ETV Bharat / business

ಕಂಪನಿಗಳ ಉತ್ಪಾದಕತೆ, ಆರ್ಥಿಕತೆಗೆ ವೇಗ ನೀಡಲಿದೆ ಕೃತಕ ಬುದ್ಧಿಮತ್ತೆ: ಐಬಿಎಂ ಸಿಇಒ ಅರವಿಂದ್ ಕೃಷ್ಣ - ಟೆಕ್ ಕಂಪನಿಗಳು ಸುರಕ್ಷಿತ ಮತ್ತು ಜವಾಬ್ದಾರಿಯುತವಾಗಿ ಎಐ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅಳವಡಿಕೆಯಿಂದ ಕಂಪನಿಗಳ ಉತ್ಪಾದಕತೆ ಹೆಚ್ಚಾಗಲಿದೆ ಎಂದು ಐಬಿಎಂ ಅಧ್ಯಕ್ಷ ಮತ್ತು ಸಿಇಒ ಅರವಿಂದ್ ಕೃಷ್ಣ ಹೇಳಿದ್ದಾರೆ.

AI will help companies,
AI will help companies,
author img

By ETV Bharat Karnataka Team

Published : Aug 25, 2023, 8:01 PM IST

ನವದೆಹಲಿ : ಕೃತಕ ಬುದ್ಧಿಮತ್ತೆಯು (ಎಐ) ಕೆಲ ಕೆಳಹಂತದ ಉದ್ಯೋಗಗಳನ್ನು ಸ್ವಯಂ ಚಾಲಿತವಾಗಿ ಮಾಡಲಿದೆ ಮತ್ತು ಇದರಿಂದ ಒಟ್ಟಾರೆ ಉತ್ಪಾದಕತೆಯು ಹೆಚ್ಚಾಗಲಿದೆ. ಈ ಮೂಲಕ ಆರ್ಥಿಕತೆ ಮತ್ತು ಕಂಪನಿಗಳು ವೇಗವಾಗಿ ಬೆಳೆಯಲು ಸಹಾಯವಾಗುತ್ತದೆ ಎಂದು ಐಬಿಎಂ ಅಧ್ಯಕ್ಷ ಮತ್ತು ಸಿಇಒ ಅರವಿಂದ್ ಕೃಷ್ಣ ಶುಕ್ರವಾರ ಹೇಳಿದ್ದಾರೆ.

ಜಾಗತಿಕ ವ್ಯಾಪಾರ ಸಮುದಾಯದೊಂದಿಗೆ ಜಿ-20ಯ ಅಧಿಕೃತ ಸಂವಾದ ವೇದಿಕೆಯಾದ 'ಬಿ 20 ಶೃಂಗಸಭೆ ಭಾರತ 2023' (B20 Summit India 2023) ನಲ್ಲಿ ಮಾತನಾಡಿದ ಕೃಷ್ಣ, ಎಐ ಕೆಲವೊಂದು ಚಿಕ್ಕ ಪ್ರಮಾಣದ ಉದ್ಯೋಗಗಳನ್ನು ತಾನೇ ಮಾಡಲಾರಂಭಿಸಬಹುದು ಎಂದು ಹೇಳಿದರು. "ಮಾನವ ಸಂಪನ್ಮೂಲ ನಿರ್ವಹಣೆಯ ಕೆಲಸದಲ್ಲಿ ಉದ್ಯೋಗಿಗಳ ಮೌಲ್ಯಮಾಪನ ಮತ್ತು ಬಡ್ತಿಯಂತಹ ದಿನನಿತ್ಯದ ಕಾರ್ಯಗಳಲ್ಲಿ ಎಐ ಸಹಾಯ ಮಾಡಲಿದೆ. ಇದರಲ್ಲಿ ಎಐ ನಿಯೋಜನೆಯಿಂದ ಕಂಪನಿಗಳ ಉತ್ಪಾದಕತೆ ಹೆಚ್ಚಾಗಲಿದೆ ಮತ್ತು ಆರ್ಥಿಕತೆಯ ಬೆಳವಣಿಗೆಯಾಗಲಿದೆ" ಎಂದು ಕೃಷ್ಣ ತಿಳಿಸಿದರು.

ಎಐ ತಂತ್ರಜ್ಞಾನವು ತಲಾ ಜಿಡಿಪಿಯನ್ನು ಹೆಚ್ಚಿಸಲು ಸಹಾಯ ಮಾಡಲಿದೆ ಎಂದು ಅವರು ಹೇಳಿದರು. ಟೆಕ್ ಕಂಪನಿಗಳು ಸುರಕ್ಷಿತ ಮತ್ತು ಜವಾಬ್ದಾರಿಯುತವಾಗಿ ಎಐ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತವೆ ಎಂದು ಖಚಿತಪಡಿಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಮೇ ತಿಂಗಳಲ್ಲಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಕೃಷ್ಣ ಅವರು, "ಐದು ವರ್ಷಗಳ ಅವಧಿಯಲ್ಲಿ ಎಐ ಮತ್ತು ಆಟೋಮೇಷನ್​ನಿಂದ ಶೇಕಡಾ 30 ರಷ್ಟು ಉದ್ಯೋಗಗಳು ಕಡಿತಗೊಳ್ಳಲಿವೆ" ಎಂದು ಹೇಳಿದ್ದರು. ಐಬಿಎಂ ಸ್ವತಃ ಸುಮಾರು 26,000 ಕಾರ್ಮಿಕರನ್ನು ಹೊಂದಿದೆ. ಹೀಗಾಗಿ ಕಂಪನಿಯಲ್ಲಿ ಮುಂಬರುವ ವರ್ಷಗಳಲ್ಲಿ ಸುಮಾರು 7,800 ಉದ್ಯೋಗಗಳು ಕಡಿತವಾಗುವ ನಿರೀಕ್ಷೆ ಇದೆ ಎನ್ನಲಾಗಿದೆ.

ಕೃತಕ ಬುದ್ಧಿಮತ್ತೆ (ಎಐ) ಎಂಬುದು ಕಂಪ್ಯೂಟರ್ ವಿಜ್ಞಾನದ ವ್ಯಾಪಕ ಶ್ರೇಣಿಯ ಶಾಖೆಯಾಗಿದೆ. ವಿಶಾಲವಾಗಿ ಹೇಳುವುದಾದರೆ, ಕೃತಕ ಬುದ್ಧಿವಂತ ವ್ಯವಸ್ಥೆಗಳು ಸಾಮಾನ್ಯವಾಗಿ ಮಾನವ ಅರಿವಿನ ಕಾರ್ಯಗಳಿಗೆ ಸಂಬಂಧಿಸಿದ ಕಾರ್ಯಗಳನ್ನು ನಿರ್ವಹಿಸಬಹುದು. ಉದಾಹರಣೆಗೆ ಮಾತನ್ನು ವ್ಯಾಖ್ಯಾನಿಸುವುದು, ಆಟಗಳನ್ನು ಆಡುವುದು ಮತ್ತು ಮಾದರಿಗಳನ್ನು ಗುರುತಿಸುವುದು. ಎಐ ಸಾಧನಗಳು ಸಾಮಾನ್ಯವಾಗಿ ಬೃಹತ್ ಪ್ರಮಾಣದ ಡೇಟಾವನ್ನು ಸಂಸ್ಕರಿಸುವ ಮೂಲಕ, ತನ್ನದೇ ಆದ ನಿರ್ಧಾರ ತೆಗೆದುಕೊಳ್ಳುವುದನ್ನು ಕಲಿಯುತ್ತದೆ.

ಕೃತಕ ಬುದ್ಧಿಮತ್ತೆ (ಎಐ)ಯು ಸಾಫ್ಟ್​​ವೇರ್​ ಕೋಡೆಡ್ ಹ್ಯೂರಿಸ್ಟಿಕ್ಸ್ ಮೂಲಕ ಮಾನವ ಬುದ್ಧಿಮತ್ತೆಯ ಸಿಮ್ಯುಲೇಶನ್ ಅನ್ನು ಸೂಚಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಕೋಡ್ ಕ್ಲೌಡ್ ಆಧಾರಿತ, ಎಂಟರ್ಪ್ರೈಸ್ ಅಪ್ಲಿಕೇಶನ್​ಗಳಿಂದ ಗ್ರಾಹಕ ಅಪ್ಲಿಕೇಶನ್​ಗಳು ಮತ್ತು ಎಂಬೆಡೆಡ್ ಫರ್ಮ್​ವೇರ್​ಗಳವರೆಗೆ ಎಲ್ಲದರಲ್ಲೂ ಪ್ರಚಲಿತದಲ್ಲಿದೆ.

ಇದನ್ನೂ ಓದಿ : ಉಕ್ರೇನ್​ ಪೈಲಟ್​ಗಳಿಗೆ ಅಮೆರಿಕದಿಂದ ಎಫ್-16 ಫೈಟರ್ ಜೆಟ್ ತರಬೇತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.