ನವದೆಹಲಿ: ಇತ್ತೀಚಿನ ದಿನಗಳಲ್ಲಿ ಹೊಸ ಪಿಂಚಣಿ ಯೋಜನೆ ಮತ್ತು ಹಳೆಯ ಪಿಂಚಣಿ ಯೋಜನೆ ಭಾರೀ ವಿವಾದಾತ್ಮಕ ವಿಷಯವಾಗಿ ಮಾರ್ಪಾಡಾಗಿದೆ. ಹೌದು, ಕೆಲವು ರಾಜ್ಯ ಸರ್ಕಾರಗಳು ತಮ್ಮ ಉದ್ಯೋಗಿಗಳಿಗೆ ಜನಪ್ರಿಯವಾದ ಹಳೆಯ ಪಿಂಚಣಿ ಯೋಜನೆಯನ್ನು ಹಿಂಪಡೆಯುವ ಭರವಸೆ ನೀಡಿವೆ. ಇದರರ್ಥ 2004 ಜನವರಿ 1ರ ನಂತರ ಕೇಂದ್ರ ಸರ್ಕಾರದ ಸೇವೆಗೆ ಪ್ರವೇಶಿಸಿದ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗಾಗಿ ಜಾರಿಗೆ ತಂದ ಹೊಸ ಪಿಂಚಣಿ ಯೋಜನೆಯನ್ನು ಕೈಬಿಡುವ ಸಾಧ್ಯತೆಯಿದೆ.
ಹಳೆಯ ಪಿಂಚಣಿ ಯೋಜನೆಗಿಂತ ಭಿನ್ನವಾಗಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ನಿವೃತ್ತಿಯ ನಂತರ ಕಾರ್ಪಸ್ ಅಥವಾ ಪಿಂಚಣಿ ನಿಧಿಗೆ ಯಾವುದೇ ಕೊಡುಗೆ ನೀಡದೇ ಜೀವಮಾನದ ಪಿಂಚಣಿ ಖಾತರಿಪಡಿಸಲಾಗಿದೆ. ಹೊಸ ಪಿಂಚಣಿ ಯೋಜನೆಯು (ಎನ್ಪಿಎಸ್) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಡಿಯಲ್ಲಿ ಉದ್ಯೋಗಿ ನೀಡಿದ ಸ್ವಯಂಪ್ರೇರಿತ ಕೊಡುಗೆ ಆಧರಿಸಿದೆ.
ಎನ್ಪಿಎಸ್ ಎಂದರೇನು?: ಹೊಸ ವ್ಯವಸ್ಥೆಯ ಅಡಿಯಲ್ಲಿ ಉದ್ಯೋಗಿಯ ಉಳಿತಾಯವನ್ನು ವೃತ್ತಿಪರ ನಿಧಿ ವ್ಯವಸ್ಥಾಪಕರು ನಿರ್ವಹಿಸುವ ನಿಧಿಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ), ಸರ್ಕಾರಿ ಬಾಂಡ್‌ಗಳು, ಕಾರ್ಪೊರೇಟ್ ಸಾಲ ಮತ್ತು ಸ್ಟಾಕ್ಗಳನ್ನು ಹಾಗೂ ಖಾಸಗಿ ನಿಧಿ ವ್ಯವಸ್ಥಾಪಕರು ಪಿಂಚಣಿ ವಲಯವನ್ನು ನಿಯಂತ್ರಿಸುತ್ತಾರೆ. ಹೂಡಿಕೆ ಮತ್ತು ಉಳಿತಾಯ ಸಾಧನಗಳು ಉತ್ತಮವಾಗಿವೆ ಹಾಗೂ ಸುರಕ್ಷಿತವಾಗಿವ ಎಂದು ಪರಿಗಣಿಸಲಾಗುತ್ತದೆ. ನಿವೃತ್ತಿಯ ನಂತರ ಉದ್ಯೋಗಿಯ ಉಳಿತಾಯವು ಅವರಿಗೆ ದೊರೆಯಲಿದೆ.
ಎನ್ಪಿಎಸ್ ಅಡಿ ಉದ್ಯೋಗಿಗೆ ತಮ್ಮ ಪಿಂಚಣಿ ನಿಧಿನಿಂದ ಒಂದು ದೊಡ್ಡ ಮೊತ್ತದ ಭಾಗವನ್ನು ಹಿಂತೆಗೆದುಕೊಳ್ಳುವ ಆಯ್ಕೆಯ ಜೊತೆಗೆ ಅನುಮೋದಿತ ಜೀವ ವಿಮಾ ಕಂಪನಿಯಿಂದ ಜೀವಮಾನದ ಒಟ್ಟುಮೊತ್ತ ಖರೀದಿಸಲು ಕೂಡಾ ಒಂದು ಆಯ್ಕೆಯಿದೆ. ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಮರ್ಥನೀಯವಲ್ಲದ ಸರ್ಕಾರದ ಹೆಚ್ಚುತ್ತಿರುವ ಪಿಂಚಣಿ ಪಾವತಿ ಹೊರೆ ಕಡಿಮೆ ಮಾಡಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ನೌಕರರು ಒಪಿಎಸ್‌ಗೆ ಮರಳಲು ಏಕೆ ಒತ್ತಾಯಿಸುತ್ತಿದ್ದಾರೆ?: ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರೆಲ್ಲರೂ ಹಳೆಯ ಪಿಂಚಣಿ ಯೋಜನೆಗೆ ಮರಳಲು ಒತ್ತಾಯಿಸುತ್ತಿದ್ದಾರೆ. ಈ ಬೇಡಿಕೆ ಬಗ್ಗೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆ ಹಲವಾರು ರಾಜ್ಯ ಸರ್ಕಾರಗಳು ಹಳೆಯ ಪಿಂಚಣಿ ಯೋಜನೆಗೆ ಹಿಂತಿರುಗುವುದಾಗಿ ಘೋಷಣೆ ಮಾಡಿವೆ. ಪ್ರತಿಪಕ್ಷದ ಆಡಳಿತವಿರುವ ರಾಜ್ಯಗಳಾದ ರಾಜಸ್ಥಾನ ಮತ್ತು ಛತ್ತೀಸ್‌ಗಢ ಈಗಾಗಲೇ ಅಸ್ತಿತ್ವದಲ್ಲಿರುವ ಎಲ್ಲಾ ಸರ್ಕಾರಿ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ಯೋಜನೆಗೆ ಹಿಂಪಡೆಯುವ ನಿರ್ಧಾರವನ್ನು ಪ್ರಕಟಿಸಿವೆ.
ಗುಜರಾತ್ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ, ಎರಡು ವಿರೋಧ ಪಕ್ಷಗಳು ಅಂದ್ರೆ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವು ಬಿಜೆಪಿ ಸರ್ಕಾರದ ವಿರುದ್ಧ ಚುನಾವಣಾ ಪ್ಲಾನ್‌ನಂತೆ ಹಳೆಯ ಪಿಂಚಣಿ ಯೋಜನೆಯನ್ನು ಹಿಂದಿರುಗಿಸುವ ಭರವಸೆ ನೀಡಿದ್ದವು. ಲಾಭ ಪಡೆಯಲು ಈ ವಿಚಾರವನ್ನು ಮುನ್ನೆಲೆಗೆ ತಂದಿದ್ದವು. ಹಿಮಾಚಲ ಪ್ರದೇಶದಲ್ಲಿಯೂ ಹಳೆಯ ಪಿಂಚಣಿ ಯೋಜನೆ ಮರುಜಾರಿಗೊಳಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿತ್ತು.
ಎನ್ಪಿಎಸ್ಗೆ ಹೂಡಿಕೆ ಸುರಕ್ಷಿತವೇ?: ಪಿಎಫ್‌ಆರ್‌ಡಿಎ ಅನುಮೋದಿತ ವೃತ್ತಿಪರ ಫಂಡ್ ಮ್ಯಾನೇಜರ್‌ಗಳು ಭವಿಷ್ಯದಲ್ಲಿ ಸಾಕಷ್ಟು ಆದಾಯವನ್ನು ಪಡೆಯಲು ವಿಫಲವಾದರೆ ತಮ್ಮ ಜೀವಿತಾವಧಿಯ ಉಳಿತಾಯಕ್ಕೆ ಅಪಾಯವಿದೆ ಎಂಬ ಭಾವನೆ ಸರ್ಕಾರಿ ನೌಕರರಲ್ಲಿ ಇದೆ. ಇರುವುದರಿಂದ ಹಳೆಯ ಪಿಂಚಣಿ ಯೋಜನೆ ಮತ್ತೆ ಜಾರಿಗೊಳಿಸುವ ಬೇಡಿಕೆ ವಿಚಾರ ಮುನ್ನೆಲೆಗೆ ಬಂದಿದೆ.
ಅದಾನಿ ಸಮೂಹದ ಷೇರುಗಳ ಕುಸಿತವು ಹೆಚ್ಚಿಸಿದ ಆತಂಕ: ನ್ಯೂಯಾರ್ಕ್ ಮೂಲದ ಕಿರು-ಮಾರಾಟಗಾರ ಹಿಂಡೆನ್‌ಬರ್ಗ್ ವರದಿಯ ನಂತರ ಅದಾನಿ ಗ್ರೂಪ್ ಕಂಪನಿಗಳ ಷೇರು ಬೆಲೆಗಳ ಕುಸಿತದೊಂದಿಗೆ ಈ ಕಳವಳ ಮತ್ತಷ್ಟು ಉಲ್ಬಣಗೊಂಡಿದೆ. ಅದಾನಿ ಸಮೂಹ ಕಂಪನಿಗಳ ಕಾರ್ಯಚಟುವಟಿಕೆಗಳ ಕುರಿತು ಹಿಂಡೆನ್‌ಬರ್ಗ್ ರಿಸರ್ಚ್ ವರದಿಯನ್ನು ಬಿಡುಗಡೆ ಮಾಡಿದ ನಂತರ, ಅದಾನಿ ಕಂಪನಿಯ ಷೇರುಗಳು ಮಾರುಕಟ್ಟೆ ಮೌಲ್ಯಕ್ಕಿಂತ ಅರ್ಧದಷ್ಟು ಕುಸಿತ ಕಂಡಿವೆ. ಜನವರಿ 24ರಂದು 19 ಲಕ್ಷ ಕೋಟಿ ರೂ.ಗಳಿಂದ ಶುಕ್ರವಾರ (ಫೆಬ್ರವರಿ 10, 2023) ಸುಮಾರು 9.5 ಲಕ್ಷ ಕೋಟಿ ರೂ. ಕುಸಿದಿದೆ.
ಅದಾನಿ ಸಮೂಹದ ಕಂಪನಿಗಳ ಮಾರುಕಟ್ಟೆ ಮೌಲ್ಯಮಾಪನದಲ್ಲಿನ ಭಾರೀ ಕುಸಿತವಾಗಿರುವ ಹಿನ್ನೆಲೆಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಹಿಂಪಡೆಯಲು ಪ್ರೇರೇಪಿಸಿತು. ತಮ್ಮ ಸರ್ಕಾರವು ರಾಜ್ಯ ಸರ್ಕಾರಿ ನೌಕರರ ಭವಿಷ್ಯವನ್ನು ಷೇರು ಮಾರುಕಟ್ಟೆಯತ್ತ ಬಿಡುವುದಿಲ್ಲ ಎಂದು ಗೆಹ್ಲೋಟ್ ಶನಿವಾರ ಹೇಳಿದ್ದಾರೆ.
ಈಗ ಕೇಂದ್ರ ಮತ್ತು ರಾಜ್ಯಗಳೆರಡರಲ್ಲೂ ನೀತಿ ನಿರೂಪಕರ ಮುಂದಿರುವ ಸವಾಲೆಂದರೆ, ಹೆಚ್ಚುತ್ತಿರುವ ಆರ್ಥಿಕ ಒತ್ತಡವನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಳಿ ಲಭ್ಯವಿರುವ ಸಂಪನ್ಮೂಲಗಳೊಂದಿಗೆ ಸರ್ಕಾರಿ ನೌಕರರ ಭವಿಷ್ಯವನ್ನು ಭದ್ರಪಡಿಸುವ ಹಿನ್ನೆಲೆಯಲ್ಲಿ ಪಿಂಚಣಿ ಬಿಲ್ ಜಾರಿಗೊಳಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ಉತ್ಪಾದನೆ- ಕೌಶಲ್ಯಗಳ ಪ್ರದರ್ಶನಕ್ಕೆ ಏರೋ ಇಂಡಿಯಾ ಉತ್ತಮ ವೇದಿಕೆ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್