜಿ ಸೊಲ್ಯೂಷನ್ಸ್ ತಲಾ 20 ಪ್ರತಿಶತದಷ್ಟು ಲಾಭ ಗಳಿಸುವುದರೊಂದಿಗೆ ಇತರ ಗ್ರೂಪ್ ಷೇರುಗಳು ಸಹ ಲಾಭ ಗಳಿಸಿದವು. ಎರಡೂ ಷೇರುಗಳು ಗ್ರೂಪ್​ನ ಮಾರುಕಟ್ಟೆ ಮೌಲ್ಯಕ್ಕೆ 55,600 ಕೋಟಿ ರೂ. ಸೇರಿಸಿವೆ. ಅದಾನಿ ಪವರ್ ಲಿಮಿಟೆಡ್ (ಎಪಿಎಲ್) ಮತ್ತು ಅದಾನಿ ಟೋಟಲ್ ಗ್ಯಾಸ್ ಲಿಮಿಟೆಡ್ (ಎಟಿಜಿಎಲ್) ಕ್ರಮವಾಗಿ ಶೇಕಡಾ 15.81 ಮತ್ತು ಶೇಕಡಾ 19.88ರಷ್ಟು ಲಾಭ ದಾಖಲಿಸಿವೆ.

ಇದನ್ನೂ ಓದಿ: 19 ತಿಂಗಳ ಗರಿಷ್ಠ ಮಟ್ಟಕ್ಕೇರಿದ ಬಿಟ್ ಕಾಯಿನ್ ಮೌಲ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.