ನವದೆಹಲಿ: ಜನಸಾಮಾನ್ಯರ ನಿತ್ಯದ ಬದುಕಿನ ಒಂದು ಭಾಗವೇ ಆಗಿರುವ ಸ್ಮಾರ್ಟ್ ಫೋನ್ಗಳು ದಿನಕ್ಕೆ ಎರಡು ಬಾರಿ ಚಾರ್ಜ್ ಮಾಡಿದ್ದರೂ ಕೆಲವೊಮ್ಮೆ ಚಿಕ್ಕ ಸಂದೇಶ ಕಳುಹಿಸಲು ಸಹ ಬ್ಯಾಟರಿಯಲ್ಲಿ ಚಾರ್ಜ್ ಇರುವುದಲ್ಲಿ.
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ಗಳು ಕರೆ ಮಾಡಲು ಅಥವಾ ಟೆಕ್ಸ್ ಸಂದೇಶ ಕಳುಹಿಸಲು ಮಾತ್ರವೇ ಸೀಮಿತವಾಗಿಲ್ಲ. ಅವು ಕ್ಯಾಮೆರಾ, ಗೇಮಿಂಗ್, ಸಿನಿಮಾ, ಟಿವಿ ಪ್ರೋಗ್ರಾಂ ವೀಕ್ಷಣೆ, ವೃತ್ತಪತ್ರಿಕೆ ಓದುವಂತಹ ಕಾರ್ಯಗಳಿಗೂ ವಿಸ್ತರಿಸಿಕೊಂಡಿದೆ. ಇಷ್ಟೊಂದು ಬಹು ಸೇವೆಗಳ ಪೂರೈಕೆದಾರನಾದ ಮೊಬೈಲ್ನ ಬ್ಯಾಟರಿ ದೀರ್ಘಕಾಲದವರೆಗೂ ಬುರುವುದಿಲ್ಲ. ಇದನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಕೆಲ ಕಂಪನಿಗಳು ಲಾಂಗ್ ಲೈಫ್ ಬ್ಯಾಟರಿ ಹಾಗೂ ಕಡಿಮೆ ದರದ ಮೊಬೈಲ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿವೆ.
1. ಮೊಟೊರೊಲಾ ಜಿ7 ಪವರ್
5000mAh ಬ್ಯಾಟರಿ ಹೊಂದಿರುವ ಜಿ 7 ಪವರ್ ಮೊಟೊರೊಲಾ ಅತ್ಯಂತ ಶಕ್ತಿಶಾಲಿ ಬ್ಯಾಟರಿ ಹೊಂದಿರುವ ಸ್ಮಾರ್ಟ್ ಫೋನ್‌ಗಳಲ್ಲಿ ಒಂದಾಗಿದೆ. ಇದು 6.2 ಇಂಚಿನ ಎಲ್‌ಸಿಡಿ ಡಿಸ್ಪ್ಲೇ, ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 632 ಪ್ರೊಸೆಸರ್ ಮತ್ತು 4 ಜಿಬಿ RAM ಮತ್ತು 64 ಜಿಬಿ ಇಂಟರ್ನಲ್ ಮೆಮೊರಿ ಹೊಂದಿದೆ. 12 ಎಂಪಿ ಹಿಂಭಾಗ ಮತ್ತು 8 ಎಂಪಿ ಮುಂಭಾಗದ ಕ್ಯಾಮೆರಾಗಳನ್ನು ಹೊಂದಿದ್ದು, ಇದರ ಮಾರುಕಟ್ಟೆ ದರ 14,400 ರೂ.ಯಾಗಿದೆ. 5000 ಎಮ್‌ಎಎಚ್ ಬ್ಯಾಟರಿಯು ಇಡೀ ದಿನ ಬಾಳಿಕೆ ಬರುತ್ತದೆ.
2. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ30 (ಗ್ರೇಡೇಷನ್ ಬ್ಲೂ, 6+ 128 ಜಿಬಿ)
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ 30 ಮೊಬೈಲ್, ಯುಎಸ್‌ಬಿ ಟೈಪ್-ಸಿ ಪೋರ್ಟ್ ಮೂಲಕ ವೇಗದ ಚಾರ್ಜಿಂಗ್ ಜೊತೆಗೆ 5000 ಎಂಎಎಚ್ನ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಇದು ಸೂಪರ್ AMOLED FHD ಇನ್ಫಿನಿಟಿ ಡಿಸ್ಪ್ಲೇಯೊಂದಿಗೆ 6.4 ಇಂಚು ಪರದೆ ಹೊಂದಿದೆ. ಇದರಲ್ಲಿನ ಟ್ರಿಪಲ್ ರಿಯರ್ ಕ್ಯಾಮೆರಾ (13ಎಂಪಿ+ 5ಎಂಪಿ+ 5ಎಂಪಿ) ಜೊತೆಗೆ ಅಲ್ಟ್ರಾ ವೈಡ್ ಲೆನ್ಸ್ ಸಹ ಹೊಂದಿದೆ. ಸೆಲ್ಫಿಗಾಗಿ 16ಎಂಪಿ ಫ್ರಂಟ್ ಕ್ಯಾಮೆರಾ ಅಳವಡಿಸಲಾಗಿದ್ದು, ಇದರ ಮಾರುಕಟ್ಟೆ ದರ 13,999 ರೂ.ಯಲ್ಲಿ ದೊರೆಯಲಿದೆ.
3. ಒಪ್ಪೋ ಎ5 2020 ವೈಟ್ 4 ಜಿಬಿ RAM, 64 ಜಿಬಿ ಸ್ಟೋರೆಜ್
5000mAh ಬ್ಯಾಟರಿ ಹೊಂದಿರುವು ಒಪ್ಪೋದ A5 2020 ದಿನದ ಮಧ್ಯಂತರ ಚಾರ್ಜಿಂಗ್ ಇಲ್ಲದೆ ದೀರ್ಘ ಸಮಯದವರೆಗೂ ಬಾಳಿಕೆ ಬರುತ್ತದೆ. 6.5 ಇಂಚಿನ ಡಿಸ್ಪ್ಲೇ ಮತ್ತು 20: 9 ಆಸ್ಪೆಕ್ಟ್ನ ಅನುಪಾತ ಹೊಂದಿರುವ 64 ಜಿಬಿ ಇಂಟರ್ನಲ್ ಮೊಮೊರಿ ಹಾಗೂ 4 ಜಿಬಿ RAM ಹೊಂದಿದೆ. ಇದಕ್ಕೆ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 665 ಪ್ರೊಸೆಸರ್ ಸಪೋರ್ಟಿಂಗ್ ಇದೆ. ಸ್ಮಾರ್ಟ್ ಫೋನ್ ಕ್ವಾಡ್ ರಿಯರ್ ಸೆನ್ಸರ್ ಜತೆಗೆ 12ಎಂಪಿ+ 8ಎಂಪಿ +2ಎಂಪಿ+ 2 ಎಂಪಿ ಹಾಗೂ 8ಎಂಪಿಯ ಕ್ಯಾಮೆರಾ ಹೊಂದಿದ್ದು ಇದರ ದರ ₹ 13,800.
4. ವಿವೋ ವೈ15 ಆ್ಯಕ್ವಾ ಬ್ಲೂ 4 ಜಿಬಿ RAM, 64 ಜಿಬಿ ಸ್ಟೋರೆಜ್
ದೀರ್ಘ ಅವಧಿಯ ಬ್ಯಾಟರಿಯ ಸ್ಮಾರ್ಟ್ ಫೋನ್ ಬಯಸುವವರಿಗೆ ವಿವೋ ವೈ 15 ಸರಿಯಾದ ಆಯ್ಕೆಗಳಲ್ಲಿ ಒಂದಾಗಿದೆ. ಇದರ 5000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ. 6.35-ಇಂಚಿನ ಹ್ಯಾಲೊ ಫುಲ್ ವ್ಯೂ ಡಿಸ್ಪ್ಲೇ ಮತ್ತು 720 x 1544 ಪಿಕ್ಸೆಲ್‌ಗಳ ರೆಸಲ್ಯೂಷನ್, ಆಕ್ಟಾ-ಕೋರ್ ಮೀಡಿಯಾಟೆಕ್ ಹೆಲಿಯೊ ಪಿ 22 ಪ್ರೊಸೆಸರ್ ಸಹ ಹೊಂದಿದೆ. ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ಸ್ವಯಂ ಚಾಲಿತ ಟ್ರಿಪಲ್ ರಿಯರ್ ಕ್ಯಾಮೆರಾ 13 ಎಂಪಿ+ 8ಎಂಪಿ+ 2ಎಂಪಿ) ಕ್ಯಾಮೆರಾ ಹೊಂದಿದೆ. ಇದರ ಮಾರುಕಟ್ಟೆ ದರ 11,990 ರೂ.ಗೆ ನಿಗದಿಪಡಿಸಲಾಗಿದೆ.