ETV Bharat / business

ಮುಂದಿನ 5 ವರ್ಷಗಳಲ್ಲಿ 14 ಮಿಲಿಯನ್ ಉದ್ಯೋಗ ನಷ್ಟ: WEF ವರದಿ

author img

By

Published : May 1, 2023, 4:47 PM IST

ವಿಶ್ವದಾದ್ಯಂತ ಮುಂದಿನ ಐದು ವರ್ಷಗಳಲ್ಲಿ 14 ಮಿಲಿಯನ್ ಉದ್ಯೋಗ ಕಣ್ಮರೆಯಾಗಲಿದೆ ಎಂದು ವರ್ಲ್ಡ್ ಎಕನಾಮಿಕ್ ಫೋರಂ (ಡಬ್ಲ್ಯೂಇಎಫ್) ನಡೆಸಿದ ಸಂಶೋಧನೆ ಎಚ್ಚರಿಸಿದೆ.

World Economic Forum
ಉದ್ಯೋಗಗಳಿಗೆ ಕತ್ತರಿ ಸಾಧ್ಯತೆ

ಲಂಡನ್: ದುರ್ಬಲ ಜಾಗತಿಕ ಆರ್ಥಿಕತೆ ಮತ್ತು ಕಂಪನಿಗಳು ಕೃತಕ ಬುದ್ಧಿಮತ್ತೆ (ಎಐ) ನಂತಹ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿದ್ದು ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಉದ್ಯೋಗ ಮಾರುಕಟ್ಟೆ ಭಾರಿ ಹೊಡೆತ ಅನುಭವಿಸಲಿದೆ ಎಂದು ಸಂಶೋಧನಾತ್ಮಕ ವರದಿ ಭವಿಷ್ಯ ನುಡಿದಿದೆ. ಈ ಸಂಶೋಧನೆಯನ್ನು ವರ್ಲ್ಡ್ ಎಕನಾಮಿಕ್ ಫೋರಂ (ಡಬ್ಲ್ಯೂಇಎಫ್​)ನಿಂದ ನಡೆಸಲಾಗಿದೆ. ಇದು 800ಕ್ಕೂ ಹೆಚ್ಚು ಕಂಪನಿಗಳ ಸಮೀಕ್ಷೆಗಳ ಆಧಾರದ ಮೇಲೆ ವರದಿ ಪ್ರಕಟಿಸಿದೆ ಎಂದು ಸಿಎನ್​ಎಸ್​ ವರದಿ ಮಾಡಿದೆ.

ಡಬ್ಲ್ಯೂಇಎಫ್ ಪ್ರತಿವರ್ಷ ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ಜಾಗತಿಕ ನಾಯಕರ ಸಭೆ ಆಯೋಜಿಸುತ್ತದೆ. ಉದ್ಯೋಗದಾತರು 2027ರ ವೇಳೆಗೆ 69 ಮಿಲಿಯನ್ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಹಾಗೂ 83 ಮಿಲಿಯನ್ ಸ್ಥಾನಗಳನ್ನು ತೆಗೆದುಹಾಕುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ನಿಧಾನಗತಿ ಆರ್ಥಿಕ ಬೆಳವಣಿಗೆ-ಹೆಚ್ಚಿದ ಹಣದುಬ್ಬರ: ಇದರ ಪರಿಣಾಮ 14 ಮಿಲಿಯನ್ ಉದ್ಯೋಗಗಳ ನಿವ್ವಳ ನಷ್ಟಕ್ಕೆ ಕಾರಣವಾಗಬಹುದು. ಇದು ಪ್ರಸ್ತುತ ಉದ್ಯೋಗದ ಶೇ 2ಕ್ಕೆ ಸಮನಾಗಿರುತ್ತದೆ ಎಂದು ಸಿಎನ್​ಎಸ್​ ವರದಿ ಹೇಳಿದೆ. ನಿಧಾನಗತಿಯ ಆರ್ಥಿಕ ಬೆಳವಣಿಗೆ ಮತ್ತು ಹೆಚ್ಚಿನ ಹಣದುಬ್ಬರ ನಷ್ಟ ಉಂಟುಮಾಡುತ್ತದೆ. ಕೃತಕ ಬುದ್ಧಿಮತ್ತೆಯನ್ನು ಬಳಸುವ ನಿಟ್ಟಿನಲ್ಲಿ ಕಾರ್ಯಗಳು ವೇಗಗತಿಯಲ್ಲಿ ಸಾಗುತ್ತಿವೆ. ಎಐ ಪರಿಕರಗಳನ್ನು ಕಾರ್ಯಗತಗೊಳಿಸಲು ಮತ್ತು ನಿರ್ವಹಿಸಲು ಕಂಪನಿಗಳಿಗೆ ಹೊಸ ಕೆಲಸಗಾರರ ಅಗತ್ಯವೂ ಇರುತ್ತದೆ ಎಂದು ವರದಿ ಹೇಳುತ್ತದೆ.

ಡಬ್ಲ್ಯೂಇಎಫ್ ನುಡಿದ ಭವಿಷ್ಯವೇನು?: ಡಬ್ಲ್ಯೂಇಎಫ್ ಪ್ರಕಾರ, ಡೇಟಾ ವಿಶ್ಲೇಷಕರು ಮತ್ತು ವಿಜ್ಞಾನಿಗಳು, ಯಂತ್ರ ಕಲಿಕೆ ತಜ್ಞರು ಮತ್ತು ಸೈಬರ್ ಸೆಕ್ಯೂರಿಟಿ ತಜ್ಞರ ಉದ್ಯೋಗವು 2027ರ ವೇಳೆಗೆ ಸರಾಸರಿ 30 ಪ್ರತಿಶತದಷ್ಟು ಬೆಳೆಯುವ ಮುನ್ಸೂಚನೆ ಕೂಡಾ ಇದೆ. ಅದೇ ಸಮಯದಲ್ಲಿ, ಕೃತಕ ಬುದ್ಧಿಮತ್ತೆಯ ಪ್ರಸರಣವು ಅನೇಕ ಉದ್ಯೋಗಗಳನ್ನು ಕಸಿದುಕೊಳ್ಳಲಿದೆ. ಏಕೆಂದರೆ ಕೆಲವು ಸಂದರ್ಭಗಳಲ್ಲಿ ರೋಬೋಟ್‌ಗಳು ಮನುಷ್ಯರ ಸ್ಥಾನದಲ್ಲಿ ಕಾರ್ಯ ನಿರ್ವಹಿಸಲಿವೆ. 2027ರ ವೇಳೆಗೆ 26 ಮಿಲಿಯನ್ ಕಡಿಮೆ ರೆಕಾರ್ಡ್ ಕೀಪಿಂಗ್ ಮತ್ತು ಆಡಳಿತಾತ್ಮಕ ಉದ್ಯೋಗಗಳು ಇರಬಹುದು ಎಂದು ಡಬ್ಲ್ಯುಇಎಫ್ ಭವಿಷ್ಯ ನುಡಿದಿದೆ.

ಇದನ್ನೂ ಓದಿ: ಯುರೋಪ್​ಗೆ ಅತ್ಯಧಿಕ ತೈಲ ಪೂರೈಕೆದಾರನಾದ ಭಾರತ: ಆನಂದ್​ ಮಹೇಂದ್ರ ಪ್ರತಿಕ್ರಿಯೆ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.