ETV Bharat / business

ಹಿಂಡನ್​ಬರ್ಗ್​ ವರದಿ ಬಳಿಕ ಅದಾನಿ ಸಮೂಹ ಸಂಸ್ಥೆ ಕಳೆದುಕೊಂಡ ಸಂಪತ್ತು ಎಷ್ಟು ಗೊತ್ತಾ?

ಹಿಂಡನ್​ ಬರ್ಗ್​ ವರದಿ ಬಳಿಕ ಅದಾನಿ ಷೇರುಗಳಲ್ಲಿ ಕುಸಿತ- ಕಳೆದ ಐದು ವಹಿವಾಟಿನಲ್ಲಿ ಭಾರೀ ಕುಸಿತ ಕಂಡ ಷೇರು- ಶೇ 38ರಷ್ಟು ಸಂಪತ್ತಿನ ನಷ್ಟ

ಹಿಂಡನ್​ಬರ್ಗ್​ ವರದಿ ಬಳಿಕ ಅದಾನಿ ಸಮೂಹ ಸಂಸ್ಥೆ ಕಳೆದು ಕೊಂಡ ಸಂಪತ್ತು ಎಷ್ಟು ಗೊತ್ತಾ?
do-you-know-how-much-wealth-the-adani-group-lost-after-the-hindenburg-report
author img

By

Published : Feb 2, 2023, 10:28 AM IST

Updated : Feb 2, 2023, 2:35 PM IST

ಹೈದರಾಬಾದ್​​: ಹಿಂಡನ್​ ಬರ್ಗ್​ ವರದಿ ಬಳಿಕ ದೇಶದ ಶ್ರೀಮಂತ ಉದ್ಯಮಿ ಅದಾನಿ ಒಡೆತನ ಸಂಪತ್ತಿನಲ್ಲಿ ಕುಸಿತ ಕಂಡಿದೆ. ಕಳೆದ ಐದು ವಹಿವಾಟು ಅವಧಿಯಲ್ಲಿ ಅದಾನಿ ಸಮೂಹ ಸಂಸ್ಥೆಗಳ ಷೇರುಗಳಲ್ಲಿ ಇಳಿಕೆ ಕಂಡಿದೆ. ಅವರ ಸಂಪತ್ತಿನ ಮಾರುಕಟ್ಟೆ ಬಂಡವಾಳೀಕರಣದ ರೂ. 7 ಲಕ್ಷ ಕೋಟಿಗಿಂತ ಹೆಚ್ಚು ನಷ್ಟವನ್ನು ಕಂಡಿದೆ. ಬುಧವಾರ ಷೇರು ಮಾರುಕಟ್ಟೆ ಅಂತ್ಯದ ಹೊತ್ತಿಗೆ ಅದಾನಿ ಸಮೂಹ ಸಂಸ್ಥೆಯ ಎಲ್ಲಾ ಷೇರುಗಳು ಕಡಿಮೆ ಮೌಲ್ಯಗಳನ್ನು ಹೊಂದಿರುವ ಮೂಲಕ ನಕಾರಾತ್ಮಕ ಪರಿಣಾಮ ಕಂಡಿವೆ. ಅದಾನಿ ಎಂಟರ್​​ಪ್ರೈಸಸ್​ನ ಷೇರುಗಳು ಸಾಕಷ್ಟು ನಷ್ಟ ಅನುಭವಿಸಿವೆ. ಬಿಎಸ್‌ಇಯಲ್ಲಿ ಶೇ.28.45ರಷ್ಟು ಕುಸಿತ ಕಾಣುವ ಮೂಲಕ 2,128.70 ರೂ.ಗೆ ಅಂತ್ಯ ಕಂಡಿದೆ.

ಎಫ್​​ಪಿಒ ಹಿಂಪಡೆತ: ಅದಾನಿ ಎಂಟರ್​ಪ್ರೈಸಸ್​​ ಷೇರು ವಿಕ್ರಯ ರದ್ದು (ಎಫ್​ಪಿಒ) ಅನ್ನು 20,000 ಕೋಟಿಯನ್ನು ಮಂಗಳವಾರ ಆಫರ್​ ಮಾಡಿದ್ದ ಚಂದಾದಾರಿಕೆಯನ್ನು ಬುಧವಾರ ರಾತ್ರಿ ಸಂಪೂರ್ಣವಾಗಿ ಹಿಂಪಡೆದಿದೆ. ಚಿಲ್ಲರೆ ಮಾರಾಟಗಾರರಲ್ಲದ ಹೂಡಿಕೆದಾರರು ಬಿಡ್​ ಮಾಡುವ ಮೂಲಕ ಚಂದಾದಾರಿಕೆ ನಡೆಯಿತು. ಜನವರಿ 24ರಿಂದ ಎಫ್​ಪಿಒ ಹೂಡಿಕೆ ಆರಂಭವಾಗಿತ್ತು. ಆದ್ರೆ ಕಳೆದ ಒಂದು ವಾರದಿಂದ ಷೇರು ಮಾರುಕಟ್ಟೆಯಲ್ಲಿ ಅದಾನಿ ಕಂಪನಿ ಕುಸಿತ ಕಾಣಲಾರಂಭಿಸಿದೆ.

ಗ್ರೂಪ್​ ಷೇರು ಕುಸಿತ: ಅದಾನಿ ಪೋರ್ಟ್​ ಮತ್ತು ವಿಶೇಷ ಆರ್ಥಿಕ ವಲಯ ಶೇ 19.69ಕ್ಕೆ ಕುಸಿತ ಕಂಡರೆ, ಅಂಬುಜಾ ಸಿಮೆಂಟ್​ ಶೇ 16.56ರಷ್ಟು ಮತ್ತು ಎಸಿಸಿ ಸಿಮೆಂಟ್​​ ಶೇ 6.34ರಷ್ಟು, ಅದಾನಿ ಟೋಟಲ್​ ಗ್ಯಾ ಶೇ 10ರಷ್ಟು ಇಳಿಕೆ ಕಂಡಿತು. ಜೊತೆಗೆ ಅದಾನಿ ಗ್ರೀನ್​ ಎನರ್ಜಿ 5.78ರಷ್ಟು, ಅದಾನಿ ವಿಲ್ಮರ್​ 4.99ರಷ್ಟು, ಎನ್​ಡಿಟಿವಿ ಶೇ 4.98 ರಷ್ಟು, ಅದಾನಿ ಪವರ್​ ಶೇ 4. 98ರಷ್ಟು ಮತ್ತು ಅದಾನಿ ಟ್ರಾನ್ಸ್​ಮಿಷನ್​​ ಶೇ 2.46ರಷ್ಟು ಇಳಿಕೆ ಕಂಡಿದೆ.

ಶೇ 38ರಷ್ಟು ಇಳಿಕೆ: ಅದಾನಿ ಸಮೂಹ ಸಂಸ್ಥೆಗಳ ಕುರಿತು ಹಿಂಡನ್​ಬರ್ಗ್​ ಸಂಶೋಧನಾ ವರದಿ ಪ್ರಕಟವಾದ ಬಳಿಕ ಜನವರಿ 24ರ ಮಾರುಕಟ್ಟೆ ವಹಿವಾಟಿನಲ್ಲಿ ಶೇ 38ರಷ್ಟು ಕುಸಿತ ಕಂಡಿದೆ. ದಿ ಅದಾನಿ ಗ್ರೂಪ್​ ಸ್ಟಾಫ್​ ಅಂಬುಜಾ, ಎಸಿಸಿ ಮತ್ತು ಎನ್​ಡಿಟಿವಿ ಸೇರಿದಂತೆ ಒಟ್ಟಾರೆ 7 ಲಕ್ಷ ಕೋಟಿ ಅಂದರೆ ಸರಿ ಸುಮಾರು ಶೇ 38ರಷ್ಟು ಪ್ರಮಾಣದ ನಷ್ಟವನ್ನು ಕಳೆದ ಐದು ವಾಹಿವಾಟಿನಲ್ಲಿ ಕಂಡಿದೆ ಎಂದು ಪಿಟಿಐ ಸ್ಟೊಕ್ಸ್​ಬಾಕ್ಸ್​ ಸಂಶೋಧನಾ ಮುಖ್ಯಸ್ಥ ಮನಿಷ್​ ಚೌಧರಿ ಹೇಳಿಕೆ ಉಲ್ಲೇಖಿಸಿ ವರದಿ ಮಾಡಿದೆ.

ನಿನ್ನೆ ಅದಾನಿ ಎಂಟರ್​ಪ್ರೈಸಸ್​ ಎಫ್​ಪಿಒ ಯಶಸ್ವಿಯಾಗಿ ಮುಚ್ಚಿದ ವೇಳೆ ಹೂಡಿಕೆದಾರರು ಕೊಂಚ ಉಸಿರಾಡಬಹುದು ಎಂಬ ಭರವಸೆ ಹೊಂದಿದ್ದರು. ಆದರೆ, ಕ್ರೆಡಿಟ್ ಸೂಯಿಸ್ ತನ್ನ ಖಾಸಗಿ ಬ್ಯಾಂಕಿಂಗ್ ಕ್ಲೈಂಟ್‌ಗಳಿಗೆ ಮಾರ್ಜಿನ್ ಲೋನ್‌ಗಳಿಗಾಗಿ ಅದಾನಿ ಗುಂಪಿನ ಬಾಂಡ್‌ ತೆಗೆದುಕೊಳ್ಳುವುದನ್ನು ನಿಲ್ಲಿಸಿದೆ ಎಂಬ ಮಾಹಿತಿ ಹೂಡಿಕೆದಾರರಿಗೆ ಶಾಕ್​ ಮೂಡಿಸಿತು. ಗ್ರೂಪ್​ ಸಂಬಂಧ ಅನೇಕ ಪ್ರಶ್ನೆಗಳನ್ನು ಕೇಳಲಾಯಿತು. ಕಂಪನಿಯ ವಾಹಿವಾಟು ಯಥಾಸ್ಥಿತಿ ಕಾಪಾಡಿಕೊಳ್ಳುವವರೆಗೆ ಇದರಿಂದ ದೂರ ಇರುವುದು ಉತ್ತಮ ಎಂಬುದಾಗಿ ಮನಿಷ್​ ತಿಳಿಸಿದ್ದಾರೆ.

ಅದಾನಿ ಸಂಸ್ಥೆ ಮೇಲೆ ಹಿಂಡನ್​ಬರ್ಗ್​​ ಗಂಭೀರ ಆರೋಪದ ವರದಿ ಬಳಿಕ ಅದಾನಿ ಸಂಸ್ಥೆಯ ಷೇರುಗಳು ಮಾರುಕಟ್ಟೆಯಲ್ಲಿ ಇಳಿಕೆ ಕಂಡಿದ್ದು, ಹೂಡಿಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಗೌತಮ್​ ಅದಾನಿ ಒಡೆತನದ ಸಂಸ್ಥೆಯು ತಮ್ಮ ಷೇರುಗಳಲ್ಲಿ ಉದ್ದೇಶ ಪೂರ್ವಕವಾಗಿ ದರ ಏರಿಳಿತ ಮತ್ತು ಕೃತಕ ವ್ಯವಹಾರ ನಡೆಸಿದೆ ಎಂದು ಹಿಂಡನ್​ಬರ್ಗ್​ ಆರೋಪಿಸಿತ್ತು. ಆದರೆ, ಅದಾನಿ ಸಂಸ್ಥೆ ಈ ಆರೋಪವನ್ನು ಸುಳ್ಳು ಎಂದು ತಳ್ಳಿ ಹಾಕಿದ್ದು, ತಮ್ಮ ಸಂಸ್ಥೆ ಕಾನೂನು ಬದ್ಧವಾಗಿ ಕಾರ್ಯ ನಿರ್ವಹಿಸಿದೆ ಎಂದಿದೆ. ಅಲ್ಲದೆ, ಹಿಂಡನ್​ ಬರ್ಗ್​ ವರದಿ ಆಧಾರರಹಿತವಾಗಿದೆ ಎಂದಿದೆ.

ಇದನ್ನೂ ಓದಿ: ಷೇರುಗಳ ಏರಿಳಿತ, ಅದಾನಿ ಎಫ್​ಪಿಒ ರದ್ದು: ಹೂಡಿಕೆದಾರರಿಗೆ ₹20 ಸಾವಿರ ಕೋಟಿ ವಾಪಸ್​

Last Updated : Feb 2, 2023, 2:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.