ETV Bharat / business

ಟ್ಯಾಬ್ಲೆಟ್​ ಮಾರಾಟ: ಜಾಗತಿಕವಾಗಿ ಆ್ಯಪಲ್, ಸ್ಯಾಮ್​ಸಂಗ್ ಮುಂಚೂಣಿಯಲ್ಲಿ

author img

By

Published : May 7, 2023, 3:46 PM IST

ಜಾಗತಿಕ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಆ್ಯಪಲ್ ಹಾಗೂ ಸ್ಯಾಮ್​ಸಂಗ್ ಮುಂಚೂಣಿಯಲ್ಲಿವೆ. ಎರಡೂ ಸೇರಿ ಒಟ್ಟಾರೆ ಮಾರುಕಟ್ಟೆಯಲ್ಲಿ ಶೇ 58ರಷ್ಟು ಪಾಲು ಹೊಂದಿವೆ.

ಟ್ಯಾಬ್ಲೆಟ್​ ಮಾರಾಟ: ಜಾಗತಿಕವಾಗಿ ಆ್ಯಪಲ್, ಸ್ಯಾಮ್​ಸಂಗ್ ಮುಂಚೂಣಿಯಲ್ಲಿ
Apple, Samsung capture 58% of global tablet market

ನವದೆಹಲಿ : ವಿಶ್ವ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಆ್ಯಪಲ್ ಹಾಗೂ ಸ್ಯಾಮ್​ಸಂಗ್ ಪಾರಮ್ಯ ಮೆರೆದಿವೆ. ಟ್ಯಾಬ್ಲೆಟ್​ಗಳ ಮಾರಾಟದಲ್ಲಿ ಜಾಗತಿಕವಾಗಿ ಆ್ಯಪಲ್ ಮೊದಲ ಸ್ಥಾನದಲ್ಲಿ, ಸ್ಯಾಮ್​ಸಂಗ್ ಎರಡನೇ ಸ್ಥಾನದಲ್ಲಿದ್ದು, ಒಟ್ಟಾರೆಯಾಗಿ ಎರಡೂ ಸೇರಿಕೊಂಡು ಶೇ 58 ರಷ್ಟು ಮಾರುಕಟ್ಟೆ ಪಾಲು ಹೊಂದಿವೆ. ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ 35.2 ರಷ್ಟು ಪಾಲಿನೊಂದಿಗೆ ಆ್ಯಪಲ್ 10.8 ಮಿಲಿಯನ್ ಟ್ಯಾಬ್ಲೆಟ್​ಗಳನ್ನು ಮಾರಾಟ ಮಾಡಿದೆ. ಹಾಗೆಯೇ ಸ್ಯಾಮ್​ಸಂಗ್ ಶೇ 23.1 ರಷ್ಟು ಪಾಲಿನೊಂದಿಗೆ 7.1 ಮಿಲಿಯನ್ ಟ್ಯಾಬ್ಲೆಟ್​ಗಳನ್ನು ಮಾರಾಟ ಮಾಡಿದೆ. ಹುವೇಯಿ ಶೇ 6.6 ರಷ್ಟು ಪಾಲಿನೊಂದಿಗೆ ಮೂರನೇ ಸ್ಥಾನದಲ್ಲಿದೆ ಎಂದು ಇಂಟರ್​ ನ್ಯಾಷನಲ್ ಡೇಟಾ ಕಾರ್ಪೊರೇಷನ್​ನ ವರದಿ ಹೇಳಿದೆ.

ವಿಶ್ವಾದ್ಯಂತ ಟ್ಯಾಬ್ಲೆಟ್ ಮಾರಾಟವು 2023 ರ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 19.1 ರಷ್ಟು (ವರ್ಷದಿಂದ ವರ್ಷಕ್ಕೆ) ಕುಸಿತವನ್ನು ದಾಖಲಿಸಿ, 30.7 ಮಿಲಿಯನ್ ಯುನಿಟ್‌ಗಳನ್ನು ತಲುಪಿದೆ. ಕಡಿಮೆ ಮಾರಾಟದ ಪ್ರಮಾಣವನ್ನು ಈಗ ಸಾಂಕ್ರಾಮಿಕ ಪೂರ್ವ ಮಟ್ಟಗಳಿಗೆ ಹೋಲಿಸಬಹುದಾಗಿದೆ. 2019 ರ ಮೊದಲ ತ್ರೈಮಾಸಿಕದಲ್ಲಿ ಮಾರಾಟವಾದ 30.1 ಮಿಲಿಯನ್ ಯುನಿಟ್​ ಹಾಗೂ 2018ರ ಪ್ರಥಮ ತ್ರೈಮಾಸಿಕದಲ್ಲಿ ಮಾರಾಟವಾದ 31.6 ಮಿಲಿಯನ್​ ಯುನಿಟ್​ಗಳಿಗೆ ಈ ವರ್ಷದ ಮಾರಾಟ ಪ್ರಮಾಣವು ಬಹುತೇಕ ಹತ್ತಿರವಿದೆ.

2023ರ ಮೊದಲ ತ್ರೈಮಾಸಿಕದಲ್ಲಿ ಟ್ಯಾಬ್ಲೆಟ್​ ಮಾರಾಟ ಕಂಪನಿಗಳು ಎಚ್ಚರಿಕೆಯಿಂದಲೇ ಹೆಜ್ಜೆ ಇರಿಸಿದ್ದವು. ನಿರೀಕ್ಷೆಯಂತೆ ವಾಣಿಜ್ಯ ಮತ್ತು ಗ್ರಾಹಕ ಎರಡೂ ವಲಯಗಳಲ್ಲಿ ಮಾರಾಟ ಪ್ರಮಾಣ ಕಡಿಮೆಯಾಗಿತ್ತು ಎಂದರು ಅನುರೂಪಾ ನಟರಾಜ್. ಇವರು ಐಡಿಸಿ ಮೋಬಿಲಿಟಿ ಮತ್ತು ಕನ್ಸ್ಯೂಮರ್ ಡಿವೈಸ್ ಟ್ರ್ಯಾಕರ್​ನ ಸೀನಿಯರ್ ರಿಸರ್ಚ್ ಅನಲಿಸ್ಟ್ ಆಗಿದ್ದಾರೆ. ಹೊಸ ಮಾಡೆಲ್​ಗಳು ಲಾಂಚ್ ಆಗುವ ಮೊದಲು ಈಗ ಇರುವ ಹಳೆಯ ಸಂಗ್ರಹಣೆಯನ್ನು ಖಾಲಿ ಮಾಡುವುದಕ್ಕೆ ಮಾರಾಟಗಾರರು ಆದ್ಯತೆ ನೀಡುತ್ತಿರುವುದರಿಂದ 2023ರ ಮೊದಲಾರ್ಧದಲ್ಲಿ ಶಿಪ್​​ಮೆಂಟ್​ಗಳ ಪ್ರಮಾಣ ಕಡಿಮೆ ಇರಲಿದೆ.

ಕ್ರೋಮ್​ಬುಕ್​ಗಳ ಮಾರಾಟ ಕೂಡ ಮೊದಲ ತ್ರೈಮಾಸಿಕದಲ್ಲಿ ಕಡಿಮೆಯಾಗಿದೆ. 3.8 ಮಿಲಿಯನ್ ಕ್ರೋಮ್​ಬುಕ್ ಮಾರಾಟವಾಗಿದ್ದು, ವರ್ಷದಿಂದ ವರ್ಷಕ್ಕೆ ಹೋಲಿಸಿದರೆ ಶೇಕಡಾ 31 ರಷ್ಟು ಇಳಿಕೆಯಾಗಿದೆ. "ಟ್ಯಾಬ್ಲೆಟ್​ಗಳ ಮಾರಾಟ ಕಡಿಮೆಯಾಗಿದ್ದರೂ ಹೆಚ್ಚೆಚ್ಚು ಮಾರಾಟಗಾರರು ಈ ಕ್ಷೇತ್ರಕ್ಕೆ ಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ" ಎನ್ನುತ್ತಾರೆ ರಿಸರ್ಚ್ ಮ್ಯಾನೇಜರ್ ಜಿತೇಶ್ ಉಬ್ರಾನಿ. ಇತ್ತೀಚೆಗೆ ಒನ್​ ಪ್ಲಸ್ ಹೊಸ ಟ್ಯಾಬ್ಲೆಟ್​ ಲಾಂಚ್ ಮಾಡಿರುವುದು ಹಾಗೂ ಗೂಗಲ್​ನ ಹೊಸ ಪಿಕ್ಸೆಲ್ ಟ್ಯಾಬ್ಲೆಟ್ ಮಾರುಕಟ್ಟೆಗೆ ಬರುತ್ತಿರುವುದು ಕಂಪನಿಗಳಿಗೆ ಈ ವಿಷಯದಲ್ಲಿ ಆಶಾಭಾವನೆ ಇರುವುದನ್ನು ಎತ್ತಿ ತೋರಿಸುತ್ತದೆ ಎಂದು ಅವರು ಹೇಳಿದರು.

ಟ್ಯಾಬ್ಲೆಟ್ ಪಿಸಿ ಎಂಬುದು ಪೋರ್ಟಬಲ್ ಪಿಸಿ ಆಗಿದ್ದು, ಇದು ವೈಯಕ್ತಿಕ ಡಿಜಿಟಲ್ ಸಹಾಯಕ (ಪಿಡಿಎ) ಮತ್ತು ನೋಟ್‌ಬುಕ್ ಪಿಸಿ ನಡುವಿನ ಹೈಬ್ರಿಡ್ ಡಿವೈಸ್ ಆಗಿದೆ. ಟಚ್ ಸ್ಕ್ರೀನ್ ಇಂಟರ್‌ಫೇಸ್‌ನೊಂದಿಗೆ ಸುಸಜ್ಜಿತವಾದ ಟ್ಯಾಬ್ಲೆಟ್ ಪಿಸಿ ಸಾಮಾನ್ಯವಾಗಿ ವರ್ಚುವಲ್ ಕೀಬೋರ್ಡ್ ಅನ್ನು ಬಳಸುವ ಸಾಫ್ಟ್‌ವೇರ್ ಅಪ್ಲಿಕೇಶನ್ ಹೊಂದಿರುತ್ತದೆ. ಆದಾಗ್ಯೂ, ಅನೇಕ ಟ್ಯಾಬ್ಲೆಟ್ ಪಿಸಿಗಳು ಬಾಹ್ಯ ಕೀಬೋರ್ಡ್‌ಗಳನ್ನು ಸಪೋರ್ಟ್ ಮಾಡುತ್ತವೆ.

ಇದನ್ನೂ ಓದಿ : ಮಾನವನ ಮೆದುಳಿನಂತೆಯೇ ಕೆಲಸ ಮಾಡುತ್ತೆ ಎಐ: ಸಂಶೋಧನೆಯಲ್ಲಿ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.