ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯಲ್ಲಿ (ಇಪಿಎಫ್‌ಒ) ಹೆಚ್ಚಿನ ಪಿಂಚಣಿ ಪ್ರಯೋಜನಕ್ಕಾಗಿ ಅರ್ಜಿ ಸಲ್ಲಿಸಲು ಇಂದು ಕೊನೆಯ ದಿನಾಂಕವಾಗಿದೆ. ನೀವು ಇಂದು ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸದಿದ್ದರೆ, ಹೆಚ್ಚಿನ ಪಿಂಚಣಿ ಪಡೆಯುವ ಅವಕಾಶವು ನಿಮ್ಮಿಂದ ಕೈ ತಪ್ಪಬಹುದು. ಹೆಚ್ಚಿನ ಪಿಂಚಣಿಗೆ ಅರ್ಜಿ ಸಲ್ಲಿಸಲು ಸರ್ಕಾರ ಎರಡು ಬಾರಿ ಗಡುವನ್ನು ವಿಸ್ತರಣೆ ಮಾಡಿತ್ತು. ಹಿಂದೊಮ್ಮೆ ಒಮ್ಮೆ ಮೇ 3ರ ವರೆಗೆ ವಿಸ್ತರಿಸಿದರೆ, ಎರಡನೇ ಬಾರಿಗೆ ಜೂನ್ 26 ರವರೆಗೆ ವಿಸ್ತರಿಸಲಾಗಿತ್ತು. ಈ ಸಮಯದ ಗಡುವನ್ನು ಮೂರನೇ ಬಾರಿಯೂ ಕೂಡ ವಿಸ್ತರಿಸಬಹುದೆಂಬ ನಿರೀಕ್ಷೆಯಿದೆ.
2014ರ ಸೆಪ್ಟೆಂಬರ್ 1ಕ್ಕಿಂದ ಮೊದಲು ಇಪಿಎಫ್‌ಒ ಸದಸ್ಯರಾಗಿರುವ ಅಥವಾ 2014ರ ನಂತರವೂ ಕೆಲಸ ಮಾಡುತ್ತಿರುವ ಹೆಚ್ಚಿನ ಪಿಂಚಣಿ ವ್ಯಕ್ತಿಗಳು ಅರ್ಜಿ ಸಲ್ಲಿಸಬಹುದು. ಇಪಿಎಸ್‌ನ ಹೆಚ್ಚಿನ ಪಿಂಚಣಿ ಯೋಜನೆಯನ್ನು ಪಡೆಯಲು ಅವರು ಅರ್ಹರಾಗಿದ್ದಾರೆ. ನವೆಂಬರ್ 4ರಂದು ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿತ್ತು. ಆದಾಗ್ಯೂ, ಇದರಲ್ಲಿ ಗಮನಿಸಬೇಕಾದ ವಿಷಯವೆಂದರೆ, ಹೆಚ್ಚಿನ ಪಿಂಚಣಿ ಹೊಂದಿರುವ ವ್ಯಕ್ತಿಗಳು ಸಂಯೋಜಿತ ಆಯ್ಕೆ ಮಾಡಲು ಸಾಧ್ಯವಿಲ್ಲ.
ನಿವೃತ್ತಿಯ ನಂತರ ನಿಯಮಿತ ಗಳಿಕೆಯ ಆಯ್ಕೆಯನ್ನು ಹೊಂದಿರದ ಅಥವಾ ಯಾವುದೇ ಸ್ಥಿರ ಆದಾಯ ಯೋಜನೆಯಲ್ಲಿ ಹೂಡಿಕೆ ಮಾಡದ ಉದ್ಯೋಗಿಗಳಿಗೆ ಉನ್ನತ ಪಿಂಚಣಿ ಯೋಜನೆ ಉತ್ತಮವಾಗಿದೆ. ಈ ಯೋಜನೆಯು ಅವರಿಗೆ ಉತ್ತಮ ಆಯ್ಕೆಯಾಗಿದೆ. ಇದರಲ್ಲಿ, ಕಡಿಮೆ ಅಪಾಯದೊಂದಿಗೆ ಸ್ಥಿರ ಆದಾಯವು ಲಭ್ಯವಿದೆ. ಆದಾಗ್ಯೂ, ಇದರ ಅಡಿಯಲ್ಲಿ, ಪ್ರತಿ ತಿಂಗಳು ಪಡೆಯುವ ಮಾಸಿಕ ಪಿಂಚಣಿಗೆ ತೆರಿಗೆ ವಿಧಿಸಲಾಗುತ್ತದೆ. ಆದರೆ, ನಿವೃತ್ತಿಯ ನಂತರ ಪಡೆಯುವ ಒಟ್ಟು ಮೊತ್ತಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ.
ಪಿಂಚಣಿಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?: ಅರ್ಜಿದಾರರ ಪಿಂಚಣಿಯು 2014ರ ಸೆಪ್ಟೆಂಬರ್ 1ಕ್ಕಿಂತ ಮೊದಲು ಪ್ರಾರಂಭವಾಗಿದ್ದರೆ, ನಿವೃತ್ತಿಯ ದಿನಾಂಕದ ಹಿಂದಿನ 12 ತಿಂಗಳ ಅವಧಿಯಲ್ಲಿ ಪಡೆದ ಸರಾಸರಿ ಮಾಸಿಕ ವೇತನದ ಆಧಾರದ ಮೇಲೆ ಹೆಚ್ಚಿನ ಪಿಂಚಣಿಯನ್ನು ಲೆಕ್ಕಹಾಕಲಾಗುತ್ತದೆ. ಮತ್ತೊಂದೆಡೆ, ಅರ್ಜಿದಾರರು 2014ರ ಆಗಸ್ಟ್ 31ರಂದು ಅಥವಾ ಅದಕ್ಕೂ ಮೊದಲು ನಿವೃತ್ತರಾಗಿದ್ದರೆ, ಹೆಚ್ಚಿನ ಪಿಂಚಣಿಗಾಗಿ ಸರಾಸರಿ ವೇತನವನ್ನು ಕೆಲಸದ ಕೊನೆಯ ವರ್ಷದ ಸರಾಸರಿ ವೇತನದ ಮೇಲೆ ಲೆಕ್ಕಹಾಕಲಾಗುತ್ತದೆ.
ಹೆಚ್ಚಿನ ಪಿಂಚಣಿಗಾಗಿ ಅರ್ಜಿ ಸಲ್ಲಿಸುವುದು ಹೀಗೆ?: ಈ ರೀತಿಯ ಹೆಚ್ಚಿನ ಪಿಂಚಣಿಗಾಗಿ ನೀವೇ ಅರ್ಜಿ ಸಲ್ಲಿಸಿ, ನೀವು ಹೆಚ್ಚಿನ ಪಿಂಚಣಿ ಯೋಜನೆಯ ಲಾಭವನ್ನು ಬಯಸಿದರೆ, ನಂತರ ನೀವು ಕೆಲಸ ಮಾಡುವ ಸ್ಥಳದಲ್ಲಿರುವ ಎಚ್ಆರ್ ಅನ್ನು ಸಂಪರ್ಕಿಸಿ. ಅಥವಾ ನೀವು 5 ನಿಮಿಷಗಳಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ, ನೀವು EPFO ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ (https://unifiedportal-mem.epfindia.gov.in/memberInterfacePohw/). ಎರಡು ಆಯ್ಕೆಗಳನ್ನು ಇಲ್ಲಿ ಕಾಣಬಹುದು. ನೀವು 2014ರ ಸೆಪ್ಟೆಂಬರ್ 1ಕ್ಕಿಂತ ಮೊದಲು ನಿವೃತ್ತರಾಗಿದ್ದರೆ ಹಾಗೂ ಹೆಚ್ಚಿನ ಪಿಂಚಣಿ ಬಯಸಿದರೆ, ನಂತರ ಮೊದಲ ಆಯ್ಕೆಯನ್ನು ಕ್ಲಿಕ್ ಮಾಡಿ. ಆದರೆ, ನೀವು ಈಗ ಕೆಲಸ ಮಾಡುತ್ತಿದ್ದರೆ, ನಂತರ ಎರಡನೇ ಆಯ್ಕೆಯನ್ನು ಕ್ಲಿಕ್ ಮಾಡಿ. ಇದರ ನಂತರ ಫಾರ್ಮ್ ಓಪನ್ ಆಗುತ್ತದೆ. ಅದರಲ್ಲಿ ಯುಎಎನ್, ಆಧಾರ್ ಸೇರಿದಂತೆ ಅಗತ್ಯ ವಿವರಗಳನ್ನು ಭರ್ತಿ ಮಾಡಿ, ಅರ್ಜಿ ಸಲ್ಲಿಸಬೇಕಾಗುತ್ತದೆ. ಇದರ ನಂತರ ನೀವು ಉದ್ಯೋಗದಲ್ಲಿದ್ದೀರೋ ಇಲ್ಲವೋ ಎಂಬುದನ್ನು ದೃಢೀಕರಿಸಲಾಗುತ್ತದೆ? ಅರ್ಜಿದಾರರಿಂದ ಅನುಮತಿ ಪಡೆದ ತಕ್ಷಣ ಹೆಚ್ಚಿನ ಪಿಂಚಣಿಗಾಗಿ ಕೊಡುಗೆ ಪ್ರಾರಂಭವಾಗುತ್ತದೆ.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಬಳಕೆ ಕಡಿಮೆ ಮಾಡಿ.. ಆಗಾಗ ಕ್ರೆಡಿಟ್ ಸ್ಕೋರ್ ಮೇಲೆ ಗಮನ ಹರಿಸಿ!