ETV Bharat / business

ಹಿಂಡನ್​ಬರ್ಗ್​ ವರದಿ ಎಫೆಕ್ಟ್​​: ಅದಾನಿ ಎಂಟರ್​ಪ್ರೈಸೆಸ್​, ಪೋರ್ಟ್ಸ್​ ತುಸು ಚೇತರಿಕೆ

ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ಆರೋಪಿತ ವರದಿಯ ಬಳಿಕ ಅದಾನಿ ಗ್ರೂಪ್​ ಸಂಸ್ಥೆಗಳು ಭಾರೀ ನಷ್ಟ ಅನುಭವಿಸಿವೆ. ಇಂದು ಬೆಳಗಿನ ವಹಿವಾಟಿನಲ್ಲಿ ಕೆಲ ಸಂಸ್ಥೆಗಳು ಚೇತರಿಕೆ ಕಂಡಿದ್ದರೆ, ಇನ್ನು ಕೆಲವು ನಷ್ಟದಲ್ಲೇ ಸಾಗಿವೆ.

author img

By

Published : Jan 30, 2023, 2:31 PM IST

Adani Enterprises
ಹಿಂಡನ್​ಬರ್ಗ್​ ವರದಿ ಎಫೆಕ್ಟ್

ಮುಂಬೈ (ಮಹಾರಾಷ್ಟ್ರ): ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ಆರೋಪದ ಬಳಿಕ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿದ್ದ ಅದಾನಿ ಗ್ರೂಪ್​ ಸಂಸ್ಥೆಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಚೇತರಿಸಿಕೊಂಡಿವೆ. ಆದಾಗ್ಯೂ, ಇತರ ಸಮೂಹ ಸಂಸ್ಥೆಗಳಾದ ಅದಾನಿ ಟ್ರಾನ್ಸ್‌ಮಿಷನ್, ಅದಾನಿ ಗ್ರೀನ್ ಮತ್ತು ಅದಾನಿ ಟೋಟಲ್ ಗ್ಯಾಸ್ ಸೇರಿ ಕೆಲ ಸಂಸ್ಥೆಗಳು ನಷ್ಟದಲ್ಲೇ ಮುಂದುವರಿದಿವೆ.

ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ಹಿಂದಿನ ವಹಿವಾಟಿಗೆ ಹೋಲಿಸಿದರೆ ಇಂದು ಬೆಳಗ್ಗೆ 10.30 ಕ್ಕೆ ಶೇ. 5.10 ಅಂದರೆ, 140 ಕೋಟಿ ರೂಪಾಯಿ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದವು. ಕಳೆದ ವಾರದಲ್ಲಿ ಗ್ರೂಪ್​ ಶೇ 15.20 ಕ್ಕಿಂತ ಹೆಚ್ಚು ನಷ್ಟವನ್ನು ಅನುಭವಿಸಿದೆ. ಹಿಂದಿನ ನಷ್ಟದ ಹೊರೆಯೊಂದಿಗೆ ದಿನದ ವಹಿವಾಟು ಆರಂಭವಾದಾಗ ಬೆಳಗ್ಗೆ 10.30ರ ವೇಳೆಗೆ ಅದಾನಿ ಪೋರ್ಟ್ ಷೇರುಗಳು 22 ರೂ. ಅಥವಾ ಶೇ.3.70ರಷ್ಟು ಏರಿಕೆ ದಾಖಲಿಸಿದವು.

ಹಿಂಡೆನ್‌ಬರ್ಗ್ ರಿಸರ್ಚ್ ವರದಿ ಹೇಳಿದ್ದೇನು?: ಅಮೆರಿಕದ ಹೂಡಿಕೆ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ರಿಸರ್ಚ್​ ತನ್ನ ವರದಿಯಲ್ಲಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ನೇತೃತ್ವದ ಗ್ರೂಪ್​​ ಬ್ಲ್ಯಾಟಂಟ್ ಸ್ಟಾಕ್ ಮ್ಯಾನಿಪ್ಯುಲೇಷನ್ ಮತ್ತು ಲೆಕ್ಕಪತ್ರ ವಂಚನೆಯಲ್ಲಿ ತೊಡಗಿದೆ ಎಂದು ಆರೋಪಿಸಿತ್ತು. ಈ ಆರೋಪದ ವರದಿಯ ನಂತರ, ಹಲವು ವ್ಯಾಪಾರ ಸಮೂಹದ ಕಂಪನಿಗಳ ಷೇರುಗಳಲ್ಲಿ ದೊಡ್ಡ ಮಟ್ಟದಲ್ಲಿ ಕುಸಿತ ಕಂಡುಬಂದಿದೆ.

ಅದಾನಿ ಸಂಸ್ಥೆಯ ತೀಕ್ಷ್ಣ ಉತ್ತರ: ಹಿಂಡನ್​ಬರ್ಗ್​ ವರದಿಗೆ ತೀಕ್ಷ್ಣವಾಗಿ ಉತ್ತರಿಸಿರುವ ಏಷ್ಯಾದ ಶ್ರೀಮಂತ ವ್ಯಕ್ತಿ ಗೌತಮ್‌ ಆದಾನಿ ಮಾಲಿಕತ್ವದ ಅದಾನಿ ಸಮೂಹ, "ಇದು ಕೇವಲ ಕಂಪನಿಯೊಂದರ ಮೇಲಿನ ದಾಳಿಯಲ್ಲ, ದೇಶದ ಮೇಲಿನ ಯೋಜಿತ ದಾಳಿʼʼ ಎಂದಿದೆ. 88 ಪ್ರಶ್ನೆಗಳಲ್ಲಿ 62 ಪ್ರಶ್ನೆಗಳಿಗೆ ಉತ್ತರ ನೀಡಲು ಅದಾನಿ ಗ್ರೂಪ್‌ ವಿಫಲವಾಗಿದೆ ಎಂದು ಹಿಂಡೆನ್‌ಬರ್ಗ್‌ ತಿಳಿಸಿತ್ತು. ಇದಕ್ಕೆ ಉತ್ತರ ರೂಪವಾಗಿ 413 ಪುಟಗಳ ದಾಖಲೆಯನ್ನು ಅದಾನಿ ಗ್ರೂಪ್‌ ಬಿಡುಗಡೆ ಮಾಡಿತ್ತು.

ಇದನ್ನೂ ಓದಿ: ಫೋರ್ಬ್ಸ್ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿತ ಅದಾನಿ: ವರದಿ ವಿರುದ್ಧ ಕ್ರಮಕ್ಕೆ ಮುಂದಾದ ಅದಾನಿ ಗ್ರೂಪ್​

ಹಿಂಡೆನ್‌ಬರ್ಗ್‌ ವರದಿ ಸಂಪೂರ್ಣ ಸುಳ್ಳಿನಿಂದ ಕೂಡಿದೆ. ಇದು ಭಾರತದ ವಿರುದ್ಧ ಮಾಡಿದ ಷಡ್ಯಂತ್ಯ. ಇದು ಯೋಜಿತ ದಾಳಿ, ಪಿತೂರಿಯುಕ್ತ ನಡವಳಿಕೆ ಎಂದು ಅದಾನಿ ಗ್ರೂಪ್‌ ಕಿಡಿಕಾರಿದೆ. ಅಮೆರಿಕ ಕಂಪನಿಗಳ ಆರ್ಥಿಕ ಲಾಭಕ್ಕಾಗಿ ಹೊಸ ಮಾರುಕಟ್ಟೆ ಸೃಷ್ಟಿಸುವ ಸಲುವಾಗಿ ಈ ವರದಿ ಪ್ರಕಟಿಸಲಾಗಿದೆ ಎಂದು ಅದಾನಿ ಗ್ರೂಪ್‌ ಆರೋಪಿಸಿದೆ.

ಅದಾನಿ ಸಂಸ್ಥೆಗಳ ನಷ್ಟ ಮುಂದುವರಿಕೆ: ಮತ್ತೊಂದೆಡೆ ಅದಾನಿ ಗ್ರೂಪ್​ನ ಸಂಸ್ಥೆಯಾದ ಅದಾನಿ ಗ್ರೀನ್ ನಷ್ಟವನ್ನು ಮುಂದುವರಿಸಿದೆ. ಅದರ ಷೇರುಗಳು ಶುಕ್ರವಾರದ ಹಿಂದಿನ ಮುಕ್ತಾಯಕ್ಕಿಂತಲೂ 16 ಪ್ರತಿಶತ ಇಳಿಕೆ ಕಂಡಿದೆ. ಒಟ್ಟಾರೆ ಅದರ ಷೇರುಗಳಲ್ಲಿ ಇಂದಿನ ಬೆಳಗಿನ ವಹಿವಾಟಿನಲ್ಲಿ 37.92 ರಷ್ಟು ಕುಸಿದಿದೆ.

ಅದಾನಿ ಟೋಟಲ್ ಗ್ಯಾಸ್ ಷೇರುಗಳು ಕೂಡ ಶೇ.20ರಷ್ಟು ಇಳಿಕೆ ಕಂಡಿವೆ. ಆರಂಭದಲ್ಲಿ ತೀವ್ರ ಏರಿಳಿತವನ್ನು ಎದುರಿಸಿದ ದೇಶೀಯ ಮಾರುಕಟ್ಟೆ ಚೇತರಿಕೆ ಕಂಡಿದೆ. ಹಿಂಡೆನ್‌ಬರ್ಗ್ ವರದಿಯ ಬಳಿಕ ಐದು ದಿನಗಳಲ್ಲಿ ಒಟ್ಟಾರೆ ಶೇಕಡಾ 41.42 ರಷ್ಟು ನಷ್ಟ ಉಂಟಾಗಿದೆ.

ಇದನ್ನೂ ಓದಿ: ಶೇ. 20ರಷ್ಟು ಕುಸಿತ ಕಂಡ ಗೌತಮ್ ಅದಾನಿ ಗ್ರೂಪ್​ನ ಷೇರುಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.