ETV Bharat / business

ಪ್ರಸಕ್ತ ರಬಿ ಹಂಗಾಮಿನಲ್ಲಿ 252 ಲಕ್ಷ ಮೆಟ್ರಿಕ್ ಟನ್ ಗೋಧಿ ಸಂಗ್ರಹ - ಪ್ರಸ್ತುತ ಗೋಧಿ ಸಂಗ್ರಹಣೆಯು

ಈ ಸಲದ ರಬಿ ಹಂಗಾಮಿನಲ್ಲಿ ಈವರೆಗೆ ಕೇಂದ್ರ ಸರ್ಕಾರವು 252 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸಿ ಸಂಗ್ರಹ ಮಾಡಿಕೊಂಡಿದೆ. ಈ ಖರೀದಿಯಿಂದ 20 ಲಕ್ಷಕ್ಕೂ ಹೆಚ್ಚು ರೈತರಿಗೆ ಲಾಭವಾಗಿದೆ.

Around 250 LMT of wheat procured during current Rabi season

author img

By

Published : May 11, 2023, 6:04 PM IST

ನವದೆಹಲಿ : ಪ್ರಸಕ್ತ ಚಾಲ್ತಿಯಲ್ಲಿರುವ ರಬಿ ಮಾರುಕಟ್ಟೆ ಋತುವಿನಲ್ಲಿ (2023-24) ಇದುವರೆಗೆ 252 ಲಕ್ಷ ಮೆಟ್ರಿಕ್ ಟನ್ (ಎಲ್‌ಎಂಟಿ) ಗೋಧಿಯನ್ನು ಸರ್ಕಾರ ಸಂಗ್ರಹಿಸಿದೆ. ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಬಿಡುಗಡೆ ಮಾಡಿದ ಅಂದಾಜಿನ ಪ್ರಕಾರ, ಪ್ರಸ್ತುತ ಗೋಧಿ ಸಂಗ್ರಹಣೆಯು ಕಳೆದ ವರ್ಷದ ಒಟ್ಟು ಸಂಗ್ರಹಣೆ 188 LMT ಅನ್ನು ದಾಟಿದೆ. ಪ್ರಸಕ್ತ ಹಂಗಾಮಿನ ಖರೀದಿಯಿಂದ 20 ಲಕ್ಷಕ್ಕೂ ಹೆಚ್ಚು ರೈತರು ಲಾಭ ಪಡೆದಿದ್ದಾರೆ. ಈ ಮೂಲಕ ಒಟ್ಟಾರೆ 47,000 ಕೋಟಿ ರೂ. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ರೈತರಿಗೆ ಸಂದಾಯವಾಗಿದೆ.

ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಇತರ ರಾಜ್ಯ ಏಜೆನ್ಸಿಗಳು ಗೋಧಿ ಸಂಗ್ರಹಣೆ ಕಾರ್ಯಾಚರಣೆಯಲ್ಲಿ ತೊಡಗಿವೆ. ಸಂಗ್ರಹಣೆ ಪ್ರಕ್ರಿಯೆಯು ಇನ್ನೂ ನಡೆಯುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರೈತರಿಗೆ ಪ್ರಯೋಜನವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ ಮತ್ತು ಪ್ರತಿದಿನ ಸರಾಸರಿ 2 ಲಕ್ಷ ಮೆಟ್ರಿಕ್ ಟನ್​ಗಳಿಗಿಂತ ಹೆಚ್ಚು ಗೋಧಿಯನ್ನು ಈಗಲೂ ಸಂಗ್ರಹಿಸಲಾಗುತ್ತಿದೆ.

ಸಂಗ್ರಹಣೆಯಲ್ಲಿ ಪ್ರಮುಖ ಪಾಲು ಪಂಜಾಬ್, ಹರಿಯಾಣ ಮತ್ತು ಮಧ್ಯಪ್ರದೇಶ ರಾಜ್ಯಗಳದ್ದಾಗಿದೆ. ಈ ಮೂರು ರಾಜ್ಯಗಳಿಂದ ಕ್ರಮವಾಗಿ 118.68 LMT, 62.18 LMT ಮತ್ತು 66.50 LMT ಗೋಧಿ ಸಂಗ್ರಹಣೆ ಮಾಡಲಾಗಿದೆ. ಈ ವರ್ಷ ಗೋಧಿಯ ಗುಣಮಟ್ಟದ ವಿಶೇಷಣಗಳಲ್ಲಿ ಕೇಂದ್ರವು ಸಡಿಲಿಕೆ ಮಾಡಿರುವುದರಿಂದ ಗೋಧಿ ಸಂಗ್ರಹಣೆ ಹೆಚ್ಚಾಗಲು ಒಂದು ಕಾರಣವಾಗಿದೆ. ಅಕಾಲಿಕ ಮಳೆಯಿಂದಾಗಿ ಗೋಧಿಯ ಹೊಳಪು ನಷ್ಟವಾಗುವುದರಿಂದ ಈ ವಿಷಯದಲ್ಲಿ ವಿನಾಯಿತಿ ನೀಡಲಾಗಿದೆ.

ಏತನ್ಮಧ್ಯೆ, 2022-23ರ ಖಾರಿಫ್ ಮಾರ್ಕೆಟಿಂಗ್ ಋತುವಿನಲ್ಲಿ ಮೇ 9 ರವರೆಗೆ 366 LMT ಅಕ್ಕಿಯನ್ನು ಖರೀದಿಸಲಾಗಿದೆ, ಇನ್ನೂ 140 LMT ಅನ್ನು ಖರೀದಿಸಬೇಕಾಗಿದೆ. ಇದರ ಜೊತೆಗೆ, 2022-23 ರ ಖಾರಿಫ್ ಮಾರುಕಟ್ಟೆ ಋತುವಿನ ರಬಿ ಬೆಳೆಯಲ್ಲಿ 106 LMT ಅಕ್ಕಿಯನ್ನು ಸಂಗ್ರಹಿಸಲಾಗಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರದ ಪೂಲ್‌ನಲ್ಲಿ ಗೋಧಿ ಮತ್ತು ಅಕ್ಕಿಯ ಸಂಯೋಜಿತ ಸ್ಟಾಕ್ ಸ್ಥಾನವು 580 LMT (ಗೋಧಿ 310 LMT ಮತ್ತು ಅಕ್ಕಿ 270 LMT) ಗೆ ತಲುಪಿದೆ.

ಪಂಜಾಬ್ ಮಂಡಿಗೆ ಗೋಧಿ ಆವಕ ಹೆಚ್ಚಳ: ಕಳೆದ ವರ್ಷದ 102.3 ಲಕ್ಷ ಟನ್‌ಗಳಿಗೆ ಹೋಲಿಸಿದರೆ ಬುಧವಾರ ಪಂಜಾಬ್‌ನ ಮಂಡಿಗಳಲ್ಲಿ ಗೋಧಿ ಆಗಮನವು 123.68 ಲಕ್ಷ ಟನ್‌ಗಳನ್ನು ಮುಟ್ಟಿದೆ. ಈ ವರ್ಷದ ಗೋಧಿ ಆಗಮನವು ಕಳೆದ ವರ್ಷಕ್ಕಿಂತ 21.28 ಲಕ್ಷ ಟನ್‌ಗಳು ಹೆಚ್ಚಾಗಿದ್ದು, ಶೇ 21 ರಷ್ಟು ಏರಿಕೆಯಾಗಿದೆ. "ನಾವು ದೈನಂದಿನ ಗೋಧಿ ಆಗಮನವು ಇದೇ ಪ್ರಮಾಣದಲ್ಲಿ ಕನಿಷ್ಠ ಒಂದು ವಾರದಿಂದ ಹತ್ತು ದಿನಗಳವರೆಗೆ ಮುಂದುವರಿಯಬಹುದು ಎಂದು ನಿರೀಕ್ಷಿಸಿದ್ದೇವೆ. ಪ್ರತಿದಿನ ಸುಮಾರು 40,000 ರಿಂದ 50,000 ಟನ್‌ ಆವಕದ ನಿರೀಕ್ಷೆ ಇದೆ. ಬುಧವಾರ 47,000 ಟನ್‌ ಗೋಧಿ ಬಂದಿದೆ ಎಂದು ಪಂಜಾಬ್ ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಯ (ಮಂಡಿ ಮಂಡಳಿ) ಉಪ ಪ್ರಧಾನ ವ್ಯವಸ್ಥಾಪಕ ಶ್ರೇಣಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ : ಕೋವಿಡ್​ ಎಮರ್ಜೆನ್ಸಿ ಅಂತ್ಯ: ವೈದ್ಯಕೀಯ ಸಾಧನ ಕಂಪನಿಗಳ ಮಾರಾಟ ಇಳಿಕೆ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.