ETV Bharat / business

ಬಡ್ಡಿದರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡ ಯುರೋಪಿಯನ್​ ಸೆಂಟ್ರಲ್​ ಬ್ಯಾಂಕ್​​

ಅಮೆರಿಕದ ಹಣಕಾಸು ನೀತಿ ಗುರುವಾರವಷ್ಟೇ ಬಿಡುಗಡೆಗೊಂಡಿದೆ. ಅದರ ಬೆನ್ನಲ್ಲೇ ಯುರೋಪಿಯನ್​ ಸೆಂಟ್ರಲ್​ ಬ್ಯಾಂಕ್​​ ಇಸಿಬಿ ಕೂಡಾ ತನ್ನ ಹಣಕಾಸು ನೀತಿ ಪ್ರಕಟಿಸಿದ್ದು, ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲೇ ಮುಂದುವರೆಸಿದೆ.

European Central Bank holds rates steady
ಬಡ್ಡಿದರದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡ ಯುರೋಪಿಯನ್​ ಸೆಂಟ್ರಲ್​ ಬ್ಯಾಂಕ್​​
author img

By ETV Bharat Karnataka Team

Published : Dec 15, 2023, 8:03 AM IST

ಫ್ರಾಂಕ್‌ಫರ್ಟ್: ಯುರೋಪಿಯನ್ ಸೆಂಟ್ರಲ್ ಬ್ಯಾಂಕ್- ಇಸಿಬಿ ತನ್ನ ಪ್ರಮುಖ ಬಡ್ಡಿದರಗಳಲ್ಲಿ ಯಥಾಸ್ಥಿತಿಯಲ್ಲೇ ಮುಂದುವರಿಸಲು ನಿರ್ಧರಿಸಿದೆ. ಪ್ರಮುಖ ಮರು ಹಣಕಾಸು ಕಾರ್ಯಾಚರಣೆಗಳು, ಕನಿಷ್ಠ ಸಾಲ ಸೌಲಭ್ಯ ಮತ್ತು ಠೇವಣಿ ಸೌಲಭ್ಯಗಳ ಮೇಲಿನ ಬಡ್ಡಿದರಗಳನ್ನು ಕ್ರಮವಾಗಿ ಶೇ 4.5 ಮತ್ತು ಶೇ 4.75 ರಷ್ಟು ಮತ್ತು ಶೇ 4ರಲ್ಲೇ ಮುಂದುವರೆಯುತ್ತದೆ ಎಂದು ಬ್ಯಾಂಕ್​ ಹೇಳಿದೆ ಅಂತಾ ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ಹಣದುಬ್ಬರ ಪ್ರಮಾಣ ಶೇ 2ಕ್ಕೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಯುರೋಪಿಯನ್​ ಸೆಂಟ್ರಲ್​ ಬ್ಯಾಂಕ್ ಹೇಳಿದೆ. ಪ್ರಸ್ತುತ ಮೌಲ್ಯಮಾಪನದ ಆಧಾರದ ಮೇಲೆ, ಆಡಳಿತ ಮಂಡಳಿಯು ಪ್ರಮುಖ ECB ಬಡ್ಡಿದರಗಳು ಯಥಾಸ್ಥಿತಿಯಲ್ಲಿವೆ ಎಂದು ಪರಿಗಣಿಸುತ್ತದೆ. ಇದು ಸಾಕಷ್ಟು ದೀರ್ಘಾವಧಿಯವರೆಗೆ ಹೀಗೆ ಮುಂದುವರೆಯುತ್ತದೆ ಮತ್ತು ಈ ಗುರಿಗೆ ಗಣನೀಯ ಕೊಡುಗೆ ನೀಡುತ್ತದೆ ಎಂದು ಯುರೋಪಿಯನ್​ ಸೆಂಟ್ರಲ್​ ಬ್ಯಾಂಕ್​ ಹೇಳಿದೆ.

ಸೆಪ್ಟೆಂಬರ್‌ನಲ್ಲಿ ಮಾಡಿದ ಅಂದಾಜಿಗೆ ಹೋಲಿಸಿದರೆ, ECB ಸಿಬ್ಬಂದಿ ಈಗ ಯೂರೋಜೋನ್‌ಗೆ ಹಣದುಬ್ಬರದ ನಿರೀಕ್ಷೆಗಳನ್ನು 2023 ರಲ್ಲಿ ಶೇ 5.4 ಮತ್ತು 2024 ರಲ್ಲಿಶೇ 2.1ಕ್ಕೆ ಪರಿಷ್ಕರಿಸಲಾಗಿದೆ. ಯೂರೋಜೋನ್‌ನಲ್ಲಿ ಇತ್ತೀಚಿನ ಹಣದುಬ್ಬರ ಕುಸಿತದ ಹೊರತಾಗಿಯೂ, ಇತ್ತೀಚಿನ ತಿಂಗಳುಗಳಲ್ಲಿ ಹಣದುಬ್ಬರವು ಇಳಿಮುಖವಾಗಿದೆ. ಆದರೂ ಇದು ಇಷ್ಟರಲ್ಲೇ ತಾತ್ಕಾಲಿಕವಾಗಿ ಮತ್ತೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಯುರೋಪಿಯನ್​ ಸೆಂಟ್ರಲ್​ ಬ್ಯಾಂಕ್​ ತನ್ನ ವರದಿಯಲ್ಲಿ ಎಚ್ಚರಿಕೆ ನೀಡಿದೆ.

2023 ರಲ್ಲಿ 0.6 ಶೇಕಡಾದಿಂದ 2024 ರಲ್ಲಿ 0.8 ಶೇಕಡಾಕ್ಕೆ ಯೂರೋಜೋನ್‌ನಲ್ಲಿ ಆರ್ಥಿಕ ಬೆಳವಣಿಗೆಯನ್ನು ಬ್ಯಾಂಕ್ ನಿರೀಕ್ಷಿಸುತ್ತಿದೆ. ಯೂರೋಜೋನ್‌ನಲ್ಲಿ ಹಣದುಬ್ಬರವು ನಿರೀಕ್ಷೆಗಿಂತ ವೇಗದಲ್ಲಿ ಇಳಿಮುಖವಾಗುತ್ತಿರುವುದರಿಂದ ಮತ್ತು ಬಡ್ಡಿದರಗಳು ಅಧಿಕವಾಗಿಯೇ ಇರುವುದರಿಂದ, ವ್ಯಾಪಾರಿಗಳು ಮತ್ತು ಡಾಯ್ಚ ಬ್ಯಾಂಕ್‌ನಂತಹ ಸಂಸ್ಥೆಗಳು ECB 2024ರಲ್ಲಿ ದರಗಳನ್ನು ಕಡಿತಗೊಳಿಸಬೇಕು ಎಂದು ನಿರೀಕ್ಷಿಸುತ್ತಿವೆ.

ಈ ನಡುವೆ ಅಮೆರಿಕದ ಕೇಂದ್ರ ಬ್ಯಾಂಕ್​ ಕೂಡಾ ತನ್ನ ಹಣಕಾಸು ನೀತಿ ಪ್ರಕಟಿಸಿದ್ದು, ಬಡ್ಡಿದರ ಸೇರಿದಂತೆ ಇನ್ನಿತರ ನೀತಿಗಳಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಿದೆ. ಆದರೆ, ಮುಂದಿನ ತ್ರೈಮಾಸಿಕದಲ್ಲಿ ಬಡ್ಡದರ ಕಡಿತದ ಚಿಂತನೆ ಮಾಡಬಹುದು ಎಂಬ ಸುಳಿವನ್ನು ಅದರ ಅಧ್ಯಕ್ಷರು ನೀಡಿದ್ದಾರೆ. ಹೀಗಾಗಿ ನಿನ್ನೆಯ ಷೇರುಪೇಟೆ ವ್ಯವಹಾರದಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಂಡು ಬಂದಿವೆ. ಈಗ ಯುರೋಪಿಯನ್​ ಸೆಂಟ್ರಲ್​ ಬ್ಯಾಂಕ್​ ಸಹ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಮಾಡದಿರುವುದು ಆರ್ಥಿಕತೆಗೆ ಬೂಸ್ಟ್​ ನೀಡಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನು ಓದಿ: ಶೂನ್ಯದಿಂದ ಮೇಲೇರಿದ ಸಗಟು ಮಾರಾಟದ ಹಣದುಬ್ಬರ: ಎಂಟು ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.