ETV Bharat / business

6 ದಿನದಲ್ಲಿ 1.59 ರೂ. ಜಿಗಿದ ಪೆಟ್ರೋಲ್​ ದರ: ಡೀಸೆಲ್​ ಬೆಲೆಯಷ್ಟು?

ಕೊಲ್ಲಿ​ ರಾಷ್ಟ್ರಗಳಲ್ಲಿನ ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳು ತೈಲ ದರ ಏರಿಕೆಗೆ ಪ್ರಮುಖ ಕಾರಣ. ಸೌದಿಯ ತೈಲ ಘಟಕಗಳ ಮೇಲೆ ಡ್ರೋಣ್​ ದಾಳಿ ನಡೆದ ಬಳಿಕ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹಾಗಾಗಿ ಭಾರತ, ಚೀನಾ ಸೇರಿದಂತೆ ವಿದೇಶಿ ಅವಲಂಬಿತ ರಾಷ್ಟ್ರಗಳ ಇಂಧನ ದರ ಚಿಲ್ಲರೆ ಮಾರುಕಟ್ಟೆಯಲ್ಲಿ ಏರಿಕೆ ಕಂಡಿದೆ.

author img

By

Published : Sep 22, 2019, 4:32 PM IST

ಸಾಂದರ್ಭಿಕ ಚಿತ್ರ

ನವದಹಲಿ: ಸೌದಿ ಅರೇಬಿಯಾದ ಅತಿದೊಡ್ಡ ತೈಲ ಘಟಕಗಳ ಮೇಲೆ ಡ್ರೋಣ್​ ದಾಳಿ ನಡೆದ ಬಳಿಕ ಕಳೆದ 6 ದಿನಗಳಲ್ಲಿ ಲೀಟರ್​ ಪೆಟ್ರೋಲ್ ಮತ್ತು ಡೀಸೆಲ್​ ಮೇಲೆ ಕ್ರಮವಾಗಿ ₹ 2.59 ಹಾಗೂ ₹ 1.31 ಏರಿಕೆಯಾಗಿದೆ.

ದೆಹಲಿಯಲ್ಲಿ ಭಾನುವಾರ ಏಕಾಏಕಿ ಪೆಟ್ರೋಲ್​ನಲ್ಲಿ 27 ಪೈಸೆ ಏರಿಕೆಯಾಗಿ ₹ 73.62 ರಲ್ಲಿ ಮಾರಾಟವಾಗುತ್ತಿದ್ದರೆ ಡೀಸೆಲ್​ ಕೂಡ 18 ಪೈಸೆ ಹೆಚ್ಚಳವಾಗಿ ₹ 66.74ಗೆ ಖರೀದಿಯಾಗುತ್ತಿದೆ.

ಸೆಪ್ಟೆಂಬರ್​ 17ರಿಂದ ತೈಲ ದರದಲ್ಲಿ ಏರಿಕೆಯಾಗುತ್ತಲೇ ಸಾಗಿದ್ದು, ಈ ಆರು ದಿನಗಳಲ್ಲಿ ಪೆಟ್ರೋಲ್​ನಲ್ಲಿ ₹ 1.59 ಹಾಗೂ ₹ ಡೀಸೆಲ್​ನಲ್ಲಿ ₹ 1.31ರಷ್ಟು ಹೆಚ್ಚಳವಾಗಿದೆ. ಇಂದು ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್​ ಮೇಲೆ 28 ಪೈಸೆ ಹಾಗೂ ಡೀಸೆಲ್​ ಮೇಲೆ 21 ಪೈಸೆ ಏರಿಕೆಯಾಗಿ ಅನುಕ್ರಮವಾಗಿ ಪ್ರತಿ ಲೀಟರ್‌ಗೆ ₹ 76.14 ಮತ್ತು ₹ 69.01ರಲ್ಲಿ ವಹಿವಾಟು ನಡೆಸುತ್ತಿವೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.