ETV Bharat / business

ಪ್ರೀಮಿಯಂ ಸೇವೆ ವಿಭಾಗದ ಹೆಸರನ್ನು 'ಭಾರತ್ ಪ್ಲಸ್' ಎಂದು ಬದಲಾಯಿಸಿದ ಬ್ಲೂಡಾರ್ಟ್

ಪ್ರಮುಖ ಕೊರಿಯರ್ ಕಂಪನಿಯಾಗಿರುವ ಬ್ಲೂಡಾರ್ಟ್​ ತನ್ನ ಪ್ರೀಮಿಯಂ ಸೇವೆಗಳ ವಿಭಾಗದ ಹೆಸರನ್ನು ಭಾರತ್ ಪ್ಲಸ್ ಎಂದು ಬದಲಾಯಿಸಿದೆ.

Blue Dart's premium service in India
Blue Dart's premium service in India
author img

By ETV Bharat Karnataka Team

Published : Sep 13, 2023, 2:35 PM IST

ನವದೆಹಲಿ: ಭಾರತದ ಪ್ರಖ್ಯಾತ ಲಾಜಿಸ್ಟಿಕ್ಸ್​ ಕಂಪನಿ ಬ್ಲೂಡಾರ್ಟ್​ ತನ್ನ ಭಾರತದಲ್ಲಿನ ಪ್ರೀಮಿಯಂ ಸೇವೆಗಳ ವಿಭಾಗದ ಹೆಸರನ್ನು ಭಾರತ್ ಪ್ಲಸ್ ಎಂದು ಬದಲಾಯಿಸಿದೆ. ಇದು ಮೊದಲು ಡಾರ್ಟ್​ ಪ್ಲಸ್ ಎಂದಾಗಿತ್ತು. ಈ ಕುರಿತು ಬಿಎಸ್​ಇ ಗೆ ಸಲ್ಲಿಸಿರುವ ಫೈಲಿಂಗ್​ನಲ್ಲಿ ಕಂಪನಿ ಮಾಹಿತಿ ನೀಡಿದೆ. "ಕಂಪನಿಯ ಕಾರ್ಯತಂತ್ರದ ಭಾಗವಾಗಿ ಮಾಡಿರುವ ಈ ಬದಲಾವಣೆಯು ಬ್ಲೂ ಡಾರ್ಟ್​ನ ಪ್ರಯಾಣದಲ್ಲಿ ಒಂದು ಮೈಲಿಗಲ್ಲನ್ನು ಸೂಚಿಸುತ್ತದೆ. ಇದು ಭಾರತದ ವೈವಿಧ್ಯಮಯ ಅಗತ್ಯಗಳನ್ನು ಪೂರೈಸುವ ಅಚಲ ಬದ್ಧತೆಯನ್ನು ಒತ್ತಿಹೇಳುತ್ತದೆ" ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.

ಗ್ರಾಹಕರ ವಿಕಸನಗೊಳ್ಳುತ್ತಿರುವ ಅಗತ್ಯಗಳೊಂದಿಗೆ ಹೊಂದಿಕೊಳ್ಳಲು ವ್ಯಾಪಕ ಸಂಶೋಧನೆಗಳನ್ನು ಮಾಡಿದ ನಂತರವೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ. "ಬ್ಲೂ ಡಾರ್ಟ್ ಎಕ್ಸ್​ಪ್ರೆಸ್​ ಲಿಮಿಟೆಡ್ ಭಾರತವನ್ನು ಜಗತ್ತಿನೊಂದಿಗೆ ಮತ್ತು ಜಗತ್ತನ್ನು ಭಾರತದೊಂದಿಗೆ ಸಂಪರ್ಕಿಸುವುದನ್ನು ಮುಂದುವರಿಸುತ್ತಿರುವುದರಿಂದ ಈ ಪರಿವರ್ತನಾತ್ಮಕ ಪ್ರಯಾಣದಲ್ಲಿ ಸೇರಲು ಎಲ್ಲಾ ಮಧ್ಯಸ್ಥಗಾರರನ್ನು ಆಹ್ವಾನಿಸುತ್ತದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜಿ 20 ಪ್ರತಿನಿಧಿಗಳಿಗೆ ಕಳುಹಿಸಲಾದ ಆಹ್ವಾನ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲಿಗೆ ಪ್ರೆಸಿಡೆಂಟ್ ಆಫ್ ಭಾರತ ಎಂದು ಉಲ್ಲೇಖಿಸಿದ ನಂತರ ದೇಶದಲ್ಲಿ ಸಾಕಷ್ಟು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಜಿ20 ಡಿಕ್ಲೆರೇಶನ್ ಸಮಯದಲ್ಲಿ ಪ್ರಧಾನಿ ಮೋದಿ ಅವರ ಮುಂದೆ ಇಂಡಿಯಾ ಬದಲಿಗೆ ಭಾರತ ಎಂದು ಬೋರ್ಡ್ ಇಡಲಾಗಿತ್ತು. ಸದ್ಯ ಕೇಂದ್ರ ಸರ್ಕಾರ ಇಂಡಿಯಾ ಎಂಬ ಹೆಸರನ್ನು ಬದಲಾಯಿಸಿ ಭಾರತ ಎಂದು ಮಾಡಲು ಹೊರಟಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಈ ಹಿನ್ನೆಲೆಯಲ್ಲಿ ಬ್ಲೂಡಾರ್ಟ್​ ತನ್ನ ಪ್ರೀಮಿಯಂ ಸೇವೆಗಳ ವಿಭಾಗವನ್ನು ಭಾರತ ಡಾರ್ಟ್ ಎಂದು ಹೆಸರಿಸಿರುವುದು ಗಮನಾರ್ಹವಾಗಿದೆ.

ಬ್ಲೂ ಡಾರ್ಟ್ ಎಕ್ಸ್​ಪ್ರೆಸ್ ಲಿಮಿಟೆಡ್ ಇದು ದಕ್ಷಿಣ ಏಷ್ಯಾದ ಪ್ರಮುಖ ಸಂಯೋಜಿತ ಏರ್ ಎಕ್ಸ್​ಪ್ರೆಸ್ ವಾಹಕ ಮತ್ತು ಪ್ರೀಮಿಯಂ ಲಾಜಿಸ್ಟಿಕ್ಸ್-ಸೇವೆಗಳ ಪೂರೈಕೆದಾರ ಕಂಪನಿಯಾಗಿದೆ. ಇದು ಭಾರತದ 55000 ಕ್ಕೂ ಹೆಚ್ಚು ಸ್ಥಳಗಳಿಗೆ ಸರಕುಗಳನ್ನು ತಲುಪಿಸುತ್ತದೆ. ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬ್ಲೂ ಡಾರ್ಟ್ ಭಾರತೀಯ ಮೂಲದ ಲಾಜಿಸ್ಟಿಕ್ಸ್ ಕಂಪನಿ ಮತ್ತು ಕೊರಿಯರ್ ವಿತರಣಾ ಸೇವೆಯಾಗಿದೆ.

1983 ರಲ್ಲಿ ಸ್ಥಾಪನೆಯಾದಾಗಿನಿಂದ, ಬ್ಲೂ ಡಾರ್ಟ್ ದಕ್ಷಿಣ ಏಷ್ಯಾದ ದೇಶಗಳಲ್ಲಿ ಕಾರ್ಯನಿರ್ವಹಿಸುವ ಬ್ಲೂ ಡಾರ್ಟ್ ಏವಿಯೇಷನ್ ಎಂಬ ಅಂಗಸಂಸ್ಥೆಯನ್ನು ವಿಸ್ತರಿಸಿದೆ. ಬ್ಲೂ ಡಾರ್ಟ್ ವಿಶ್ವದ ಉನ್ನತ ವಿತರಣಾ ಕಂಪನಿಗಳಲ್ಲಿ ಒಂದಾದ ಡಿಎಚ್ಎಲ್ ಎಕ್ಸ್​ಪ್ರೆಸ್​ನ ಪಾಲುದಾರ ಕಂಪನಿಯಾಗಿದೆ.

ಇದನ್ನೂ ಓದಿ : ಜಗತ್ತಿನ ಶೇ 33ರಷ್ಟು ಜನ ಇಂಟರ್​​ನೆಟ್​ನಿಂದ ದೂರ: ವಿಶ್ವಸಂಸ್ಥೆ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.