ವಾಷಿಂಗ್ಟನ್: ರಾಷ್ಟ್ರೀಯ ಭದ್ರತಾ ದೃಷ್ಟಿ ಹಿನ್ನೆಲೆ ಅಮೆರಿಕ, ಚೀನಾದ ಜನಪ್ರಿಯ ಟಿಕ್ ಟಾಕ್ ಆ್ಯಪ್ ಅನ್ನು ಎಲ್ಲಾ ಫೆಡರಲ್ ಉದ್ಯೋಗಿಗಳ ಸೈಟ್ ಮತ್ತು ಮೊಬೈಲ್ಗಳಿಂದ ತೆಗೆದು ಹಾಕುವಂತೆ ಸೂಚಿಸಿದೆ. ಬೇಹುಗಾರಿಕೆ ಭಯದಿಂದಾಗಿ ಪಾಶ್ಚಿಮಾತ್ಯ ದೇಶಗಳು ಈ ಕ್ರಮಕ್ಕೆ ಮುಂದಾಗಿದೆ.
ಈ ಚೀನಿ ಆ್ಯಪ್ ಇಷ್ಟೊಂದು ಗಂಭೀರ ಅಪಾಯನ್ನು ಉಂಟು ಮಾಡಬಹುದಾ ಎಂಬ ಪ್ರಶ್ನೆ ಮೂಡಿದೆ. ಅಲ್ಲದೇ ಸರ್ಕಾರದಲ್ಲಿ ಕೆಲಸ ಮಾಡದ ಟಿಕ್ ಟಾಕ್ ಬಳಕೆದಾರರೂ ಕೂಡ ಚಿಂತೆಗೀಡಾಗುವಂತೆ ಆಗಿದೆ. ಈ ಆ್ಯಪ್ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುವ ಮತ್ತು ಹಂಚಿಕೊಳ್ಳುತ್ತದೆಯೇ ಎಂಬುದರ ಕುರಿತ ವಿಶ್ಲೇಷಣೆ ಇಲ್ಲಿದೆ..
ಅಮೆರಿಕ ಮತ್ತು ಇತರೆ ಸರ್ಕಾರದಲ್ಲಿ ಹೇಗೆ ಟಿಕ್‌ಟಾಕ್ ಬ್ಯಾನ್.. ಶ್ವೇತಭವನದಲ್ಲಿ ಸೋಮವಾರ ಹೊರಬಿದ್ದ ಸೂಚನೆ ಅನುಸಾರ, ಅಮೆರಿಕದ ಎಲ್ಲಾ ಫೆಡರಲ್ ಏಜೆನ್ಸಿಗಳು 30 ದಿನಗಳೊಳಗೆ ಸರ್ಕಾರ ನೀಡಿರುವ ಮೊಬೈಲ್ನಲ್ಲಿ ಈ ಆ್ಯಪ್ ಅನ್ನು ಡಿಲೀಟ್ ಮಾಡಬೇಕು ಎಂದಿದೆ. ಈಗಾಗಲೇ ಕಾಂಗ್ರೆಸ್, ಶ್ವೇತಭವನ, ಅಮೆರಿಕ ಸೇನೆ ಮತ್ತು ಅರ್ಧಕ್ಕಿಂತ ಹೆಚ್ಚಿನ ಅಮೆರಿಕ ಜನರು ಟಿಕ್‌ಟಾಕ್ ಅನ್ನು ಈಗಾಗಲೇ ಅಳಿಸಿ ಹಾಕಿದ್ದಾರೆ. ಟಿಕ್‌ಟಾಕ್ ಮಾತೃಸಂಸ್ಥೆ ಬೈಟ್ ಡ್ಯಾನ್ಸ್ ಬಳಕೆದಾರರ ಬ್ರೌಸಿಂಗ್ ಡೇಟಾ ಮತ್ತು ಲೋಕೆಷನ್ನ ದತ್ತಾಂಶ ನೀಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಯುರೋಪಿಯನ್ ಯೂನಿಯನ್ ಎಕ್ಸುಕ್ಯೂಟಿವ್ ಬ್ರಾಂಚ್, ತನ್ನ ಉದ್ಯೋಗಿಗಳ ಮೊಬೈಲ್ನಲ್ಲಿದ್ದ ಟಿಕ್‌ಟಾಕ್ ಅನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಡೆನ್ಮಾರ್ಕ್ ಮತ್ತು ಕೆನಡಾ ಕೂಡ ಸರ್ಕಾರಿ ಮೊಬೈಲ್ಗಳಲ್ಲಿ ಟಿಕ್‌ಟಾಕ್ ನಿಷೇಧಿಸುವ ಪ್ರಯತ್ನ ಕುರಿತು ಘೋಷಣೆ ಹೊರಡಿಸಿವೆ. ಇನ್ನು, ಅಮೆರಿಕದ ಈ ನೀತಿ ವಿರುದ್ಧ ಮಾತನಾಡಿರುವ ಚೀನಾ ಇದು ಯುಎಸ್ನ ಅಭದ್ರತೆ ಮತ್ತು ರಾಜ್ಯದ ಅಧಿಕಾರದ ದುರುಪಯೋಗವಾಗಿದೆ ಎಂದು ಟೀಕಿಸಿದೆ.
ಟಿಕ್ಟಾಕ್ನ ಕುರಿತು: ಎಫ್ಬಿಐ ಮತ್ತು ಫೆಡರಲ್ ಕಮ್ಯೂನಿಕೇಷನ್ ಕಮಿಷನ್ ಬೈಟ್‌ಡ್ಯಾನ್ಸ್ ಚೀನಾದ ಸರ್ಕಾರದೊಂದಿಗೆ ಟಿಕ್‌ಟಾಕ್ ಬಳಕೆದಾರರ ಡೇಟಾವನ್ನು ಹಂಚಿಕೊಳ್ಳಬಹುದು ಎಂದು ಎಚ್ಚರಿಸಿದೆ. 2017ರಲ್ಲಿ ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಅಗತ್ಯ ಕಂಪನಿಗಳು ಸರ್ಕಾರದೊಂದಿಗೆ ದತ್ತಾಂಶಗಳನ್ನು ಹಂಚಿಕೊಳ್ಳಬಹುದು ಎಂಬ ನೀತಿಯನ್ನು ಚೀನಾ ಜಾರಿಗೆ ತಂದಿತು. ಟಿಕ್‌ಟಾಕ್ ಈ ರೀತಿ ದತ್ತಾಂಶ ಹಂಚಿಕೊಳ್ಳುತ್ತಿದೆ ಎಂಬ ಯಾವುದೇ ಸಾಕ್ಷಿ ಇಲ್ಲ. ಆದರೆ, ಅಧಿಕ ಡೇಟಾ ಹೊಂದಿರುವ ಹಿನ್ನೆಲೆ ಈ ರೀತಿ ನಡೆಯಬಹುದು ಎಂಬ ಭಯ ಇದೆ.
ಬುಜ್ಫೀಡ್ ನ್ಯೂಸ್ ಸೇರಿದಂತೆ ಕೆಲವು ಪತ್ರಕರ್ತರಿಗೆ ತಮ್ಮ ದತ್ತಾಂಶ ನೀಡಿದ ಹಿನ್ನೆಲೆ ಬೈಟ್‌ಡ್ಯಾನ್ಸ್ ನಾಲ್ವರು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿತ್ತು. ಕಂಪನಿಯ ನಿಯಮಗಳ ಉಲ್ಲಂಘನೆ ಅತಿರೇಕದ ದುರುಪಯೋಗ ಎಂದು ಟಿಕ್‌ಟಾಕ್ ವಕ್ತಾರರು ತಿಳಿಸಿದ್ದರು.
ಟಿಕ್‌ಟಾಕ್ ಬಗ್ಗೆ ಕಾಳಜಿ ಹಿವಹಿಸಬೇಕಾದ ಮತ್ತೊಂದು ವಿಷಯ ಎಂದರೆ, ಇದು ಹದಿಹರೆಯವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಸಂಬಂಧ ಕೌಂಟರ್ ಡಿಜಿಟಲ್ ಹೇಟ್ ತನ್ನ ಸಂಶೋಧನಾ ವರದಿ ಪ್ರಕಟಿಸಿತ್ತು. ಇದರಲ್ಲಿ 13.2 ಮಿಲಿಯನ್ ಜನರ ಮೇಲೆ ಅಂದರೆ, ಅಮೆರಿಕದ ಮೂರನೇ ಎರಡರಷ್ಟು ಹದಿ ಹರೆಯದವರ ಮೇಲೆ ಪ್ರಭಾವ ಬೀರುತ್ತಿದೆ ಎಂದು ಪ್ಯೂ ರಿಸರ್ಚ್ ಸೆಂಟರ್ ತಿಳಿಸಿತ್ತು.
ಟಿಕ್ ಟಾಕ್ ನಿಯಮಗಳು: 2020ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಡೋನಾಲ್ಡ್ ಟ್ರಂಪ್ ಕೂಡ ಈ ಟಿಕ್ ಟಾಕ್ ಗೆ ನಿಷೇಧ ಹೇರಿದ್ದರು. ಕೋರ್ಟ್ ಟ್ರಂಪ್ ಅವರ ಈ ಪ್ರಯತ್ನವನ್ನು ನಿರ್ಬಂಧಿಸಿದ್ದವು. ಅಧ್ಯಕ್ಷ ಜೋ ಬೈಡನ್ ಅವರು ಅಧಿಕಾರ ವಹಿಸಿಕೊಂಡ ನಂತರ ಟ್ರಂಪ್ ಅವರ ಆದೇಶಗಳನ್ನು ರದ್ದುಗೊಳಿಸಿದ್ದರು. ಆದರೆ ಇದೀಗ ಮತ್ತೊಮ್ಮೆ ಜೋ ಬೈಡನ್ ಸರ್ಕಾರಿ ಸಾಧನ ಕಾರ್ಯದಲ್ಲಿ ಟಿಕ್‌ಟಾಕ್ ನಿಷೇಧಕ್ಕೆ ಮುಂದಾಗಿದ್ದಾರೆ.
ಎಷ್ಟು ಅಪಾಯ ಈ ಟಿಕ್‌ಟಾಕ್: ಅಮೆರಿಕದ ಡೆಪ್ಯೂಟಿ ಅಟರ್ನಿ ಜನರಲ್ ಲಿಸಾ ಮೊನಾಕೊಗೆ ಈ ಪ್ರಶ್ನೆ ಕೇಳಿದರೆ, ಅವರು ಚೀನಾ ಸರ್ಕಾರ ತಮ್ಮ ದತ್ತಾಂಶ ತೆಗೆದುಕೊಳ್ಳುತ್ತಿರುವುದಾಗಿ ತಿಳಿಸುತ್ತಾರೆ. ನಾನು ಟಿಕ್‌ಟಾಕ್ ಬಳಸುವುದಿಲ್ಲ. ನಾನು ಇದನ್ನು ಯಾರಿಗೂ ಶಿಫಾರಸು ಮಾಡುವುದಿಲ್ಲ ಎನ್ನುತ್ತಾರೆ.
ಟಿಕ್ ಟಾಕ್ ಅಮೆರಿಕದ ಬಳಕೆದಾರರ ಎಲ್ಲಾ ದತ್ತಾಂಶಗಳನ್ನು ಒಟಾಗಲ್ ನಿಯಂತ್ರಣ ಮಾಡುತ್ತಿದೆ ಎಂದು ತನ್ನ ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿತು. ಆದರೆ, ಟಿಕ್‌ಟಾಕ್ ಅಮೆರಿಕ ಮತ್ತು ಸಿಂಗಪುರದಲ್ಲಿ ತನ್ನ ಪ್ರಬಲ ದತ್ತಾಂಶದ ಸರ್ವರ್ ಬ್ಯಾಕ್ಅಪ್ ಹೊಂದಿದೆ. ಅಮೆರಿಕ ಬಳಕೆದಾರರ ದತ್ತಾಂಶವನ್ನು ತನ್ನ ಸರ್ವರ್ನಿಂದ ತೆಗೆದುಹಾಕುವುದರ ನಿರೀಕ್ಷೆ ಮಾಡಿದೆ. ಆದರೆ, ಇದಕ್ಕೆ ಟೈಮ್ಲೈನ್ ಅನ್ನು ನೀಡಿಲ್ಲ.
ಇತರೆ ಸಮಾಜಿಕ ಮಾಧ್ಯಮಗಳ ಸೈಟ್ಗಳಿಗೆ ಭಿನ್ನವಾಗಿ ಟಿಕ್‌ಟಾಕ್ ಮಾಹಿತಿ ಸಂಗ್ರಹಿಸಿಲ್ಲ ಎಂದು ತಜ್ಞರು ತಿಳಿಸುತ್ತಾರೆ. ಈ ಸಂಬಂಧ 2021ರಲ್ಲಿ ಯುನಿವರ್ಸಿಟಿ ಆಫ್ ರೊರೊಂಟೊನಲ್ಲಿ ಸಂಶೋಧನೆ ಪ್ರಕಟಿಸಿದ್ದು, ಇದರಲ್ಲಿ ಟಿಕ್‌ಟಾಕ್ ಮತ್ತು ಫೇಸ್ಬುಕ್ ಒಂದೇ ರೀತಿಯ ದತ್ತಾಂಶ ಸಂಗ್ರಹಿಸುವುದಾಗಿ ತಿಳಿಸಿತ್ತು. ಅಲ್ಲದೇ, ನಿಮ್ಮ ದತ್ತಾಂಶ ಸಂಗ್ರಹದ ಮಟ್ಟ ಮತ್ತು ಹಂಚಿಕೊಳ್ಳುವ ಸಂಬಂಧ ನೀವು ಅಸಮಾಧಾನ ಹೊಂದಿದ್ದರೆ, ನೀವು ಆ ನಿರ್ದಿಷ್ಟ ಆ್ಯಪ್ಗಳನ್ನು ಬಳಸುವುದನ್ನು ನಿಲ್ಲಿಸಬೇಕು ಎಂದು ಸಂಶೋಧನೆ ನಡೆಸಿದ್ದ ಸಿಟಿಜನ್ ಲ್ಯಾಬ್ ವರದಿ ಮಾಡಿತ್ತು.
ಟಿಕ್‌ಟಾಕ್ ಹೇಳುವುದೇನು?: ಸರ್ಕಾರಗಳು ಟಿಕ್‌ಟಾಕ್ ನಿರ್ಬಂಧಿಸುವುದರಿಂದ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಟಿಕ್‌ಟಾಕ್ ವಕ್ತಾರರು ತಿಳಿಸಿದ್ದಾರೆ. ಈ ನಿಷೇಧವೂ ರಾಜಕೀಯ ನಾಟಕವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಅಮೆರಿಕದಲ್ಲಿ ಟಿಕ್‌ಟಾಕ್ ಬ್ಯಾನ್: ಎಲ್ಲ ಸರ್ಕಾರಿ ಜಾಲತಾಣದಿಂದ ಅಳಿಸಿಹಾಕಲು 30 ದಿನಗಳ ಡೆಡ್ಲೈನ್