ETV Bharat / business

43 ಸಾವಿರ ಕೋಟಿ ರೂ. ಎಫ್​ಪಿಐ ಒಳಹರಿವು: ನಿಫ್ಟಿ50 ದಾಖಲೆ ಮಟ್ಟಕ್ಕೇರುವ ಸಾಧ್ಯತೆ - ನಿಫ್ಟಿ 18887ರ ಸಾರ್ವಕಾಲಿಕ ಗರಿಷ್ಠ ಮಟ್ಟ

ಈ ವರ್ಷದ ಮೇ ತಿಂಗಳಲ್ಲಿ ಭಾರತದ ಷೇರು ಮಾರುಕಟ್ಟೆಯಲ್ಲಿ ಎಫ್​ಪಿಐಗಳು ಅತ್ಯಧಿಕ ಪ್ರಮಾಣದ ಹೂಡಿಕೆ ಮಾಡಿದ್ದಾರೆ. ಎಫ್​ಪಿಐ ಹೂಡಿಕೆಯ ಬೆಂಬಲದಿಂದ ನಿಫ್ಟಿ50 ಹೊಸ ದಾಖಲೆಯ ಮಟ್ಟಕ್ಕೇರುವ ಸಾಧ್ಯತೆಗಳು ಕಾಣಿಸುತ್ತಿವೆ.

FPIs inflow in India stock market at 9-month high in May.

author img

By

Published : Jun 4, 2023, 1:31 PM IST

ನವದೆಹಲಿ : ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐಗಳು) ಮೇ ತಿಂಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯಲ್ಲಿ 43,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಿದ್ದಾರೆ. ಇದು ಎಫ್‌ಪಿಐಗಳಿಂದ ಒಂಬತ್ತು ತಿಂಗಳಲ್ಲೇ ಅತಿ ಹೆಚ್ಚು ಹೂಡಿಕೆಯಾಗಿದೆ. ವಿದೇಶಿ ಹೂಡಿಕೆದಾರರು ಹಣಕಾಸು ಸೇವೆಗಳನ್ನು ನೀಡುವ ಷೇರುಗಳಲ್ಲಿ ಭಾರಿ ಹೂಡಿಕೆ ಮಾಡಿದ್ದು ಮಾತ್ರವಲ್ಲದೆ ಇತರ ಅನೇಕ ವಲಯಗಳ ಷೇರುಗಳಲ್ಲೂ ಬಂಡವಾಳ ಹೂಡಿದ್ದಾರೆ. ಎಫ್‌ಪಿಐಗಳ ಈ ಖರೀದಿ ಪ್ರವೃತ್ತಿಯು ಮುಂದಿನ ದಿನಗಳಲ್ಲಿ ಇದೇ ರೀತಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಹಣಕಾಸು ವಿಶ್ಲೇಷಕರು ಹೇಳಿದ್ದು, ಇದರಿಂದ ನಿಫ್ಟಿ 50 ಹೊಸ ದಾಖಲೆಯ ಎತ್ತರವನ್ನು ಮುಟ್ಟಲು ಸಹಕಾರಿಯಾಗಬಹುದು ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಎನ್‌ಎಸ್‌ಡಿಎಲ್ ಅಂಕಿಅಂಶಗಳ ಪ್ರಕಾರ, ಮೇ ತಿಂಗಳಲ್ಲಿ ಭಾರತೀಯ ಷೇರುಗಳಲ್ಲಿನ ಎಫ್‌ಪಿಐಗಳ ಒಳಹರಿವು ₹43,838 ಕೋಟಿ ಆಗಿದೆ. ಇದು 2023 ರ ಅತ್ಯಧಿಕ ಮಾಸಿಕ ಖರೀದಿ ಮಾತ್ರವಲ್ಲ, ಕಳೆದ ವರ್ಷ ನವೆಂಬರ್‌ ನಂತರ ಬಂದ ಅತ್ಯಧಿಕ ಎಫ್​ಪಿಐ ಹೂಡಿಕೆಯಾಗಿದೆ. "ಎಫ್​ಪಿಐಗಳು ಮೇ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಸಕ್ರಿಯ ಖರೀದಿದಾರರಾಗಿದ್ದು, ಷೇರು ಮಾರುಕಟ್ಟೆ ಮತ್ತು ಪ್ರಾಥಮಿಕ ಮಾರುಕಟ್ಟೆಗಳಲ್ಲಿ ಒಟ್ಟಾರೆ ₹ 43,838 ಕೋಟಿ ಹೂಡಿಕೆ ಮಾಡಿದ್ದಾರೆ (ಮೂಲ: NSDL). ಭಾರತವು ಈಗ ಎಲ್ಲಾ ಉದಯೋನ್ಮುಖ ಮಾರುಕಟ್ಟೆಗಳ ಪೈಕಿ ಹೂಡಿಕೆಗೆ ಅತ್ಯಂತ ಪ್ರಶಸ್ತವಾದ ಮಾರುಕಟ್ಟೆಯಾಗಿದೆ ಎಂದು ವಿದೇಶಿ ಬಂಡವಾಳ ಹೂಡಿಕೆದಾರರ ಕುರಿತಾದ ಸಮೀಕ್ಷೆ ಹೇಳಿದೆ. ಮೇ ತಿಂಗಳಲ್ಲಿ, ಭಾರತವು ಎಲ್ಲಾ ಉದಯೋನ್ಮುಖ ಮಾರುಕಟ್ಟೆಗಳ ಪೈಕಿ ಅತ್ಯಧಿಕ ಹೂಡಿಕೆಯನ್ನು ಆಕರ್ಷಿಸಿದೆ ಮತ್ತು ಇದೇ ಸಮಯದಲ್ಲಿ ಎಫ್‌ಪಿಐಗಳು ಚೀನಾದಲ್ಲಿ ತಮ್ಮ ಹೂಡಿಕೆಯನ್ನು ಹಿಂತೆಗೆಯುತ್ತಿದ್ದಾರೆ" ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ಡಾ. ವಿ ಕೆ ವಿಜಯಕುಮಾರ್ ಹೇಳಿದರು.

ಇತ್ತೀಚಿನ ಜಿಡಿಪಿ ದತ್ತಾಂಶ ಮತ್ತು ಹೆಚ್ಚಿನ ಆವರ್ತನ ಸೂಚಕಗಳು ಆರ್ಥಿಕತೆಗೆ ಮತ್ತಷ್ಟು ಬಲವನ್ನು ನೀಡುವ ನಿರೀಕ್ಷೆಯ ಕಾರಣದಿಂದ ಎಫ್‌ಪಿಐಗಳು ಜೂನ್‌ನಲ್ಲಿ ಭಾರತದಲ್ಲಿ ತಮ್ಮ ಹೂಡಿಕೆಯನ್ನು ಮುಂದುವರಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು. ಹಣಕಾಸು, ಆಟೋಮೊಬೈಲ್, ಟೆಲಿಕಾಂ ಮತ್ತು ನಿರ್ಮಾಣ ಕ್ಷೇತ್ರಗಳು ಅತಿ ಹೆಚ್ಚು ಪ್ರಮಾಣದಲ್ಲಿ ಹೂಡಿಕೆಗಳನ್ನು ಆಕರ್ಷಿಸುತ್ತಿವೆ. ಎಫ್‌ಪಿಐಗಳಿಂದ ಸತತವಾದ ಹೂಡಿಕೆಯಿಂದ ನಿಫ್ಟಿ 50 ಉನ್ನತ ಮಟ್ಟವನ್ನು ತಲುಪುವ ಸಾಧ್ಯತೆಯಿದೆ.

ನಿಫ್ಟಿ 18887ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯುವ ಸಾಧ್ಯತೆಯಿದೆ. ಆದರೆ ಅಂಥ ಗರಿಷ್ಠ ಮಟ್ಟಕ್ಕೆ ತಲುಪಿದ ನಂತರ ಮತ್ತೆ ಮಾರಾಟ ಪ್ರವೃತ್ತಿ ಮರುಕಳಿಸಬಹುದು ಎಂದು ಅವರು ಹೇಳಿದರು. ಶುಕ್ರವಾರ, ಸೆನ್ಸೆಕ್ಸ್ 119 ಪಾಯಿಂಟ್‌ಗಳು ಅಥವಾ ಶೇಕಡಾ 0.19 ರಷ್ಟು ಏರಿಕೆಯಾಗಿ 62,547.11 ಕ್ಕೆ ಕೊನೆಗೊಂಡರೆ, ನಿಫ್ಟಿ 46 ಪಾಯಿಂಟ್ ಅಥವಾ 0.25 ರಷ್ಟು ಏರಿಕೆಯಾಗಿ 18,534.10 ಕ್ಕೆ ಕೊನೆಗೊಂಡಿತು. ಜೂನ್ ತಿಂಗಳ ಮೊದಲ ಎರಡು ದಿನಗಳಲ್ಲಿ ಭಾರತೀಯ ಮಾರುಕಟ್ಟೆಗಳಲ್ಲಿ ಎಫ್‌ಪಿಐಗಳ ಒಳಹರಿವು ₹6,489 ಕೋಟಿಗಳಷ್ಟಿತ್ತು.

ಇದನ್ನೂ ಓದಿ : ಕ್ರಿಪ್ಟೊ ವಹಿವಾಟು ಸಾರ್ವಕಾಲಿಕ ಕುಸಿತ: 32 ತಿಂಗಳ ಕನಿಷ್ಠ ಮಟ್ಟದಲ್ಲಿ ಮಾರುಕಟ್ಟೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.