ಡಿಜಿಟಲ್ ಯುಗದಲ್ಲಿ ಹಣದ ವಾಹಿವಾಟಿನ ಸ್ವರೂಪವೇ ಬದಲಾಗಿದೆ. ಈ ಹಿಂದೆ ಪರ್ಸ್ಗಳನ್ನು ಕೊಂಡೊಯ್ಯುತ್ತಿದ್ದ ಮಂದಿ ಈಗ ಮೊಬೈಲ್ ಬಳಸುತ್ತಿದ್ದಾರೆ. ಎಲ್ಲಾ ವಯೋಮಾನ ಮತ್ತು ವ್ಯಾಪಾರಿ, ಉದ್ಯಮಿಗಳಿಗೆ ಇದೀಗ ಯುಪಿಐ ವಹಿವಾಟು ಸುಲಭವಾಗಿದೆ.
ಚೇಂಜ್(ಚಿಲ್ಲರೆ) ಸಮಸ್ಯೆ ಎದುರಿಸದಂತೆ ಒಂದೆರಡು ರೂಪಾಯಿಗೂ ಡಿಜಿಟಲ್ ಪಾವತಿ ಮಾಡುತ್ತಿದ್ದಾರೆ. ಮೊಬೈಲ್ ನಂಬರ್ ಮೂಲಕ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಸರಳವಾಗಿ ಪಾವತಿ ಮುಗಿಸಬಹುದು. ಈ ಪಾವತಿಗಳು ವ್ಯಾಪಾರಿ ಮತ್ರು ಗ್ರಾಹಕರಿಗೆ ಸಾರಾಗವಾಗಿದ್ದರೂ ಇದರ ಸುರಕ್ಷತೆಯ ಬಗ್ಗೆ ಕೆಲವು ಬಾರಿ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕ. ಇದರಲ್ಲಿ ಮಾಡುವ ಚಿಕ್ಕಪುಟ್ಟ ತಪ್ಪುಗಳಿಂದ ಕಷ್ಟಪಟ್ಟು ಗಳಿಸಿದ ಹಣವನ್ನು ಕ್ಷಣಾರ್ಧದಲ್ಲಿ ಕಳೆದುಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಯುಪಿಐ ವಹಿವಾಟು ವೇಳೆ ಮಾಡುವ, ಮಾಡಬಹುದಾದ ಕೆಲವು ಅಗತ್ಯ ಅಂಶಗಳ ಕುರಿತು ತಿಳಿದಿರಬೇಕು.
QR ಕೋಡ್: ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಇಂದು ಹಣದ ವಾಹಿವಾಟನ್ನು ಸಂಪೂರ್ಣವಾಗಿ ಡಿಜಟಲೀಕರಣ ಮಾಡಿದೆ. ಈ ಯುಪಿಐ ಪಾವತಿ ಮೇಲೆ ನೀವು ನಿರ್ಲಕ್ಷ್ಯ ವಹಿಸುವುದರಿಂದ ಅನಿರೀಕ್ಷಿತವಾಗಿ ದೊಡ್ಡ ಬೆಲೆ ತೆರಬೇಕಾಗಬಹುದು. ಯುಪಿಐ ವಹಿವಾಟಿನ ಪಾವತಿ ವೇಳೆ ಕ್ಯೂಆರ್ (ಕ್ವಿಕ್ ರೆಸ್ಪಾನ್ಸ್) ಕೋಡ್ ಅನ್ನು ಸ್ಕ್ಯಾನ್ ಮಾಡುತ್ತೇವೆ. ಈ ಸ್ಕ್ಯಾನ್ ಆದ ತಕ್ಷಣ ವ್ಯಾಪಾರಿ ಈ ಕುರಿತು ಗ್ರಾಹಕನಿಗೆ ದೃಢೀಕರಣ ಕೇಳುತ್ತಾನೆ. ಈ ದೃಢೀಕರಣದ ಬಳಿಕವೇ ಪಾವತಿ ಮಾಡಬೇಕು.
ಡಿಜಿಟಲ್ ಪಾವತಿ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಕೆಲವು ಮೋಸ ಮಾಡುವ ಗುಂಪುಗಳಿವೆ. ನಿಮ್ಮ ಮೊಬೈಲ್ ನಂಬರ್ ಪತ್ತೆ ಮಾಡುವ ಅವರು ನಿಮಗೆ ಕರೆ ಮಾಡಿ, ಡಿಜಿಟಲ್ ಸೇರಿದಂತೆ ಇನ್ಯಾವುದಾದರೂ ಮೂಲದ ಮೂಲಕ ಹಣ ವರ್ಗಾಯಿಸಲು ಕೇಳುತ್ತಾರೆ. ಇಲ್ಲವೇ ಅವರು ನಿಮ್ಮ ಪಾವತಿ ಅಪ್ಲಿಕೇಶನ್‌ನಲ್ಲಿ ಸಂದೇಶಗಳನ್ನು ಕಳುಹಿಸಬಹುದು. ಇಂತಹ ಮೋಸದ ಜಾಲಕ್ಕೆ ಸಿಲುಕಿ ಹಣ ಪಾವತಿ ಮಾಡದಂತೆ ಎಚ್ಚರವಹಿಸಬೇಕು.
ಪಿನ್ ಸುರಕ್ಷತೆ: ಯುಪಿಐ ಪಾವತಿ ವೇಳೆ ಆರು ಡಿಜಿಟಲ್ ಪಿನ್ ಮೂಲಕ ಅದರ ಸುರಕ್ಷತೆ ವಹಿಸುವುದು ಅವಶ್ಯ. ಅನೇಕ ಜನರು ನೆನಪಿಡಲು ಸಾಧ್ಯವಾಗುವಂತೆ ನಾಲ್ಕು ಡಿಜಿಟಲ್ ಪಿನ್ಗಳನ್ನು ಇಡುತ್ತಾರೆ. ಒಂದು ವೇಳೆ ನಾಲ್ಕು ಡಿಜಿಟಲ್ ಪಿನ್ ಇದ್ದರೆ ಅದನ್ನು ಮೊದಲು ಬದಲಾಯಿಸಿ. ಆ್ಯಪ್ ಓಪನ್ ಮಾಡಿ ನೀವು ಪಿನ್ ಅಥವಾ ಫಿಂಗರ್ ಪ್ರಿಂಟ್ ಬಯೋಮೆಟ್ರಿಕ್ ಬಳಸುವುದು ಅವಶ್ಯಕ. ಆರ್ಥಿಕ ಮೋಸಗಳಿಂದ ತಪ್ಪಿಸಿಕೊಳ್ಳಲು ಎಷ್ಟರ ಮಟ್ಟಿಗೆ ಹೆಚ್ಚಿನ ಕಾಳಜಿವಹಿಸುತ್ತೀರಿ ಎಂಬುದು ಮುಖ್ಯವಾಗುತ್ತದೆ.
ಕೆಲವು ವಂಚಕರು, ನಿಮಗೆ ಹಣ ಕಳುಹಿಸಿದಂತೆ ಸಂದೇಶ ಕಳುಹಿಸುತ್ತಾರೆ. ಈ ವೇಳೆ ಅವರು ಕೋಡ್ ಸ್ಕ್ಯಾನ್ ಮಾಡಿ ಪಿನ್ ಎಂಟ್ರಿ ಮಾಡುವಂತೆ ತಿಳಿಸುತ್ತಾರೆ. ಈ ರೀತಿ ಅಪ್ಪಿತಪ್ಪಿಯೂ ಮಾಡಬಾರದು ಎಂಬುದನ್ನು ನೆನಪಿನಲ್ಲಿಡಬೇಕು. ನಿಮ್ಮ ಖರೀದಿ ಮಾಡುವಾಗ ಮತ್ತು ವ್ಯಕ್ತಿಗೆ ಹಣ ಕಳುಹಿಸುವಾಗ ಮಾತ್ರವೇ ಈ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ಹಣ ಪಡೆಯುವಾಗ ಯಾವುದೇ ಪಿನ್ ಬಳಕೆ ಅವಶ್ಯಕತೆ ಇಲ್ಲ ಎಂಬುದನ್ನು ನೆನಪಿಡಿ.
ಬ್ಯಾಂಕ್ ವಹಿವಾಟು: ಬ್ಯಾಂಕ್‌ಗಳು ಕೂಡ ನೇರವಾಗಿ ಈ ಯುಪಿಐ ಪಾವತಿಗಳಿಗೆ ಅವಕಾಶ ಕಲ್ಪಿಸಿವೆ. ಇವನ್ನು ಕೂಡ ನೀವು ಬಳಸಬಹುದು. ಆದರೆ, ಥರ್ಡ್ ಪಾರ್ಟಿ ಆ್ಯಪ್ ಅನ್ನು ನೀವು ಸಾಧ್ಯವಾದಷ್ಟು ಮಟ್ಟಿಗೆ ಮಾಡಬೇಡಿ. ನಿಮ್ಮ ಮೊಬೈಲ್ನಲ್ಲಿ ಒಂದು ಅಥವಾ ಎರಡಕ್ಕಿಂತ ಹೆಚ್ಚಿನ ಯುಪಿಐ ಆ್ಯಪ್ಗಳನ್ನು ಕೂಡ ಇರದಿರುವುದು ಒಳ್ಳೆಯದು. ಯುಪಿಐ ಪಾವತಿ ಬಳಿಕ ಬ್ಯಾಂಕ್ನಿಂದ ಎಸ್ಎಂಎಸ್ ಪಡೆದಿದ್ದೀರಾ ಎಂಬುದರ ಬಗ್ಗೆ ಪರಿಶೀಲಿಸಿ. ಯುಪಿಐಗೆ ಲಿಂಕ್ ಮಾಡಲಾದ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿಸುವ ಸೌಲಭ್ಯವನ್ನು ಬ್ಯಾಂಕ್‌ಗಳು ಒದಗಿಸುತ್ತಿವೆ. ಈ ಸೌಲಭ್ಯವನ್ನು ಪಡೆಯುವವರು ಅಂತಹ ಪಾವತಿಗಳಿಗೆ ಯಾವ ಉಳಿತಾಯ ಖಾತೆ ಮತ್ತು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿದಿರಬೇಕು.
ಇದನ್ನೂ ಓದಿ: ಏ.1 ರಿಂದ 6 ಅಂಕಿಗಳ ಹಾಲ್‌ಮಾರ್ಕ್ ಇಲ್ಲದ ಚಿನ್ನಾಭರಣ ಮಾರಾಟ ನಿಷೇಧ