ETV Bharat / business

ವಾಣಿಜ್ಯ ಹಡಗಿನ ಮೇಲೆ ಡ್ರೋನ್​ ದಾಳಿ: ಭಾರತದ ಆಮದು- ರಫ್ತಿನ ಮೇಲೆ ಪರಿಣಾಮ ಬೀರುತ್ತಾ? - ಸಮುದ್ರ ವ್ಯಾಪಾರ

ವಾಣಿಜ್ಯ ಸರಕು ಸಾಗಣೆ ಹಡಗಾದ ಎಂವಿ ಕೆಮ್ ಪ್ಲುಟೊ ಭಾರತದ ಗುಜರಾತ್​ನ ಕರಾವಳಿ ಪ್ರದೇಶದಲ್ಲಿ ಡ್ರೋನ್​ ದಾಳಿಗೀಡಾಗಿತ್ತು. ಇದು ಭಾರತದ ಆಮದು- ರಫ್ತಿನ ಮೇಲೆ ಪರಿಣಾಮ ಬೀರಲಿದೆಯಾ ಎಂಬುದು ಚರ್ಚಾ ವಿಷಯವಾಗಿದೆ.

ವಾಣಿಜ್ಯ ಹಡಗಿನ ಮೇಲೆ ಡ್ರೋನ್​ ದಾಳಿ
ವಾಣಿಜ್ಯ ಹಡಗಿನ ಮೇಲೆ ಡ್ರೋನ್​ ದಾಳಿ
author img

By ETV Bharat Karnataka Team

Published : Dec 28, 2023, 7:30 AM IST

ಕಚ್ (ಗುಜರಾತ್): ಕಚ್ಚಾ ತೈಲ ಹೊತ್ತು ತರುತ್ತಿದ್ದ ಹಡಗಿನ ಮೇಲೆ ನಡೆದ ಡ್ರೋನ್​ ದಾಳಿ ಭಾರೀ ಆತಂಕ ತಂದೊಡ್ಡಿದೆ. ಇದು ಇರಾನ್​ ನಡೆಸಿದ ದಾಳಿ ಎಂದು ಹೇಳಲಾಗಿದ್ದರೂ, ಇಂತಹ ಘಟನೆಗಳು ವ್ಯಾಪಾರದ ವಹಿವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಬಂದರುಗಳಿಂದ ನಡೆಯುವ ವ್ಯಾಪಾರ ಕುಂಠಿತಗೊಳಿಸುವ ಪರಿಣಾಮ ಬೀರಲಿದೆ.

ವಾಣಿಜ್ಯ ಸರಕು ಸಾಗಣೆ ಹಡಗಾದ ಎಂವಿ ಕೆಮ್ ಪ್ಲುಟೊ ಅರಬ್ಬಿ ಸಮುದ್ರದಲ್ಲಿ ಇತ್ತೀಚೆಗೆ ಡ್ರೋನ್​ ದಾಳಿಗೀಡಾಗಿತ್ತು. ಬೆಂಕಿ ಹೊತ್ತಿಕೊಂಡು ತೀವ್ರ ಆತಂಕ ಸೃಷ್ಟಿಸಿತ್ತು. ದುರಂತವೆಂದರೆ, ಇದು ಭಾರತದ ಸಮುದ್ರ ಸೀಮೆಯಲ್ಲಿ ಈ ದಾಳಿ ನಡೆದಿತ್ತು. ಇಂತಹ ಘಟನೆಗಳು ಭಾರತದೊಂದಿಗಿನ ಸಮುದ್ರ ಮಾರ್ಗದ ವ್ಯಾಪಾರ ಸಂಬಂಧದ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆಯಾ ಎಂಬ ಬಗ್ಗೆ ಅನುಮಾನ ಮೂಡಿಸಿದೆ.

ಆಮದು- ರಫ್ತಿನ ಮೇಲೆ ಪರಿಣಾಮ: ಈ ಬಗ್ಗೆ ಮುಂದ್ರಾ ಅದಾನಿ ಬಂದರಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಜೈದೀಪ್ ಶಾ ಮಾತನಾಡಿ, ಪ್ರಸ್ತುತ ಕಚ್‌ನ ಮುಂದ್ರಾದಲ್ಲಿರುವ ಅದಾನಿ ಬಂದರಿನಲ್ಲಿ ಹಡಗುಗಳ ಮೇಲಿನ ದಾಳಿಗಳ ಸಂಖ್ಯೆ ಕಡಿಮೆ ಇದೆ. ಆದ್ದರಿಂದ, ನಿಯಮಿತವಾಗಿ ವಾಪಾರ ಮುಂದುವರಿದಿದೆ. ದಿನಕ್ಕೆ ಸುಮಾರು 30 ರಿಂದ 38 ಹಡಗುಗಳು ಕಾರ್ಯಾಚರಣೆ ನಡೆಸುತ್ತವೆ. ಈಗ ನಡೆಯುತ್ತಿರುವ ದಾಳಿಗಳು ಭವಿಷ್ಯದಲ್ಲಿ ದೇಶದ ಆಮದು-ರಫ್ತು ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದು. ಜೊತೆಗೆ ವಾರ್ಷಿಕವಾಗಿ 157 ಮಿಲಿಯನ್ ಮೆಟ್ರಿಕ್ ಟನ್ ಸರಕುಗಳ ಸಾಗಣೆ ಮತ್ತು ಕೋಟ್ಯಂತರ ಮೌಲ್ಯದ ವಹಿವಾಟು ಸಹ ಕುಂಠಿತ ಕಾಣಬಹುದು ಎಂದು ಅಭಿಪ್ರಾಯಪಟ್ಟರು.

ದೇಶದ ಸೀಮಾಗಡಿಯಲ್ಲಿ ದಾಳಿಗಳು ನಡೆದಾಗ ಇತರ ರಾಷ್ಟ್ರಗಳು ಭದ್ರತಾ ದೃಷ್ಟಿಯಿಂದ ಭಾರತದೊಂದಿಗೆ ವಹಿವಾಟು ನಡೆಸಲು ಹಿಂದೇಟು ಹಾಕಬಹುದು. ಆಗ ದೇಶದ ಆರ್ಥಿಕತೆ ಮತ್ತು ಸರಕುಗಳ ಸಾಗಣೆದ ಮೇಲೆ ದುಷ್ಪರಿಣಾಮ ಉಂಟು ಮಾಡಲಿದೆ. ಇಂಥ ಕೃತ್ಯಗಳ ಮೇಲೆ ನಿಯಂತ್ರಣ ಸಾಧಿಸಬೇಕಿದೆ ಎಂದು ಅವರು ಸಲಹೆ ನೀಡಿದರು.

ಭಾರತೀಯ ಬಂದರುಗಳು ಹೆಚ್ಚಿನ ಸಂಖ್ಯೆಯ ಹಡಗುಗಳನ್ನು ನಿರ್ವಹಿಸುತ್ತವೆ. ಪ್ರತಿದಿನ ಲಕ್ಷಾಂತರ ಟನ್ ಸರಕನ್ನು ಸಾಗಾಟ ಮಾಡುತ್ತವೆ. ಸರಕು ಸಾಗಣೆ ಹಡಗುಗಳ ಮೇಲಿನ ದಾಳಿಗಳ ಸಂಖ್ಯೆ ಹೆಚ್ಚಾದರೆ, ಬಂದರಿನ ಮೂಲಕ ಆಮದು-ರಫ್ತು ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು. ಭಾರತದ ಬಂದರುಗಳಿಂದ ನಡೆಯುವ ಚಟುವಟಿಕೆಗಳು ಕುಂಠಿತವಾಗುವ ಸಾಧ್ಯತೆ ಇದೆ.

ಏನಾಯ್ತು?: ಡಿಸೆಂಬರ್ 19 ರಂದು, ಇಸ್ರೇಲ್​ ಸಹಯೋಗದ ವಾಣಿಜ್ಯ ಸರಕು ಹಡಗಾದ ಎಂವಿ ಚೆಮ್​ ಪ್ಲುಟೊ ಸೌದಿ ಅರೇಬಿಯಾದಿಂದ ಕಚ್ಚಾ ತೈಲವನ್ನು ಹೊತ್ತು ಭಾರತದತ್ತ ಹೊರಟಿತ್ತು. ಡಿಸೆಂಬರ್ 25 ರಂದು ಅದು ಕರ್ನಾಟಕದ ಮಂಗಳೂರು ಬಂದರನ್ನು ತಲುಪಬೇಕಿತ್ತು. ಡಿಸೆಂಬರ್ 23 ರಂದು ಹಡಗಿನ ಮೇಲೆ ಡ್ರೋನ್​ ದಾಳಿ ನಡೆದಿತ್ತು. ಭಾರತೀಯ ಕೋಸ್ಟ್ ಗಾರ್ಡ್‌ನ ಮುಂಬೈ ರಕ್ಷಣಾ ತಂಡವು ಹಡಗು ಅಪಘಾತದ ಬಗ್ಗೆ ಮಾಹಿತಿ ಪಡೆದು, ರಕ್ಷಣಾ ಕಾರ್ಯಾಚರಣೆ ನಡೆಸಿತ್ತು.

ಅದರಂತೆ ಹಡಗನ್ನು ಸುರಕ್ಷಿತವಾಗಿ ಮುಂಬೈ ಬಂದರಿಗೆ ತಂದು ನಿಲ್ಲಿಸಲಾಗಿದೆ. ಇರಾನ್ ನಡೆಸಿದ ಡ್ರೋನ್ ದಾಳಿ ಇದಾಗಿದೆ ಎಂದು ಹೇಳಲಾಗಿದೆ. ಇದರಲ್ಲಿ 20 ಭಾರತೀಯ ಮತ್ತು ಓರ್ವ ವಿಯೆಟ್ನಾಂ ಸಿಬ್ಬಂದಿ ಇದ್ದರು. ದಾಳಿಯಿಂದಾಗಿ ಹಡಗಿನ ಮುಂಭಾಗ ಛಿದ್ರವಾಗಿತ್ತು.

ಇದನ್ನೂ ಓದಿ: ಮುಂಬೈ ಬಂದರಿಗೆ ಬಂದ ಡ್ರೋನ್​ ದಾಳಿಗೀಡಾದ ಹಡಗು: ಭಾರತೀಯ ನೌಕಾಪಡೆ ಕಾರ್ಯಾಚರಣೆ ಸಕ್ಸಸ್​​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.