ETV Bharat / business

Closing Bell: ಬಿಎಸ್ಇ ಸೆನ್ಸೆಕ್ಸ್ 325 ಪಾಯಿಂಟ್ಸ್​ ಕುಸಿತ; 19,443ಕ್ಕೆ ಇಳಿದ ನಿಫ್ಟಿ - ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕ

ಸೋಮವಾರದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆಗಳು ಇಳಿಕೆಯೊಂದಿಗೆ ಕೊನೆಗೊಂಡಿವೆ.

Closing Bell BSE Sensex down 325 points Nifty falls to 19443

author img

By ETV Bharat Karnataka Team

Published : Nov 13, 2023, 7:31 PM IST

ಮುಂಬೈ : ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಹಣಕಾಸು ಸೇವೆಗಳ ಷೇರುಗಳ ಇಳಿಕೆಯ ಮಧ್ಯೆ ಭಾರತದ ಬೆಂಚ್ ಮಾರ್ಕ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಸೋಮವಾರ ವೇಗ ಕಳೆದುಕೊಂಡವು. ಬಿಎಸ್ಇ ಸೆನ್ಸೆಕ್ಸ್ 325.58 ಪಾಯಿಂಟ್ಸ್ ಕುಸಿದು 64,933.87 ರಲ್ಲಿ ಕೊನೆಯಾದರೆ, ಎನ್ಎಸ್ಇ ನಿಫ್ಟಿ-50 82 ಪಾಯಿಂಟ್ಸ್ ಕುಸಿದು 19,443.55 ರಲ್ಲಿ ಕೊನೆಗೊಂಡಿದೆ. ನಿನ್ನೆಯ ಮುಹೂರ್ತ ವ್ಯಾಪಾರ ವಹಿವಾಟಿನಲ್ಲಿ ಅತ್ಯಧಿಕ ಲಾಭ ಗಳಿಸಿದ ನಂತರ ವಿಶಾಲ ಮಾರುಕಟ್ಟೆ ಸೂಚ್ಯಂಕಗಳು ತೀವ್ರ ಕುಸಿತ ಕಂಡವು.

ನಿಫ್ಟಿ ಬ್ಯಾಂಕ್, ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್ ಮತ್ತು ನಿಫ್ಟಿ ಐಟಿಯಂತಹ ಹೆವಿವೇಯ್ಟ್​ ಗಮನಾರ್ಹ ಕುಸಿತದೊಂದಿಗೆ, ನಿಫ್ಟಿ ಮೆಟಲ್ ಮತ್ತು ನಿಫ್ಟಿ ಪಿಎಸ್​ಯು ಬ್ಯಾಂಕ್ ಮಾತ್ರ ವಲಯ ಸೂಚ್ಯಂಕಗಳಲ್ಲಿ ಲಾಭ ಗಳಿಸಿದವು. ನಿಫ್ಟಿ-50 ಯಲ್ಲಿ ಕೋಲ್ ಇಂಡಿಯಾ, ಐಷರ್ ಮೋಟಾರ್ಸ್, ಹಿಂಡಾಲ್ಕೊ, ಎಂ & ಎಂ ಮತ್ತು ಬಿಪಿಸಿಎಲ್ ಲಾಭ ಗಳಿಸಿದ ಪ್ರಮುಖ ಐದು ಷೇರುಗಳಾಗಿವೆ. ಮತ್ತೊಂದೆಡೆ ಎಸ್​ಬಿಐ ಲೈಫ್, ಬಜಾಜ್ ಫೈನಾನ್ಸ್, ಗ್ರಾಸಿಮ್, ಇನ್ಫೋಸಿಸ್ ಮತ್ತು ನೆಸ್ಲೆ ನಷ್ಟ ಅನುಭವಿಸಿದವು.

ಕೋಲ್ ಇಂಡಿಯಾ ಷೇರುಗಳು ಇಂದು ಶೇಕಡಾ 5 ಕ್ಕಿಂತ ಹೆಚ್ಚು ಏರಿಕೆಯಾಗಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿವೆ. ಇನ್ಫೋಸಿಸ್ ಹೊರತುಪಡಿಸಿ, ಟೆಕ್ ಮಹೀಂದ್ರಾ ಮತ್ತು ಟಿಸಿಎಸ್ ಸೇರಿದಂತೆ ಹಲವಾರು ಐಟಿ ಷೇರುಗಳು ವಹಿವಾಟಿನಲ್ಲಿ ಕುಸಿದವು. ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನಂಥ ಹೆವಿವೇಯ್ಟ್ ಷೇರುಗಳು ಸಹ ಇಳಿಕೆಯಲ್ಲಿ ವಹಿವಾಟು ಅಂತ್ಯಗೊಳಿಸಿವೆ.

ವಿಶ್ಲೇಷಕರ ಪ್ರಕಾರ, ಇಂದಿನ ಮಾರುಕಟ್ಟೆ ಕುಸಿತವು ನಿನ್ನೆಯ ಒಂದು ಗಂಟೆಯ ವಿಶೇಷ ವಹಿವಾಟು ಅಧಿವೇಶನದಲ್ಲಿ ಮಾರುಕಟ್ಟೆಗಳಲ್ಲಿ ಕಂಡು ಬಂದ ಬಲವಾದ ಏರಿಕೆಗೆ ಪ್ರತಿಕ್ರಿಯೆಯಾಗಿದೆ. ದೇಶೀಯ ಮಾರುಕಟ್ಟೆಯ ಮೂಲ ಅಂಶಗಳು ಬಲವಾಗಿ ಉಳಿದಿವೆ ಮತ್ತು ದೀರ್ಘಾವಧಿಯಲ್ಲಿ ಲಾಭ ಗಳಿಸಲಿವೆ ಎಂದು ಅವರು ಹೇಳಿದರು.

ದೇಶೀಯ ಷೇರು ಮಾರುಕಟ್ಟೆಗಳಲ್ಲಿನ ಇಳಿಕೆ ಪ್ರವೃತ್ತಿಯನ್ನು ಅನುಸರಿಸಿ ಸೋಮವಾರ ಬೆಳಗ್ಗೆ ಅಮೆರಿಕ ಡಾಲರ್ ವಿರುದ್ಧ ರೂಪಾಯಿ 4 ಪೈಸೆ ಕುಸಿದು 83.32 ಕ್ಕೆ ತಲುಪಿದೆ. ನಿರಂತರ ವಿದೇಶಿ ನಿಧಿಯ ಹೊರಹರಿವು ರೂಪಾಯಿ ಮೇಲೆ ಒತ್ತಡ ಹೇರಿದೆ ಎಂದು ವಿದೇಶಿ ವಿನಿಮಯ ವ್ಯಾಪಾರಿಗಳು ತಿಳಿಸಿದ್ದಾರೆ. ಇಂಟರ್​ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಡಾಲರ್ ವಿರುದ್ಧ ರೂಪಾಯಿ 83.31 ರಲ್ಲಿ ಪ್ರಾರಂಭವಾಯಿತು. ಇದು ಆರಂಭಿಕ ವ್ಯವಹಾರಗಳಲ್ಲಿ 83.32 ಕ್ಕೆ ಇಳಿದಿತ್ತು. ಭಾರತೀಯ ರೂಪಾಯಿ ಹಿಂದಿನ ಮುಕ್ತಾಯಕ್ಕಿಂತ 4 ಪೈಸೆ ಕುಸಿತ ದಾಖಲಿಸಿದೆ.

ಇದನ್ನೂ ಓದಿ : ಕಳೆದೊಂದು ವರ್ಷದಲ್ಲಿ ಶೇ 21ರಷ್ಟು ಆದಾಯ ನೀಡಿದ ಚಿನ್ನ ಮತ್ತು ಬೆಳ್ಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.