ಮುಂಬೈ: ಐಟಿ ಷೇರುಗಳ ಲಾಭದ ಮೇಲೆ ದೇಶೀಯ ಷೇರು ಮಾರುಕಟ್ಟೆ ಸೂಚ್ಯಂಕಗಳು ಶುಕ್ರವಾರ ಜೀವಿತಾವಧಿಯ ಗರಿಷ್ಠ ಮಟ್ಟಕ್ಕೆ ತಲುಪಿವೆ. ಬೆಳಗ್ಗೆ ಧನಾತ್ಮಕವಾಗಿ ಪ್ರಾರಂಭವಾದ ಸೂಚ್ಯಂಕಗಳು ದಿನವಿಡೀ ಒಂದೇ ದಿಕ್ಕಿನಲ್ಲಿ ಚಲಿಸಿದವು.
ಐಟಿ ಷೇರುಗಳ ಜೊತೆಗೆ ರಿಲಯನ್ಸ್ ಮತ್ತು ಎಚ್‌ಡಿಎಫ್‌ಸಿ ಟ್ವಿನ್ಸ್ ಷೇರುಗಳು ಸೆನ್ಸೆಕ್ಸ್‌ನ ಜೀವಿತಾವಧಿಯ ಗರಿಷ್ಠ 52,642 ಅಂಕ ಮತ್ತು ನಿಫ್ಟಿ ಜೀವಿತಾವಧಿಯ ಗರಿಷ್ಠ 15,835 ಅಂಕಗಳಿಗೆ ಏರಿಕೆಯಾದವು. ನಂತರ ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರಗಳಲ್ಲಿ ಮಾರಾಟದ ಒತ್ತಡವು ದಾಖಲೆಯ ಗರಿಷ್ಠ ಮಟ್ಟಕ್ಕೆ ಕುಸಿಯಿತು. ಆದರೂ ಲಾಭದಲ್ಲಿ ಮುಂದುವರೆದಿವೆ.
ಓದಿ: ನಾಟೌಟ್ ಸೆಂಚುರಿ ಬಳಿಕವೂ ಮತ್ತೆ ಪೆಟ್ರೋಲ್ ರೇಟ್ ಏರಿಕೆ: ದೇಶಾದ್ಯಂತ ಇಂಧನ ಬೆಲೆ ಹೀಗಿದೆ
ಅಂತಿಮವಾಗಿ ಸೆನ್ಸೆಕ್ಸ್ 174 ಅಂಕ ಗಳಿಸಿ 52,474 ಅಂಕಗಳ ಮಟ್ಟದಲ್ಲೂ ನಿಫ್ಟಿ 61 ಅಂಕ ಏರಿಕೆ ಕಂಡು 15,799 ಅಂಕಗಳ ಮಟ್ಟದಲ್ಲಿ ಕೊನೆಗೊಂಡವು. ಡಾಲರ್ ವಿರುದ್ಧ ರೂಪಾಯಿ ವಿನಿಮಯ ದರ 73.06 ರೂ.ಗೆ ನಿಂತಿದೆ. ಇಂದಿನ ವಹಿವಾಟಿನಲ್ಲಿ ಐಟಿ ಕಂಪನಿಗಳ ಷೇರುಗಳು ಏರಿಕೆಯಾದವು. ವಿಪ್ರೋ ಮತ್ತು ಟೆಕ್ ಮಹೀಂದ್ರಾ ಷೇರುಗಳು ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದರೆ, ಟಿಸಿಎಸ್ ಮತ್ತು ಇನ್ಫೋಸಿಸ್ ಷೇರುಗಳು ಸಹ ಗರಿಷ್ಠ ಮಟ್ಟಕ್ಕೆ ಸಾಗಿವೆ.
ಡಾ. ರೆಡ್ಡಿಸ್, ಪವರ್ ಗ್ರಿಡ್, ಟಿಸಿಎಸ್, ಎಚ್‌ಸಿಎಲ್ ಟೆಕ್, ಇನ್ಫೋಸಿಸ್, ರಿಲಯನ್ಸ್, ಟೆಕ್ ಮಹೀಂದ್ರಾ, ಸನ್ ಫಾರ್ಮಾ, ಬಜಾಜ್ ಫೈನಾನ್ಸ್, ಮಾರುತಿ, ಎಚ್‌ಡಿಎಫ್‌ಸಿ ಬ್ಯಾಂಕ್ ಲಾಭದೊಂದಿಗೆ ಕೊನೆಯಾದರೇ ಆಕ್ಸಿಸ್ ಬ್ಯಾಂಕ್, ಬಜಾಜ್, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಎಚ್‌ಯುಎಲ್‌ನ ಷೇರುಗಳು ನಷ್ಟ ಅನುಭವಿಸಿದವು.