ETV Bharat / business

ಬಳಸಿದಷ್ಟು ಹಣ ಪಾವತಿಸಿ.. ಹೊಸ ವಾಹನ ಪಾಲಿಸಿಯ ಲಾಭಗಳೆಷ್ಟು ಗೊತ್ತೇ? - ವಾಹನ ವಿಮೆಯಲ್ಲಿ ಕ್ರಾಂತಿಕಾರಿ ಪಾಲಿಸಿ

ನೀವು ಬಳಸಿದಷ್ಟು ಹಣ ಪಾವತಿಸಿ(Pay as you consume) ಪಾಲಿಸಿ ಇತ್ತೀಚಿನ ದಿನಗಳಲ್ಲಿ ವಾಹನ ವಿಮೆಯಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆ ತಂದಿದೆ. ಈ ವಿಧಾನವನ್ನು ಈಗಾಗಲೇ ಅನೇಕ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಈ ವಿಮೆಯನ್ನು ದೇಶದಲ್ಲೂ ಇತ್ತೀಚೆಗೆ ಪರಿಚಯಿಸಿದೆ.

pay-as-you-consume-motor-insurance
ಹೊಸ ವಾಹನ ಪಾಲಿಸಿಯ ಲಾಭಗಳೆಷ್ಟು ಗೊತ್ತೇ?
author img

By

Published : Oct 10, 2022, 12:55 PM IST

ಹೈದರಾಬಾದ್: ಎಲ್ಲರಿಗೂ ಒಂದೇ ಪಾಲಿಸಿ ನಿಯಮ ತುಂಬಾ ಹಳೆಯದು. ಇದನ್ನೀಗ ಯಾರೂ ಹೆಚ್ಚಾಗಿ ಇಷ್ಟಪಡುವುದಿಲ್ಲ. ಬದಲಾದ ಪರಿಸ್ಥಿತಿಗಳಿಗೆ ತಕ್ಕಂತೆ ವಿಮೆ ಪಾಲಿಸಿಯೂ ಕೂಡ ಬದಲಾಗಿದೆ. ವಾಹನ ವಿಮೆ ದುಬಾರಿಯಾಗಿದ್ದು, ಅದನ್ನು ಬಳಕೆದಾರರ ಸ್ನೇಹಿಯಾಗಿ ಬದಲಿಸುವ ಒತ್ತಾಯ ಕೇಳಿಬಂದಿತ್ತು.

ಸಾಮಾನ್ಯ ವಿಮಾದಾರರು ತಮ್ಮ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪಾಲಿಸಿದಾರರಿಗೆ ನಿರ್ದಿಷ್ಟವಾಗಿ ಪಾಲಿಸಿಗಳನ್ನು ನೀಡಲು ಪೈಪೋಟಿಯಲ್ಲಿದ್ದಾರೆ. ತಮ್ಮ ಗ್ರಾಹಕರಿಗೆ ಯಾವುದೇ ತೊಂದರೆಗಳಿಲ್ಲದೆ ಪಾಲಿಸಿಗಳನ್ನು ಒದಗಿಸಲು ನಾ ಮುಂದು ತಾ ಮುಂದು ಎಂದು ಬರುತ್ತಾರೆ. ಪಾಲಿಸಿದಾರರು ಯಾವಾಗಲೂ ಸರಳ ಮತ್ತು ಉತ್ತಮ ವಿಮೆಯನ್ನು ಬಯಸುವುದರಿಂದ ಅಂತಹ ಸೇವೆಗಳನ್ನು ಒದಗಿಸಲು ಕಂಪನಿಗಳು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿಮೆ ನೀಡುತ್ತವೆ.

ಗ್ರಾಹಕರ ಮೆಚ್ಚಿನ ಪಿಎವೈಸಿ ವಿಮೆ: ಗ್ರಾಹಕರು ವಾಹನ ಪಾಲಿಸಿಯನ್ನು ತೆಗೆದುಕೊಳ್ಳುವಾಗ ಹೆಚ್ಚು ಹಣವನ್ನು ಖರ್ಚು ಮಾಡಲು ಬಯಸುವುದಿಲ್ಲ. ಹಾಗಾಗಿ ವಿಮಾ ಕಂಪನಿಗಳೂ ಕೂಡ ಜನರ ಮನಸ್ಥಿತಿಗೆ ತಕ್ಕಂತೆಯೇ ಪಾಲಿಸಿಗಳನ್ನು ಹೊರತರುತ್ತಿವೆ.

ಅದರಲ್ಲಿ ಒಂದಾದ ನೀವು ಬಳಸಿದಷ್ಟು ಹಣ ಪಾವತಿಸಿ(Pay as you consume) ಪಾಲಿಸಿ ಇತ್ತೀಚಿನ ದಿನಗಳಲ್ಲಿ ವಾಹನ ವಿಮೆಯಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆ ತಂದಿದೆ. ಈ ವಿಧಾನವನ್ನು ಈಗಾಗಲೇ ಅನೇಕ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಈ ವಿಮೆಯನ್ನು ದೇಶದಲ್ಲೂ ಇತ್ತೀಚೆಗೆ ಪರಿಚಯಿಸಿದೆ.

ಗ್ರಾಹಕರು ವಾಹನವನ್ನು ಬಳಸಿದಷ್ಟು ಮಾತ್ರ ವಿಮೆ ಹಣ ಕಟ್ಟಬೇಕು. ಇದು ಮೋಟಾರು ವಿಮಾ ಪಾಲಿಸಿಯ ಅಡಿಯಲ್ಲಿ ಬರುವ ಆಡ್ ಆನ್ ಕವರ್​ನಂತೆಯೇ ಪಾಲಿಸಿಯಾಗಿದೆ. ಪಾಲಿಸಿದಾರನಿಗೆ ತನ್ನ ವಾಹನವನ್ನು ಬಳಕೆಯ ಆಧಾರದ ಮೇಲೆ ಕವರೇಜ್ ಆಯ್ಕೆ ಮಾಡುವ ಅವಕಾಶ ನೀಡುತ್ತದೆ. ಪಾವತಿಸಿದ ಪ್ರೀಮಿಯಂ ಪ್ರಯಾಣದ ದೂರವನ್ನು ಅವಲಂಬಿಸಿರುತ್ತದೆ. ಅಷ್ಟೇ ಮೊತ್ತದ ಕವರೇಜ್ ಅನ್ನು ಆಯ್ಕೆ ಮಾಡಲಾಗುತ್ತದೆ. ವಿಮಾ ಕಂಪನಿಯು ನೀಡುವ ವಿವಿಧ ಸ್ಲ್ಯಾಬ್‌ಗಳಿಂದ ಹಣದ ಮೊತ್ತವನ್ನು ಬಳಕೆದಾರ ಪಾವತಿಸಬಹುದು. ಆದರೆ, ಈ ಪಾಲಿಸಿಗಳು ವಿಮಾದಾರರಿಂದ ವಿಮಾದಾರರಿಗೆ ವ್ಯತ್ಯಾಸವಿರುತ್ತವೆ.

ನಿಗದಿತ ಪಾಲಿಸಿಗಿಂತ ಹೆಚ್ಚು ಬಳಸಿದರೆ?: ನಾವು ಪೂರ್ವನಿರ್ಧರಿತ ಬಳಕೆಯ ಪಾಲಿಸಿಯ ಮಿತಿಯನ್ನು ಮೀರಿದರೆ ಏನು ಮಾಡಬೇಕು ಎಂಬ ಪ್ರಶ್ನೆ ಮೂಡಿದಲ್ಲಿ ಅದಕ್ಕೂ ಉತ್ತರವಿದೆ. ಈ ರೀತಿಯ ಪಾಲಿಸಿಯಲ್ಲಿ ಇನ್ನೊಂದು ಹೆಚ್ಚುವರಿ ಕಾಲಮ್‌ ಅನ್ನು ಭರ್ತಿ ಮಾಡಿ ಪಾಲಿಸಿಯ ಟಾಪ್ ಅಪ್ ಮಾಡುವ ಮೂಲಕ ವಿಮಾ ರಕ್ಷಣೆಯನ್ನು ಮುಂದುವರಿಸಬಹುದು.

ಸಾಮಾನ್ಯವಾಗಿ ವಾಹನ ವಿಮಾ ಪ್ರೀಮಿಯಂ ಅನ್ನು ವಾಹನದ ಮಾದರಿ ಮತ್ತು ಆಯಸ್ಸಿನ ಮೇಲೆ ನಿರ್ಧರಿಸಲಾಗುತ್ತದೆ. ಪಿಎವೈಸಿಯಲ್ಲಿ ಇವುಗಳನ್ನು ಹೊರತುಪಡಿಸಿ ನೀವು ಎಷ್ಟು ದೂರ ಪ್ರಯಾಣಿಸುತ್ತೀರಿ ಎಂಬುದನ್ನು ನೋಡಿ ಪ್ರೀಮಿಯಂ ನಿರ್ಧಾರವಾಗುತ್ತದೆ. ನಿಮಗೆ ಎಷ್ಟು ಪ್ರಮಾಣದ ಪ್ರೀಮಿಯಂ ಮಾಡಿಸಬೇಕು ಎಂಬ ಆಯ್ಕೆಯ ಇದರಲ್ಲಿದೆ.

ಬಳಕೆ ಪತ್ತೆ ಹೇಗೆ?: ಕ್ರಮಿಸಿದ ದೂರದ ಮೇಲೆ ಪ್ರೀಮಿಯಂ ಪಾಲಿಸಿ ಕಟ್ಟುವ ಈ ವಿಧಾನವನ್ನು ವಾಹನ ಎಷ್ಟು ದೂರ ಸಾಗಿದೆ ಎಂಬುದನ್ನು ಪತ್ತೆ ಮಾಡುವುದು ಹೇಗೆ ಎಂಬ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ. ಹೀಗಾಗಿ ಈ ಪಾಲಿಸಿ ಪಡೆಯುವ ಗ್ರಾಹಕರು PAYC ವ್ಯವಸ್ಥೆಯಲ್ಲಿ ಟೆಲಿಮ್ಯಾಟಿಕ್ಸ್ ಸಾಧನವನ್ನು ವಾಹನದಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ.

ಇದು ವಾಹನ ಪ್ರಯಾಣಿಸುವ ದೂರವನ್ನು ನಿರಂತರವಾಗಿ ಲೆಕ್ಕ ಹಾಕುತ್ತದೆ. ಇಷ್ಟಲ್ಲದೇ, ಈ ತಂತ್ರಜ್ಞಾನ ಚಾಲಕರ ನಡವಳಿಕೆ ಅಂದರೆ, ವೇಗ, ವಿರಾಮ ಮತ್ತು ಡ್ರೈವಿಂಗ್ ರೀತಿಯನ್ನೂ ಕೂಡ ಅದು ದಾಖಲು ಮಾಡುತ್ತದೆ. ಈ ಎಲ್ಲ ಮಾಹಿತಿಯನ್ನು ವಿಶ್ಲೇಷಿಸಲು ಪಾಲಿಸಿ ಕಂಪನಿ ವಿಶೇಷ ಅಪ್ಲಿಕೇಶನ್‌ಗಳಿಂದ ತಿಳಿಯುತ್ತಾರೆ. ಪಾಲಿಸಿದಾರ ವಾಹನವನ್ನು ಉತ್ತಮವಾಗಿ ನಡೆಸಿಕೊಂಡಲ್ಲಿ ಅವರಿಗೆ ಪ್ರೀಮಿಯಂನಲ್ಲಿ ರಿಯಾಯಿತಿಗಳು ಕೂಡ ಸಿಗುತ್ತವೆ.

ಎಂಥವರಿಗೆ ಈ ಪಾಲಿಸಿ ಒಳ್ಳೆಯದು: PAYC ಪಾಲಿಸಿಗಳು ದೂರದ ಪ್ರಯಾಣದ ಮಾಡುವ ಅತಿ ಹೆಚ್ಚು ಬಳಕೆ ಮಾಡುವ ಜನರಿಗೆ ಇಂತಹ ಪಾಲಿಸಿಗಳು ಉತ್ತಮ ಆಯ್ಕೆ. ಒಂದಕ್ಕಿಂತ ಹೆಚ್ಚು ವಾಹನಗಳನ್ನು ಹೊಂದಿರುವವರೂ ಕೂಡ ಈ ಸೌಲಭ್ಯವನ್ನು ಪಡೆಯಬಹುದು. ಸ್ವಂತ ವಾಹನವನ್ನು ಮಿತವಾಗಿ ಬಳಸುವವರೂ ಈ ರೀತಿಯ ಪಾಲಿಸಿಯನ್ನು ಪರಿಗಣಿಸಬಹುದು. ವಾಹನವನ್ನು ಎಷ್ಟು ಪ್ರಮಾಣದಲ್ಲಿ ಬಳಕೆ ಮಾಡುತ್ತೀರಿ ಎಂಬುದರ ಮೇಲೆ ಈ ಪಾಲಿಸಿ ಆಯ್ಕೆಯ ಮಾಡಿಕೊಳ್ಳಬೇಕು ಎಂದು ಬಜಾಜ್ ಅಲಿಯಾನ್ಸ್ ಜನರಲ್ ಇನ್ಶೂರೆನ್ಸ್‌ನ ಮುಖ್ಯ ವಿತರಣಾ ಅಧಿಕಾರಿ ಆದಿತ್ಯ ಶರ್ಮಾ ತಿಳಿಸುತ್ತಾರೆ.

ಓದಿ: ಕಸದಿಂದ ರಸ.. ಬಳಸಿ ಬಿಸಾಡಿದ ಮೀನುಗಾರಿಕಾ ಬಲೆಯಿಂದ ಫೋನ್ ತಯಾರಿಸಿದ ಸ್ಯಾಮ್ಸಂಗ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.