ನವದೆಹಲಿ: ಏರ್‌ಟೆಲ್, ಎಕ್ಸ್‌ಟ್ರೀಮ್ ಫೈಬರ್ ಹೋಮ್ ಬ್ರಾಡ್‌ಬ್ಯಾಂಡ್ ಯೋಜನೆಯಡಿ ನೂತನ ಚಂದಾದಾರರಿಗೆ ಉಚಿತ 1000 ಜಿಬಿ ಡೇಟಾ ನೀಡುತ್ತಿದೆ.
ಏರ್‌ಟೆಲ್ ಇಂಡಪೆಂಡೆನ್ಸ್ ಡೇ ಆಫರ್ ಹೆಸರಿನ ಯೋಜನೆ ರೂಪಿಸಿದೆ. ಹೊಸ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಖರೀದಿಸುವಾಗ ಯೋಜನೆಯನ್ನು ಪಡೆಯಬಹುದು. ಹೆಚ್ಚುವರಿ 1000 ಜಿಬಿ ಡೇಟಾ ಅವಧಿ ಆರು ತಿಂಗಳವರೆಗೆ ಇರುತ್ತದೆ.
ಏರ್‌ಟೆಲ್‌ನ ವೆಬ್‌ಸೈಟ್‌ನ ಪ್ರಕಾರ ಆಗಸ್ಟ್ 16ರ ಮಧ್ಯರಾತ್ರಿಯವರೆಗೆ ಬಳಕೆದಾರರು ಈ ಯೋಜನೆ ಪಡೆಯಬಹುದು. ಸೀಮಿತ ಅವಧಿಯ ಕೊಡುಗೆ ಎಲ್ಲಾ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಯೋಜನೆಗಳಿಗೆ ಅನ್ವಯಿಸುತ್ತದೆ. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಒದಗಿಸುವ ಎಲ್ಲಾ ಉನ್ನತ ನಗರಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ.
ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ 1 ಜಿಬಿಪಿಎಸ್ ಸ್ಪೀಡ್ಗೆ ಅಲ್ಟ್ರಾ-ಫಾಸ್ಟ್ ಬ್ರಾಡ್‌ಬ್ಯಾಂಡ್ ನೀಡುತ್ತದೆ. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಯೋಜನೆಗಳು ತಿಂಗಳಿಗೆ 799 ರೂ.ಯಿಂದ ಪ್ರಾರಂಭವಾಗುತ್ತವೆ ಮತ್ತು 1000 ಜಿಬಿ ಹೆಚ್ಚುವರಿ ಡೇಟಾ ಸೀಮಿತ ಅವಧಿಯ ಕೊಡುಗೆಯೊಂದಿಗೆ ಸೇರ್ಪಡೆ ಮಾಡಲಾಗಿದೆ. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ 12 ತಿಂಗಳ ಅಮೆಜಾನ್ ಪ್ರೈಮ್ ಸದಸ್ಯತ್ವ ಮತ್ತು ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಮತ್ತು ವಿಂಕ್ ಮ್ಯೂಸಿಕ್‌ನಂತಹ ಪ್ರಯೋಜನಗಳನ್ನು ಸಹ ನೀಡುತ್ತದೆ.
ಅನಿಯಮಿತ ಡೇಟಾ ಮತ್ತು ಪ್ರಿಪೇಯ್ಡ್ ಬ್ರಾಡ್‌ಬ್ಯಾಂಡ್ ಯೋಜನೆಗಳಲ್ಲಿ ಹೆಚ್ಚುವರಿ 1000 ಜಿಬಿ ಕೊಡುಗೆ ಅನ್ವಯಿಸುವುದಿಲ್ಲ ಎಂದು ಹೇಳಿದೆ.
ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಬೇಸಿಕ್ ಪ್ಲಾನ್: ಈ ಯೋಜನೆ 100 ಜಿಬಿ ಡೇಟಾವನ್ನು 100 ಎಂಬಿಪಿಎಸ್‌ನಲ್ಲಿ ನೀಡುತ್ತದೆ. ತಿಂಗಳಿಗೆ 799 ರೂ. ಶುಲ್ಕ.
ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಎಂಟರ್‌ಟೈನ್‌ಮೆಂಟ್ ಪ್ಲಾನ್: ಈ ಯೋಜನೆಯು 200 ಜಿಬಿಪಿಎಸ್‌ನಲ್ಲಿ 300 ಜಿಬಿ ಡೇಟಾವನ್ನು ತಿಂಗಳಿಗೆ 999 ರೂ. ಪಾವತಿಸಬೇಕು.
ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂ ಪ್ಲಾನ್: ಈ ಯೋಜನೆ 300 ಎಂಬಿಪಿಎಸ್ ವೇಗದಲ್ಲಿ 500 ಜಿಬಿ ಡೇಟಾ ನೀಡುತ್ತದೆ ಮತ್ತು ತಿಂಗಳಿಗೆ ಶುಲ್ಕ 1,499 ರೂ.
ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ವಿಐಪಿ ಪ್ಲಾನ್: ಈ ಯೋಜನೆಯು 1 ಜಿಬಿಪಿಎಸ್ ವೇಗದಲ್ಲಿ ಅನಿಯಮಿತ ಡೇಟಾ ಸಿಗುತ್ತದೆ. ಯೋಜನೆಯ ಮಾಸಿಕ ಶುಲ್ಕ 3999 ರೂ.