ಹೈದರಾಬಾದ್: ಇಂದು ಎಲ್ಲ ವ್ಯವಹಾರ ಅಂಗೈಯಲ್ಲೇ ನಡೆಯುತ್ತದೆ. ಒಂದು ಸ್ಮಾರ್ಟ್ಫೋನ್ ನಿಮ್ಮ ಕೈಯಲ್ಲಿ ಇದ್ದರೆ ಸಾಕು ಕುಳಿತಲ್ಲೇ ಎಲ್ಲ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸಬಹುದು. ಇಂದಿನ ಡಿಜಿಟಲೀಕರಣಗೊಂಡ ಜಗತ್ತಿನಲ್ಲಿ, ಕ್ರೆಡಿಟ್ ಕಾರ್ಡ್ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಆದರೆ ಕ್ರೆಡಿಟ್ ಕಾರ್ಡ್‌ಗಳನ್ನು ಅತ್ಯಂತ ಜಾಗರೂಕತೆಯಿಂದ ಬಳಕೆ ಮಾಡಬೇಕಾಗುತ್ತದೆ.
ಹೀಗಾಗಿ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಎಲ್ಲ ಅಂಶಗಳ ಮೇಲೆ ನಾವು ನಿರಂತರವಾಗಿ ಗಮನ ಹರಿಸಬೇಕು. ಕ್ರೆಡಿಟ್ ಕಾರ್ಡ್ ನಿರ್ಬಂಧಿಸುವುದು ಅಥವಾ ರದ್ದುಗೊಳಿಸುವುದನ್ನು ನಾವು ಚನ್ನಾಗಿ ಕಲಿತುಕೊಳ್ಳಬೇಕಿದೆ. ನೀವು ಉತ್ತಮ ಕ್ರೆಡಿಟ್ ಸ್ಕೋರ್ ಪಡೆದಿದ್ದರೆ ಬ್ಯಾಂಕ್‌ಗಳು ತಾವಾಗೇ ನಿಮ್ಮನ್ನು ಸಂಪರ್ಕಿಸಿ ಕಾರ್ಡ್‌ಗಳನ್ನು ನೀಡುತ್ತವೆ. ಅಗತ್ಯಕ್ಕಿಂತ ಹೆಚ್ಚು ಕಾರ್ಡ್‌ಗಳು ಇದ್ದಾಗ, ಸಾಧ್ಯವಾದಷ್ಟು ಕಡಿಮೆ ಕ್ರೆಡಿಟ್ ಮಿತಿಯನ್ನು ಹೊಂದಿರುವ ಕಾರ್ಡ್ಗಳನ್ನ ರದ್ದು ಮಾಡಿಸಿ.
ಹೆಚ್ಚು ಮಿತಿಯ ಕಾರ್ಡ್ ಪಡೆದು, ಅತ್ಯಂತ ಕಡಿಮೆ ಮಿತಿಯಲ್ಲಿ ಖರ್ಚು ಮಾಡಿ: ಬ್ಯಾಂಕ್‌ಗಳು ನಿಯತಕಾಲಿಕವಾಗಿ ನಿಮ್ಮ ಗರಿಷ್ಠ ಕ್ರೆಡಿಟ್ ಮಿತಿಯನ್ನು ಹೆಚ್ಚಿಸಲು ಅವಕಾಶ ನೀಡುತ್ತವೆ. ಈ ಅವಕಾಶವನ್ನು ಸಾಧ್ಯವಾದಷ್ಟು ಮಟ್ಟಿಗೆ ಬಳಸಿಕೊಳ್ಳಿ. ನೀವು ಹೆಚ್ಚು ಖರ್ಚು ಮಾಡಬಹುದು ಎಂದಲ್ಲ. ನಿಮ್ಮ ಸಾಲದ ಬಳಕೆಯ ಅನುಪಾತವು ಕಡಿಮೆ ಇರುವಂತೆ ಮಾಡುವುದು ಅತ್ಯಂತ ಮುಖ್ಯವಾದ ಅಂಶವಾಗಿದೆ. ನೀವು 70,000 ರೂ.ಗಳ ಮಿತಿಯ ಕ್ರೆಡಿಟ್ ಕಾರ್ಡ್ ಹೊಂದಿದ್ದೀರಿ ಎಂದು ಭಾವಿಸಿಕೊಳ್ಳುವುದಾದರೆ, ನೀವು ರೂ 7,000 ಖರ್ಚು ಮಾಡಿದರೆ, ಕ್ರೆಡಿಟ್ ಬಳಕೆ ಆಗ ಶೇ10ರಷ್ಟು ಆಗುತ್ತದೆ. 20,000 ಮಿತಿ ಹೊಂದಿರುವ ಕಾರ್ಡ್‌ನಲ್ಲಿ ನೀವು 2,000 ಬಳಸಿದರೂ, ಅದು ಶೇಕಡಾ 10ರಷ್ಟಾಗುತ್ತದೆ. ಈ ಕಾರ್ಡ್‌ನಲ್ಲಿ ನೀವು ಕಡಿಮೆ ಹಣ ಬಳಕೆ ಮಾಡಿದರೂ, ಬಳಕೆ ಮಾಡಿದ ಹಣದ ಮಿತಿ ಹೆಚ್ಚಾಗುತ್ತದೆ. ಇದು ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿ ಮೇಲೆ ಪರಿಣಾಮ ಬೀರುತ್ತದೆ.
ಕಡಿಮೆ ಮಿತಿಯ ಕಾರ್ಡ್ನ ಅನುಪಾತವನ್ನೂ ಹೆಚ್ಚಿಸಬಹುದು: ಕಡಿಮೆ ಮಿತಿಗಳನ್ನು ಹೊಂದಿರುವ ಕಾರ್ಡ್‌ಗಳು ನಿಮ್ಮ ಸಾಲದ ಬಳಕೆಯ ಅನುಪಾತವನ್ನು ಹೆಚ್ಚಿಸಬಹುದು. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ನೀವು ಎರಡು ಅಥವಾ ಮೂರು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವಾಗ, ಕಡಿಮೆ ಮಿತಿ ಕಾರ್ಡ್ ಅನ್ನು ರದ್ದುಗೊಳಿಸುವುದು ಉತ್ತಮ ಮಾರ್ಗವಾಗುತ್ತದೆ. ನೀವು ಹೊಂದಿರುವ ಪ್ರತಿಯೊಂದು ಕಾರ್ಡ್‌ನಲ್ಲಿ ಕ್ರೆಡಿಟ್ ಮಿತಿಗಳ ಬಳಕೆಯ ಮೇಲೆ ನಿಗಾ ಇಡುವುದು ಬಹಳ ಮುಖ್ಯ. ಸಾಧ್ಯವಾದಷ್ಟು ಹೆಚ್ಚಿನ ಕ್ರೆಡಿಟ್ ಮಿತಿ ಮತ್ತು ಕಡಿಮೆ ಬಳಕೆಯ ಅನುಪಾತದೊಂದಿಗೆ ಒಂದು ಕಾರ್ಡ್ ಅನ್ನು ಹೊಂದಿರುವುದು ಉತ್ತಮ.
ಇದನ್ನು ಓದಿ: ಅಮೆಜಾನ್‌ನಿಂದ 18 ಸಾವಿರ ಉದ್ಯೋಗ ಕಡಿತ ನಿರ್ಧಾರ!
ಮೊದಲ ಕ್ರೆಡಿಟ್ ಕಾರ್ಡ್ ಉತ್ತಮ ನಿರ್ವಹಣೆ ನಿಮ್ಮ ಕ್ರೆಡಿಟ್ ಸ್ಕೋರ್ ಹೆಚ್ಚಿಸಬಹುದು: ನೀವು ತೆಗೆದುಕೊಳ್ಳುವ ಮೊದಲ ಕ್ರೆಡಿಟ್ ಕಾರ್ಡ್ ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಇರಿಸಿಕೊಳ್ಳಲು ನಿಮಗೆ ಉತ್ತಮ ಮಾರ್ಗವಾಗಿದೆ. ಸಾಧ್ಯವಾದಷ್ಟು ಕಾಲ ಅದನ್ನು ಮುಂದುವರಿಸಿ. ನೀವು ದೀರ್ಘಕಾಲದವರೆಗೆ ಆ ಕಾರ್ಡ್ ಬಳಸುವುದರಿಂದ ನಿಮ್ಮ ಕ್ರೆಡಿಟ್ ಇತಿಹಾಸ ಮತ್ತು ಸ್ಕೋರ್ ಆ ಕಾರ್ಡ್ನ ಮೇಲೆ ಅವಲಂಬಿತವಾಗಿರುತ್ತದೆ. ಅದನ್ನು ರದ್ದುಗೊಳಿಸುವುದರಿಂದ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೊಸದಾಗಿ ತೆಗೆದುಕೊಂಡಿರುವ ಕಾರ್ಡ್‌ಗಳನ್ನು ರದ್ದುಪಡಿಸುವಲ್ಲಿ ದೊಡ್ಡ ಸಮಸ್ಯೆ ಇಲ್ಲ. ಹಳೆಯ ಕಾರ್ಡ್‌ಗೆ ಮಿತಿಯನ್ನು ಸಾಧ್ಯವಾದಷ್ಟು ಹೆಚ್ಚಿಸಲು ಬ್ಯಾಂಕ್ ಅನ್ನು ಕೇಳಿ. ವಾರ್ಷಿಕ ಶುಲ್ಕ ಹೆಚ್ಚಾಗಿದ್ದರೆ ಅದನ್ನು ಕಡಿಮೆ ಮಾಡಲು ಮನವಿ ಮಾಡಿ.
ಕಾರ್ಡ್ ರದ್ದು ಮಾಡಿಸುವ ಮುನ್ನ ಈ ಎಲ್ಲ ಅಂಶಗಳನ್ನು ಗಮನಿಸಿ: ಕಾರ್ಡ್ ರದ್ದುಗೊಳಿಸುವ ಮೊದಲು ನಿಮ್ಮ ಬಳಿ ಇರುವ ಎಲ್ಲ ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಿ. ಹೆಚ್ಚಿನ ಜನರು ಈ ರಿವಾರ್ಡ್ ಪಾಯಿಂಟ್‌ಗಳ ಬಗ್ಗೆ ಗಮನ ಹರಿಸುವುದಿಲ್ಲ. ಇದು ಸಾವಿರಾರು ಅಂಕಗಳನ್ನು ಹೊಂದಿರಬಹುದು. ಯಾವುದೇ ಖರೀದಿಗೆ ಇವೆಲ್ಲವನ್ನೂ ಬಳಸಿಕೊಳ್ಳಿ. ನಂತರ ಮಾತ್ರ ಕಾರ್ಡ್ ಅನ್ನು ನಿರ್ಬಂಧಿಸಿ. ಒಂದು ರೂಪಾಯಿ ಬಾಕಿ ಇದ್ದರೂ ಕಾರ್ಡ್ ರದ್ದು ಮಾಡುವಂತಿಲ್ಲ. ಬಿಲ್ ಯಾವುದೇ ವಿಳಂಬವಾಗದಂತೆ ನೋಡಿಕೊಳ್ಳಿ. ಅಗತ್ಯವಿದ್ದರೆ, ಸ್ವಲ್ಪ ಹೆಚ್ಚು ಪಾವತಿಸಿ.
ನಿಯಮಗಳ ಬಗ್ಗೆ ಎಚ್ಚರಿಕೆ ಇರಲಿ: ಕಾರ್ಡ್‌ನಲ್ಲಿ ಯಾವುದೇ ಸೂಚನೆಗಳಿವೆಯಾ, ನಿಯಮಗಳೇನು ಎಂಬುದನ್ನು ಖಚಿತಪಡಿಸಿಕೊಳ್ಳಿ. ಮೊದಲಿಗೆ, ಆ ಕಾರ್ಡ್ ಮೂಲಕ ಹೋಗುವ ಯಾವುದೇ ಪಾವತಿಗಳನ್ನು ಇನ್ನೊಂದು ಕಾರ್ಡ್‌ಗೆ ತಿರುಗಿಸಬೇಕು. ಇವೆಲ್ಲವನ್ನೂ ಪೂರ್ಣಗೊಳಿಸಿದ ನಂತರ, ಬಿಲ್ಲಿಂಗ್ ಅವಧಿ ಮುಗಿದ ನಂತರ ಮಾತ್ರ ಕಾರ್ಡ್ ಅನ್ನು ರದ್ದುಗೊಳಿಸಿ. ಬ್ಯಾಲೆನ್ಸ್ ಪಾವತಿಸಿದ ನಂತರ ಮತ್ತು ರಿವಾರ್ಡ್ ಪಾಯಿಂಟ್‌ಗಳನ್ನು ಬಳಸಿದ ನಂತರ ನೀವು ಬ್ಯಾಂಕ್ ಅನ್ನು ಸಂಪರ್ಕಿಸಿ ಕಾರ್ಡ್ ರದ್ದು ಮಾಡಲು ವಿನಂತಿ ಮಾಡಿ. ಕಾರ್ಡ್ ರದ್ದಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಆನ್‌ಲೈನ್ ಮತ್ತು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಕಾರ್ಡ್‌ಗಳ ರದ್ದತಿಗಾಗಿ ವಿನಂತಿಗಳನ್ನು ಮಾಡಬಹುದು. ಬ್ಯಾಂಕ್ ಶಾಖೆಗೆ ಹೋಗಿ ಇಲ್ಲವೇ ಇ-ಮೇಲ್, ಫೋನ್ ಮೂಲಕ ಕಾರ್ಡ್ ರದ್ದು ಮಾಡಬಹುದು. ನೀವು ನಿಮ್ಮ ಕ್ರೆಡಿಟ್ ಕಾರ್ಡ್ ರದ್ದುಗೊಳಿಸಲು ವಿನಂತಿಸಿದಾಗ ಬ್ಯಾಂಕ್‌ಗಳು ತಕ್ಷಣವೇ ಕ್ರೆಡಿಟ್ ಕಾರ್ಡ್ ಅನ್ನು ರದ್ದುಗೊಳಿಸುತ್ತವೆ. ಸಂಪೂರ್ಣ ಪ್ರಕ್ರಿಯೆಯು ಪೂರ್ಣಗೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಬ್ಯಾಂಕ್‌ನಿಂದ ನೋ - ಡ್ಯೂಸ್ ಪ್ರಮಾಣ ಪತ್ರವನ್ನು ತೆಗೆದುಕೊಳ್ಳಲು ಮರೆಯಬೇಡಿ.
ಇದನ್ನು ಓದಿ: ಎಟಿಎಮ್ನಲ್ಲೇ ಉಳಿದ ಹಣ ನೀಡಲು ನಿರಾಕರಿಸಿದ ಆರೋಪ.. ಹೆಚ್ಡಿಎಫ್ ಸಿ ಬ್ಯಾಂಕಿಗೆ 2 ಲಕ್ಷದ 24 ಸಾವಿರ ರೂ ಭಾರಿ ದಂಡ!