ETV Bharat / business

ಇದೇ ಮೊದಲ ಬಾರಿಗೆ ಮಾಸಿಕ 10 ಬಿಲಿಯನ್ ದಾಟಿದ ಯುಪಿಐ ವಹಿವಾಟುಗಳ ಸಂಖ್ಯೆ

author img

By ETV Bharat Karnataka Team

Published : Sep 1, 2023, 12:32 PM IST

ಭಾರತದಲ್ಲಿನ ಯುಪಿಐ ವಹಿವಾಟುಗಳ ಸಂಖ್ಯೆ ಮಾಸಿಕ 10 ಬಿಲಿಯನ್​ ದಾಟಿದೆ ಎಂದು ಎನ್​ಸಿಪಿಐ ಹೇಳಿದೆ.

UPI-based payments cross 10 bn monthly transactions

ನವದೆಹಲಿ: ಇದೇ ಮೊದಲ ಬಾರಿಗೆ ಒಂದು ತಿಂಗಳಲ್ಲಿ ದೇಶದ ಯುಪಿಐ ವಹಿವಾಟುಗಳು 10 ಬಿಲಿಯನ್​ ದಾಟಿವೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್​ಸಿಪಿಐ) ತಿಳಿಸಿದೆ. ಆಗಸ್ಟ್​​ ತಿಂಗಳಲ್ಲಿ ದೇಶದಲ್ಲಿ 10 ಬಿಲಿಯನ್ ಅಂದರೆ 1 ಸಾವಿರ ಕೋಟಿ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಆಧಾರಿತ ಪಾವತಿಗಳು ನಡೆದಿವೆ. ಯುಪಿಐನಲ್ಲಿ ಮಾಸಿಕ ವಹಿವಾಟಿನ ಸಂಖ್ಯೆ 10.24 ಬಿಲಿಯನ್ ದಾಟಿದ್ದು, ನಿವ್ವಳ ವಹಿವಾಟು ಮೌಲ್ಯ 15.18 ಟ್ರಿಲಿಯನ್ ರೂ.ಗಳಾಗಿದೆ ಎಂದು ಎನ್​ಪಿಸಿಐ ಗುರುವಾರ ತಡರಾತ್ರಿ ದೃಢಪಡಿಸಿದೆ.

ಯುಪಿಐ ಆಧರಿತ ವಹಿವಾಟುಗಳು ವರ್ಷದಿಂದ ವರ್ಷಕ್ಕೆ ಶೇಕಡಾ 50 ಕ್ಕಿಂತ ಹೆಚ್ಚಾಗಿದೆ ಮತ್ತು ಆಗಸ್ಟ್​ನಲ್ಲಿ 6.58 ಬಿಲಿಯನ್ ಮಾಸಿಕ ವಹಿವಾಟುಗಳನ್ನು ನಡೆದಿವೆ. ಜುಲೈನಲ್ಲಿ 9.96 ಬಿಲಿಯನ್ ಯುಪಿಐ ವಹಿವಾಟುಗಳು ನಡೆದಿದ್ದವು. ಅಕ್ಟೋಬರ್ 2019 ರಲ್ಲಿ ಮೊದಲ ಬಾರಿಗೆ ಯುಪಿಐ 1 ಬಿಲಿಯನ್ ಮಾಸಿಕ ವಹಿವಾಟುಗಳನ್ನು ದಾಟಿತ್ತು.

2018 ಮತ್ತು 2022 ರ ನಡುವೆ ಯುಪಿಐ ವಹಿವಾಟುಗಳು ಮೌಲ್ಯ ಮತ್ತು ಪರಿಮಾಣದ ದೃಷ್ಟಿಯಿಂದ ಕ್ರಮವಾಗಿ ಶೇಕಡಾ 1,320 ಮತ್ತು ಶೇಕಡಾ 1,876 ರಷ್ಟು ಹೆಚ್ಚಾಗಿವೆ. 2018 ರಲ್ಲಿ ಯುಪಿಐ ವಹಿವಾಟುಗಳು 374.63 ಕೋಟಿಯಷ್ಟಿದ್ದು, 2022 ರಲ್ಲಿ ಇದು ಶೇಕಡಾ 1,876 ರಷ್ಟು ಏರಿಕೆಯಾಗಿ 7,403.97 ಕೋಟಿಗೆ ತಲುಪಿದೆ. ಮೌಲ್ಯದ ದೃಷ್ಟಿಯಿಂದ, ಯುಪಿಐ ವಹಿವಾಟುಗಳು 2018 ರಲ್ಲಿ 5.86 ಲಕ್ಷ ಕೋಟಿ ರೂ.ಗಳಷ್ಟಿತ್ತು, ಇದು 2022 ರಲ್ಲಿ ಶೇಕಡಾ 1,320 ರಷ್ಟು ಏರಿಕೆಯಾಗಿ 83.2 ಲಕ್ಷ ಕೋಟಿ ರೂ.ಗೆ ತಲುಪಿದೆ.

ಈ ವರ್ಷದ ಫೆಬ್ರವರಿಯಲ್ಲಿ ಆರ್​​ಬಿಐ, ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರಜೆಗಳು ಮತ್ತು ಎನ್ಆರ್​​ಐಗಳು ಭಾರತದಲ್ಲಿದ್ದಾಗ ಯುಪಿಐ ಬಳಸಿ ಪಾವತಿ ಮಾಡುವ ಅವಕಾಶ ನೀಡಿತ್ತು. ಆಯ್ದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ (ಬೆಂಗಳೂರು, ಮುಂಬೈ ಮತ್ತು ನವದೆಹಲಿ) ಜಿ-20 ದೇಶಗಳ ಪ್ರಯಾಣಿಕರಿಗೆ ತಮ್ಮ ವ್ಯಾಪಾರಿ ಪಾವತಿಗಳಿಗಾಗಿ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ.

ಸಿಂಗಾಪುರ, ಆಸ್ಟ್ರೇಲಿಯಾ, ಕೆನಡಾ, ಹಾಂಗ್ ಕಾಂಗ್, ಒಮಾನ್, ಕತಾರ್, ಯುಎಸ್, ಸೌದಿ ಅರೇಬಿಯಾ, ಯುಎಇ ಮತ್ತು ಯುಕೆ ಹೀಗೆ 10 ದೇಶಗಳಿಗೆ ಈ ಸೌಲಭ್ಯ ನೀಡಲಾಗಿದೆ ಎಂದು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್​​ಪಿಸಿಐ) ತಿಳಿಸಿದೆ. ವಿದೇಶಗಳಲ್ಲಿ ಯುಪಿಐ ಪಾವತಿ ವ್ಯವಸ್ಥೆಯು 2022 ರಲ್ಲಿ ಪ್ರಾರಂಭವಾಯಿತು.

ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಜನಪ್ರಿಯ ಮೊಬೈಲ್ ಪಾವತಿ ವಿಧಾನವಾಗಿದ್ದು, ಇದು ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದಕ್ಕೆ ತಕ್ಷಣ ಮತ್ತು ಉಚಿತವಾಗಿ ಹಣವನ್ನು ವರ್ಗಾಯಿಸಲು ಅವಕಾಶ ನೀಡುತ್ತದೆ. ಯುಪಿಐ ಆರಂಭವಾದಾಗಿನಿಂದ ಜನಸಾಮಾನ್ಯರಿಗೆ ಹಣಕಾಸು ಪಾವತಿ ಮಾಡುವುದು ಬಹಳ ಸರಳೀಕೃತವಾಗಿದೆ.

ಯುಪಿಐ ಮೂಲಕ ಹಣವನ್ನು ವರ್ಗಾಯಿಸಲು ಬಳಕೆದಾರರು ಯುಪಿಐ ಐಡಿ ಎಂದು ಕರೆಯಲ್ಪಡುವ ಐಡಿಯನ್ನು ಹೊಂದಿರಬೇಕು. ಯುಪಿಐ ಐಡಿ ಎಂಬುದು ಬ್ಯಾಂಕ್ ಖಾತೆಯ ವಿಶಿಷ್ಟ ಗುರುತಿನ ಸಂಕೇತವಾಗಿದ್ದು, ಇದನ್ನು ಒಂದು ಬ್ಯಾಂಕಿನಿಂದ ಇನ್ನೊಂದಕ್ಕೆ ಹಣ ಕಳುಹಿಸಲು ಮತ್ತು ಸ್ವೀಕರಿಸಲು ಬಳಸಲಾಗುತ್ತದೆ.

ಇದನ್ನೂ ಓದಿ : ಸ್ಟಾಕ್​ ಬ್ರೋಕಿಂಗ್​​ ವ್ಯವಹಾರಕ್ಕೆ ಫೋನ್​ಪೆ ಪ್ರವೇಶ; 'Share.Market' ಆ್ಯಪ್ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.