ETV Bharat / business

ಭಾರತದಲ್ಲಿ ಇನ್ನೂ 15 ಬಿಲಿಯನ್​ ಡಾಲರ್​ ಹೂಡಿಕೆ ಮಾಡಲಿರುವ ಅಮೆಜಾನ್​.. ಮೋದಿ ಭೇಟಿ ಬಳಿಕ ಸಿಇಒ ಆಂಡಿ ಜಾಸ್ಸಿ ಘೋಷಣೆ - ವಾಷಿಂಗ್ಟನ್

ಅಮೆಜಾನ್ ಕಂಪನಿ ಭಾರತದಲ್ಲಿ ಇನ್ನೂ 15 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಉದ್ದೇಶಿಸಿದೆ ಎಂದು ಅಮೆಜಾನ್​ ಸಿಇಒ ಆಂಡಿ ಜಾಸ್ಸಿ ಹೇಳಿದ್ದಾರೆ.

ಸಿಇಒ ಆಂಡಿ ಜಾಸ್ಸಿ ಮತ್ತು ಪ್ರಧಾನಿ ನರೇಂದ್ರ ಮೋದಿ

author img

By

Published : Jun 24, 2023, 7:16 AM IST

ವಾಷಿಂಗ್ಟನ್(ಅಮೆರಿಕ): ಇ- ಕಾಮರ್ಸ್​ನ ಬೃಹತ್​ ಕಂಪನಿಯಾಗಿರುವ ಅಮೆಜಾನ್ ಭಾರತದಲ್ಲಿ 15 ಶತಕೋಟಿ ಡಾಲರ್‌ಗಳಷ್ಟು ಹೆಚ್ಚು ಹೂಡಿಕೆ ಮಾಡಲು ಯೋಜಿಸಿದೆ, ದೇಶದಲ್ಲಿ ಅದರ ಒಟ್ಟು ಹೂಡಿಕೆಯನ್ನು 26 ಶತಕೋಟಿ ಡಾಲರ್‌ಗೆ ಏರಿಸಿದೆ ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಮೆರಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ, ಅಮೆಜಾನ್ ಸಿಇಒ ಆಂಡಿ ಜಾಸ್ಸಿ, ಕಂಪನಿಯು ಈಗಾಗಲೇ ಭಾರತದಲ್ಲಿ 11 ಬಿಲಿಯನ್ ಡಾಲರ್​ ಹೂಡಿಕೆ ಮಾಡಿದೆ ಎಂದು ತಿಳಿಸಿದ್ದಾರೆ.

  • Productive meeting with Prime Minister @NarendraModi. Discussed Amazon’s commitment to invest $26B in India by 2030; working together we will support startups, create jobs, enable exports, and empower individuals and small businesses to compete globally. pic.twitter.com/yEgy0TVqpK

    — Andy Jassy (@ajassy) June 23, 2023 " class="align-text-top noRightClick twitterSection" data=" ">

ಮೋದಿ ಭೇಟಿ ಬಳಿಕ ಈ ಕುರಿತು ತಿಳಿಸಿರುವ ಸಿಇಒ ಆಂಡಿ ಜಾಸ್ಸಿ, ನಾನು ಪ್ರಧಾನಿ ಮೋದಿಯವರೊಂದಿಗೆ ಉತ್ತಮ ಮತ್ತು ಫಲಪ್ರದವಾದ ಸಂಭಾಷಣೆಯನ್ನು ನಡೆಸಿದ್ದೇನೆ. ನಾವು ಹಲವಾರು ಗುರಿಗಳನ್ನು ಹಂಚಿಕೊಳ್ಳುತ್ತೇವೆ ಎಂದು ನಾನು ಭಾವಿಸುತ್ತೇನೆ. ಅಮೆಜಾನ್ ಭಾರತದ ಅತಿದೊಡ್ಡ ಹೂಡಿಕೆದಾರರಲ್ಲಿ ಒಂದಾಗಿದೆ. ನಾವು ಇಲ್ಲಿಯವರೆಗೆ USD 11 ಶತಕೋಟಿ ಹೂಡಿಕೆ ಮಾಡಿದ್ದೇವೆ ಮತ್ತು ಮತ್ತೊಂದು USD 15 ಶತಕೋಟಿ ಹೂಡಿಕೆ ಮಾಡಲು ಉದ್ದೇಶಿಸಿದ್ದೇವೆ. ಇದು ಒಟ್ಟು USD 26 ಶತಕೋಟಿ ಆಗಲಿದೆ. ಆದ್ದರಿಂದ ಪಾಲುದಾರಿಕೆಯ ಭವಿಷ್ಯಕ್ಕಾಗಿ ನಾವು ತುಂಬಾ ಎದುರು ನೋಡುತ್ತಿದ್ದೇವೆ ”ಎಂದು ಜಾಸ್ಸಿ ಶುಕ್ರವಾರ ಹೇಳಿದರು.

ಪ್ರಧಾನ ಮಂತ್ರಿ ಅಮೆಜಾನ್ ಅಧ್ಯಕ್ಷ ಮತ್ತು ಸಿಇಒ ಅವರೊಂದಿಗೆ ಉತ್ಪಾದಕ ಸಭೆ ನಡೆಸಿದರು. ಇ - ಕಾಮರ್ಸ್​ ಕ್ಷೇತ್ರದ ಬಗ್ಗೆ ಮತ್ತು ಭಾರತದಲ್ಲಿ ಲಾಜಿಸ್ಟಿಕ್ಸ್ ವಲಯದಲ್ಲಿ ಅಮೆಜಾನ್​ ಜೊತೆಗೆ ಮತ್ತಷ್ಟು ಸಹಯೋಗದ ಸಾಮರ್ಥ್ಯದ ಕುರಿತು ಹೆಚ್ಚು ಪ್ರಾಮುಖ್ಯತೆ ವಹಿಸಿ ಚರ್ಚಿಸಲಾಯಿತು ಎಂದು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್‌ನಲ್ಲಿ ತಿಳಿಸಿವೆ. ಭಾರತದಲ್ಲಿ ಎಂಎಸ್‌ಎಂಇಗಳ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ) ಡಿಜಿಟಲೀಕರಣವನ್ನು ಉತ್ತೇಜಿಸುವ ಅಮೆಜಾನ್‌ನ ಉಪಕ್ರಮವನ್ನು ಮೋದಿ ಸ್ವಾಗತಿಸಿದರು.

ಅಮೆಜಾನ್​ ವೆಬ್​ ಸೇವೆಗಳು ಭಾರತದಲ್ಲಿ ಹೂಡಿಕೆ: ಅಮೆಜಾನ್ ವೆಬ್ ಸೇವೆಗಳು 2030 ರ ವೇಳೆಗೆ ಭಾರತದಲ್ಲಿ ಕ್ಲೌಡ್ ಮೂಲಸೌಕರ್ಯದಲ್ಲಿ $12.7 ಬಿಲಿಯನ್ ಹೂಡಿಕೆ ಮಾಡಲು ಯೋಜಿಸಿದೆ. ಭಾರತದಲ್ಲಿ ಕ್ಲೌಡ್ ಮೂಲಸೌಕರ್ಯದಲ್ಲಿ ರೂ 1,05,600 ಕೋಟಿ (ಯುಎಸ್ $ 12.7 ಬಿಲಿಯನ್) ಹೂಡಿಕೆ ಮಾಡಲು ಯೋಜಿಸಿದೆ ಮತ್ತು ದೇಶದಲ್ಲಿ ಅದರ ದೀರ್ಘಾವಧಿಯ ಬದ್ಧತೆ 2030 ರ ವೇಳೆಗೆ ರೂ. 1,36,500 ಕೋಟಿ (ಯುಎಸ್ $ 16.4 ಬಿಲಿಯನ್) ತಲುಪುತ್ತದೆ ಎಂದು ಅಮೆಜಾನ್ ವೆಬ್ ಸರ್ವಿಸಸ್ ಈ ಹಿಂದೆ ಹೇಳಿದೆ.

ಈ ಹೂಡಿಕೆಯು 2030 ರ ವೇಳೆಗೆ ಭಾರತದ ಒಟ್ಟು GDP ಗೆ 1,94,700 ಕೋಟಿ ($23.3 ಶತಕೋಟಿ) ಕೊಡುಗೆ ನೀಡುತ್ತದೆ ಎಂದು ಅಂದಾಜಿಸಲಾಗಿದೆ. ಇನ್ನು ಅಮೆಜಾನ್‌ನ ಕ್ಲೌಡ್ ಕಂಪ್ಯೂಟಿಂಗ್ ಯೂನಿಟ್ Amazon Web Services (AWS) ಹೇಳುವಂತೆ ಭಾರತದಲ್ಲಿನ ಡೇಟಾ ಸೆಂಟರ್‌ಗಳ ಮೂಲಸೌಕರ್ಯದಲ್ಲಿನ ಹೂಡಿಕೆಯು ಭಾರತೀಯ ವ್ಯವಹಾರದಲ್ಲಿ ಪ್ರತಿ ವರ್ಷ ಸರಾಸರಿ 1,31,700 ಉದ್ಯೋಗಗಳನ್ನು ಸೃಷ್ಟಿಸುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಒಂದು ಲಕ್ಷ ಕೋಟಿ ರೂ. ಹೂಡಿಕೆ ಮಾಡಿದ ಅಮೆಜಾನ್ ವೆಬ್ ಸರ್ವೀಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.