ETV Bharat / business

ಜಿಯೋ, ಫೇಸ್​ಬುಕ್​ ಸಹಯೋಗದೊಂದಿಗೆ ಮಾರುಕಟ್ಟೆಗೆ ವಾಟ್ಸ್‌ಆ್ಯಪ್​​ ಪೇ ಪರಿಚಯಿಸುವ ಯೋಚನೆ - ಫೇಸ್​ಬುಕ್​ ಜಿಯೋ

ಜಿಯೋ ಜೊತೆಗಿನ ಪಾಲುದಾರಿಕೆಯು ನಮಗೆ ಒಂದು ದೊಡ್ಡ ಭಾಗವಾಗಿದ್ದು, ಭಾರತದ ವಾಣಿಜ್ಯೋದ್ಯಮದಲ್ಲಿ ತೊಡಗಿಕೊಂಡ ಸಾವಿರಾರು ಸಣ್ಣ ಉದ್ಯಮಗಳಿಗೆ ಸಹಕಾರಿಯಾಗುವಂತೆ ಹಾಗೂ ವಾಟ್ಸ್‌ಆ್ಯಪ್‌ನಲ್ಲಿಯೇ ಹಣಕಾಸು ವ್ಯವಹಾರ ಮಾಡುವಂತೆ ಅವಕಾಶ ಕಲ್ಪಿಸಲು ನಾವು ಯೋಚಿಸಿದ್ದೇವೆ ಎಂದು ಫೇಸ್‌ಬುಕ್ ಸಿಇಒ ಹೇಳಿದ್ದಾರೆ..

whatsapp-pay-
ಜಿಯೋ, ಫೇಸ್​ಬುಕ್​
author img

By

Published : Jul 31, 2020, 10:08 PM IST

ನವದೆಹಲಿ : ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ ಆದ ವಾಟ್ಸ್‌ಆ್ಯಪ್‌ನ ಭಾರತದಲ್ಲಿ ಅತೀ ಹೆಚ್ಚಾಗಿ ಬಳಸುತ್ತಿದೆ. ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ವಾಟ್ಸ್‌ಆ್ಯಪ್‌ ಪೇ ಪ್ರಾರಂಭಿಸುವ ಬಗ್ಗೆ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.

ಈ ಹಿಂದೆ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದ ಜಿಯೋ ಕಂಪನಿಯ ಷೇರುಗಳನ್ನು ಫೇಸ್‌ಬುಕ್ ಖರೀದಿಸಿದ್ದು, ರಿಲಯನ್ಸ್ ಜಿಯೋ ಸಹಭಾಗಿತ್ವದೊಂದಿಗೆ ವಾಟ್ಸ್‌ಆ್ಯಪ್​ ಪೇ ಎಂಬ ಆ್ಯಪ್​​ವೊಂದನ್ನ ಬಿಡುಗಡೆಗೊಳಿಸುವುದಾಗಿ ಜುಕರ್​ಬರ್ಗ್​ ತಿಳಿಸಿದ್ದಾರೆ.

ಜುಲೈ 30 ರಂದು ವಿಶ್ಲೇಷಕರೊಂದಿಗೆ ಮಾತನಾಡಿದ ಜುಕರ್‌ಬರ್ಗ್, ವಿಶೇಷವಾಗಿ ಭಾರತದಲ್ಲಿ ಬಹಳಷ್ಟು ಜನರು ವಾಟ್ಸ್‌ಆ್ಯಪ್ ಬಳಸುತ್ತಾರೆ. ವಾಟ್ಸ್‌ಆ್ಯಪ್​​ ಬಳಕೆದಾರರಿಗೆ ಪ್ರಯೋಜನವಾಗುವಂತೆ ಹಾಗೂ ಅವರ ಪಾವತಿಗಳನ್ನು ಸಕ್ರಿಯಗೊಳಿಸಲು ಈ ಆ್ಯಪ್​​ ತರಲು ಆಲೋಚಿಸಿದ್ದೇವೆ ಎಂದಿದ್ದಾರೆ.

ಜಿಯೋ ಜೊತೆಗಿನ ಪಾಲುದಾರಿಕೆಯು ನಮಗೆ ಒಂದು ದೊಡ್ಡ ಭಾಗವಾಗಿದ್ದು, ಭಾರತದ ವಾಣಿಜ್ಯೋದ್ಯಮದಲ್ಲಿ ತೊಡಗಿಕೊಂಡ ಸಾವಿರಾರು ಸಣ್ಣ ಉದ್ಯಮಗಳಿಗೆ ಸಹಕಾರಿಯಾಗುವಂತೆ ಹಾಗೂ ವಾಟ್ಸ್‌ಆ್ಯಪ್‌ನಲ್ಲಿಯೇ ಹಣಕಾಸು ವ್ಯವಹಾರ ಮಾಡುವಂತೆ ಅವಕಾಶ ಕಲ್ಪಿಸಲು ನಾವು ಯೋಚಿಸಿದ್ದೇವೆ ಎಂದು ಫೇಸ್‌ಬುಕ್ ಸಿಇಒ ಹೇಳಿದ್ದಾರೆ.

ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್ ಭಾರತದಲ್ಲಿ ಅತೀ ಹೆಚ್ಚು ಬಳಕೆಯಲ್ಲಿದೆ. ಜನರ ಹಿತದೃಷ್ಠಿಯಿಂದ ಹಾಗೂ ಜನರ ವ್ಯವಹಾರದ ಸದುದ್ದೇಶದಿಂದ ವಾಟ್ಸ್‌ಆ್ಯಪ್​​ ಪೇ ಪರಿಚಯಿಸುವ ಆಲೋಚನೆಯನ್ನು ಮಾಡಲಾಗಿದೆ. ಲಕ್ಷಾಂತರ ಭಾರತೀಯ ಸಣ್ಣ ವ್ಯಾಪಾರಿಗಳು ಮತ್ತು ಕಿರಾಣಿ ಅಂಗಡಿಗಳ ಬೆಳವಣಿಗೆಯ ಅವಕಾಶಗಳನ್ನು ಸೃಷ್ಟಿಸಲು ಹೊಸ ವಾಣಿಜ್ಯ ವೇದಿಕೆ ಜಿಯೋಮಾರ್ಟ್ ಮತ್ತು ವಾಟ್ಸ್‌ಆ್ಯಪ್ ನಿಕಟವಾಗಿ ಕಾರ್ಯನಿರ್ವಹಿಸಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.