ವಾಷಿಂಗ್ಟನ್(ಅಮೆರಿಕ): ಯಾವಾಗಲೂ ಸಾಮಾಜಿಕ ಜಾಲತಾಣಗಳ ಮೂಲಕ ನೆಟ್ಟಿಗರ ಜೊತೆಗೆ ಸದಾ ಸಂಪರ್ಕದಲ್ಲಿರುವ ಬಿಲಿಯನೇರ್ ಎಲಾನ್ ಮಸ್ಕ್ ಆಗಾಗ ಫನ್ನಿ ಮತ್ತು ಕಾಲೆಳೆಯುವ ಟ್ವೀಟ್ಗಳನ್ನೂ ಮಾಡುತ್ತ ಸುದ್ದಿಯಲ್ಲಿರುತ್ತಾರೆ. ಟ್ವಿಟರ್ ಅನ್ನು 44 ಬಿಲಿಯನ್ ಡಾಲರ್ಗೆ ಖರೀದಿಸಿದ ಬಳಿಕ ತಮ್ಮ ಮುಂದಿನ ಗುರಿಯ ಬಗ್ಗೆ ಟ್ವೀಟ್ ಮಾಡಿದ್ದು, ತಮ್ಮ ಮುಂದಿನ ಗುರಿ, ಕೊಕಾ ಕೋಲಾ ಮತ್ತು ಮೆಕ್ ಡೊನಾಲ್ಡ್ ಎಂದು ಹಾಸ್ಯದ ದಾಟಿಯಲ್ಲಿ ಹೇಳಿದ್ದಾರೆ.
ಮೊದಲ ಟ್ವೀಟ್ನಲ್ಲಿ 'ಕೊಕೇನ್ ಅನ್ನು ಮರಳಿ ಅದರೊಳಗೆ ಇಡಲು ನಾನು ಮುಂದಿನ ದಿನಗಳಲ್ಲಿ ಕೊಕಾ ಕೋಲಾವನ್ನು ಕೊಂಡುಕೊಳ್ಳುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ. ಎರಡನೇ ಟ್ವೀಟ್ನಲ್ಲಿ ಐಸ್ ಕ್ರೀಮ್ ಯಂತ್ರಗಳನ್ನು ಸರಿಪಡಿಸಲು ಮೆಕ್ ಡೊನಾಲ್ಡ್ ಕೊಂಡುಕೊಳ್ಳುತ್ತೇನೆ ಎಂದು ಟ್ವೀಟ್ ಮಾಡಿದ್ದು, ನಂತರ ಅದೇ ಟ್ವೀಟ್ನ ಸ್ಕ್ರೀನ್ ಶಾಟ್ ಅನ್ನು ಪೋಸ್ಟ್ ಮಾಡಿ ' ಕೇಳಿ, ನಾನು ಅದ್ಭುತಗಳನ್ನು ಮಾಡಲು ಸಾಧ್ಯವಿಲ್ಲ, ಗೊತ್ತಾಯ್ತಾ?' ಎಂದು ಬರೆದುಕೊಂಡಿದ್ದಾರೆ.
-
Next I’m buying Coca-Cola to put the cocaine back in
— Elon Musk (@elonmusk) April 28, 2022 " class="align-text-top noRightClick twitterSection" data="
">Next I’m buying Coca-Cola to put the cocaine back in
— Elon Musk (@elonmusk) April 28, 2022Next I’m buying Coca-Cola to put the cocaine back in
— Elon Musk (@elonmusk) April 28, 2022
ಇದರ ಜೊತೆಗೆ ಮತ್ತೊಂದು ಟ್ವೀಟ್ ಮಾಡಿದ್ದು, ಟ್ವಿಟರ್ ಅನ್ನು ಮತ್ತಷ್ಟು ಫನ್ ಮಾಡೋಣ ಎಂದು ಹೇಳಿಕೊಂಡಿದ್ದಾರೆ. ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಅವರು ಟ್ವಿಟರ್ ಸಾರ್ವಜನಿಕರ ನಂಬಿಕೆಗೆ ಅರ್ಹವಾಗಬೇಕಾದರೆ ಅದು ರಾಜಕೀಯವಾಗಿ ತಟಸ್ಥವಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದರು.
-
Listen, I can’t do miracles ok pic.twitter.com/z7dvLMUXy8
— Elon Musk (@elonmusk) April 28, 2022 " class="align-text-top noRightClick twitterSection" data="
">Listen, I can’t do miracles ok pic.twitter.com/z7dvLMUXy8
— Elon Musk (@elonmusk) April 28, 2022Listen, I can’t do miracles ok pic.twitter.com/z7dvLMUXy8
— Elon Musk (@elonmusk) April 28, 2022
ಇದನ್ನೂ ಓದಿ: ರಾಜಕೀಯವಾಗಿ ತಟಸ್ಥವಾದಾಗ ಮಾತ್ರ ಟ್ವಿಟರ್ ಸಾರ್ವಜನಿಕ ನಂಬಿಕೆ ಗಳಿಸಲು ಸಾಧ್ಯ: ಎಲಾನ್ ಮಸ್ಕ್