ನವದೆಹಲಿ: ಸ್ಮಾರ್ಟ್ಫೋನ್ ಯುಗದಲ್ಲಿ ಎಲ್ಲ ವಿಚಾರಗಳು ಕ್ಷಣ ಕ್ಷಣಕ್ಕೆ ಬದಲಾಗುತ್ತಿರುತ್ತದೆ. ಇಂದು ಇದ್ದ ವಿಶೇಷತೆ ನಾಳೆಗೆ ಬದಲಾಗಿ ಇನ್ನೇನೋ ಹೊಸತು ಬಂದಿರುತ್ತದೆ. ಹೀಗಾಗಿ ಗ್ರಾಹಕರನ್ನು ತಮ್ಮತ್ತ ಸೆಳೆಯಲು ಸ್ಮಾರ್ಟ್ಫೋನ್ ಕಂಪನಿಗಳು ವಿವಿಧ ಮಾರ್ಗಗಳನ್ನು ಹಿಡಿಯುತ್ತಿವೆ.
ಸ್ಮಾರ್ಟ್ಫೋನ್ ಬಳಕೆದಾರರ ಮನದಾಳವನ್ನು ಅರಿಯುವ ನಿಟ್ಟಿನಲ್ಲಿ 91ಮೊಬೈಲ್.ಕಾಂ(91mobiles.com) ಸಮೀಕ್ಷೆಯೊಂದನ್ನು ಇತ್ತೀಚೆಗೆ ನಡೆಸಿತ್ತು. ಸುಮಾರು 15,000 ಅಧಿಕ ಮಂದಿಯನ್ನು ಈ ಸಮೀಕ್ಷೆಗೆ ಒಳಪಡಿಸಿತ್ತು. ಹಾಗಿದ್ದರೆ, ಈ ಸಮೀಕ್ಷೆಯಲ್ಲಿ ಕಂಡುಬಂದಿದ್ದೇನು ಅನ್ನೋ ವಿವರ ಇಲ್ಲಿದೆ..
ಆನ್ಲೈನ್ ಗ್ರಾಹಕರಿಗೆ ಖುಷಿ ಸುದ್ದಿ... ಈ ದಿನಾಂಕದಿಂದ ಮತ್ತೆ ಅಮೆಜಾನ್ ಸ್ಪೆಷಲ್ ಸೇಲ್..!
ಸ್ಮಾರ್ಟ್ಫೋನ್ ಗ್ರಾಹಕರು ವಾಟರ್ಪ್ರೂಫ್, ವೈರ್ಲೆಸ್ ಚಾರ್ಜಿಂಗ್, ವೇಗ ಚಾರ್ಜಿಂಗ್, ಎರಡಕ್ಕಿಂತ ಹೆಚ್ಚಿನ ಕ್ಯಾಮೆರಾ ಹಾಗೂ ಪಾಪ್-ಅಪ್ ಕ್ಯಾಮೆರಾಗಳಿರುವ ಮೊಬೈಲ್ಗಳ ಮೇಲೆ ಹೆಚ್ಚಿನ ಆಸಕ್ತಿವಹಿಸಿ ಕೊಳ್ಳುತ್ತಾರೆ ಎಂದು ಸಮೀಕ್ಷೆ ಹೇಳಿದೆ.
ಭಾರತದಲ್ಲಿ ಷಿಯೋಮಿ, ವಿವೋ, ಒಪ್ಪೋಗಳಂತ ಚೀನಿ ಮೂಲದ ಸ್ಮಾರ್ಟ್ಪೋನ್ ಕಂಪನಿಗಳು ಆಳ್ವಿಕೆ ಮಾಡುತ್ತಿದೆ. ನಿರೀಕ್ಷೆಯಂತೆ ಚೀನಾ ಮೂಲದ ಕಂಪನಿಯೇ ಭಾರತೀಯರ ಮೊದಲ ಆಯ್ಕೆಯಾಗಿದೆ. ಸದ್ಯ ಭಾರತದಲ್ಲಿ ಮಾರುಕಟ್ಟೆಯನ್ನು ತನ್ನತ್ತ ಸೆಳೆಯುತ್ತಿರುವ ಒನ್ಪ್ಲಸ್ ಭಾರತೀಯರ ಹಾಟ್ಫೆವರೇಟ್ ಅನ್ನುವ ವಿಚಾರ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಅಮೇಜಾನ್ ಮೂಲಕ ಹಬ್ಬ ಆಚರಿಸಿದ ಒನ್ಪ್ಲಸ್...! ಎರಡೇ ದಿನದಲ್ಲಿ ಕೋಟಿ ಕೋಟಿ ಬಾಚಿದ ಚೀನಾ ಕಂಪನಿ ..
ಗ್ರಾಹಕರನ್ನು ತೃಪ್ತಿಪಡಿಸುವ ವಿಚಾರದಲ್ಲಿ ಸಹ ಒನ್ಪ್ಲಸ್ ಮುಂಚೂಣಿಯಲ್ಲಿದೆ. ಸಮೀಕ್ಷೆಯಲ್ಲಿ ಒನ್ಪ್ಲಸ್ ತೃಪ್ತಿದಾಯಕವೇ ಎನ್ನುವ ಪ್ರಶ್ನೆಗೆ ಎಂಟು ಅಂಕ ಪಡೆದುಕೊಂಡಿದೆ. ನೀಡುವ ಹಣಕ್ಕೆ ಹಾಗೂ ಸರ್ವೀಸ್ ವಿಚಾರದಲ್ಲಿ ಒನ್ಪ್ಲಸ್ ಅದ್ಭುತವಾಗಿದೆ ಎನ್ನುವುದು ಸಮೀಕ್ಷೆಯಲ್ಲಿ ಭಾಗಿಯಾದವರ ಅಭಿಮತ.