ಮುಂಬೈ: ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಮಂಗಳವಾರ ಕೆಳಮುಖದತ್ತ ಪ್ರಾರಂಭಿಸಿದವು.
ಬೆಳಗ್ಗೆ 9:20ಕ್ಕೆ ಸೆನ್ಸೆಕ್ಸ್ 35 ಅಂಕಗಳ ಲಾಭದೊಂದಿಗೆ 52,364ಕ್ಕೆ ವಹಿವಾಟು ನಡೆಸಿ ಶುರುವಾಯಿತು. ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 15 ಅಂಕ ಇಳಿಕೆ ಕಂಡು 15,766 ಅಂಕಗಳಿಗೆ ತಲುಪಿತು. 9.50ರ ವೇಳಗೆ ಸೆನ್ಸೆಕ್ಸ್ 29.57 ಅಂಕ ಇಳಿಕೆಯಾಗಿ 52298.94 ಅಂಕಗಳ ಮಟ್ಟದಲ್ಲೂ ನಿಫ್ಟಿ 10.40 ಅಂಕ ತಗ್ಗಿ 15,741.25 ಅಂಕಗಳ ಮಟ್ಟದಲ್ಲಿ ವಹಿವಾಟು ನಿರತವಾಗಿವೆ.
ಇದನ್ನೂ ಓದಿ: SBI ಗ್ರಾಹಕರ ಗಮನಕ್ಕೆ! ನಾನ್ಸ್ಟಾಪ್ ಸೇವೆಗಾಗಿ ಜೂ.30ರೊಳಗೆ ಈ ದಾಖಲೆ ನವೀಕರಿಸಿ
ಡಾಲರ್ ಎದುರು ರೂಪಾಯಿ ಮೌಲ್ಯ 72.79 ರೂ.ಗೆ ವಹಿವಾಟು ನಡೆಸುತ್ತಿದೆ. ಅಮೆರಿಕದ ಮಾರುಕಟ್ಟೆಗಳು ಸೋಮವಾರ ಮಿಶ್ರವಾಗಿ ಸ್ಥಗಿತಗೊಂಡವು. ಏಷ್ಯಾದ ಮಾರುಕಟ್ಟೆಗಳು ಇಂದು ಲಾಭದೊಂದಿಗೆ ಪ್ರಾರಂಭವಾದವು. ಸೆನ್ಸೆಕ್ಸ್ ಮತ್ತು ನಿಫ್ಟಿ ಜೀವಮಾನದ ಗರಿಷ್ಠ ಮಟ್ಟವನ್ನು ತಲುಪುವುದರೊಂದಿಗೆ, ಹೂಡಿಕೆದಾರರು ಲಾಭ ತೆಗೆದುಕೊಳ್ಳುವತ್ತ ತಿರುಗುತ್ತಿರುವ ಸೂಚನೆಗಳಿವೆ.
ಟೆಕ್ ಮಹೀಂದ್ರಾ, ಎನ್‌ಟಿಪಿಸಿ, ಎಚ್‌ಸಿಎಲ್ ಟೆಕ್, ಇನ್ಫೋಸಿಸ್, ಬಜಾಜ್ ಫೈನಾನ್ಸ್, ಟಿಸಿಎಸ್, ಐಟಿಸಿ, ಮಾರುತಿ, ಪವರ್‌ಗ್ರಿಡ್, ಭಾರ್ತಿ ಏರ್‌ಟೆಲ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಒಎನ್‌ಜಿ, ಸನ್ ಷೇರುಗಳು ನಷ್ಟ ಅನುಭವಿಸುತ್ತಿವೆ.