ಮುಂಬೈ : ಭಾರತದ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಆಧಾರಿತ ಹಣದುಬ್ಬರವು ಫೆಬ್ರವರಿಯಲ್ಲಿ ಶೇಕಡಾ 4 ಕ್ಕಿಂತ ಕಡಿಮೆಯಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ - ಅಂಶಗಳು ಮಂಗಳವಾರ ತೋರಿಸಿವೆ. ಫೆಬ್ರವರಿಯಲ್ಲಿ ಇದು ಶೇಕಡಾ 3.85 ಕ್ಕೆ ದಾಖಲಾಗಿದೆ. ಜನವರಿಯಲ್ಲಿ ಡಬ್ಲ್ಯುಪಿಐ ಹಣದುಬ್ಬರ ಶೇ.4.73 ರಷ್ಟಿತ್ತು. WPI ಹಣದುಬ್ಬರವು 2021 ರ ಜನವರಿಯಲ್ಲಿ 2.51 ಪರ್ಸೆಂಟ್ ಆಗಿತ್ತು. ಅದರ ನಂತರ ಈಗಿನ ಶೇಕಡಾ 3.85 ಹಣದುಬ್ಬರ ಅತ್ಯಂತ ಕಡಿಮೆಯಾಗಿದೆ.
ಫೆಬ್ರವರಿ 2023 ರಲ್ಲಿ ಹಣದುಬ್ಬರ ದರದಲ್ಲಿ ಕುಸಿತವು ಪ್ರಾಥಮಿಕವಾಗಿ ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಆಹಾರೇತರ ವಸ್ತುಗಳು, ಆಹಾರ ಉತ್ಪನ್ನಗಳು, ಖನಿಜಗಳು, ಕಂಪ್ಯೂಟರ್, ಎಲೆಕ್ಟ್ರಾನಿಕ್ ಮತ್ತು ಆಪ್ಟಿಕಲ್ ಉತ್ಪನ್ನಗಳು, ರಾಸಾಯನಿಕಗಳು ಮತ್ತು ರಾಸಾಯನಿಕ ಉತ್ಪನ್ನಗಳು, ವಿದ್ಯುತ್ ಉಪಕರಣಗಳು, ಮೋಟಾರು ವಾಹನಗಳು, ಟ್ರೇಲರ್‌ಗಳು ಮತ್ತು ಸೆಮಿಟ್ರೇಲರ್‌ಗಳ ಬೆಲೆಗಳ ಕುಸಿತದಿಂದ ಉಂಟಾಗಿದೆ ಎಂದು ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ತಿಂಗಳಿನಿಂದ ತಿಂಗಳ (MoM) ಆಧಾರದ ಮೇಲೆ, WPI ಶೇಕಡಾ 0.20 ಬದಲಾಗಿದೆ. ಡಬ್ಲ್ಯುಪಿಐ ಆಹಾರ ಸೂಚ್ಯಂಕವನ್ನು ಆಧರಿಸಿದ ಹಣದುಬ್ಬರದ ದರವು ಜನವರಿ 2023 ರಲ್ಲಿ ಇದ್ದ ಶೇಕಡಾ 2.95 ರಿಂದ ಫೆಬ್ರವರಿ 2023 ರಲ್ಲಿ ಶೇಕಡಾ 2.76 ಕ್ಕೆ ಇಳಿದಿದೆ ಎಂದು ಸಚಿವಾಲಯ ಹೇಳಿದೆ. ಫೆಬ್ರವರಿಯಲ್ಲಿ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರವು ಶೇಕಡಾ 6.44 ರಷ್ಟಿದೆ ಎಂದು ಸರ್ಕಾರದ ಅಂಕಿಅಂಶಗಳು ತೋರಿಸಿವೆ. ಇದು ಸತತ ಎರಡನೇ ತಿಂಗಳಿಗೆ ರಿಸರ್ವ್ ಬ್ಯಾಂಕ್‌ನ ಸೌಕರ್ಯ ಮಟ್ಟವಾದ ಶೇ.6 ಕ್ಕಿಂತ ಹೆಚ್ಚಿತ್ತು.
ಆಹಾರದ ಸರಕುಗಳ ಚಿಲ್ಲರೆ ಹಣದುಬ್ಬರ ದರವು ಫೆಬ್ರವರಿಯಲ್ಲಿ 5.95 ಶೇಕಡಾ ಆಗಿದೆ. ಇದು ಜನವರಿಯಲ್ಲಿ ಇದ್ದ 6 ಶೇಕಡಾಕ್ಕಿಂತ ಕೊಂಚ ಕಡಿಮೆಯಾಗಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಆಹಾರದ ಸರಕುಗಳ ಚಿಲ್ಲರೆ ಹಣದುಬ್ಬರ ದರ ಶೇ 5.85ರಷ್ಟಿತ್ತು. ನಗರ ಕೇಂದ್ರಗಳಲ್ಲಿನ ಹಣದುಬ್ಬರ ಶೇ 6.10 ಪರ್ಸೆಂಟ್ ಆಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿನ ಹಣದುಬ್ಬರವು ಶೇ 6.72 ರಷ್ಟಿದೆ ಎಂದು ಡೇಟಾ ಬಹಿರಂಗಪಡಿಸಿದೆ. ಅಂಕಿಅಂಶಗಳ ಪ್ರಕಾರ, ತರಕಾರಿ ಬೆಲೆಗಳು ವಾರ್ಷಿಕ ಆಧಾರದ ಮೇಲೆ 11.61 ಪ್ರತಿಶತದಷ್ಟು ಕಡಿಮೆಯಾಗಿದೆ. ಆದರೂ ಇದು ಮಸಾಲೆಗಳು (ಶೇ 20.20) ಮತ್ತು ಧಾನ್ಯ ಉತ್ಪನ್ನಗಳಲ್ಲಿ (ಶೇ 16.73) ಎರಡಂಕಿಯ ಹೆಚ್ಚಳವನ್ನು ದಾಖಲಿಸಿದೆ.
ಸಗಟು ಬೆಲೆ ಸೂಚ್ಯಂಕ (WPI) ಇದು ಸಗಟು ಹಂತದಲ್ಲಿ ಸರಕುಗಳ ಬೆಲೆಗಳನ್ನು ಪ್ರತಿನಿಧಿಸುತ್ತದೆ. ಅಂದರೆ ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುವ ಮತ್ತು ಗ್ರಾಹಕರ ಬದಲಿಗೆ ಸಂಸ್ಥೆಗಳ ನಡುವೆ ವ್ಯಾಪಾರ ಮಾಡುವ ಸರಕುಗಳು ಎಂದರ್ಥ. ಕೆಲವು ಆರ್ಥಿಕತೆಗಳಲ್ಲಿ WPI ಅನ್ನು ಹಣದುಬ್ಬರದ ಅಳತೆಯಾಗಿ ಬಳಸಲಾಗುತ್ತದೆ.
ಸೂಚ್ಯಂಕ ಸಂಖ್ಯೆಗಳು ಮತ್ತು ಹಣದುಬ್ಬರದ ವಾರ್ಷಿಕ ದರ (% ನಲ್ಲಿ Y-o-Y)* | |||||||
ಎಲ್ಲಾ ಸರಕುಗಳು/ಪ್ರಮುಖ ಗುಂಪುಗಳು | ತೂಕ (%) | ಡಿಸೆಂಬರ್-22 | ಜನವರಿ-23 (ಪಿ) | ಫೆಬ್ರವರಿ-23 (ಪಿ) | |||
ಸೂಚ್ಯಂಕ | ಹಣದುಬ್ಬರ | ಸೂಚ್ಯಂಕ | ಹಣದುಬ್ಬರ | ಸೂಚ್ಯಂಕ | ಹಣದುಬ್ಬರ | ||
ಎಲ್ಲಾ ಸರಕುಗಳು | 100 | 150.5 | 5.02 | 150.6 | 4.73 | 150.9 | 3.85 |
I. ಪ್ರಾಥಮಿಕ ಸರಕುಗಳು | 22.6 | 172.9 | 2.67 | 174.0 | 3.88 | 173.0 | 3.28 |
II. ಇಂಧನ ಮತ್ತು ಶಕ್ತಿ | 13.2 | 158.0 | 18.09 | 155.8 | 15.15 | 158.8 | 14.82 |
III. ತಯಾರಿಸಿದ ಉತ್ಪನ್ನಗಳು | 64.2 | 141.1 | 3.37 | 141.3 | 2.99 | 141.6 | 1.94 |
ಆಹಾರ ಸೂಚ್ಯಂಕ | 24.4 | 170.7 | 0.89 | 171.2 | 2.95 | 171.3 | 2.76 |