ETV Bharat / business

ಅದಾನಿ ಬಳಿಕ, ಟಿಂಗೊ ಇಂಕ್ ವಿರುದ್ಧ ಗಂಭೀರ ಆರೋಪ ಮಾಡಿದ ಹಿಂಡೆನ್‌ಬರ್ಗ್‌.. ಟಿಂಗೋ ಷೇರುಗಳು ಪಾತಾಳಕ್ಕೆ!

ಅಮೆರಿಕ ಮೂಲದ ಶಾರ್ಟ್ ಸೆಲ್ಲರ್ ಆಫ್ರಿಕನ್ ವ್ಯಾಪಾರ ಸಮೂಹವು ತನ್ನ ಹಣಕಾಸುಗಳನ್ನು ಕುಶಲತೆಯಿಂದ ನಿರ್ವಹಿಸಿ, ಅಸಾಧಾರಣವಾದ ಹಗರಣಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹಿಂಡನ್​ ಬರ್ಗ್​ ಈ ವರದಿ ಬಳಿಕ ಟಿಂಗೋ ಕಂಪನಿ ಷೇರುಗಳು ಭಾರಿ ಕುಸಿತ ಕಂಡಿವೆ.

author img

By

Published : Jun 8, 2023, 8:51 AM IST

Explained: Hindenburg's accusations against African business group Tingo Inc
ಅದಾನಿ ಬಳಿಕ, ಟಿಂಗೊ ಇಂಕ್ ವಿರುದ್ಧ ಗಂಭೀರ ಆರೋಪ ಮಾಡಿದ ಹಿಂಡೆನ್‌ಬರ್ಗ್‌.. ಟಿಂಗೋ ಷೇರುಗಳು ಪಾತಾಳಕ್ಕೆ!

ಹೈದರಾಬಾದ್: ಭಾರತದ ಶ್ರೀಮಂತ ಉದ್ಯಮಿ ಗೌತಮ್ ಅದಾನಿ ನೇತೃತ್ವದ ಸಮೂಹ ಕಂಪನಿಗಳ ಷೇರುಗಳ ಮಹಾ ಕುಸಿತಕ್ಕೆ ಕಾರಣವಾಗಿದ್ದ ಅಮೆರಿಕ ಮೂಲದ ಕಿರು ಮಾರಾಟಗಾರ ಹಿಂಡೆನ್‌ಬರ್ಗ್ ರಿಸರ್ಚ್ ಈಗ ಆಫ್ರಿಕನ್ ವ್ಯಾಪಾರ ಸಾಮ್ರಾಜ್ಯವೊಂದು ಕಾನೂನು ಬದ್ಧವಲ್ಲದ ಹಣಕಾಸುಗಳನ್ನು ನಿರ್ಮಿಸುತ್ತಿದೆ ಎಂದು ಆರೋಪಿಸಿದೆ, ಇದು ಅಸಾಧಾರಣವಾದ ಸ್ಪಷ್ಟ ಹಗರಣ ಎಂದು ಬಣ್ಣಿಸಿದೆ. ಈ ಮೂಲಕ ಮತ್ತೊಂದು ಬಾಂಬ್​ ಸಿಡಿಸಿ ಚರ್ಚೆಗೆ ಕಾರಣವಾಗಿದೆ.

ETV ಭಾರತ್‌ಗೆ ಲಭ್ಯವಾಗಿರುವ ಸಂಶೋಧನಾ ವರದಿಯಲ್ಲಿ, ಹಿಂಡೆನ್‌ಬರ್ಗ್ ರಿಸರ್ಚ್ ನ್ಯೂಜೆರ್ಸಿಯ ಪ್ರಧಾನ ಕಚೇರಿಯ ಟಿಂಗೊ ಗ್ರೂಪ್ ಆರ್ಥಿಕ ವಂಚನೆ ಮಾಡಿದೆ. ಇದಕ್ಕಾಗಿ ಅದು ನಕಲಿ ರೈತರು, ಹಣಕಾಸು ಮತ್ತು ಫೋನ್‌ಗಳನ್ನು ಬಳಸುತ್ತಿದೆ ಎಂದು ಆರೋಪಿಸಿದೆ. ಇದು ಕಂಪನಿಯ ಷೇರು ಬೆಲೆಗಳಲ್ಲಿ ಅಲ್ಪ ಇಳಿಕೆಗೆ ಕೂಡಾ ಕಾರಣವಾಗಿದೆ.

ಹಿಂಡೆನ್​ಬರ್ಗ್​ ಮಾಡಿರುವ ಆರೋಪಗಳ ಪರಿಣಾಮವಾಗಿ, NASDAQ ಸ್ಟಾಕ್ ಎಕ್ಸೆಂಜ್​ನಲ್ಲಿ ಪಟ್ಟಿ ಮಾಡಲಾದ Tingo Group Inc ನ ಷೇರು ಬೆಲೆಯು ಶೇ 16% ಕ್ಕಿಂತ ಹೆಚ್ಚು ಕುಸಿತ ದಾಖಲಿಸಿದೆ. ವರದಿ ಪ್ರಕಾರ, Tingo ಗ್ರೂಪ್ ಪ್ರಾಥಮಿಕವಾಗಿ ನೈಜೀರಿಯಾದಲ್ಲಿರುವ ರೈತರಿಗೆ ಮೊಬೈಲ್ ಫೋನ್‌ಗಳು, ಆಹಾರ ಸಂಸ್ಕರಣೆ ಮತ್ತು ಆನ್‌ಲೈನ್ ಆಹಾರ ಮಾರುಕಟ್ಟೆಯನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸಿ ಹಲವಾರು ವ್ಯಾಪಾರ ವಿಭಾಗಗಳನ್ನು ಹೊಂದಿದೆ ಎಂದು ಹೇಳಿಕೊಂಡಿದೆ.

ಡೋಜಿ ಎಂಮೊಬುಸಿಯ ನೇತೃತ್ವದಲ್ಲಿ ಟಿಂಗೋ ಕಂಪನಿ ಸ್ಥಾಪಿಸಲಾಯಿತು. ಇದು ಆಫ್ರಿಕಾದ ಬಿಲೆನಿಯರ್​ ಕಂಪನಿಯಾಗಿದೆ. ಕೃಷಿ ಹಿಡುವಳಿಯ ಪ್ರಮುಖ ಕಂಪನಿಯಾಗಿರುವ ಇದು, ಈ ವರ್ಷದ ಆರಂಭದಲ್ಲಿ ಪ್ರೀಮಿಯರ್ ಲೀಗ್ ಸಾಕರ್ ತಂಡವಾಗಿರುವ ಶೆಫೀಲ್ಡ್ ಯುನೈಟೆಡ್ ಅನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸಿದಾಗ ದೊಡ್ಡ ಸಂಚಲನ ಸೃಷ್ಟಿ ಮಾಡಿತ್ತು.

ಅದಾದ ಬಳಿಕ ಈ ಕಂಪನಿ ವ್ಯವಹಾರಗಳ ವಿಶ್ವಕ್ಕೆ ಪರಿಚಯವಾಗಿತ್ತು. ಈ ಬಗ್ಗೆ ವರದಿ ಮಾಡಿರುವ ಹಿಂಡೆನ್​ಬರ್ಗ್​, "ನಾವು ಡೋಜಿಯ ಹಿನ್ನೆಲೆಯೊಂದಿಗೆ ಅವರ ಪ್ರಮುಖ ಕಾನೂನುಬದ್ದವಲ್ಲದ ವ್ಯವಹಾರಗಳನ್ನು ಗುರುತಿಸಿದ್ದೇವೆ. ಆರಂಭಿಕವಾಗಿ ನೈಜೀರಿಯಾದಲ್ಲಿ ಮೊದಲ ಮೊಬೈಲ್ ಪಾವತಿ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ ಮೂಲ ವ್ಯಕ್ತಿಯನ್ನು ಸಂಪರ್ಕಿಸಿ, ಅವರಿಂದ ಖಚಿತ ಪಡಿಸಿಕೊಂಡಿದ್ದೇವೆ. ಅಪ್ಲಿಕೇಶನ್‌ನ ನಿಜವಾದ ಸೃಷ್ಟಿಕರ್ತನನ್ನು ಸಂಪರ್ಕಿಸಿದ್ದೇವೆ. ಅವರಿಂದ ಡೋಜಿ ಅವರ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಈ ಆ್ಯಪ್​​​ ಬಗ್ಗೆ ಡೋಜಿ ಹೇಳುತ್ತಿರುವುದು ಸುಳ್ಳು ಎಂಬುದನ್ನ ಅವರು ಮೂಲ ಸೃಷ್ಟಿಕರ್ತರು ನಮಗೆ ಹೇಳಿದ್ದಾರೆ ಎಂದು ಹಿಂಡೆಬರ್ಗ್ ರಿಸರ್ಚ್ ETV ಭಾರತ್‌ಗೆ ಕಳುಹಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.

ವರದಿ ಹೇಳುತ್ತಿರುವುದು ಏನು?: ವರದಿಯ ಪ್ರಕಾರ 2007 ರಲ್ಲಿ ಮಲೇಷಿಯಾದ ವಿಶ್ವವಿದ್ಯಾನಿಲಯದಿಂದ ಗ್ರಾಮೀಣ ಪ್ರಗತಿ ವಿಷಯದಲ್ಲಿ ಪಿಎಚ್‌ಡಿ ಪಡೆದಿದ್ದೇನೆ ಎಂದು ಡೋಜಿ ಹೇಳಿಕೊಂಡಿದ್ದಾರೆ. ಸಂಶೋಧನಾ ವರದಿಯು ಟಿಂಗೊ ಗ್ರೂಪ್‌ನ ಸಿಇಒ ಡೋಜಿ ಎಂಮೊಬುಸಿಯ ಮೇಲೆ ವಿಶೇಷವಾಗಿ ಆಸಕ್ತಿ ವಹಿಸಿ ತನಿಖೆ ನಡೆಸಿದೆ. ಅಷ್ಟೇ ಅಲ್ಲ ಅವರು ಆ ವಿಶ್ವವಿದ್ಯಾಲಯದ ಪದವಿ ಪಡೆದಿರುವ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದೆ.

“ನಾವು ಡೋಜಿ ಅವರ ಪದವಿಯನ್ನು ಪರಿಶೀಲಿಸಲು ಶಾಲೆಯನ್ನು ಸಂಪರ್ಕಿಸಿದ್ದೇವೆ. ಪರಿಶೀಲನೆ ವೇಳೆ ಅವರ ಹೆಸರಿನ ಯಾರೂ ಕಂಡುಬಂದಿಲ್ಲ ಎಂದು ಶಾಲಾ ಆಡಳಿತ ಮಂಡಳಿಯಿಂದ ಉತ್ತರ ಬಂದಿದೆ. ಸಂಶೋಧನಾ ವರದಿಯ ಪ್ರಕಾರ, ನೈಜೀರಿಯಾದ ಆರ್ಥಿಕ ಮತ್ತು ಹಣಕಾಸು ಅಪರಾಧಗಳ ಆಯೋಗ ಹೇಳುವಂತೆ, ಡೋಜಿಯನ್ನು 2017 ರಲ್ಲಿ ಬಂಧಿಸಲಾಯಿತು ಮತ್ತು ನಕಲಿ ಚಕ್​ ನೀಡಿದ್ದಕ್ಕಾಗಿ ಅವರ ಮೇಲೆ ದೋಷಾರೋಪವನ್ನ ಕೂಡಾ ಹೊರಿಸಲಾಗಿತ್ತು. ಆದರೆ ಅ ಬಳಿಕ ಅವರು ಮಧ್ಯಸ್ಥಿಕೆಯಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಿ ಕೊಂಡಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ

ಆಹಾರ ವಿಭಾಗದಿಂದ $577 ಮಿಲಿಯನ್ ಆದಾಯ: ಕೇವಲ 7 ತಿಂಗಳಲ್ಲಿ ಆಹಾರ ವಿಭಾಗವು $577 ಮಿಲಿಯನ್ ಆದಾಯವನ್ನು ಗಳಿಸಿದೆ. ಇದು ಕಂಪನಿಯ ಒಟ್ಟು ಆದಾಯದ ಶೇ 68 ಅನ್ನು ಪ್ರತಿನಿಧಿಸುತ್ತದೆ ಎಂಬುದನ್ನು ವರದಿಯಲ್ಲಿ ಹೇಳಲಾಗಿದೆ. NASDAQ ಪಟ್ಟಿ ಮಾಡಲಾದ Tingo ಗ್ರೂಪ್‌ನ ಹಣಕಾಸು ವ್ಯವಹಾರಗಳನ್ನ ಹಿಂಡೆನ್‌ಬರ್ಗ್ ರಿಸರ್ಚ್ ಪ್ರಶ್ನಿಸಿದೆ.

ಸಂಸ್ಕರಣಾ ಸೌಲಭ್ಯವಿಲ್ಲದ ಆಹಾರ ವ್ಯಾಪಾರ!: ಇನ್ನೂ ಆಶ್ಚರ್ಯದ ಸಂಗತಿಯೆಂದರೆ, ಕಂಪನಿಯು ತನ್ನದೇ ಆದ ಆಹಾರ ಸಂಸ್ಕರಣಾ ಸೌಲಭ್ಯವನ್ನು ಹೊಂದಿಲ್ಲ. ಬದಲಾಗಿ, ನೈಜೀರಿಯಾದ ರೈತರು ಮತ್ತು ಹೆಸರಿಸದ ಮೂರನೇ ವ್ಯಕ್ತಿಯ ಆಹಾರ ಸಂಸ್ಕರಣದ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುವುದರಿಂದ ಅದರ ಸ್ಫೋಟಕ ಆದಾಯ ಮತ್ತು ಲಾಭದಾಯಕತೆ ಪಡೆಯಲಾಗಿದೆ ಎಂಬ ಅಂಶವನ್ನು ವರದಿಯಲ್ಲಿ ಹೇಳಲಾಗಿದೆ.

ಫೆಬ್ರವರಿ 2023 ರಲ್ಲಿ, ಕಂಪನಿಯು $ 1.6 ಶತಕೋಟಿ ವ್ಯವಹಾರ ನೈಜೀರಿಯನ್ ಆಹಾರ ಸಂಸ್ಕರಣಾ ಘಟಕಕ್ಕೆ ಅಡಿಪಾಯ ಹಾಕಿತ್ತು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಸಮಾರಂಭದಲ್ಲಿ ದೇಶದ ಕೃಷಿ ಸಚಿವರು ಮತ್ತು ಇತರ ರಾಜಕೀಯ ಗಣ್ಯರು ಭಾಗವಹಿಸಿದ್ದರು.

ಅದಾನಿ ಗ್ರೂಪ್ ಕುರಿತು ಹಿಂಡೆನ್‌ಬರ್ಗ್ ವರದಿ: ಈ ವರ್ಷದ ಜನವರಿಯಲ್ಲಿ, ಹಿಂಡೆನ್‌ಬರ್ಗ್ ಗ್ರೂಪ್ ಗೌತಮ್ ಅದಾನಿ ನೇತೃತ್ವದ ವ್ಯಾಪಾರ ಸಮೂಹದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿತ್ತು. ಇದು ಅದಾನಿ ಗ್ರೂಪ್ ನ ಷೇರುಗಳು ನೆಲ ಕಚ್ಚುವಂತೆ ಮಾಡಿತ್ತು.

ಇದನ್ನು ಓದಿ: ಟ್ವಿಟರ್​​ ಸಿಇಒ ಆಗಿ ಅಧಿಕಾರ ವಹಿಸಿಕೊಂಡ ಲಿಂಡಾ: ಪ್ರಮುಖ ಸ್ಥಾನಕ್ಕೆ ಹಳೆಯ ಸಂಸ್ಥೆಯ ಸಹಚರನ ನೇಮಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.