ಹೈದರಾಬಾದ್: ತೆರಿಗೆ ಉಳಿತಾಯಕ್ಕೆ ಹಲವು ಯೋಜನೆಗಳಿವೆ. ಆದರೂ ಹೆಚ್ಚು ಲಾಭಬೇಕು ಎಂದರೆ ಷೇರುಪೇಟೆಯಲ್ಲಿ ಹೂಡಿಕೆ ಮಾಡುವುದು ಉತ್ತಮ ಎನ್ನುತ್ತಾರೆ ತಜ್ಞರು. ಇಕ್ವಿಟಿ-ಲಿಂಕ್ಡ್ ಸೇವಿಂಗ್ ಸ್ಕೀಮ್ (ELSS) ಯ ಸಂಪೂರ್ಣ ತಿಳಿವಳಿಕೆಯೊಂದಿಗೆ ದೀರ್ಘಾವಧಿ ಹೂಡಿಕೆ ಮಾಡಿದರೆ ಲಾಭ ನಿಶ್ಚಿತ ಹಾಗೂ ಅದರ ಸಂಪೂರ್ಣ ಪ್ರಯೋಜನವನ್ನೂ ಪಡೆಯಬಹುದು.
ಇಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಂನಿಂದ ಆಗುವ ಪ್ರಯೋಜನಗಳಿವು...
ತೆರಿಗೆ ಉಳಿತಾಯ: ತೆರಿಗೆ ಉಳಿತಾಯ ಮಾಡುವುದಕ್ಕೆ ಇಂತಹ ಹಣಕಾಸು ಯೋಜನೆಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ಉದ್ದೇಶಕ್ಕಾಗಿ ಹಲವು ಯೋಜನೆಗಳು ಲಭ್ಯ ಕೂಡಾ ಇವೆ. ಆದರೆ, ಇಕ್ವಿಟಿ - ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ (ELSS) ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಮೂಲಕ ತೆರಿಗೆ ಹೊರೆ ಕಡಿಮೆ ಮಾಡುವ ಆಯ್ಕೆ ನೀಡುತ್ತದೆ.
ಇವು ಹಣಕಾಸಿನ ಗುರಿಗಳ ಸಾಧನೆಗೂ ತಮ್ಮದೇ ಆದ ಕೊಡುಗೆ ನೀಡುತ್ತವೆ. ತೆರಿಗೆ ಯೋಜನೆಯು ಹಣಕಾಸು ವರ್ಷದ ಮೊದಲ ತಿಂಗಳಿನಿಂದ ಪ್ರಾರಂಭವಾಗಬೇಕು. ಆದಾಗ್ಯೂ, ಹೆಚ್ಚಿನ ಜನರು ಜನವರಿ ನಂತರ ಮಾತ್ರ ಅದರ ಬಗ್ಗೆ ಯೋಚಿಸುತ್ತಾರೆ. ಈ ಬಗ್ಗೆ ನೀವು ಸಂಪೂರ್ಣ ತಿಳಿವಳಿಕೆಯೊಂದಿಗೆ ಸರಿಯಾದ ಯೋಜನೆಯನ್ನು ಆರಿಸಿಕೊಂಡರೆ ದೀರ್ಘಾವಧಿಯಲ್ಲಿ ಲಾಭ ಪಡೆಯುವುದು ಕಷ್ಟವಾಗುವುದಿಲ್ಲ.
ಇಕ್ವಿಟಿ-ಲಿಂಕ್ಡ್ ಸೇವಿಂಗ್ಸ್ ಸ್ಕೀಮ್: ಇಕ್ವಿಟಿ-ಲಿಂಕ್ಡ್ ಸೇವಿಂಗ್ಸ್ ಸ್ಕೀಮ್ ಇತರ ಸ್ಕೀಮ್‌ಗಳಿಗೆ ಹೋಲಿಸಿದರೆ ಹೂಡಿಕೆದಾರರಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿ ಮಾಡಿದ ಹೂಡಿಕೆಯು ತೆರಿಗೆ ವಿನಾಯಿತಿಗೆ ಒಳಪಟ್ಟಿರುತ್ತದೆ. ನೀವು ವರ್ಷದಲ್ಲಿ ಹೂಡಿಕೆ ಮಾಡುವ 1,50,000 ರೂ. ತೆರಿಗೆ ವಿನಾಯಿತಿಗೆ ಒಳಪಟ್ಟಿರುತ್ತದೆ ಎಂಬುದನ್ನು ನೆನಪಿಡಬೇಕಾದ ಸಂಗತಿ ಆಗಿದೆ.
ELSS ಸಾಮಾನ್ಯ ಮ್ಯೂಚುವಲ್ ಫಂಡ್ ಯೋಜನೆಗಳನ್ನು ಹೋಲುತ್ತವೆ. ಆದರೆ, ಈ ಸ್ಕೀಮ್ನ ವಿಶೇಷತೆಯೆಂದರೆ ಹೂಡಿಕೆಯು ಕನಿಷ್ಠ ಮೂರು ವರ್ಷಗಳವರೆಗೆ ತೆರಿಗೆ ವಿನಾಯಿತಿ ಹೊಂದಿರುತ್ತದೆ. ಈ ಸ್ಕೀಂನಲ್ಲಿ ಹಣ ತೊಡಗಿಸುವುದರಿಂದ ನಿಮ್ಮ ಹಣದ ಬೆಳವಣಿಗೆ, ಅದಕ್ಕೆ ಸಿಗುವ ಡಿವಿಡೆಂಡ್ ಮತ್ತು ಹೂಡಿಕೆ ಮೇಲೆ ಬರುವ ಡಿವಿಡೆಂಡ್ ಹಣವನ್ನು ಮರುಹೂಡಿಕೆ ಮಾಡುವ ಆಯ್ಕೆಗಳಿವೆ. ಇದರಿಂದ ನಿಮ್ಮ ಹಣ ಬೇಗ ದುಪ್ಪಟ್ಟಾಗುವ ಎಲ್ಲ ಅವಕಾಶಗಳಿರುತ್ತವೆ.
ಒಂದು ವರ್ಷಕ್ಕಿಂತ ಹೆಚ್ಚು ಕಾಲ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವಾಗ ಮತ್ತು ಹಣಕಾಸು ವರ್ಷದಲ್ಲಿ ಆದಾಯವು 1 ಲಕ್ಷರೂ.ಗಳನ್ನು ಮೀರಿದರೆ, ಶೇ 10 ರಷ್ಟು ತೆರಿಗೆಯನ್ನು ಪಾವತಿಸಬೇಕಾಗುತ್ತದೆ. ಆ ಮೊತ್ತದ ಮೇಲೆ ಮತ್ತು ಇದು ELSS ಗೆ ಸಹ ಅನ್ವಯಿಸುತ್ತದೆ. ಇದನ್ನು ನೀವು ಗಮನಿಸಬೇಕಾಗಿರುವುದು ಅಗತ್ಯ.
ಸರಿಯಾದ ಹೂಡಿಕೆಯ ಆಯ್ಕೆ: ಬಂಡವಾಳದ ಬೆಳವಣಿಗೆಗೆ ಸರಿಯಾದ ಹೂಡಿಕೆಯನ್ನು ಆಯ್ಕೆ ಮಾಡುವುದು ಬಹು ಮುಖ್ಯವಾಗಿದೆ. ಇತರ ತೆರಿಗೆ ಉಳಿತಾಯ ಯೋಜನೆಗಳು ಸಾಮಾನ್ಯವಾಗಿ ಐದು ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿರುತ್ತವೆ. ಇವುಗಳಿಗೆ ಹೋಲಿಸಿದರೆ, ELSS ನ ಲಾಕ್-ಇನ್ ಅವಧಿಯು ಕೇವಲ ಮೂರು ವರ್ಷಗಳು. ಆದ್ದರಿಂದ, ಹೂಡಿಕೆದಾರರ ತೆರಿಗೆ ವಿನಾಯಿತಿಗಳಿಗಾಗಿ ನೀವು ಅಲ್ಪಾವಧಿ ಯೋಜನೆಗಳನ್ನು ಬಯಸಿದರೆ ಮುಂದುವರಿಯಲು ಇದು ಸರಿಯಾದ ಯೋಜನೆಯಾಗಿದೆ.
ವ್ಯವಸ್ಥಿತ ಹೂಡಿಕೆ ಯೋಜನೆ (SIP) ಮಾಡಲು ಇವು ಸೂಕ್ತವಾಗಿವೆ. ಮೂರು ವರ್ಷಗಳ ನಂತರ ಹೂಡಿಕೆಯನ್ನು ಹಿಂಪಡೆಯಬಹುದು. ಅಥವಾ ಮುಂದುವರಿಸಬಹುದು. ಮೂರು ವರ್ಷಗಳ ಅಂತ್ಯದ ನಂತರ, ಮೊದಲ ತಿಂಗಳ SIP ಮೊತ್ತವನ್ನು ಹಿಂಪಡೆಯಬಹುದು ಮತ್ತು ಮರು ಹೂಡಿಕೆಯನ್ನೂ ಮಾಡಬಹುದು.
ಈ ರೀತಿಯಾಗಿ, ಹೂಡಿಕೆಯ ಚಕ್ರವನ್ನು ಮುಂದುವರೆಸಬಹುದು ಮತ್ತು ನಿಮ್ಮ ಹಣದ ಬೆಳವಣಿಗೆಗೆ ಇಲ್ಲಿ ಹೆಚ್ಚಿನ ಅವಕಾಶವಿದೆ. ಇದು ಸ್ಥಿರವಾದ ಆದಾಯ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಅಂತೆಯೇ, ಮೂರು ವರ್ಷಗಳ ಲಾಕ್-ಇನ್ ಹೊಂದಿರುವ ಹೂಡಿಕೆಗಳು ನಿಮ್ಮ ಹಣ ಬೆಳೆಯಲು ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ:ಇಂದು ಕೇಂದ್ರ ಬಜೆಟ್: ಮಧ್ಯಮ ವರ್ಗದವರಿಗೆ ಬಜೆಟ್ ಮೇಲಿನ ನಿರೀಕ್ಷೆಗಳೇನು?