ಬೆಂಗಳೂರು: ಟಾಟಾ ನೆಕ್ಸನ್ ಎಲೆಕ್ಟ್ರಿಕ್ ವಾಹನ ಭಾರತದಾದ್ಯಂತ ತನ್ನ ಅಸ್ತಿತ್ವ ವಿಸ್ತರಿಸುತ್ತಿದ್ದು, ದಕ್ಷಿಣ ಭಾರತದಲ್ಲಿ ಶೇ 77ರಷ್ಟು ಮಾರುಕಟ್ಟೆ ಷೇರು ಹೊಂದಿದೆ.
2020ರ ಜನವರಿಯಲ್ಲಿ ಪ್ರಾರಂಭವಾದಾಗಿನಿಂದ ಶೇ 77ರಷ್ಟು ಮಾರುಕಟ್ಟೆ ಪಾಲಿನ ಪ್ರಾಬಲ್ಯದೊಂದಿಗೆ ಕಂಪನಿಯು ದಕ್ಷಿಣ ಭಾರತದಲ್ಲಿ ಶೇ 300ಕ್ಕಿಂತ ಹೆಚ್ಚಿನ ಪ್ರಮಾಣದ ಬೆಳವಣಿಗೆ ದಾಖಲಿಸಿದೆ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ 20 ನಗರಗಳಲ್ಲಿ ಗರಿಷ್ಠ ಮಾರಾಟ ಕಂಡಿದೆ.
ಕಾಂಪ್ಯಾಕ್ಟ್ ಎಲೆಕ್ಟ್ರಿಕ್ ಎಸ್‍ಯುವಿ ವಿನ್ಯಾಸ, ಕಾರ್ಯಕ್ಷಮತೆ, ತಂತ್ರಜ್ಞಾನ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅದರ ಕಡಿಮೆ ನಿರ್ವಹಣಾ ವೆಚ್ಚಗಳಿಗೆ ಗ್ರಾಹಕರ ಮೆಚ್ಚುಗೆ ಪಡೆಯುತ್ತಿದೆ. ಇವಿಗಳ ಬಗ್ಗೆ ವ್ಯಾಪಕ ಅರಿವು, ವೇಗವಾಗಿ ಬೆಳೆಯುತ್ತಿರುವ ಚಾರ್ಜಿಂಗ್ ಮೂಲಸೌಕರ್ಯಗಳು, ಸರ್ಕಾರದ ಉತ್ತೇಜಕ ಪ್ರೋತ್ಸಾಹ ಬೆಳವಣಿಗೆಗಳಿಗೆ ಕಾರಣವಾಗಿವೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: ಟಾಟಾ ಮೋಟಾರ್ಸ್ ವಾಹನ ಮಾರಾಟ ಶೇ 51ರಷ್ಟು ಜಿಗಿತ: ವಾಣಿಜ್ಯ ವಾಹನವೆಷ್ಟು ಗೊತ್ತೇ?
ನೆಕ್ಸನ್ ಇವಿ ವಿದ್ಯುತ್ ವಾಹನ ವಿಭಾಗದಲ್ಲಿ ಪರಿವರ್ತನೆ ತರುವ ಒಂದು ಉತ್ಪನ್ನವಾಗಿದೆ. ಕಳೆದ ವರ್ಷ ಪ್ರಾರಂಭವಾದಾಗಿನಿಂದ, ಇದು ಗ್ರಾಹಕರು ಮತ್ತು ಉದ್ಯಮದಿಂದ ಒಂದೇ ರೀತಿ ಮೆಚ್ಚುಗೆ ಪಡೆದಿದೆ. ರೋಮಾಂಚಕ ಕಾರ್ಯಕ್ಷಮತೆ, ಶೂನ್ಯ ಮಾಲಿನ್ಯ ಹೊರಸೂಸುವಿಕೆಯೊಂದಿಗಿನ ಸಂಪರ್ಕಿತ ಚಾಲನಾ ಅನುಭವ, ಕೈಗೆಟುಕುವ ಬೆಲೆಯೊಂದಿಗೆ, ನೆಕ್ಸನ್ ಇವಿ ಭಾರತದಲ್ಲಿ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ವಾಹನವಾಗಿ ತನ್ನ ಸ್ಥಾನ ಕಂಡುಕೊಂಡಿದೆ ಎಂದು ಟಾಟಾ ಮೋಟಾರ್ಸ್‍ನ ಎಲೆಕ್ಟ್ರಿಕ್ ವೆಹಿಕಲ್ ಬಿಸಿನೆಸ್ ಯುನಿಟ್ ವಿಭಾಗದ ಮುಖ್ಯಸ್ಥ ರಮೇಶ ದೊರೈರಾಜನ್ ಹೇಳಿದರು.