ಹೈದರಾಬಾದ್: ತಂತ್ರಜ್ಞಾನ ಬೆಳೆದಂತೆ ನಮ್ಮ ಜೀವನಶೈಲಿಗಳೇ ಬದಲಾಗಿದೆ. ಅನಿವಾರ್ಯತೆಗಳು ಅಗತ್ಯತೆಗಳೂ ಕೂಡ ಬದಲಾಗಿದೆ. ಹಿಂದೆ ಜೇಬಲ್ಲಿ ಹಾರ್ಡ್ ಕ್ಯಾಶ್ ಇಲ್ಲದೇ ಮನೆಯಿಂದ ಹೊರ ಅಡಿ ಇಡುವುದೇ ಅಸಾಧ್ಯವಾಗಿತ್ತು. ಆದರೆ, ಈಗ ಹಾಗಲ್ಲ ಜೇಬಲ್ಲಿ ಕ್ಯಾಶ್ ಇಲ್ಲದೇ ಇದ್ದರೂ ಆಗಬೇಕಾದ ಕೆಲಸಗಳನ್ನು ಮುಗಿಸಿಕೊಂಡು ಬರಬಹುದಾದ ಧೈರ್ಯವನ್ನು ತಂತ್ರಜ್ಞಾನ ಯುಗ ನಮಗೆ ಕೊಟ್ಟಿದೆ.
ಒಬ್ಬರಿಗೆ ಒಂದಷ್ಟು ಮೊತ್ತದ ಹಣವನ್ನು ನೀಡಬೇಕಾದರೆ ತನ್ನ ಬಳಿ ಹಾರ್ಡ್ ಕ್ಯಾಶ್ ಇದೆ ಎಂಬುದನ್ನು ಯಾರಿಗೂ ತಿಳಿಯಪಡಿಸದೇ ಗುಟ್ಟಾಗಿ ಹೋಗಿ ಕೊಟ್ಟು ಬರಬೇಕಾದ ಪರಿಸ್ಥಿತಿ. ಈಗ ನೀ ಎಲ್ಲೇ ಇರು, ಎಷ್ಟು ಮೊತ್ತದ ಹಣವನ್ನಾದರೂ ಕೇಳು ಕ್ಷಣಾರ್ಧದಲ್ಲಿ ಕೇಳಿದವನ ಖಾತೆಗೆ ಜಮಾ ಮಾಡುವ ತಂತ್ರಜ್ಞಾನದ ಯುಗದಲ್ಲಿ ನಾವಿದ್ದೇವೆ. ಅದರಲ್ಲೂ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಬಂದ ನಂತರ ಪಾವತಿಗಳ ಸ್ವರೂಪ ಸಂಪೂರ್ಣ ಬದಲಾಗಿದೆ.
ಈ ತಂತ್ರಜ್ಞಾನಗಳೆಲ್ಲ ನಮಗೆ ಎಷ್ಟರ ಮಟ್ಟಿಗೆ ಸಹಾಯವಾಗುತ್ತವೋ ಅದೇ ಅಳತೆಯಲ್ಲಿ ಸಮಸ್ಯೆ ತಂದೊಡ್ಡುತ್ತವೆ. ಯುಪಿಐ ಮೂಲಕ ಹಣ ಪಾವತಿಯೇನೋ ಸುಲಭದ ಮಾತು. ಆದರೆ, ಅದೇ ಸಮಯದಲ್ಲಿ, ನಿಮ್ಮ ಖಾತೆ ಹ್ಯಾಕ್ ಮಾಡುವ ಅಪಾಯವೂ ಇರುವುದರಿಂದ ನೀವು ತುಂಬಾ ಜಾಗರೂಕರಾಗಿರಬೇಕು. ಇದರಲ್ಲಿ ಹಣ ವರ್ಗಾವಣೆ ಮಾಡಲು ಬ್ಯಾಂಕ್ ಖಾತೆಗೆ ಯುಪಿಐ ಐಡಿ ಅಥವಾ ಫೋನ್ ನಂಬರ್ ಲಿಂಕ್ ಮಾಡಿರಬೇಕು. ಆಗ ನಿಮಿಷಗಳಲ್ಲಿ ನಿಮ್ಮ ಖಾತೆಯಿಂದ ಇತರ ಖಾತೆಗಳಿಗೆ UPI ಮೂಲಕ ಸುಲಭವಾಗಿ ಹಣ ವರ್ಗಾಯಿಸಬಹುದು.
ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಯುಪಿಐ ಐಡಿ ನಮೂದಿಸುವಾಗ ಸಣ್ಣ ತಪ್ಪು ಮಾಡಿದರೂ ಹಣ ಬೇರೆಯವರ ಖಾತೆಗೆ ಸೇರುವ ಸಾಧ್ಯತೆ ಇದೆ. ಆದ್ದರಿಂದ, ಒಬ್ಬ ವ್ಯಕ್ತಿಗೆ ಮೊದಲ ಬಾರಿಗೆ ನಗದು ವರ್ಗಾವಣೆ ಮಾಡುವಾಗ, ಒಟ್ಟು ಮೊತ್ತದ ಬದಲಿಗೆ 1 ರೂ. ಕಳುಹಿಸಿ, ಇದು ಮಾನ್ಯವಾದ ಖಾತೆ ಎಂದು ತಿಳಿದ ನಂತರವೇ ಅಗತ್ಯ ನಗದು ವರ್ಗಾವಣೆ ಮಾಡಬಹುದು.
ಅಂಗಡಿ ಮಾಲೀಕರದ್ದಾದರೂ, ಕ್ಯೂಆರ್ ಕೋಡ್ ಅವರದ್ದಾಗಿರಲ್ಲ: ಇತ್ತೀಚಿನ ದಿನಗಳಲ್ಲಿ ಎಲ್ಲ ಅಂಗಡಿ ಮಾಲೀಕರು ಕ್ಯೂಆರ್ ಕೋಡ್ ಹೊಂದಿರುತ್ತಾರೆ. ಯಾವುದೇ ವಸ್ತು ಖರೀದಿ ಮಾಡಿದರೂ ನಾವು QR ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ಮೂಲಕ ಪಾವತಿಗಳನ್ನು ಮಾಡುತ್ತೇವೆ. ಯುಪಿಐ ಆ್ಯಪ್ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಅಂಗಡಿಯವರ ವಿವರಗಳು ಬರುತ್ತವೆ. ಮೊದಲಿಗೆ, ವಿವರಗಳು ಸರಿಯಾಗಿವೆಯೆ ಎಂದು ಖಚಿತಪಡಿಸಿಕೊಳ್ಳಬೇಕು.
ಅಂಗಡಿಗಳಲ್ಲಿ ಗೋಡೆಗಳ ಮೇಲೆ QR ಕೋಡ್‌ಗಳನ್ನು ಅಂಟಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೆಲವು ವಂಚಕರು ಇವುಗಳಿಗೆ ಸುಳ್ಳು ಕ್ಯೂಆರ್ ಕೋಡ್‌ಗಳನ್ನು ಜೋಡಿಸಿರುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ನಗದು ವರ್ಗಾವಣೆ ನಂತರ ಗ್ರಾಹಕರು ವಂಚನೆಗೊಳಗಾದ ನಿದರ್ಶನಗಳೂ ಆಗಿವೆ. ಅಂತಹ ವಂಚನೆಗಳಿಂದ ತಪ್ಪಿಸಿಕೊಳ್ಳಲು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದ ಕೂಡಲೇ ಬಂದ ವಿವರಗಳು ಮಾಲೀಕರದ್ದೇ ಎಂಬುದನ್ನೂ ಮುಂಚಿತವಾಗಿ ಪರಿಶೀಲಿಸಿಕೊಳ್ಳಬೇಕು.
ಹಣ ಸ್ವೀಕರಿಸಲು ಪಿನ್ ಅಗತ್ಯವಿಲ್ಲ: ನಿಮ್ಮ UPI ಆಧಾರಿತ ಅಪ್ಲಿಕೇಶನ್ ನಾಲ್ಕು ಅಥವಾ ಆರು - ಅಂಕಿಯ ಪಿನ್ ಹೊಂದಿರುತ್ತದೆ. ಇದರ ಆಧಾರದ ಮೇಲೆ ನೀವು ವಹಿವಾಟುಗಳನ್ನು ಅಧಿಕೃತಗೊಳಿಸಬೇಕು. ಯಾವುದೇ ಸಂದರ್ಭದಲ್ಲೂ ಈ ಪಿನ್ ಅನ್ನು ಯಾರ ಜೊತೆಯೂ ಹಂಚಿಕೊಳ್ಳಬೇಡಿ. ಅದರ ಜೊತೆಗೆ ನಿಮ್ಮ ಅಪ್ಲಿಕೇಶನ್ ತೆರೆಯಲು ವಿಶೇಷ ಪಿನ್ ಅಥವಾ ಫಿಂಗರ್‌ಪ್ರಿಂಟ್ ಅನ್ನು ರಚಿಸುವುದು ಉತ್ತಮ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ನೀವು ಹಣ ಪಾವತಿಸಲು ಬಯಸಿದಾಗ ಮಾತ್ರ ಪಿನ್ ಹಾಕುವುದು ಅಗತ್ಯವಾಗಿರುತ್ತದೆ. ಯಾವುದೇ ಪಾವತಿ ಸ್ವೀಕರಿಸಲು ಇದರ ಅಗತ್ಯ ಇರುವುದಿಲ್ಲ.
ಅನಗತ್ಯ ಅಪ್ಲಿಕೇಶನ್‌ಗಳು ಬೇಡ: ಈ ಅಪ್ಲಿಕೇಶನ್ಗಳ ಜಮಾನದಲ್ಲಿ ಅನೇಕ UPI ಅಪ್ಲಿಕೇಶನ್‌ಗಳು ಲಭ್ಯವಿವೆ. ಮತ್ತು ಬ್ಯಾಂಕ್ಗಳೂ ಕೂಡ ಎಲ್ಲ UPI ವಹಿವಾಟುಗಳನ್ನು ಉಚಿತವಾಗಿ ನೀಡುತ್ತಿವೆ. ಒಂದು ಅಥವಾ ಎರಡು ಅಪ್ಲಿಕೇಶನ್‌ಗಳನ್ನು ಮೀರಿ ನಿಮಗೆ ಯಾವುದೇ ಹೆಚ್ಚುವರಿ ಪ್ರಯೋಜನವಿಲ್ಲ. ಅನಗತ್ಯವಾಗಿ ವಿವಿಧ ಅಪ್ಲಿಕೇಶನ್‌ಗಳಿಗೆ ನಿಮ್ಮ ವಿವರಗಳನ್ನು ನೀಡುವುದನ್ನು ಹೊರತುಪಡಿಸಿ. ಒಂದು UPI ಅಪ್ಲಿಕೇಶನ್ ಹೊಂದಿರುವವರು, ಈ UPI ಅಪ್ಲಿಕೇಶನ್ ಮೂಲಕ ಪಾವತಿಸಲು ಕಷ್ಟವಾಗುತ್ತದೆ ಎಂದು ಎಲ್ಲ ಆ್ಯಪ್ಗಳಿಗೂ ನಿಮ್ಮ ದಾಖಲೆಗಳನ್ನೂ ನೀಡಿ ಲಾಗ್ಇನ್ ಆಗಬೇಡಿ.
ತಮ್ಮ UPI ಅಪ್ಲಿಕೇಶನ್‌ನಲ್ಲಿ QR ಕೋಡ್ ಅನ್ನು ಸ್ಕ್ಯಾನ್ ಮಾಡಿ, ಯಾವುದೇ ಅಪ್ಲಿಕೇಷನ್‌ನಿಂದ ಪಾವತಿಸಬಹುದು. ಆದ್ದರಿಂದ, ನಿಮ್ಮ ಫೋನ್‌ನಿಂದ ನೀವು ಹೆಚ್ಚು ಬಳಸದ ಅಪ್ಲಿಕೇಷನ್‌ಗಳನ್ನು ತೆಗೆದುಹಾಕಿ. ನೀವು ಪಾವತಿ ಪೂರ್ಣಗೊಳಿಸಿದ ನಂತರ ಬ್ಯಾಂಕಿನಿಂದ ಬರುವ ಕಿರು ಸಂದೇಶಗಳನ್ನು ಗಮನಿಸಿ. ವಹಿವಾಟಿನಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಲ್ಲಿ ತಕ್ಷಣವೇ ಬ್ಯಾಂಕಿನ ಗಮನಕ್ಕೆ ತಂದು, ಸಮಸ್ಯೆ ಕಬ್ಬಿಣವಾಗದಂತೆ ಎಚ್ಚರವಹಿಸಿ.
ಇದನ್ನೂ ಓದಿ: ರಾತ್ರೋರಾತ್ರಿ ಕೋಟ್ಯಧಿಪತಿಗಳಾದ ತೆಲಂಗಾಣದ ಹೆಚ್‌ಡಿಎಫ್‌ಸಿ ಬ್ಯಾಂಕ್ ಖಾತೆದಾರರು!