ಬೀಜಿಂಗ್: ಜಗತ್ತಿನೆಲ್ಲೆಡೆ ಟೆಕ್ ದೈತ್ಯ ಕಂಪನಿಗಳು ಉದ್ಯೋಗ ವಜಾಕ್ಕೆ ಮುಂದಾಗಿವೆ. ಇದರಿಂದ ಅನೇಕ ಪದವೀಧರರು ನಿರುದ್ಯೋಗಿಗಳಾಗುತ್ತಿದ್ದಾರೆ. ಇದು ಆರ್ಥಿಕತೆ ಮೇಲೂ ಪರಿಣಾಮ ಬೀರುತ್ತಿದೆ. ಈ ನಡುವೆ ಈ ಕಂಪನಿಯೊಂದು 15,000 ಹೊಸ ಉದ್ಯೋಗ ನೇಮಕಾತಿಗೆ ಮುಂದಾಗಿದೆ. ಅಷ್ಟಕ್ಕೂ ಯಾವುದು ಈ ಸಂಸ್ಥೆ, ಎಲ್ಲಿದೆ ಉದ್ಯೋಗ ಎಂಬ ಮಾಹಿತಿಗೆ ಇಲ್ಲಿದೆ ವಿವರ.
ಚೀನಾದ ಟೆಕ್ ಸಮೂಹ ಸಂಸ್ಥೆಯಾಗಿರುವ ಆಲಿಬಾಬಾ ಗ್ರೂಪ್ ಈ ಹೊಸ ಪ್ರಕಟಣೆ ಹೊರಡಿಸಿದೆ. ಈ ಹಿಂದೆ ಆಲಿ ಬಾಬಾ ಕಂಪನಿಯಲ್ಲಿ ಉದ್ಯೋಗ ವಜಾ ನಡೆಯಲಿದೆ ಎಂಬ ಸುದ್ದಿಯನ್ನು ತಳ್ಳಿ ಹಾಕಿರುವ ಸಂಸ್ಥೆ ಇದೀಗ ನೇಮಕಾತಿ ಕುರಿತು ಭರ್ಜರಿ ಸುದ್ದಿ ನೀಡಿದೆ. ಈ ಕುರಿತು ವರದಿ ಮಾಡಿರುವ ಸೌತ್ ಚೀನಾ ಪೋಸ್ಟ್, ಆಲಿಬಾಬಾದ ಆರು ಘಟಕಗಳಲ್ಲಿ ಈ ವರ್ಷ 3 ಸಾವಿರ ಪದವೀಧರರು ಸೇರಿದಂತೆ 15 ಸಾವಿರ ಹೊಸ ನೇಮಕಾತಿ ಮಾಡಲು ಮುಂದಾಗಿದೆ ಎಂದು ತಿಳಿಸಿದೆ.
ಈ ಕುರಿತು ಸಂಸ್ಥೆಯ ಅಧಿಕೃತ ಖಾತೆಯಿಂದ ಕೂಡ ಪ್ರಕಟಿಸಲಾಗಿದ್ದು, ಸಂಸ್ಥೆ ಸಾವಿರಾರು ಉದ್ಯೋಗ ನೇಮಕಾತಿಗೆ ಮುಂದಾಗಿದೆ. ಈ ಮೂಲಕ ಹಲವರಿಗೆ ನೌಕರಿ ಕಲ್ಪಿಸಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ. ಸಂಸ್ಥೆಯಲ್ಲಿ ಹೊಸಬರು ಬರುವುದು ಹಳಬರು ಹೋಗುವುದು ಸಾಮಾನ್ಯ. ಹೊಸ ಅವಕಾಶಗಳು ಮತ್ತು ಬೆಳವಣಿಗೆ ಮೂಲಕ ನಾವು ಅಭಿವೃದ್ಧಿ ಆಗುವುದನ್ನು ನಿಲ್ಲಿಸುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.
ಇನ್ನು ಕಳೆದ ವರ್ಷಾಂತ್ಯದಲ್ಲಿ ಟೆಕ್ ಕಂಪನಿಗಳಲ್ಲಿ ವಜಾ ಪ್ರಕ್ರಿಯೆ ಶುರುವಾದಗ ಕೂಡ, ಆಲಿಬಾಬಾ ಸಂಸ್ಥೆ ದುರ್ಬಲ ಆರ್ಥಿಕ ಪರಿಸ್ಥಿತಿಗಳಿಂದಾಗಿ ಶೇ 7ರಷ್ಟು ಉದ್ಯೋಗಿಗಳ ವಜಾಗೊಳಿಸಲು ಮುಂದಾಗಿದೆ ಎಂದು ವರದಿಯಾಗಿತ್ತು. ಆದರೆ, ಈ ಸುದ್ದಿಯನ್ನು ಸಂಸ್ಥೆ ಸುಳ್ಳು ಮಾಡಿದೆ.
ಆಲಿಬಾಬಾ ಗ್ರೂಪ್ ಮಾರ್ಚ್ನಲ್ಲಿ ಆರು ವ್ಯಾಪಾರ ಗುಂಪುಗಳಾಗಿ ವಿಭಜಿಸಲು ಮತ್ತು ಪ್ರತ್ಯೇಕ ಸಾರ್ವಜನಿಕ ಪಟ್ಟಿಗಳನ್ನು ಪ್ರಾರಂಭಿಸಲು ಯೋಜಿಸಿದೆ.ಆ ಘಟಕಗಳು ಕ್ಲೌಡ್ ಇಂಟೆಲಿಜೆನ್ಸ್ ಗ್ರೂಪ್, ಟಾವೊಬಾವೊ ಟಿಮಾಲ್ ಕಾಮರ್ಸ್ ಗ್ರೂಪ್, ಸ್ಥಳೀಯ ಸೇವೆಗಳ ಗುಂಪು, ಕೈನಿಯಾವೊ ಸ್ಮಾರ್ಟ್ ಲಾಜಿಸ್ಟಿಕ್ಸ್ ಗ್ರೂಪ್, ಗ್ಲೋಬಲ್ ಡಿಜಿಟಲ್ ಕಾಮರ್ಸ್ ಗ್ರೂಪ್ ಮತ್ತು ಡಿಜಿಟಲ್ ಮೀಡಿಯಾ ಮತ್ತು ಎಂಟರ್ಟೈನ್ಮೆಂಟ್ ಗ್ರೂಪ್ ಅನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ವ್ಯಾಪಾರ ಘಟಕವು ಅದರ ಸ್ವಂತ ಸಿಇಒ ಮತ್ತು ನಿರ್ದೇಶಕರ ಮಂಡಳಿಯ ನೇತೃತ್ವದಲ್ಲಿರುತ್ತದೆ.
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇನಿಯಲ್ ಜಾಂಗ್ ಈ ತಿಂಗಳ ಆರಂಭದಲ್ಲಿ ಮೊದಲ ಬಾರಿಗೆ ಐತಿಹಾಸಿಕ ಶೇಕ್ಅಪ್ನ ವಿವರಗಳನ್ನು ವಿವರಿಸಿದರು. ಪ್ರತ್ಯೇಕ ಘಟಕಗಳಲ್ಲಿ ಸಿಬ್ಬಂದಿಯನ್ನು ವಿವರಿಸದ ಗುಂಪು ಮಾರ್ಚ್‌ನ ವೇಳೆಗೆ 2,35,000 ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿದೆ ಇದೇ ವೇಳೆ ಸಂಸ್ಥೆ ತಮ್ಮ ಕಂಪನಿಯಲ್ಲಿ ಉದ್ಯೋಗ ನೇಮಕಾತಿ ನಿರಂತರವಾಗಿ ನಡೆದಿದೆ. ಪ್ರತಿಭಾವಂತರ ಹುಡುಕಾಟವನ್ನು ನಾವು ನಿಲ್ಲಿಸಿಲ್ಲ ಎಂದು ಸಂಸ್ಥೆ ಅಧಿಕೃತವಾಗಿ ತಿಳಿಸಿದ್ದು, ಈ ಸಂಬಂಧ ಸಾಕ್ಷಿಗಳನ್ನು ಕೂಡ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಐಟಿ ಹಾರ್ಡ್‌ವೇರ್ ಉತ್ಪಾದನೆಗೆ 17 ಸಾವಿರ ಕೋಟಿ ರೂ. ಪ್ರೋತ್ಸಾಹಕ್ಕೆ ಸರ್ಕಾರ ಅಸ್ತು