ETV Bharat / business

ಕೇಂದ್ರ-ರಾಜ್ಯಗಳ ತೆರಿಗೆ ಹಂಚಿಕೆ ವಿಚಾರ; 16ನೇ ಹಣಕಾಸು ಆಯೋಗ ಸ್ಥಾಪನೆ ಶೀಘ್ರ

author img

By

Published : Aug 20, 2023, 1:43 PM IST

Centre-State tax sharing: ಇದೇ ನವೆಂಬರ್​ ಅಂತ್ಯದ ವೇಳೆಗೆ 16ನೇ ಹಣಕಾಸು ಆಯೋಗವನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

16th Finance commission constituted
16th Finance commission constituted

ನವದೆಹಲಿ : ನವೆಂಬರ್ ಅಂತ್ಯದ ವೇಳೆಗೆ 16ನೇ ಹಣಕಾಸು ಆಯೋಗವನ್ನು ಸ್ಥಾಪಿಸುವ ನಿರೀಕ್ಷೆಯಿದೆ ಎಂದು ಕೇಂದ್ರದ ಹಣಕಾಸು ಕಾರ್ಯದರ್ಶಿ ಟಿ.ವಿ.ಸೋಮನಾಥನ್ ಹೇಳಿದ್ದಾರೆ. ಆಯೋಗದ ಉಲ್ಲೇಖದ ನಿಯಮಗಳನ್ನು (ಟಿಒಆರ್) ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಹಿಂದೆ 15 ನೇ ಹಣಕಾಸು ಆಯೋಗವು 2020 ರ ನವೆಂಬರ್ 9 ರಂದು ರಾಷ್ಟ್ರಪತಿಗಳಿಗೆ ತನ್ನ ವರದಿಯನ್ನು ಸಲ್ಲಿಸಿತ್ತು. ಈ ವರದಿಯಲ್ಲಿ 2021-22ನೇ ಸಾಲಿನಿಂದ 2025-26ರ ಹಣಕಾಸು ವರ್ಷದ ಅವಧಿಗೆ ಶಿಫಾರಸುಗಳನ್ನು ನೀಡಲಾಗಿತ್ತು.

ತೆರಿಗೆ ಹಂಚಿಕೆ ಅನುಪಾತ ಶಿಫಾರಸು ಮಾಡುವ ಆಯೋಗ: ಹಣಕಾಸು ಆಯೋಗವು ಕೇಂದ್ರ-ರಾಜ್ಯಗಳ ಮಧ್ಯದ ತೆರಿಗೆ ಹಂಚಿಕೆಯ ಬಗ್ಗೆ ಸಲಹೆ ನೀಡುವ ಸಾಂವಿಧಾನಿಕ ಸಂಸ್ಥೆಯಾಗಿದೆ. ಇತರ ವಿಷಯಗಳ ಜೊತೆಗೆ, ಐದು ವರ್ಷಗಳವರೆಗೆ ಕೇಂದ್ರ ಮತ್ತು ರಾಜ್ಯಗಳ ನಡುವೆ ತೆರಿಗೆಯನ್ನು ಹೇಗೆ ವಿಂಗಡಿಸಲಾಗುತ್ತದೆ ಎಂಬುದರ ಬಗ್ಗೆ ಹಣಕಾಸು ಆಯೋಗವು ತನ್ನ ಸಲಹೆಯನ್ನು ನೀಡುತ್ತದೆ. 15 ನೇ ಹಣಕಾಸು ಆಯೋಗವು 2026 ರ ಏಪ್ರಿಲ್ 1 ರವರೆಗೆ ಕೇಂದ್ರ ಮತ್ತು ರಾಜ್ಯಗಳ ನಡುವಿನ ತೆರಿಗೆ ಹಂಚಿಕೆಯ ಅನುಪಾತವನ್ನು ನಿಗದಿಪಡಿಸಿತ್ತು. ಏಪ್ರಿಲ್ 1, 2026 ರ ನಂತರದ ತೆರಿಗೆ ಹಂಚಿಕೆ ಅನುಪಾತವನ್ನು 16 ನೇ ಹಣಕಾಸು ಆಯೋಗ ನಿರ್ಧರಿಸಲಿದೆ.

ಶೇಕಡಾ 42ರಷ್ಟು ಅನುಪಾತ ನಿಗದಿಪಡಿಸಿತ್ತು 15ನೇ ಆಯೋಗ: ಎನ್.ಕೆ. ಸಿಂಗ್ ನೇತೃತ್ವದ 15 ನೇ ಹಣಕಾಸು ಆಯೋಗವು ಕೇಂದ್ರ ಮತ್ತು ರಾಜ್ಯಗಳ ನಡುವೆ ಶೇಕಡಾ 42 ರಷ್ಟು ತೆರಿಗೆ ಹಂಚಿಕೆ ಅನುಪಾತವನ್ನು ಶಿಫಾರಸು ಮಾಡಿತ್ತು. ಇದರ ಅಡಿಯಲ್ಲಿ 2021-22 ರಿಂದ 2025-26ರ ಹಣಕಾಸು ವರ್ಷದವರೆಗೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಶೇಕಡಾ 42 ರ ಅನುಪಾತದಲ್ಲಿ ತೆರಿಗೆಯನ್ನು ವಿಂಗಡಿಸಲಾಗುತ್ತಿದೆ. ಈ ಹಿಂದೆ, 14 ನೇ ಹಣಕಾಸು ಆಯೋಗವು ಈ ಅನುಪಾತವನ್ನು ಶೇಕಡಾ 42 ರಲ್ಲಿಯೇ ಇರಿಸಿತ್ತು. ಕೇಂದ್ರ ಮತ್ತು ರಾಜ್ಯಗಳ ನಡುವಿನ ತೆರಿಗೆ ಹಂಚಿಕೆ ಅನುಪಾತವನ್ನು ನಿಗದಿಪಡಿಸುವುದರ ಜೊತೆಗೆ, 15 ನೇ ಹಣಕಾಸು ಆಯೋಗವು ವಿತ್ತೀಯ ಕೊರತೆ, ಕೇಂದ್ರ ಮತ್ತು ರಾಜ್ಯಗಳಿಗೆ ಸಾಲ ಪಡೆಯುವ ಮಾದರಿಗಳು ಮತ್ತು ಇಂಧನ ಕ್ಷೇತ್ರದ ಸುಧಾರಣೆಗಳು ಮತ್ತು ರಾಜ್ಯಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಅವು ಹೆಚ್ಚು ಸಾಲ ಪಡೆಯುವ ಬಗ್ಗೆ ಸಲಹೆ ನೀಡಿದೆ.

ವಿತ್ತೀಯ ಕೊರತೆ ತಗ್ಗಿಸುವ ಗುರಿ: ವಿತ್ತೀಯ ಕ್ರೋಢೀಕರಣದ ನಂತರ ಸರ್ಕಾರವು 2025-26ರ ಹಣಕಾಸು ವರ್ಷಕ್ಕೆ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇಕಡಾ 4.5 ರಷ್ಟು ವಿತ್ತೀಯ ಕೊರತೆಯ ಗುರಿಯನ್ನು ನಿಗದಿಪಡಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಜಿಡಿಪಿಯ ಶೇ 5.9ರಷ್ಟಾಗಲಿದೆ ಎಂದು ನಿರೀಕ್ಷಿಸಲಾಗಿದೆ.

10 ಕೋಟಿ ರೂ. ಮೀಸಲು: ಹದಿನಾರನೇ ಹಣಕಾಸು ಆಯೋಗದ ಕಚೇರಿಗಳನ್ನು ಸ್ಥಾಪಿಸಲು 2023-24ರ ಕೇಂದ್ರ ಬಜೆಟ್​​ನಲ್ಲಿ ಹಣಕಾಸು ಸಚಿವಾಲಯಕ್ಕೆ 10 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

ಇದನ್ನೂ ಓದಿ : RBI: ಸಾಲದ ದಂಡ ಶುಲ್ಕಕ್ಕೆ ಬಡ್ಡಿ ವಿಧಿಸುವಂತಿಲ್ಲ; ಆರ್​ಬಿಐ ಹೊಸ ಮಾರ್ಗಸೂಚಿ ಜ.1 ರಿಂದ ಜಾರಿ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.