ETV Bharat / business

ಅದಾನಿ ವಿಲ್ಮರ್​ ಆದಾಯದಲ್ಲಿ ಶೇ 12 ರಷ್ಟು ಕುಸಿತ - ಅದಾನಿ ವಿಲ್ಮಾರ್​​​ ಕಂಪನಿ

ಅದಾನಿ ವಿಲ್ಮಾರ್​​​ ಕಂಪನಿ ತನ್ನ ಆದಾಯದಲ್ಲಿ ಶೇ 12 ರಷ್ಟು ಇಳಿಕೆ ಕಂಡಿದ್ದು, ಇದಕ್ಕೆ ಖಾದ್ಯ ತೈಲಗಳ ಬೆಲೆಯಲ್ಲಿ ಕಂಡು ಬಂದ ಕುಸಿತ ಕಾರಣ ಎನ್ನಲಾಗಿದೆ. ಇನ್ನು ಖಾದ್ಯ ತೈಲಗಳ ಬೆಲೆ ಇಳಿದಿರುವುದು ಕಂಪನಿ ತನ್ನ ಜಾಲ ವಿಸ್ತರಣೆಗೆ ಅನುಕೂಲ ಎಂದು ಹೇಳಿಕೊಂಡಿದೆ.

Adani Wilmar reports 12 pc decline in revenue in Q1
ಅದಾನಿ ವಿಲ್ಮರ್​ ಆದಾಯದಲ್ಲಿ ಶೇ 12 ರಷ್ಟು ಕುಸಿತ
author img

By

Published : Aug 3, 2023, 7:27 AM IST

ಅಹಮದಾಬಾದ್ (ಗುಜರಾತ್): ಅದಾನಿ ವಿಲ್ಮಾರ್ ಏಪ್ರಿಲ್ - ಜೂನ್ 2023 ರ ತ್ರೈಮಾಸಿಕ ಅವಧಿಯಲ್ಲಿ 12,928 ಕೋಟಿ ರೂ.ಗಳಲ್ಲಿ ಏಕೀಕೃತ ಆದಾಯ ಗಳಿಸಿದೆ. ಆದರೆ ಈ ಆದಾಯದಲ್ಲಿ ಶೇ 12 ರಷ್ಟು ಕುಸಿತ ದಾಖಲಿಸಿದೆ ಎಂದು ತ್ರೈಮಾಸಿಕ ವರದಿಯಲ್ಲಿ ಹೇಳಲಾಗಿದೆ. ತ್ರೈಮಾಸಿಕದಲ್ಲಿ ಆದಾಯದ ಕುಸಿತವು ಖಾದ್ಯ ತೈಲ ಬೆಲೆಗಳಲ್ಲಿ ಉಂಟಾದ ಕುಸಿತವನ್ನು ಪ್ರತಿಬಿಂಬಿಸುತ್ತದೆ ಎಂದು ಕಂಪನಿ ಹೇಳಿದೆ.

ಆಹಾರ ಮತ್ತು ಎಫ್‌ಎಂಸಿಜಿ ವಿಭಾಗವು ವರ್ಷದಿಂದ ವರ್ಷಕ್ಕೆ ಶೇ 28 ರಷ್ಟು ಆದಾಯದ ಬೆಳವಣಿಗೆ ದಾಖಲಿಸಿದೆ ಮತ್ತು ಒಟ್ಟು 1,100 ಕೋಟಿ ರೂ. ಆದಾಯ ಏರಿಕೆ ದಾಖಲಿಸಿದೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಖಾದ್ಯ ತೈಲಗಳಿಗೆ ಬಲವಾದ ಬೇಡಿಕೆ ಕಂಡು ಬಂದಿದೆ ಎಂದು ಅದಾನಿ ಗ್ರೂಪ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ತೈಲ ಮತ್ತು ಆಹಾರ ಉತ್ಪನ್ನಗಳೆರಡರ ವಿತರಣೆಯನ್ನು ಮತ್ತಷ್ಟು ವಿಸ್ತರಿಸುವತ್ತ ತನ್ನ ಗಮನ ಕೇಂದ್ರೀಕರಿಸಿರುವುದಾಗಿ ಕಂಪನಿ ಹೇಳಿದೆ.

HoReCa (ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಕ್ಯಾಟರಿಂಗ್) ಕ್ಲೈಂಟ್‌ಗಳಿಗೆ ಬ್ರಾಂಡ್ ಉತ್ಪನ್ನಗಳ ಮಾರಾಟ ನಗರಗಳಲ್ಲಿ ಹೆಚ್ಚು ವಿಸ್ತರಣಾ ಜಾಲವನ್ನು ಹೊಂದಿದೆ. ಹೊಸ ಗ್ರಾಹಕರ ಖಾತೆಗಳನ್ನು ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ ಬಲವಾಗಿ ಬೆಳೆಯುತ್ತಿದೆ ಎಂದು ಅದಾನಿ ಗ್ರೂಪ್​ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.

"ಖಾದ್ಯ ತೈಲ ಬೆಲೆಗಳಲ್ಲಿನ ಇಳಿಕೆಯೊಂದಿಗೆ ನಾವು ನಮ್ಮ ಖಾದ್ಯ ತೈಲ ವ್ಯವಹಾರದಲ್ಲಿ ವೇಗವನ್ನು ಮರಳಿ ಪಡೆದಿದ್ದೇವೆ. ಖಾದ್ಯ ತೈಲದ ಮೃದುವಾದ ಬೆಲೆಗಳು ಉದ್ಯಮ ಮತ್ತಷ್ಟು ವಿಸ್ತರಣೆ ಆಗುವ ಉತ್ತಮವಾದ ನಿರೀಕ್ಷೆಯಿದೆ ಎಂದು ಅದಾನಿ ವಿಲ್ಮಾರ್ ಎಂಡಿ ಮತ್ತು ಸಿಇಒ ಆಂಗ್ಶು ಮಲ್ಲಿಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಂತರಾಷ್ಟ್ರೀಯ ಬೆಲೆಗಳಲ್ಲಿನ ಇಳಿಕೆ ಮತ್ತು ಕೇಂದ್ರ ಸರ್ಕಾರದ ನಿರಂತರ ನೀತಿ ಮಧ್ಯಸ್ಥಿಕೆಗಳಿಗೆ ಅನುಗುಣವಾಗಿ, ಭಾರತದಲ್ಲಿ ಖಾದ್ಯ ತೈಲ ಬೆಲೆಗಳು ಗಣನೀಯವಾಗಿ ಕುಸಿದಿವೆ.

ಈ ನಡುವೆ, ಷೇರುಮಾರುಕಟ್ಟೆ ಹಲವು ವಾರಗಳ ಬಳಿಕ ಭಾರಿ ಇಳಿಕೆ ದಾಖಲಿಸಿದೆ. ಪಿಚ್​ ರೇಟಿಂಗ್​ ಅಮೆರಿಕದ ಆರ್ಥಿಕತೆಯ ರೇಟಿಂಗ್​ ಇಳಿಕೆ ಮಾಡಿರುವುದು, ಜಾಗತಿಕ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. 20 ಸಾವಿರದ ಗಡಿ ಹತ್ತಿರ ಸಾಗುತ್ತಿದ್ದ ನಿಫ್ಟಿ 19500 ಕ್ಕಿಂತ ಕೆಳಕ್ಕೆ ಬಂದಿದೆ. ಬಹತೇಕ ಪ್ರಮುಖ ಕಂಪನಿಗಳ ಷೇರು ಬೆಲೆ ನಿನ್ನೆಯ ವ್ಯವಹಾರದಲ್ಲಿ ನಷ್ಟ ಅನುಭವಿಸಿವೆ.

ಇದನ್ನು ಓದಿ: Fitch Rating: ಸುರಕ್ಷಿತ ಆಸ್ತಿಗಳತ್ತ ಹೂಡಿಕೆದಾರರ ಕಣ್ಣು; ಡಾಲರ್, ಚಿನ್ನದ ಮೌಲ್ಯ ಹೆಚ್ಚಾಗುವ ಸಾಧ್ಯತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.